Bhagyalakshmi: ನನಸಾಗುತ್ತಾ ಗುಂಡಣ್ಣನ ಕನಸು..? ಶ್ರೇಷ್ಠಾ ಜೊತೆಯಲ್ಲಿ ತಿರುಗಾಡುತ್ತಿರುವ ತಾಂಡವ್..!

By ಶೃತಿ ಹರೀಶ್ ಗೌಡ

ಭಾಗ್ಯಲಕ್ಷ್ಮಿ ಧಾರಾವಾಹಿಯ ಇಂದಿನ ಸಂಚಿಕೆ ಬಹಳ ಸೊಗಸಾಗಿ ಮೂಡಿಬಂದಿದೆ ಎಂದು ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಕ್ಕಳು ತಂದೆ ತಾಯಿ ಚೆನ್ನಾಗಿರಬೇಕು ಎಂದು ಆಸೆ ಪಡುತ್ತಾರೆ. ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಎಲ್ಲಾ ಮಕ್ಕಳಲ್ಲೂ ಆಸೆ ಇರುತ್ತದೆ. ಅದೇ ರೀತಿ ಈ ದಿನದ ಎಪಿಸೋಡ್ ಅನ್ನು ತೋರಿಸಲಾಗಿದೆ. ಇಷ್ಟು ದಿನ ಗುಂಡಣ್ಣ ಏನನ್ನು ಮಾತನಾಡದೆ ಮೌನವಾಗಿ ಇರುತ್ತಿದ್ದನು. ಆದರೆ ಅವನ ಕನಸುಗಳು ದೊಡ್ಡದಿದೆ ತನ್ನ ತಂದೆ ತಾಯಿ ಇಬ್ಬರು ತುಂಬಾ ಪ್ರೀತಿಯಿಂದ ಇರಬೇಕು ಎಂದು ಆಸೆ ಪಟ್ಟಿದ್ದಾನೆ. ತನ್ನ ತಾಯಿ ಆ ಕೈಯನ್ನು ಹಿಡಿದುಕೊಂಡು ತನ್ನ ತಂದೆ ಕಾರು ಹತ್ತಿಸಿ ಊರನ್ನೆಲ್ಲಾ ಸುತ್ತಿಸಬೇಕು ಎಂದು ಕನಸು ಕಂಡಿದ್ದಾನೆ.

ಇಂದು ನಮ್ಮನ್ನೆಲ್ಲ ಅಪ್ಪ ಹೊರಗಡೆ ಊಟಕ್ಕೆ ಕರೆದುಕೊಂಡು ಹೋಗುತ್ತಾರೆ. ಅಮ್ಮನನ್ನು ಪ್ರೀತಿಯಿಂದ ಕಾಣುತ್ತಾರೆ ಎಂದು ಗುಂಡಣ್ಣ ಪೂಜಾ ಬಳಿಯಲ್ಲಿ ಹೇಳುತ್ತಿದ್ದಾನೆ. ಪೂಜಾ ಗುಂಡಣ್ಣ ಕಾಣುತ್ತಿರುವ ಕನಸಿಗೆ ಖುಷಿ ಪಟ್ಟಿದ್ದಾಳೆ. ವೈಷ್ಣವ್ ಚಿಕ್ಕಪ್ಪ ಲಕ್ಷ್ಮಿ ಚಿಕ್ಕಮ್ಮನ ನೋಡಿಕೊಂಡ ರೀತಿ ಇಂದು ಅಪ್ಪ ಅಮ್ಮನಿಗಾಗಿ ಕಾರಿನ ಡೋರ್ ತೆಗೆಯುತ್ತಾರೆ. ನಮ್ಮಿಬ್ಬರನ್ನು ಜಗಳವಾಡಬೇಡಿ ಎನ್ನುತ್ತಾರೆ ಅಮ್ಮನ ಹೆಗಲ ಮೇಲೆ ಕೈ ಹಾಕಿ ಅಮ್ಮನ ಜೊತೆ ಖುಷಿಯಿಂದ ಇರುತ್ತಾರೆ. ನಂತರ ಇಬ್ಬರು ಕಾಂಪಿಟೇಶನ್ ಮೂಲಕ ಪಾನಿಪುರಿ ತಿನ್ನುತ್ತಾರೆ ಎಂದೆಲ್ಲಾ ಗುಂಡಣ್ಣ ತನ್ನದೇ ಪರಿಕಲ್ಪನೆಯಲ್ಲಿ ತನ್ನ ತಂದೆಯ ತಾಯಿ ಖುಷಿಯಾಗಿರಬೇಕು ಎಂದು ಕನಸು ಕಂಡಿದ್ದಾನೆ.

Colors kannada Bhagyalakshmi serial Written Update on November 16th episode

ತಾಂಡವ್‌ಗೆ ಭಾಗ್ಯ ಜೊತೆ ಊಟಕ್ಕೆ ಹೋಗುವುದು ಇಷ್ಟವಿಲ್ಲ ಇದಕ್ಕಾಗಿ ಶ್ರೇಷ್ಠಾ ಜೊತೆಯಲ್ಲಿ ಶಾಪಿಂಗ್ ಹೊರಟಿದ್ದಾನೆ. ಇನ್ನು ಶ್ರೇಷ್ಠಾ ಅಂತೂ ತಾಂಡವ್‌ಗೆ ಪ್ರತಿ ಹಂತದಲ್ಲೂ ಸಹ ಕಿರಿಕಿರಿ ನೀಡುತ್ತಾ ಇದ್ದಾಳೆ. ಈಗ ಒಂದು ಫೋಟೋ ಸ್ಟುಡಿಯೋಗೆ ಹೋಗಿ ದೊಡ್ಡದೊಂದು ಫೋಟೋ ಫ್ರೇಮ್ ತೆಗೆದುಕೊಂಡಿದ್ದಾಳೆ. ಅದರಲ್ಲಿ ನನ್ನ ನಿನ್ನ ಫೋಟೋಗೆ ಇದು ಪರ್ಫೆಕ್ಟ್ ಮ್ಯಾಚ್ ಆಗುತ್ತದೆ. ಮನೆಯ ವಾಲ್‌ಗೆ ಹಾಕಲು ಈ ಫೋಟೋ ಫ್ರೇಮ್ ಸೂಕ್ತವಾಗಿದೆ ಎಂದು ತಾಂಡವ್ ಬಳಿಯಲ್ಲಿ ಹೇಳಿದ್ದಾಳೆ.

ಗುಂಡಣ್ಣನ ಮಾತಿಗೆ ಕಣ್ತುಂಬಿ ಕೊಂಡ ಭಾಗ್ಯ

ಎಂದಾದರೂ ನನಸಾಗುತ್ತಾ ಗುಂಡಣ್ಣನ ಕನಸು?

ಅಷ್ಟು ಪುಟ್ಟ ವಯಸ್ಸಿಗೆ ಗುಂಡಣ್ಣ ಬಹಳ ದೊಡ್ಡದಾದ ಕನಸು ಕಂಡಿದ್ದಾನೆ. ಯಾವಾಗಲೂ ಹೆಂಡತಿಯ ಜೊತೆ ಸಿಡುಕುವ ತಾಂಡವ್ ತನ್ನ ಹೆಂಡತಿಯೊಂದಿಗೆ ಪ್ರೀತಿಯಿಂದ ಇರಬೇಕು ಎಂಬುವುದು ಗುಂಡಣ್ಣನ ಆಸೆ. ನನ್ನ ಪಪ್ಪ ಮಮ್ಮ ಚೆನ್ನಾಗಿ ಇದ್ದರೆ ಸಾಕು ನಾವು ಮೊದಲ ಬಾರಿ ಹೋಟೆಲ್ಗೆ ಊಟಕ್ಕೆ ಹೊರಟಿದ್ದೇವೆ. ಈ ವೇಳೆ ನನ್ನ ತಂದೆ ನನ್ನ ಅಮ್ಮನ ಜೊತೆ ಸಂತೋಷದಿಂದ ಖುಷಿಯಾಗಿ ಇರಬೇಕು ಎಂದು ಗುಂಡಣ್ಣ ಅಂದುಕೊಂಡಿದ್ದಾನೆ.

Colors kannada Bhagyalakshmi serial Written Update on November 16th episode

ಆದರೆ ನನ್ನ ಅಪ್ಪ ನನ್ನ ಅಮ್ಮನ ಜೊತೆ ಯಾವಾಗಲೂ ಸಿಡುಕುತ್ತಲೇ ಇರುತ್ತಾರೆ. ಒಂದು ದಿನವೂ ಪ್ರೀತಿಯಿಂದ ಮಾತನಾಡಿಸಿಲ್ಲ ಎಂದು ಗುಂಡಣ್ಣ ಹೇಳಿದಾಗ ಭಾಗ್ಯಗೆ ಶಾಕ್ ಆಗಿದೆ. ಇನ್ನು ಇದೇ ವೇಳೆ ತನ್ವಿ ಭಾಗ್ಯಗೆ ಅಮ್ಮ ನಾನು ಹೇಳಿದ್ದು ಇದೆ. ನೋಡು ಚಿಕ್ಕವಯಸ್ಸಿನ ಗುಂಡನಿಗೆ ಇದೆಲ್ಲವೂ ಅರ್ಥವಾಗಿದೆ ನಾನು ದೊಡ್ಡವಳು ನನಗೆ ಏನು ಅರ್ಥವಾಗುವುದಿಲ್ಲವೇ ಎಂದು ಭಾಗ್ಯಾಗೆ ಹೇಳಿದ್ದಾಳೆ ಮಗಳು ಕೇಳಿದ ಪ್ರಶ್ನೆ ಭಾಗ್ಯ ತಲೆಯಲ್ಲಿ ಗೊಂದಲ ಹುಟ್ಟುಹಾಕಿದೆ.

ಮನಮುಟ್ಟುವ ಎಪಿಸೋಡ್ ಎಂದ ವೀಕ್ಷಕರು

ಮಕ್ಕಳ ಮಾತು ಎಲ್ಲರನ್ನ ಮನಸ್ಸುರೇ ಗೊಳಿಸುತ್ತವೆ ಅದೇ ರೀತಿ ಗುಂಡಣ್ಣನ ಸಂಭಾಷಣೆ ಈಗ ಎಲ್ಲರ ಮನಸ್ಸಿನೊಳಗೆ ಇಳಿದಿದೆ ಇದಕ್ಕಾಗಿ ವೀಕ್ಷಕರು ಈ ಎಪಿಸೋಡ್ ಅಂತೂ ತುಂಬಾನೇ ಸೊಗಸಾಗಿ ಮೂಡಿಬಂದಿದೆ. ಮನ ಮುಟ್ಟುವ ಎಪಿಸೋಡ್ ಎಂದಿದ್ದಾರೆ. ಮಕ್ಕಳ ಮುಂದೆ ತಂದೆ ತಾಯಿ ಯಾವಾಗಲೂ ಖುಷಿಯಿಂದ ಇರಬೇಕು ತಂದೆ ತಾಯಿಯ ಸಮಸ್ಯೆ ಏನೇ ಇದ್ದರೂ ಸಹ ಪ್ರೀತಿಯಿಂದ ಇದ್ದರೆ ಮಕ್ಕಳು ಕೂಡ ಸಂತೋಷವಾಗಿ ಇರುತ್ತಾರೆ ಎಂದು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ಈಗ ತಾಂಡವ್ ತನ್ನ ಫ್ಯಾಮಿಲಿಯವರನ್ನೆಲ್ಲ ಹೋಟೆಲ್ಗೆ ಊಟಕ್ಕೆ ಕರೆದುಕೊಂಡು ಹೋಗುತ್ತಾನಾ ಅಥವಾ ಪೂಜಾಳ ಕೆಂಗಣ್ಣಿಗೆ ಗುರಿಯಾಗುತ್ತಾನ ಎಂಬುದೇ ಕುತೂಹಲವಾಗಿದೆ.

More from Filmibeat

English summary
Bhagyalakshmi serial November 16th episode Update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X