Bhagyalakshmi: ಶ್ರೇಷ್ಠಾ ಮನೆ ಸೇರಿದ ತಾಂಡವ್ ನಕಲಿ ಅಪ್ಪ-ಅಮ್ಮ!, ಮುಂದೇನು ಕಥೆ..?

By ಶೃತಿ ಹರೀಶ್ ಗೌಡ

ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ತಾಂಡವ್‌ಗೆ ಮಾಡಿದ್ದುಣ್ಣೋ ಮಹಾರಾಯ ಎಂಬ ಗಾದೆ ಮಾತು ಈಗ ಸೂಕ್ತವಾಗಿದೆ. ಯಾಕೆಂದರೆ ಶ್ರೇಷ್ಠಾ ಸಹವಾಸ ದೋಷದಿಂದ ತಾಂಡವ ಆಫೀಸ್‌ ಹೋಗುವುದನ್ನೇ ಕಡಿಮೆ ಮಾಡಿದ್ದಾನೆ. ಜೊತೆಗೆ ತನ್ನ ಗಮನ ಹರಿಸಿ ಆಫೀಸ್‌ನಲ್ಲಿ ಕೆಲಸವನ್ನ ಮಾಡುತ್ತಿಲ್ಲ. ಇದರಿಂದಾಗಿ ಸಾವಿರಾರು ಕೋಟಿಯ ಪ್ರಾಜೆಕ್ಟ್ ಮಿಸ್ಸಾಗಿದ್ದು ತಾಂಡವ್ ಬಾಸ್ ಗರಂ ಆಗಿದ್ದಾರೆ.‌ ತಾಂಡವ್‌ಗೆ ಕಾಲ್ ಮಾಡಿದವರೆ ಇತ್ತೀಚಿಗೆ ನೀವು ಗಮನವಿಟ್ಟು ಕೆಲಸ ಮಾಡುತ್ತಿಲ್ಲ. ಮೀಟಿಂಗ್‌ಗೂ ಕೂಡ ಅಟೆಂಡ್ ಆಗುತ್ತಿಲ್ಲ ಹಲವಾರು ಬಾರಿ ಆಫೀಸ್‌‌ಗೆ ರಜೆಯನ್ನು ಹಾಕುತ್ತಿದ್ದೀರಾ ಎಂದು ಬೈದಿದ್ದಾರೆ.

ತಾಂಡವ್ ಸೂರ್ಯವಂಶಿ ಎಂದರೆ ಎಲ್ಲರಿಗೂ ಒಂದು ಗೌರವವಿತ್ತು. ಆದರೆ ನೀವು ಅದನ್ನೆಲ್ಲ ಕಳೆದುಕೊಳ್ಳುತ್ತಿದ್ದೀರಾ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. ತಾಂಡವ್ ಏನೋ ಹೇಳಲು ಹೋದರು ಸಹ ಅವರು ಕೇಳಿಲ್ಲ ನೀವು ಆಫೀಸ್ ನಲ್ಲಿ ಇರಬೇಕೋ, ಬೇಡವೋ ಎಂಬುದನ್ನು ನಿರ್ಧಾರ ಮಾಡುವವನು ನಾನು. ನಾಳೆ ಆಫೀಸ್‌ಗೆ ಬಂದ ಮೇಲೆ ಎಲ್ಲವೂ ನಿರ್ಧಾರವಾಗುತ್ತದೆ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಾರೆ. ಇದೆಲ್ಲದರ ನಡುವೆ ಶ್ರೇಷ್ಠಾ ತನ್ನ ಮನೆಗೆ ಹೊರಟಿದ್ದಾಳೆ .ಭಾಗ್ಯ ಮಾಡಿದ ಕೆಲಸದಿಂದಾಗಿ ರಘು ಜೊತೆ ಮನೆಗೆ ಹೋಗಿದ್ದಾಳೆ. ಇದೆ ವೇಳೆ ದಾರಿ ಮಧ್ಯೆ ತಾಂಡವ್‌ಗೆ ಕಾಲ್ ಮಾಡಿದ್ದಾಳೆ.

colors-kannada-bhagyalakshmi-serial

ತಾಂಡವ್ ನಾನು ಮನೆಗೆ ಹೋಗುತ್ತಿದ್ದೇನೆ. ನಮ್ಮಿಬ್ಬರ ಮದುವೆಗೂ ಸಹ ಮನೆಯಲ್ಲಿ ಗ್ರೀನ್ ಸಿಗ್ನಲ್ ಸಿಕ್ಕಿದೆ ಇನ್ನೇನಿದ್ದರೂ ನಮ್ಮ ಎಂಗೇಜ್ಮೆಂಟ್ ಆಗುವುದಷ್ಟೇ ಬಾಕಿ ಇದೆ. ನಿಮ್ಮ ಮನೆಯಲ್ಲೂ ಕೂಡ ನಮ್ಮ ಮದುವೆಗೆ ಯಾವುದೇ ತೊಂದರೆ ಮಾಡುವುದಿಲ್ಲ ಎಂದು ಹೇಳಿದ್ದಾರೆ ಎಂದು ಹೇಳಿ ಟೆನ್ಶನ್ ಕೊಡುತ್ತಿದ್ದಾಳೆ. ಈ ಕಡೆ ತಾಂಡವ್ ತನ್ನ ಕೆಲಸ ಉಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆ ಆಗಿದೆ.‌ ಪೂಜಾ ಕೂಡ ತಾಂಡವ್‌ಗೆ ಟಾರ್ಚರ್ ನೀಡುತ್ತಿದ್ದಾಳೆ. ನನ್ನ ಅಕ್ಕ ಹಾಗೂ ಮಕ್ಕಳನ್ನ ಹೊರಗಡೆ ಊಟಕ್ಕೆ ನೀವು ಕರೆದುಕೊಂಡು ಹೋಗಲೇಬೇಕು. ಇಲ್ಲದೆ ಇದ್ದರೆ ನಾನು ನಿಮ್ಮ ವಿಷಯವನ್ನು ಮನೆಯಲ್ಲಿ ಹೇಳಿಬಿಡುತ್ತೇನೆ ಎಂದು ಹೇಳಿದ್ದಾಳೆ ಇದಕ್ಕೆ ತಾಂಡವ್ ಕೂಡ ಒಪ್ಪಿಗೆ ಸೂಚಿಸಿದ್ದಾನೆ.

ಭಾಗ್ಯ ಮುಂದೆ ಸಿಡಿದು ಬಿತ್ತು ತಾಂಡವ್ ಕೋಪ

ಎಲ್ಲರೂ ಊಟಕ್ಕೆ ಕುಳಿತುಕೊಂಡಿರುವಾಗ ಪೂಜಾ ತನ್ನ ಅಕ್ಕನಿಗೆ ನೀನು ಆದಷ್ಟು ಬೇಗ ಸ್ಕೂಲ್ ನಿಂದ ಬಾ ಇಂದು ಭಾವ ನಿನ್ನನ್ನು ಹೋಟೆಲ್ ಗೆ ಊಟಕ್ಕೆ ಕರೆದುಕೊಂಡು ಹೋಗುತ್ತಾರೆ ಎಂದು ಹೇಳಿದ್ದಾಳೆ. ಇದಕ್ಕೆ ತಾಂಡವ್ ಏನನ್ನು ಮಾತನಾಡಲಿಲ್ಲ ರೂಮ್‌ಗೆ ಹೋದವನೇ ಕೈಗೆ ಸಿಕ್ಕಿದಂತಹ ಗ್ಲಾಸ್ ಪಾಟ್‌ನ್ನು ಎತ್ತಿ ಹೊಡೆದು‌ ಹಾಕಿದ್ದಾನೆ. ಈ ವೇಳೆ ಭಾಗ್ಯ ಬಂದಿದ್ದು ಡೈರೆಕ್ಟ್ ಆಗಿ ನನ್ನ ಮೇಲೆ ಅಷ್ಟೊಂದು ಕೋಪನಾ ಎಂದು ಕೇಳಿದ್ದಾಳೆ. ಈ ವೇಳೆ ಎನು ಮಾತನಾಡದ ತಾಂಡವ್ ಯಾವುದೋ ಟೆನ್ಶನ್ ನಲ್ಲಿ ಹೊಡೆದು ಹಾಕಿಬಿಟ್ಟೆ ಎಂದು ಹೇಳಿದ್ದಾನೆ.

ಇದೇ ವೇಳೆ ಭಾಗ್ಯ ಅದನ್ನ ತುಳಿದುಕೊಂಡು ಹೋಗಿ ಬಿಟ್ಟಿರಾ ನಿಧಾನವಾಗಿ ನೋಡಿಕೊಂಡು ಹೋಗಿ ಎಂದಿದ್ದಾಳೆ. ಇನ್ನೂ ಹೋಟೆಲ್‌ಗೆ ಯಾಕೆ ಕರೆದುಕೊಂಡು ಹೋಗುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾಳೆ. ಕರೆದುಕೊಂಡು ಹೋಗಬೇಕು ಅನಿಸಿತು ಅದಕ್ಕೆ ಕರೆದುಕೊಂಡು ಹೋಗುತ್ತಿದ್ದೇನೆ ಬೇಡ ಎಂದರೆ ಬೇಡ ಎಂದು ಭಾಗ್ಯಗೆ ಮುಖ ಕೊಟ್ಟು ಮಾತನಾಡದೆ ತಾಂಡವ್ ಮನೆಯಿಂದ ಹೊರಟಿದ್ದಾನೆ. ತಾಂಡವ್ ವರ್ತನೆ ಏನು ಹೊಸದಲ್ಲ ಹೀಗಾಗಿ ಭಾಗ್ಯ ಏನನ್ನು ಮಾತನಾಡದೆ ಸುಮ್ಮನಿದ್ದಾಳೆ.

colors-kannada-bhagyalakshmi-serial

ಶ್ರೇಷ್ಠಾ ಮನೆಯಲ್ಲಿ ತಾಂಡವ್ ನಕಲಿ ಅಪ್ಪ-ಅಮ್ಮ, ಮುಂದೇನಾಗುತ್ತೆ ಮದುವೆ ಕಥೆ

ಶ್ರೇಷ್ಠಾ ಮನೆಗೆ ವಾಪಸ್ ಆಗಿದ್ದು ಶ್ರೀವರ ಹಾಗೂ ಯಶೋಧ ಇಬ್ಬರು ಸಹ ತಾಂಡವ್ ನಕಲಿ ಅಪ್ಪ ಅಮ್ಮನನ್ನು ಮನೆಗೆ ಕರೆದಿದ್ದಾರೆ.‌ ಮದುವೆ ಮಾತುಕತೆಯನ್ನ ಆಡಲು ತಾಂಡವ್ ನಕಲಿ ಅಪ್ಪ ಅಮ್ಮ ಬಂದಿದ್ದಾರೆ. ನೀವು ಯಾವಾಗ ಬಂದ್ರಿ ಎಂದೆಲ್ಲಾ ಕೇಳಿದ್ದಾಳೆ. ಇದೇ ಸಂದರ್ಭದಲ್ಲಿ ಮಹೇಶ್ ಹಾಗೂ ಸುಂದರಿ ಇಬ್ಬರು ಸಹ ಶ್ರೇಷ್ಠಾಳನ್ನು ನೋಡಿ ನಾಟಕವನ್ನು ಶುರು ಮಾಡಿದ್ದಾರೆ.

ಅಯ್ಯೋ ಮಗಳೇ ನೀನೇಕೆ ಸಾಯಲು ಹೋಗಿದ್ದೆ ನಿನ್ನ ಪಾಲಿಗೆ ನಾವು ಇದ್ವಿ ತಾನೇ ನಮ್ಮನ್ನ ಕರೆದಿದ್ದರೆ ಆಗುತ್ತಿತ್ತು ಅಲ್ವಾ ಎಂದು ಹೇಳಿದ್ದಾರೆ. ಇನ್ನು ನನ್ನ ಮಗನನ್ನು ಕರೆದಿದ್ದರೆ ಬರ್ತಾ ಇರ್ಲಿಲ್ವ ಎಂದು ಮಹೇಶ್ ಹೇಳಿದಾಗ ಸುಂದರಿ ನನ್ನ ಮಗ ಅಲ್ಲೇ ಇದ್ದನಲ್ಲ ಎಂದು ನಾಲಿಗೆ ತಪ್ಪಿ ಮಾತನಾಡಿದ್ದು ಎಲ್ಲರಿಗೂ ಕೂಡ ಅನುಮಾನವನ್ನು ‌ತರಿಸಿದೆ.

More from Filmibeat

English summary
Bhagyalakshmi serial November 9th episode Update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X