Bhagyalakshmi: ತಾಂಡವ್ ಮೇಲೆ ಅನುಮಾನಪಟ್ಟ ಭಾಗ್ಯ: ತಂಗಿ ಬಳಿ ಕಷ್ಟ ಹೇಳಿ ಕಣ್ಣೀರು ಹಾಕಿದ ಅಕ್ಕ..!

By ಶೃತಿ ಹರೀಶ್ ಗೌಡ

ಭಾಗ್ಯ ಯಾವಾಗಲೂ ಸಹ ಸೈಲೆಂಟ್ ಆಗಿ ಇದ್ದುಕೊಂಡೆ ಎಲ್ಲವನ್ನೂ ಗಮನಿಸುತ್ತಾ ಇರುತ್ತಾ ಇದ್ದಳು. ಈಗ ತನ್ವಿ ಹೇಳಿರುವ ಮಾತು ಭಾಗ್ಯ ತಲೆಯಲ್ಲಿ ಕೊರೆಯುತ್ತಿದೆ. ನನ್ನ ಅಪ್ಪ ನಿನ್ನನ್ನ ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ನಿನ್ನನ್ನ ಕಂಡರೆ ಇಷ್ಟ ಇಲ್ಲ ಎಂದು ತನ್ವಿ ಹೇಳಿದ್ದಾಳೆ. ಇದೇ ನಿಜ ಅಮ್ಮ ಎಂದು ಹೇಳಿ ಅಲ್ಲಿಂದ ಹೋಗಿದ್ದಾಳೆ. ಆದರೆ ತನ್ನ ಮಗನ ಮೇಲೆ ಭಾಗ್ಯಗೆ ತುಂಬಾ ಪ್ರೀತಿ ಇದೆ. ಗುಂಡಣ್ಣ ನನ್ನ ಅಪ್ಪ ಬಂದು ಹೋಟೆಲ್‌ಗೆ ಕರೆದುಕೊಂಡು ಹೋಗುತ್ತಾರೆ ಎಂದು ಅಜ್ಜಿಯ ಬಳಿ ಹೇಳುತ್ತಿರುತ್ತಾನೆ.‌ ಇದೇ ವೇಳೆ ಕುಸುಮ ನಿನ್ನ ಅಪ್ಪ ಎಷ್ಟು ಬಾರಿ ನಿನ್ನನ್ನ ಹೊರಗಡೆ ಕರೆದುಕೊಂಡು ಹೋಗಿದ್ದಾರೆ ಎಂದು ಹೇಳಿದ್ದಾರೆ. ನನ್ನನ್ನು ಹಾಗೂ ಅಕ್ಕನನ್ನ ಕರೆದುಕೊಂಡು ಹೋಗಿದ್ದಾರೆ ಆದರೆ ಅಮ್ಮನನ್ನ ಯಾವತ್ತಾದರೂ ಕರೆದುಕೊಂಡು ಹೋಗಿದ್ದಾರಾ ಎಂದು ಅಜ್ಜಿಯನ್ನೇ ಪ್ರಶ್ನೆ ಮಾಡಿದ್ದಾನೆ.

ಈ ಮಾತು ಕೇಳಿದ‌ ಭಾಗ್ಯಗೆ ಒಳಗೆ ಸಂಕಟ ಶುರುವಾಗಿದೆ ಇದೇ ಸಂದರ್ಭದಲ್ಲಿ ಗುಂಡಣ್ಣ ಅಮ್ಮನ ಮಾತು ಕೇಳಿ ಓಡಿ ಬಂದು ತಬ್ಬಿ ಕೊಂಡಿದ್ದಾನೆ. ನಾವೆಲ್ಲರೂ ಇಂದು ಅಪ್ಪನ ಜೊತೆ ಹೊರಗಡೆ ಹೋಗುತ್ತೇವೆ ಎಂದು ಭಾಗ್ಯ ಮಗನಿಗೆ ಹೇಳಿ ಸಮಾಧಾನ ಮಾಡಿದ್ದಾಳೆ. ಅಪ್ಪ ನಮ್ಮನ್ನ ಹೊರಗಡೆ ಕರೆದುಕೊಂಡು ಹೋದಾಗ ನಾವು ನಾಲ್ಕು ಜನ ಸೆಲ್ಫಿ ತೆಗೆದುಕೊಳ್ಳೋಣ ನಂತರ ಅದನ್ನು ನನ್ನ ರೂಮಿನಲ್ಲಿ ಫ್ರೇಮ್ ಮಾಡಿ ಇಟ್ಟುಕೊಳ್ಳೋಣ ಎಂದು ಗುಂಡಣ್ಣ ತನ್ನ ಆಸೆಯನ್ನು ಭಾಗ್ಯ ಬಳಿ ವ್ಯಕ್ತಪಡಿಸಿದ್ದಾನೆ. ಆದರೆ ಗುಂಡಣ್ಣನ ಈ ಆಸೆ ನೆರವೇರುವ ಲಕ್ಷಣ ಕಾಣುತ್ತಿಲ್ಲ ತಾಂಡವ್ ಇನ್ನು ಕೂಡ ಮನೆಗೆ ಬಂದಿಲ್ಲ ಶ್ರೇಷ್ಠಾ ಜೊತೆಗೆ ಇದ್ದಾನೆ.

colors-kannada-bhagyalakshmi-serial

ಮನೆಯಲ್ಲಿ ಪದೇ ಪದೇ ಸುನಂದ ತಾಂಡವ್ ಮೇಲೆ ಅನುಮಾನ ವ್ಯಕ್ತಪಡಿಸುತ್ತಾ ಇದ್ದಾರೆ. ಇಂದು ಏನಾದರೂ ತಾಂಡವ್ ಬಂದು ಊಟಕ್ಕೆ ಕರೆದುಕೊಂಡು ಹೋಗಿಲ್ಲ ಎಂದರೆ ಅವನು ಬೇರೆಯವರ ಜೊತೆ ಸಂಬಂಧ ಇಟ್ಟುಕೊಂಡಿರಬೇಕು ಎಂದು ಹೇಳಿದ್ದಾಳೆ. ಈ ಮಾತಿಗೆ ಕುಸುಮಾ ಕೋಪ ಮಾಡಿಕೊಂಡಿದ್ದಾರೆ. ನನ್ನ ಮಗ ಆ ರೀತಿ ಇಲ್ಲ ಬಂದು ಕರೆದುಕೊಂಡು ಹೋಗುತ್ತಾನೆ ಎಂದು ಹೇಳಿದ್ದಾರೆ. ಇನ್ನು ಸುನಂದ ಆಡುತ್ತಿರುವ ಎಲ್ಲಾ ಮಾತುಗಳು ಭಾಗ್ಯ ಮೇಲೆ ನೇರವಾಗಿ ಪರಿಣಾಮವನ್ನು ಬೀರುತ್ತಿದೆ. ಅಷ್ಟೇ ಅಲ್ಲದೆ ಅದು ಮಕ್ಕಳ ಮನಸ್ಸಿನ ಮೇಲು ಪರಿಣಾಮ ಬೀರಿದೆ.

ತಾಂಡವ್ ಮೇಲೆ ಭಾಗ್ಯಗೆ ಬಂತು ಅನುಮಾನ

ಪೂಜಾ ಭಾಗ್ಯಳನ್ನ ಹೊರಗಡೆ ಹೋಗುವುದಕ್ಕೆ ರೆಡಿ ಮಾಡಲು ಬಂದಿದ್ದಾಳೆ. ಇದೇ ಸಂದರ್ಭದಲ್ಲಿ ಭಾಗ್ಯ ಪೂಜಾ ಬಳಿ ತನ್ನ ಗಂಡನ ಮೇಲೆ ಅನುಮಾನ ಬಂದಿರುವುದಾಗಿ ತಿಳಿಸಿದ್ದಾಳೆ. ನನಗಾಗಿ ಅಲ್ಲದಿದ್ದರೂ ಅವರು ತಮ್ಮ ಮಕ್ಕಳಿಗೋಸ್ಕರವಾದರೂ ಇಂದು ಹೊರಗಡೆ ಕರೆದುಕೊಂಡು ಹೋಗುತ್ತಾರೆ ಎಂದು ಹೇಳಿದ್ದಾಳೆ. ಅಮ್ಮ ಹೇಳಿದ ಮೇಲು ಸಹ ನನಗೆ ಅಮ್ಮ ಅನುಮಾನ ಪಡುತ್ತಿರದಲ್ಲಿ ತಪ್ಪಿಲ್ಲ ಎಂದು ಅನಿಸುತ್ತಿದೆ.

ನನಗೂ ಕೂಡ ತಾಂಡವ್ ಮೇಲೆ ಅನುಮಾನ ಬಂದಿದೆ. ಆ ರೀತಿ ಏನಾದರೂ ಬೇರೊಂದು ಸಂಬಂಧವನ್ನ ಅವರು ಇಟ್ಟುಕೊಂಡಿದ್ದರೆ. ನಾನು ಮಕ್ಕಳಿಗೆ ಏನೆಂದು ಹೇಳಲಿ ಎಂದು ಭಾಗ್ಯ ಕಣ್ಣೀರು ಹಾಕುತ್ತಾ ಇದ್ದಾಳೆ. ನನ್ನ ಗಂಡ ಯಾರ ಜೊತೆಗಾದರೂ ಸಂಬಂಧ ಇಟ್ಟುಕೊಂಡಿದ್ದರೆ ನಾನಂತೂ ಅದನ್ನ ಸಹಿಸುವುದಿಲ್ಲ ಎಂದು ಭಾಗ್ಯ ಹೇಳಿದ್ದಾಳೆ. ಪೂಜಾಗಂತೂ ಭಾಗ್ಯಳ ಈ ಪರಿಸ್ಥಿತಿಯನ್ನ ನೋಡಲು ಆಗುತ್ತಿಲ್ಲ.

colors-kannada-bhagyalakshmi-serial

ಸತ್ಯ ಹೇಳುವಂತೆ ಪೂಜಾಳ ಬಳಿ ಭಾಗ್ಯ ಕೋರಿಕೆ

ಇನ್ನು ಇದೇ ಸಂದರ್ಭದಲ್ಲಿ ಭಾಗ್ಯ ಪೂಜಾ ಬಳಿ ಸತ್ಯ ಹೇಳು ಎಂದು ಕೇಳಿಕೊಂಡಿದ್ದಾಳೆ. ಅಕ್ಕ ನನಗೆ ಆ ರೀತಿ ಏನು ಅನುಮಾನವಿಲ್ಲ ಅಮ್ಮ ಪದೇ ಪದೇ ಆ ರೀತಿ ಹೇಳಿದ್ದಕ್ಕೆ ನಾನು ಆ ರೀತಿ ಮಾತನಾಡಿದೆ ಎಂದು ಹೇಳಿದ್ದಾಳೆ. ಇನ್ನೂ ಅಮ್ಮ ಆಡುತ್ತಿರುವ ಮಾತು ಮಕ್ಕಳ ಮೇಲು ಪರಿಣಾಮ ಬೀರುತ್ತಿದೆ. ನಾನು ಎಲ್ಲವನ್ನೂ ನೋಡುತ್ತಾ ಇದ್ದೇನೆ ಎಂದು ಅಕ್ಕನನ್ನೇ ಸಮಾಧಾನ ಮಾಡುತ್ತಾ ಇದ್ದಾಳೆ ಪೂಜಾ.

ತಾಂಡವ್ ಬಗ್ಗೆ ಎಲ್ಲಾ ಗೊತ್ತಿದ್ದರೂ ಕೂಡ ಪೂಜಾ ತನ್ನ ಸ್ವಾರ್ಥಕ್ಕಾಗಿ ಅಕ್ಕನ ಮುಂದೆ ಏನನ್ನು ಬಾಯಿ ಬಿಡುತ್ತಿಲ್ಲ. ತಾಂಡವ್ ನೋಡಿದರೆ ಶ್ರೇಷ್ಠಾ ಜೊತೆಯಲ್ಲಿ ಶಾಪಿಂಗ್ ಮಾಡುತ್ತಾ ಇದ್ದಾನೆ. ಈ ಕಡೆ ಹೆಂಡತಿಗೂ ಮೋಸ ಮಾಡುತ್ತಿದ್ದಾನೆ ಇನ್ನೂ ಶ್ರೇಷ್ಠಾಳ ಸಹವಾಸದಿಂದ ತಾಂಡವ್ ರೋಸಿ ಹೋಗಿದ್ದಾನೆ ಮಕ್ಕಳು ಅಪ್ಪ ಬರುತ್ತಾನೆ ಎಂದು ಕಾಯುತ್ತಾ ಕುಳಿತಿದ್ದಾರೆ.

More from Filmibeat

English summary
Bhagyalakshmi serial November 17th episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X