Bhagyalakshmi: ಗಂಡನ ಜವಾಬ್ದಾರಿ ತಾನೇ ವಹಿಸಿಕೊಂಡ ಭಾಗ್ಯ..! ಮನೆಯವರ ವಿರುದ್ಧ ತಾಂಡವ್ ಕಿವಿಚುಚ್ಚಿದ ಶ್ರೇಷ್ಠಾ..!
ತಾಂಡವ್ ಬದಲಾಗುವ ಲಕ್ಷಣಗಳು ಕೂಡ ಕಾಣುತ್ತಿಲ್ಲ ಭಾಗ್ಯ ತನ್ನ ಗಂಡ ತನಗಲ್ಲವಾದರೂ ಮಕ್ಕಳಿಗೋಸ್ಕರ ಬಂದೇ ಬರುತ್ತಾರೆ ಎಂದು ಕನಸು ಕಂಡಿದ್ದಳು. ಆದರೆ ತಾಂಡವ್ ಭಾಗ್ಯಾಳ ಕನಸಿಗೂ ತಣ್ಣೀರು ಎರಚಿದ್ದಾನೆ. ಶ್ರೇಷ್ಠಾ ತಾಂಡವ್ ತನ್ನ ಜೊತೆಯಲ್ಲೇ ಇರಬೇಕು ಅವನು ಈ ದಿನ ಮನೆಗೆ ಹೋಗಲೇಬಾರದು ಎಂದುಕೊಂಡು ಸುಮ್ಮನೆ ಕಳ್ಳಾಟ ಆಡಿದ್ದಾಳೆ. ತಾಂಡವ್‌ಗೆ ಬಾಸ್ ಕಾಲ್ ಮಾಡಿದ್ದಾರೆ ನೀನು ಬೇಕಾದರೆ ಮನೆಗೆ ಹೋಗು. ನಾನು ಬಾಸ್‌ಗೆ ಹೇಗಾದರೂ ಮಾಡಿ ಏನಾದರೂ ಒಂದು ನೆಪವನ್ನು ಹೇಳುತ್ತೇನೆ ಎಂದು ಅಂದಿದ್ದಾಳೆ. ನಂತರ ಬಾಸ್ ಏನಾದರೂ ವಿಡಿಯೋ ಕಾಲ್ ಮಾಡಿದರೆ ಏನು ಮಾಡೋದು ಎಂದು ತಾಂಡವ್ ನನ್ನ ಜೊತೆಗೆ ಇರಿಸಿಕೊಂಡಿದ್ದಾಳೆ.
ತಾಂಡವ್‌ಗೆ ಶ್ರೇಷ್ಠಾ ಮಾಡಿರುವ ಪ್ಲ್ಯಾನ್ ಗೊತ್ತಿದೆ ಆದರೆ ಆಫೀಸ್ ನಲ್ಲಿ ಆಗಿರುವ ರಾಮಾಯಣವನ್ನ ನೆನಪಿಸಿಕೊಂಡು ಶ್ರೇಷ್ಠಾ ಜೊತೆಗೆ ಉಳಿದುಕೊಳ್ಳುತ್ತೇನೆ ಎಂದು ಹೇಳಿದ್ದಾನೆ. ಇನ್ಮುಂದೆ ನಾನು ಒಳ್ಳೆಯ ಗರ್ಲ್ ಫ್ರೆಂಡ್ ಆಗಿ ಇರೋದಿಲ್ಲ ಟಿಪಿಕಲ್ ಹೆಂಡತಿಯ ರೀತಿ ನಿನ್ನನ್ನು ಸರಿದಾರಿಗೆ ತರುತ್ತೇನೆ ಎಂದುಕೊಂಡಿದ್ದಾಳೆ. ಈಗ ಏನಾದರೂ ಮನೆಗೆ ಹೋದರೆ ಇರುವ ಕೆಲಸವನ್ನು ಕಳೆದುಕೊಳ್ಳುವ ಪರಿಸ್ಥಿತಿ ಬರಬಹುದು ಎಂದುಕೊಂಡು ಪ್ರಾಜೆಕ್ಟ್ ಕೆಲಸವನ್ನ ಮಾಡುತ್ತಾ ಇದ್ದಾನೆ. ಈ ಕಡೆ ಮನೆಯಲ್ಲಿ ಗುಂಡಣ್ಣ ತನ್ವಿ ಕೂಡ ತನ್ನ ಅಪ್ಪ ಬಂದು ಹೊರಗಡೆ ಕರೆದುಕೊಂಡು ಹೋಗುತ್ತಾರೆ ಎಂದು ಕಾಯುತ್ತಾ ಇದ್ದಾರೆ.

ತನ್ವಿ ಭಾಗ್ಯ ಬಳಿ ಈ ಮೊದಲೇ ಅಪ್ಪನಿಗೆ ನಿನ್ನ ಮೇಲೆ ಸ್ವಲ್ಪವೂ ಸಹ ಪ್ರೀತಿ ಇಲ್ಲ ಅವರು ಊಟಕ್ಕೆಲ್ಲ ಕರೆದುಕೊಂಡು ಹೋಗೋದಿಲ್ಲ ಎಂದಿದ್ದಳು. ಈಗ ತನ್ನಿ ಹೇಳಿದ ಮಾತೇ ನಿಜವಾಗಿದೆ ತಾಂಡವ್‌ಗೆ ಭಾಗ್ಯ ಜೊತೆ ಹೋಗೋದು ಇಷ್ಟವಿಲ್ಲ. ಜೊತೆಗೆ ಶ್ರೇಷ್ಠಾ ಬೇರೆ ಬ್ಲಾಕ್‌ಮೇಲ್ ಮಾಡುತ್ತಿದ್ದು ಅವನ ಪರಿಸ್ಥಿತಿಯಂತೂ ಅಧೋಗತಿಗೆ ತಲುಪಿದೆ. ಭಾಗ್ಯಗೆ ಈಗಾಗಲೇ ತಾಂಡವ್ ಮೇಲೆ ಅನುಮಾನ ಬಂದಿದೆ ಇದೇ ವಿಚಾರವಾಗಿ ಪೂಜಾಳನ್ನ ತಬ್ಬಿಕೊಂಡು ಕಣ್ಣೀರನ್ನು ಸಹ ಹಾಕಿದ್ದಾಳೆ. ಈಗ ತಾಂಡವನ ನಡೆ ಮತ್ತಷ್ಟು ಅನುಮಾನಕ್ಕೆ ಭಾಗ್ಯಳ ಮನಸ್ಸನ್ನು ಸಿಲುಕಿಸಿದೆ.
ಊಟಕ್ಕೆ ಕರೆದುಕೊಂಡು ಹೋಗದ ತಾಂಡವ್
ಮನೆಯಲ್ಲಿ ತನ್ವಿ ಹಾಗೂ ಗುಂಡಣ್ಣ ಇಬ್ಬರು ಅಪ್ಪ ಬರುತ್ತಾರೆ ಎಂದು ಕಾದು ಕಾದು ಸುಸ್ತಾಗಿದ್ದಾರೆ. ಕೊನೆಗೂ ತಾಂಡವ್ ಬಾರದ ಹಿನ್ನೆಲೆಯಲ್ಲಿ ತನ್ವಿ ಭಾಗ್ಯಳ ಬಳಿ ಬಂದು ಅಪ್ಪನಿಗೆ ನಿನ್ನ ಜೊತೆ ಊಟಕ್ಕೆ ಬರುವುದು ಇಷ್ಟವಿಲ್ಲ. ಅದಕ್ಕಾಗಿ ಮನೆಗೆ ಇನ್ನು ಬಂದಿಲ್ಲ ಎಂದು ಹೇಳಿದ್ದಾಳೆ. ನಂತರ ಭಾಗ್ಯ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದಾಳೆ.

ಮನೆಯ ಗಂಡಸರು ಜವಾಬ್ದಾರಿ ತೆಗೆದುಕೊಂಡಿಲ್ಲ ಅಂದರೆ ಹೆಂಗಸರು ಮುಂದೆ ಬರಬೇಕು ಎಂದು ಕುಸುಮ ಬಳಿಯಲ್ಲಿ ಹೇಳಿದ್ದಾಳೆ. ಭಾಗ್ಯ ನಂತರ ಮಕ್ಕಳಿಗೆ ಎರಡು ನಿಮಿಷ ಕಾಯಿರಿ ಎಂದು ರೂಮಿಗೆ ಹೋಗಿದ್ದಾಳೆ. ಇನ್ನೂ ಕೂಡ ತಾಂಡವ್ ಮನೆಗೆ ಬಂದಿಲ್ಲ ಕುಸುಮ ಮಗನ ಮೇಲೆ ಸಾಕಷ್ಟು ನಂಬಿಕೆಯನ್ನ ಇಟ್ಟುಕೊಂಡಿದ್ದರು. ಈಗ ಮಗ ಮಾಡಿದ ಕೆಲಸದಿಂದಾಗಿ ಕುಸುಮ ನಂಬಿಕೆಯನ್ನೇ ಕಳೆದುಕೊಳ್ಳುವ ಪರಿಸ್ಥಿತಿ ತಾಂಡವ್‌ಗೆ ಎದುರಾಗಿದೆ.
ತಾಂಡವ್‌ನನ್ನು ಪ್ರವೋಕ್ ಮಾಡಿದ ಶ್ರೇಷ್ಠಾ
ಪೂಜಾ ಗೆ ನಮ್ಮಿಬ್ಬರ ವಿಷಯ ಎಲ್ಲವೂ ಗೊತ್ತಾಗಿ ಹೋಗಿದೆ ಇದಕ್ಕಾಗಿ ಅವಳು ನನ್ನನ್ನ ಬ್ಲಾಕ್ ಮೇಲ್ ಮಾಡುತ್ತಿದ್ದಾಳೆ. ನನ್ನ ಮನೆಯಲ್ಲೇ ನಾನು ಭಯದಿಂದ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶ್ರೇಷ್ಠಾ ಬಳಿಯಲ್ಲಿ ತಾಂಡವ್ ಹೇಳಿದ್ದಾನೆ. ಇದೇ ವೇಳೆ ನೀನೇನು ಅದರ ಬಗ್ಗೆ ಚಿಂತೆ ಮಾಡಬೇಡ ಪೂಜಾ ಯಾವುದೇ ವಿಷಯವನ್ನು ಮನೆಯಲ್ಲಿ ಹೇಳೋದಿಲ್ಲ ಧೈರ್ಯದಿಂದ ಇರು. ಅವಳಿಗೆ ಬೇಕಾಗಿರುವುದು ಹಣವಷ್ಟೇ ಹಣಕ್ಕಾಗಿ ಆ ರೀತಿ ನಿನ್ನನ್ನು ಹೆದುರಿಸುತ್ತಿದ್ದಾಳೆ. ಯಾವುದೇ ಕಾರಣಕ್ಕೂ ವಿಷಯವನ್ನು ಬಾಯಿ ಬಿಡುವುದಿಲ್ಲ ಎಂದು ಶ್ರೇಷ್ಠಾ ತಾಂಡವ್ ನನ್ನ ಸಮಾಧಾನ ಮಾಡಿದ್ದಾಳೆ.
ಭಾಗ್ಯ ಕೂಡ ನಿನಗೆ ಮೊದಲಿನ ರೀತಿ ಹೆದರುತ್ತಾ ಇಲ್ಲ ಇನ್ನು ನಿನ್ನ ಮನೆಯಲ್ಲಿ ನೀನು ರಾಜನಂತೆ ಇರಬೇಕು ಅದರ ಬಗ್ಗೆ ಗಮನ ಹರಿಸು ಎಂದು ತನಗೆ ಬೇಕಾದಂತೆ ತಾಂಡವ್ ಮನಸ್ಸನ್ನು ಬದಲಾಯಿಸಲು ಶ್ರೇಷ್ಠಾ ಪ್ರಯತ್ನ ಪಡುತ್ತಿದ್ದಾಳೆ. ನೀನು ಮೊದಲು ಯಾವ ರೀತಿ ಮನೆಯಲ್ಲಿ ಇದ್ದೇಯೋ ಅದೇ ರೀತಿ ನೀನು ಇರಬೇಕು ಅದು ನಿನ್ನ ಮನೆ ಆ ಪೂಜಾಳ ಮಾತಿಗೆಲ್ಲ ನೀನು ಸೊಪ್ಪು ಹಾಕಬಾರದು ಎಂದು ಶ್ರೇಷ್ಠಾ ತಾಂಡವ್‌ನನ್ನು ಪ್ರವೋಕ್ ಮಾಡುತ್ತಾ ಇದ್ದಾಳೆ. .


Click it and Unblock the Notifications











