BhagyaLakshmi: ಭಾಗ್ಯ ಸ್ಥಾನ ಕಿತ್ತುಕೊಳ್ಳಲು ಹೋದ ಶ್ರೇಷ್ಠಾಗೆ ಕಪಾಳಮೋಕ್ಷ: ಕೋಪದಿಂದ ಚಪ್ಪಾಳೆ ತಟ್ಟಿದ ಭಾಗ್ಯ..!
ತಾಂಡವ್‌ನನ್ನು ಹೇಗಾದರೂ ಮಾಡಿ ಮದುವೆಯಾಗಲೇಬೇಕು ಎಂದುಕೊಂಡ ಶ್ರೇಷ್ಠಾ ಕುಸುಮಾ ಮನವೊಲಿಸಿ ತಾಂಡವ್ ಮನೆಯಲ್ಲೇ ಠಿಕಾಣಿ ಹೂಡಿದ್ದಾಳೆ. ಅಷ್ಟೇ ಅಲ್ಲದೆ ತನ್ನನ್ನು ಕುಸುಮಾ ಒಪ್ಪಿಕೊಳ್ಳಬೇಕು ಎಂದು ಕುಸುಮಾಗೆ ಇಷ್ಟವಿರುವ ಕೆಲಸವನ್ನ ಮಾಡಬೇಕು ಎಂದಿಕೊಂಡಿದ್ದಾಳೆ. ಇನ್ನೂ ತಾಂಡವ್ ಬಳಿ ಇದಕ್ಕೆ ಸಹಾಯವನ್ನು ಕೇಳಿದ್ದಾಳೆ. ಆದರೆ ತಾಂಡವ್ ಏನನ್ನು ಹೇಳುವ ಪರಿಸ್ಥಿತಿಯಲ್ಲಿ ಇಲ್ಲ.
ಇನ್ನು ತಾಂಡವ್ ಬಳಿಯೇ ಶ್ರೇಷ್ಠಾ ನೀನು ಬರುವಷ್ಟರಲ್ಲಿ ನಾನು ಈ ಮನೆಯ ಸದಸ್ಯಳಾಗಿ ಇರುತ್ತೇನೆ. ನೀನಂತೂ ತಾಳಿಯನ್ನ ಕಟ್ಟಿ ನನ್ನನ್ನ ಮನೆಗೆ ಕರೆದುಕೊಂಡು ಬಂದಿಲ್ಲ. ಆದರೆ ನಾನೇ ಈ ಮನೆಯ ಸೊಸೆಯಂತೆ ಅಧಿಕಾರವನ್ನು ಚಲಾಯಿಸುತ್ತೇನೆ ಎಂದು ಹೇಳಿದಳು. ನಾನು ಮದುವೆಯಾಗಿ ಮನೆಗೆ ಹೊಸ ಸೊಸೆ ಬಂದಾಗ ಯಾವೆಲ್ಲ ಕೆಲಸವನ್ನು ಮಾಡ್ತಾಳೆ ಅದನ್ನೇ ಮಾಡುವೆ ಎಂದು ತಾಂಡವ್ ಬಳಿಯಲ್ಲಿ ಹೇಳಿದ್ದಾಳೆ. ಮೊದಲಿಗೆ ಸ್ನಾನ ಮಾಡಿ ಭಾಗ್ಯಳ ಸೀರೆಯನ್ನು ಉಟ್ಟುಕೊಂಡು, ಅಡುಗೆ ಮನೆಗೆ ತೆರಳಿದವಳೇ ಸ್ಟವ್ ಪೂಜೆ ಮಾಡಿದ್ದಾಳೆ. ಅಷ್ಟರಲ್ಲಿ ಮನೆಗೆ ಕುಸುಮಾ ಬಂದಿದ್ದು ಕುಸುಮಾ ಕೆಂಗಣ್ಣಿಗೆ ಗುರಿಯಾಗಿದ್ದಾಳೆ.

ಭಾಗ್ಯ ಹೇಗಿದ್ದರೂ ಸ್ಕೂಲ್‌ಗೆ ಹೋಗಿದ್ದಳು. ಇನ್ನು ಕುಸುಮಾ ಸಹ ಮನೆಯಿಂದ ಹೊರಗೆ ಹೋದಾಗ ಶ್ರೇಷ್ಠಾ ನಾನು ಈ ಮನೆಯವರನ್ನೆಲ್ಲಾ ಮೆಚ್ಚಿಸಲೇಬೇಕು ಎಂದುಕೊಂಡು ಪ್ಲಾನ್ ಮಾಡಿಕೊಂಡಿದ್ದಳು. ಆದರೆ ಅದು ಯಾಕೋ ಕಾಣೆ ಶ್ರೇಷ್ಠಾ ಪಾಲಿಗೆ ಪ್ಲ್ಯಾಪ್ ಆಗುವಂತೆ ಕಾಣುತ್ತಿದೆ. ಇನ್ನು ಕುಸುಮಾ ಮನೆಗೆ ಬಂದಿ, ಶ್ರೇಷ್ಠಾ ಮಾಡಿರುವ ಅವಾಂತರಗಳನ್ನೆಲ್ಲ ನೋಡಿ ಸಿಟ್ಟು ಮಾಡಿಕೊಂಡಿದ್ದಾರೆ. ಸುನಂದಾ ಸಹ ಶ್ರೇಷ್ಠಾ ತನ್ನ ಮಗಳ ಸ್ಥಾನವನ್ನು ಕಿತ್ತುಕೊಳ್ಳಲು ಬಂದಿದ್ದಾಳೆ ಎಂದುಕೊಂಡಿದ್ದಾರೆ.
ಕುಸುಮ ಮುಂದೆ ಎಡವಿದ ಶ್ರೇಷ್ಠಾ, ಕಪಾಳಕ್ಕೆ ಬಿತ್ತು ಸರಿಯಾಗಿ ಗೂಸಾ
ಶ್ರೇಷ್ಠಾ ಭಾಗ್ಯಾಳ ಸ್ಥಾನವನ್ನ ಕಿತ್ತುಕೊಳ್ಳಲೇಬೇಕು ಎಂದು ಪಣ ತೊಟ್ಟು ನಿಂತಿದ್ದಾಳೆ. ಇನ್ನೂ ತಾಂಡವ್ ಮಾತ್ರ ತನ್ನ ಅಮ್ಮನ ಮುಂದೆ ಒಳ್ಳೆಯ ಮಗನಾಗಿದ್ದರೆ ಸಾಕು ನನಗೆ ಶ್ರೇಷ್ಠಾ ಸಹವಾಸವೇ ಬೇಡ ಎಂದು ಕೊಂಡಿದ್ದಾನೆ. ಆದರೆ ಈಗ ಎಲ್ಲವೂ ಸಹ ಕೈಮೀರಿ ಹೋಗಿದ್ದು ಶ್ರೇಷ್ಠಾ ತಾಂಡವ ಮನೆಯಲ್ಲಿ ಉಳಿದುಕೊಂಡಿದ್ದಾಳೆ. ಎಲ್ಲರೂ ಬರುವಷ್ಟರಲ್ಲಿ ಅಡುಗೆ ಮಾಡಿ ಮೆಚ್ಚಿಸಬೇಕು ಎಂದು ಪ್ಲ್ಯಾನ್ ಮಾಡಿಕೊಂಡಿದ್ದಳು. ಆದರೆ ಈಗ ಅದೆಲ್ಲವೂ ಪ್ಲಾಪ್ ಆಗಿದ್ದು ಕುಸುಮಾ ಕೈನಲ್ಲಿ ಕಪಾಳ ಮೋಕ್ಷ ಮಾಡಿಸಿಕೊಂಡಿದ್ದಾಳೆ.
ಕುಸುಮಾ ಶ್ರೇಷ್ಠಾಗೆ ಬಯ್ಯುತ್ತಿರುವಾಗಲೇ ಅಲ್ಲಿಗೆ ತಾಂಡವ್ ಬಂದಿದ್ದು ತಾಂಡವ್ ಮೇಲೆ ಎಲ್ಲವನ್ನು ಎತ್ತಿ ಹಾಕಿದ್ದಾಳೆ. ಈ ಮನೆಯಲ್ಲಿ ಮಡಿ ಜಾಸ್ತಿ ಎಂದು ನಾನು ಸ್ನಾನ ಮಾಡಿ ಭಾಗ್ಯ ಸೀರೆ ಉಟ್ಟುಕೊಂಡೆ. ನನ್ನ ಬಳಿ ಡ್ರೆಸ್ ಇರಲಿಲ್ಲ ಅದಕ್ಕಾಗಿ ಎಂದಾಗ, ಸುನಂದಾ ನನ್ನ ಮಗಳ ಸ್ಥಾನವನ್ನು ಕಿತ್ತುಕೊಳ್ಳಲು ನೀನು ಬಂದಿದ್ಯಾ ಎಂದು ಪ್ರಶ್ನೆ ಮಾಡಿದ್ದಾರೆ. ಅತ್ತೆಯ ಮಾತು ತಾಂಡವ್‌ಗೆ ಇರಿಸು ಮುರಿಸು ತಂದಿದೆ. ಕುಸುಮಾ ಸಹ ನಿನಗೆ ಎಷ್ಟು ಧೈರ್ಯ ನನ್ನ ಸೊಸೆಯ ಸೀರೆ ಉಟ್ಟುಕೊಂಡು ಅಡುಗೆ ಮನೆಗೆ ಹೋಗಿ ಇಷ್ಟೇಲ್ಲಾ ಅವಾಂತರ ಮಾಡಲು ಎಂದು ಬೈದಿದ್ದಾರೆ.

ಶ್ರೇಷ್ಠಾ ಮಾತಿಗೆ ಚಪ್ಪಾಳೆ ಹೊಡೆದ ಭಾಗ್ಯ, ಗಂಡನ ರಹಸ್ಯ ಗೊತ್ತಾಯ್ತಾ..?
ಶ್ರೇಷ್ಠಾ ಭಾಗ್ಯ ಹೇಗೋ ಸ್ಕೂಲಿಗೆ ಹೋಗಿರುತ್ತಾಳೆ ಅವಳು ಬರುವಷ್ಟರಲ್ಲಿ ನಾನು ಸ್ವಲ್ಪ ಕೆಲಸವನ್ನ ಮಾಡೋಣ ಎಂದು ಅಡುಗೆ ಮನೆಗೆ ಹೋದೆ ಎಂದು ಹೇಳಿದ್ದಾಳೆ. ತಾಂಡವ್ ಸಾರ್ ಹೇಳಿದಂತೆ ನಾನು ಮಾಡಿದೆ ಎಂದಾಗ ಭಾಗ್ಯ ಶಾಲೆಯಿಂದ ಮನೆಗೆ ಬಂದಿದ್ದಾಳೆ. ಶ್ರೇಷ್ಠಾ ಹೇಳುತ್ತಿರುವ ಎಲ್ಲಾ ಮಾತನ್ನು ಕೇಳಿಸಿಕೊಂಡಿರುವ ಭಾಗ್ಯ ಜೋರಾಗಿ ಚಪ್ಪಾಳೆಯನ್ನು ಹೊಡೆದು ಕೋಪ ವ್ಯಕ್ತಪಡಿಸಿದ್ದಾಳೆ.
ಭಾಗ್ಯ ಜೋರಾಗಿ ಚಪ್ಪಾಳೆ ಹೊಡೆಯುತ್ತಿರುವುದನ್ನು ನೋಡಿದ ಮನೆ ಮಂದಿಗೆ ಶಾಕ್ ಆಗಿದೆ. ಯಾಕೆಂದರೆ ಭಾಗ್ಯಳಲ್ಲಿ ಅಂತಹ ಬದಲಾವಣೆಯನ್ನು ಯಾರು ಕೂಡ ನಿರೀಕ್ಷೆ ಮಾಡಿರಲಿಲ್ಲ. ತನ್ವಿ ಸಹ ಅಮ್ಮನಲ್ಲಿ ಆಗಿರುವ ಬದಲಾವಣೆಗೆ ಕಣ್ಣು ಮಿಟುಕಿಸದೆ ಅಮ್ಮನನ್ನೇ ನೋಡುತ್ತಾ ಇದ್ದಾಳೆ. ಈಗ ಭಾಗ್ಯ ಏನನ್ನು ಮಾಡುತ್ತಾಳೆ ಎಂಬುವುದೇ ಇಲ್ಲಿ ಕುತೂಹಲವನ್ನ ಮೂಡಿಸಿದೆ.


Click it and Unblock the Notifications











