Bhagyalakshmi: ಶ್ರೇಷ್ಠಾ ಕೈಯಲ್ಲಿ ಲಾಕ್ ಆದ ತಾಂಡವ್..! ಭಾಗ್ಯಳನ್ನು ಶಾಲೆಯಿಂದ ಹೊರ ಕಳಿಸಲು ಕನ್ನಿಕಾ ಪ್ಲಾನ್..!
ಭಾಗ್ಯ ಮಗಳು ಮಾಡಿರುವ ಕೆಲಸಕ್ಕೆ ಈಗ ಭಾಗ್ಯ ತಲೆದಂಡ ತರಬೇಕಾಗಿದೆ. ಮೊದಲಿನಿಂದಲೂ ಸಹ ಕನ್ನಿಕಾಗೆ ಭಾಗ್ಯ ಶಾಲೆಗೆ ಬರುವುದು ಇಷ್ಟವಿಲ್ಲ ಇದಕ್ಕಾಗಿ ಶಾಲೆಯಿಂದ ಹೊರಗೆ ಭಾಗ್ಯಳನ್ನ ಹಾಕಬೇಕು ಎಂದುಕೊಂಡಿದ್ದಳು ಆದರೆ ಇದಕ್ಕೆ ಯಾವುದೇ ಕಾರಣ ಸಿಕ್ಕಿರಲಿಲ್ಲ ಈಗ ತನ್ವಿ ಮಾಡಿರುವ ಒಂದು ಕೆಲಸದಿಂದ ಭಾಗ್ಯ ಇಕ್ಕಟ್ಟಿನ ಪರಿಸ್ಥಿತಿಗೆ ಸಿಕ್ಕಿಬಿದ್ದಿದ್ದಾಳೆ. ಮಗಳು ಮಾಡಿರುವ ಕೆಲಸಕ್ಕೆ ಭಾಗ್ಯ ಬಹಳಷ್ಟು ನೊಂದುಕೊಂಡಿದ್ದಾಳೆ ನನ್ನ ಅಮ್ಮನಿಗೆ ಚೆನ್ನಾಗಿ ಡ್ಯಾನ್ಸ್ ಬರುತ್ತದೆ ಎಂದು ಹೇಳಿದಳು ಆದರೆ ಇದು ಭಾಗ್ಯ ಗೂ ಸಹ ಗೊತ್ತಿರಲಿಲ್ಲ ಒಂದು ಎಡವಟ್ಟಿನಿಂದ ಭಾಗ್ಯ ಈಗ ಕಣ್ಣೀರು ಹಾಕುವ ಪರಿಸ್ಥಿತಿ ಎದುರಾಗಿದೆ.
ಶ್ರೇಷ್ಠಾ ತನ್ನ ಮನೆಯಿಂದ ಬಂದಿದ್ದಾಳೆ ತನ್ನ ಅಪ್ಪ ಅಮ್ಮ ನಾನು ಹೇಳಿದಂತೆ ಕೇಳುತ್ತಾ ಇದ್ದಾರೆ ಎಂದು ಖುಷಿಯಲ್ಲಿ ಇದ್ದಾಳೆ. ಆಫೀಸ್ ಗೆ ಬಂದ ಮೇಲೆ ಶ್ರೇಷ್ಠಾಗೆ ಖುಷಿಯು ಸಹ ಆಗಿದೆ ತಾಂಡವ್ ಈಗ ಶ್ರೇಷ್ಠಾಳ ಕೋ-ಹೆಡ್ ಆಗಿ ಕೆಲಸವನ್ನು ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಶ್ರೇಷ್ಠಾಗೂ ಸಹ ಇದೆ ಬೇಕಿತ್ತು. ಆದರೆ ತಾಂಡವ್‌ಗೆ ಶ್ರೇಷ್ಠ ಜೊತೆ ಕೆಲಸ ಮಾಡಲು ಇಷ್ಟವಿಲ್ಲ. ತಾಂಡವ್‌ಗೆ ಆಫೀಸ್ ನಲ್ಲೂ ಈಗ ನೆಮ್ಮದಿ ಇಲ್ಲದಂತಾಗಿದೆ. ಮನೆಗೆ ಹೋದರೆ ಪೂಜಾಳ ಬ್ಲಾಕ್ ಮೇಲ್ ನಿಂದಾಗಿ ತಾಂಡವ್‌ಗೆ ತಲೆಕೆಟ್ಟು ಹೋಗುವ ಪರಿಸ್ಥಿತಿ ಎದುರಾಗಿದೆ. ಶ್ರೇಷ್ಠಾ ಈಗ ತಾಂಡವ್‌ಗೆ ಬ್ಲಾಕ್ ಮೇಲ್ ಮಾಡುತ್ತಿದ್ದಾಳೆ. ನೀನು ನನ್ನ ಜೊತೆಗೆ ಕೆಲಸ ಮಾಡಬೇಕು ಎಂದು ಹೇಳಿದ್ದಾಳೆ.

ಇತ್ತಾ, ಕುಸುಮಾ ಯಶೋಧಗೆ ಫೋನ್ ಮಾಡಿ ಶ್ರೀವರ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ. ನಂತರ ಶ್ರೇಷ್ಠಾ ಎಂಗೇಜ್ಮೆಂಟ್ ಯಾವಾಗ ಎಂದೆಲ್ಲಾ ಕೇಳಿದ್ದಾರೆ ತಿಂಗಳ ಕೊನೆಯಲ್ಲಿ ಎಂಗೇಜ್ಮೆಂಟ್ ಇರುವುದಾಗಿ ತಿಳಿಸಿದ್ದು, ಎಲ್ಲರೂ ಕುಟುಂಬ ಸಮೇತರಾಗಿ ಬರಬೇಕು ಎಂದು ಯಶೋಧ ಹೇಳಿದ್ದಾರೆ. ಇದೇ ವಿಚಾರವನ್ನ ಸುನಂದಾ ಬಳಿ ಕುಸುಮ ಹೇಳಿದ್ದಾರೆ ಶ್ರೇಷ್ಠಾ ಎಂಗೇಜ್ಮೆಂಟ್ ಫಿಕ್ಸ್ ಆಗಿದೆಯಂತೆ ಎಲ್ಲರನ್ನ ಕರೆದಿದ್ದಾರೆ ಎಂದಿದ್ದಕ್ಕೆ ಸುನಂದಾಗೆ ಕೋಪ ಬಂದಿದೆ ಅವಳು ಯಾರನ್ನಾದರೂ ಮದುವೆಯಾಗಲಿ ಎಂದು ಬೈದಿದ್ದಾರೆ.
ತಾಂಡವ್‌ಗೆ ಶ್ರೇಷ್ಠಾ ಬ್ಲಾಕ್ಮೇಲ್, ಸಂದಿಗ್ದ ಪರಿಸ್ಥಿತಿಯಲ್ಲಿ ತಾಂಡವ್
ಶ್ರೇಷ್ಠಾ ತಾಂಡವ್‌ನನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾಳೆ ನಾನು ಇಂದು ಮನೆಗೆ ಬೇಗನೇ ಹೋಗಬೇಕು ಎಂದಿದ್ದಕ್ಕೆ ನೀನು ಮನೆಗೆ ಹೋದರೆ ಈಗ ಇರುವ ಒಂದು ಸ್ಥಾನವನ್ನು ಕಳೆದುಕೊಳ್ಳುತ್ತೀಯಾ ಎಂದಿದ್ದಾಳೆ. ಸಂಜೆ ಫೀಲ್ಡ್ ವಿಸಿಟ್ ಇದೆ ನಾವು ಹೋಗಲೇಬೇಕು ಈ ವಿಷಯವನ್ನ ಬಾಸ್ ಬಳಿ ನಾನು ಹೇಳಿದರೆ ನೀನು ಇನ್ನೂ ಸಹ ಕೆಳಮಟ್ಟಕ್ಕೆ ಹೋಗುತ್ತೀಯಾ. ನಿನ್ನ ಸ್ಥಾನಕ್ಕೆ ಬೇರೆ ಒಬ್ಬರನ್ನ ತಂದು ಬಾಸ್ ಕೂರಿಸುತ್ತಾರೆ ಇದೆಲ್ಲವೂ ಕೂಡ ನಿನಗೆ ಬೇಕಾ ಎಂದು ಬ್ಲಾಕ್ ಮೇಲ್ ಮಾಡಿದ್ದಾಳೆ.

ತಾಂಡವ್ ಈಗ ಸಂದಿಗ್ದ ಪರಿಸ್ಥಿತಿಗೆ ಸಿಲುಕಿ ಬಿದ್ದಿದ್ದಾನೆ ಆ ಕಡೆ ಪೂಜಾ ಭಾಗ್ಯ ಹಾಗೂ ಮಕ್ಕಳನ್ನ ಡಿನ್ನರ್ ಗೆ ಕರೆದುಕೊಂಡು ಹೋಗಬೇಕು ಎಂದಿದ್ದಾಳೆ. ಇಲ್ಲಿ ಶ್ರೇಷ್ಠಾ ತಾಂಡವ್‌ನನ್ನು ಎಲ್ಲೂ ಹೋಗದಂತೆ ಲಾಕ್ ಮಾಡಿದ್ದಾಳೆ. ತಾಂಡವ್ ಜೊತೆಗೆ ಬಂದು ಬಾಡಿಗೆ ಮನೆ ಮಾಡಲು ನಿರ್ಧಾರ ಮಾಡಿದ್ದಾಳೆ ಇದಕ್ಕಾಗಿ ತಾಂಡವನನ್ನ ಜೊತೆಗೆ ಕರೆದುಕೊಂಡು ಬಾಡಿಗೆ ಮನೆ ಕೇಳಲು ಹೋಗಿದ್ದಾಳೆ. ತಾಂಡವ್ ಜುವೆಲ್ಲರಿ ಶಾಪ್ ಅಲ್ಲಿ ತೆಗೆದುಕೊಟ್ಟಿದ್ದ ತಾಳಿಯನ್ನು ತಾನೇ ಕಟ್ಟಿಕೊಂಡು ಮನೆ ಬೇಕು ಎಂದು ಕೇಳಿದ್ದು ತಾಂಡವ್‌ಗ್ಯಾಕೋ ಹಿಡಿಸಲಿಲ್ಲ ಅಲ್ಲಿಂದ ಹೊರಡಲು ಹೋದಾಗ ತಾಂಡವ್ ಕೈಯನ್ನ ಹಿಡಿದುಕೊಂಡು ಶ್ರೇಷ್ಠಾ ಮನೆ ಒಳಗೆ ಕರೆದುಕೊಂಡು ಹೋಗಿದ್ದಾಳೆ.
ಮಗಳ ಕೆಲಸಕ್ಕೆ ಭಾಗ್ಯ ತಲೆದಂಡ, ಕನ್ನಿಕಾ ಪ್ಲ್ಯಾನ್ ಸಕ್ಸಸ್ ಆಗುತ್ತಾ?
ತನ್ವಿ ತನ್ನ ಅಮ್ಮನ ಹೆಸರನ್ನ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನೀಡಿದ್ದಾಳೆ. ಇದಕ್ಕಾಗಿ ಕನ್ನಿಕಾ ಭಾಗ್ಯಳನ್ನು ಕರೆದು ನೀನು ಡ್ಯಾನ್ಸ್ ಮಾಡುತ್ತೀಯಾ ಎಂದು ಕೇಳಿದ್ದಾಳೆ. ತನ್ವಿ ಈ ಕೆಲಸವನ್ನು ಮಾಡಿರುವುದು ಎಂದು ತಿಳಿದ ಭಾಗ್ಯ ಕನ್ನಿಕಾ ಬಳಿ ಕ್ಷಮೆಯಾಚಿಸಿದ್ದಾಳೆ. ನಂತರ ಈ ಜಾಗಕ್ಕೆ ಬೇರೆ ಯಾರನ್ನಾದರೂ ಆಯ್ಕೆಮಾಡಿಕೊಳ್ಳಿ ಎಂದು ಕೇಳಿದ್ದಾಳೆ.
ಆದರೆ ಕನ್ನಿಕಾ ಇದಕ್ಕೆ ಒಪ್ಪಲಿಲ್ಲ ನಮ್ಮ ಶಾಲೆಗೆ ಯಾವಾಗಲೂ ಪ್ರಥಮ ಬಹುಮಾನ ಬರುತ್ತಿತ್ತು ನೀನೇ ಡ್ಯಾನ್ಸ್ ಮಾಡುವ ಮೂಲಕ ನಮ್ಮ ಶಾಲೆಗೆ ಪ್ರಥಮ ಬಹುಮಾನ ತೆಗೆದುಕೊಂಡು ಬಾ . ಇಲ್ಲದೆ ಇದ್ದರೆ ಈ ಶಾಲೆಯಿಂದ ಅಮ್ಮ ಮಗಳು ಹೊರಗೆ ನಡೆಯಿರಿ ಎಂದು ಹೇಳಿದ್ದಾಳೆ ಈ ಮಾತು ಭಾಗ್ಯಗೆ ಭಯ ತರಿಸಿದೆ.


Click it and Unblock the Notifications











