Bhagyalakshmi: ಕೊನೆಗೂ ಮಗನನ್ನ ಹೊರಗೆ ಹಾಕಿದ ಕುಸುಮಾ..!? ತಾಂಡವ್ ಮುಂದಿನ ನಡೆಯೇನು..?
ತಾಂಡವ್ ಈಗ ಪಶ್ಚಾತಾಪದ ಬೇಗುದಿಯಲ್ಲಿ ಬೇಯುತ್ತಾ ಇದ್ದಾನೆ. ನಾನು ಯಾಕಾದರೂ ಶ್ರೇಷ್ಠಾ ಸಹವಾಸವನ್ನ ಮಾಡಿ ಮನೆಯನ್ನ ಬಿಟ್ಟು ಹೋದೆನೋ ಅಮ್ಮನ ಕೋಪಕ್ಕೆ ಗುರಿಯಾಗಿದ್ದೇನೆ ಎಂದುಕೊಂಡಿದ್ದಾನೆ. ಕುಸುಮಾ ಮಾತ್ರ ತಾಂಡವ್‌ನನ್ನು ಬಾಗಿಲಲ್ಲೇ ನಿಲ್ಲಿಸಿ ಪ್ರಶ್ನೆಯ ಮೇಲೆ ಪ್ರಶ್ನೆಯನ್ನು ಕೇಳುತ್ತಾ ಇದ್ದಾರೆ. ನನ್ನ ಮಗ ನಮ್ಮೆಲ್ಲರನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂದು ನಾನು ಅಂದುಕೊಂಡಿದ್ದೆ. ಆದರೆ ನೀನು ಮಾಡಿದ್ದಾದರೂ ಏನು ಹಬ್ಬದ ದಿನವೇ ಮನೆಯನ್ನ ಬಿಟ್ಟು ಹೋದೆ ಪೂಜೆಯ ಸಮಯಕ್ಕೂ ಸಹ ನೀನು ಇರಲಿಲ್ಲ ನಿನ್ನಿಂದ ಇನ್ನೂ ಏನನ್ನ ನಿರೀಕ್ಷೆ ಮಾಡಲು ಸಾಧ್ಯ ಎಂದು ಕೇಳುತ್ತಿದ್ದಾರೆ.
ತಾಂಡವ್ ಅಮ್ಮ ಇಂಪಾರ್ಟೆಂಟ್ ಮೀಟಿಂಗ್ ಇತ್ತು ಅದಕ್ಕಾಗಿ ನಾನು ಸ್ವಲ್ಪ ಕಾಲ ಹೊರಗೆ ಹೋದೆ ದಯವಿಟ್ಟು ಕ್ಷಮಿಸು ಎಂದರು ಸಹ ಮಗನನ್ನು ಈ ಬಾರಿ ಕುಸುಮಾ ಕ್ಷಮಿಸುವ ಮಾತಿಲ್ಲ. ಇದಕ್ಕೆಲ್ಲ ಕಾರಣ ಸುನಂದಾ ಅವರ ಮಾತು ನಿಮ್ಮ ಮಗ ಇಷ್ಟೇ ಅವನು ಪೂಜೆಯ ಸಮಯಕ್ಕೂ ಬಂದಿಲ್ಲ. ಎಲ್ಲವನ್ನು ನನ್ನ ಮಗಳೇ ಮಾಡಬೇಕು ಎಂದು ಪದೇ ಪದೇ ಕುಸುಮಾರ ಕೋಪ ಕೆರಳುವಂತೆ ಮಾಡುತ್ತಿದ್ದರು. ಇದು ತಾಂಡವ್ ಮೇಲೆ ಪರಿಣಾಮವನ್ನು ಬೀರಿದೆ. ಕುಸುಮ ಇಷ್ಟು ದಿನ ನನ್ನ ಮಗ ಹಾಗೆ ನನ್ನ ಮಗ ಹೀಗೆ ದಾರಿ ತಪ್ಪು ಅವನಲ್ಲ ಅಮ್ಮ ಹೇಳಿದ ಮಾತನ್ನ ಕೇಳುವವನು ಎಂದೆಲ್ಲ ಅಂದುಕೊಂಡಿದ್ದರು. ಆದರೆ ಮೊದಲ ಬಾರಿಗೆ ಮಗನ ಮೇಲೆ ಕುಸುಮಾಗೆ ಅಸಹ್ಯ ಬಂದಿದೆ.

ಈ ಕಡೆ ಕುಸುಮಾ ತಾಂಡವ್‌ಗೆ ಬೈಯುತ್ತಾ ಇದ್ದರೆ ಮನೆಯಲ್ಲಿರುವ ಸುನಂದಾಗೆ ತುಂಬಾನೇ ಖುಷಿ ಆಗುತ್ತಿದೆ. ಮೊಟ್ಟ ಮೊದಲ ಬಾರಿಗೆ ನನ್ನ ಬೀಗತಿ ಸರಿಯಾದ ನಿರ್ಧಾರವನ್ನ ತೆಗೆದುಕೊಳ್ಳುತ್ತಿದ್ದಾರೆ ಎಂದು ಸುನಂದಾ ಅಂದುಕೊಂಡಿದ್ದಾರೆ. ಪೂಜಾ ಸಹ ಭಾವನಾ ಮುಖವನ್ನು ನೋಡುತ್ತಾ ನಿಂತುಕೊಂಡಿದ್ದಾಳೆ. ಯಾಕೆಂದರೆ ಪೂಜಾಗೆ ಈಗ ತಾಂಡವನ ಎಲ್ಲಾ ಸೀಕ್ರೆಟ್ ಗೊತ್ತಾಗಿದ್ದು. ತನ್ನ ಅಕ್ಕನ ಜೀವನ ಸರಿ ಮಾಡುವುದರ ಜೊತೆಗೆ ಸ್ವಕಾರ್ಯವನ್ನು ಮಾಡಿಸಿಕೊಳ್ಳಬೇಕು ಎಂದು ಪೂಜಾ ಪ್ಲಾನ್ ಮಾಡಿದ್ದಾಳೆ.
ಗಂಡನ ಪರ ವಕಾಲತ್ತು ವಹಿಸಿದ ಭಾಗ್ಯ, ಬಾಯಿ ಮುಚ್ಚಿಸಿದ ಕುಸುಮಾ
ಕುಸುಮಾ ತಾಂಡವ್‌ಗೆ ಬಯ್ಯುತ್ತಾ ಇದ್ದರೆ ಭಾಗ್ಯ ಅತ್ತೆ ದಯವಿಟ್ಟು ಒಳಗಡೆ ಕರೆದು ಮಾತನಾಡಿ ಅಕ್ಕ ಪಕ್ಕದ ಮನೆಯವರು ನೋಡುತ್ತಾ ಇದ್ದಾರೆ ಎಂದು ಹೇಳಿದ್ದಾಳೆ. ಇದೆ ವೇಳೆ ಕುಸುಮಾ ಭಾಗ್ಯಳ ಬಾಯನ್ನ ಮುಚ್ಚಿಸಿದ್ದಾರೆ. ನೀನು ಸುಮ್ಮನೆ ನಿಂತುಕೋ ಬಂದುಬಿಟ್ಟಳು ಪರ ವಹಿಸಿಕೊಂಡು ಎಂದು ಬೈದಿದ್ದಾರೆ. ತಾಂಡವ್ ಸಹ ಅಮ್ಮನಿಗೆ ಅಮ್ಮ ದಯವಿಟ್ಟು ಒಳಗೆ ಕುಳಿತುಕೊಂಡು ಮಾತನಾಡೋಣ ಎಂದಿದ್ದಾನೆ ಅದಕ್ಕೂ ಸಹ ಕುಸುಮ ಬೈದಿದ್ದಾರೆ. ಇದೇನು ಧರ್ಮದ ಛತ್ರವಲ್ಲ ಒಳಗಡೆ ಕುಳಿತುಕೊಂಡು ಮಾತನಾಡಲು ನೀನು ಮಾತನಾಡಬೇಡ ಎಂದು ಹೇಳಿದ್ದಾರೆ.
ಅಮ್ಮ ದಯವಿಟ್ಟು ಅರ್ಥ ಮಾಡಿಕೋ ಪಕ್ಕದ ಮನೆಯವರ ಮುಂದೆ ನನ್ನ ಮಾನ ಮರ್ಯಾದೆ ಹೋಗುತ್ತಿದೆ ದಯವಿಟ್ಟು ಒಳಗಡೆ ಕರೆದುಕೋ ಎಂದು ತಾಂಡವ ಅಮ್ಮನ ಬಳಿ ಬೇಡಿಕೊಳ್ಳುತ್ತಾ ಇದ್ದಾನೆ ಆದರೂ ಸಹ ಕುಸುಮಾಗೆ ಕೋಪ ಇಳಿಯುತ್ತಿಲ್ಲ ನಿನ್ನಿಂದಾಗಿ ನಾನು ಸಹ ಅಕ್ಕ ಪಕ್ಕದವರಿಂದ ನಿಮ್ಮ ಮಗ ಪೂಜೆಯ ಸಮಯಕ್ಕೂ ಬಂದಿಲ್ಲ ಎಂಬ ಮಾತನ್ನು ಕೇಳಬೇಕಾಗಿತ್ತು. ಆಗ ನಾನು ಸುಮ್ಮನೆ ಇದ್ದೆ ತಾನೆ ಈಗ ನೀನು ಸಹ ಸುಮ್ಮನೆ ಇರಬೇಕು ಎಂದು ಮಗನನ್ನು ಬೈದಿದ್ದಾರೆ.

ಮಗನನ್ನ ಮನೆಯಿಂದ ಹೊರ ಹಾಕಿದ ಕುಸುಮಾ!
ಎಲ್ಲರಿಂದಲೂ ನಾನು ಕೇಳಬಾರದ ಮಾತುಗಳನ್ನ ನಿನ್ನಿಂದಾಗಿ ಕೇಳಿದೆ ನೀನು ಹಬ್ಬ ಹರಿದಿನಗಳಲ್ಲಿ ಏನಾದರೂ ಒಂದು ಕಾರಣವನ್ನ ಇಟ್ಟುಕೊಳ್ಳುತ್ತಿಯಾ. ಎಲ್ಲದಕ್ಕೂ ಸಹ ನಿನಗೆ ಕಾರಣಗಳಿವೆ ಎಂದು ಕುಸುಮ ಮಗನನ್ನ ಬೈದಿದ್ದಾರೆ. ಈ ಮನೆಗೆ ಒಂದು ರೀತಿ ಇದೆ ಅದನ್ನ ನೀನು ಪಾಲಿಸುತ್ತಾ ಇಲ್ಲ. ನಮ್ಮ ಮನೆಯ ಹಬ್ಬ ಹರಿದಿನಗಳಿಗೆ ಆಗದ ಮಗ ನನಗೂ ಬೇಡ ಎಂದಿದ್ದಾರೆ.
ಇಷ್ಟು ಹೊತ್ತು ಸಹ ನೀನು ಬೀದಿಯಲ್ಲೇ ಇದ್ದೆ ಈಗಲೂ ಸಹ ನೀನು ಬೀದಿಯಲ್ಲೇ ಇರು ಎಂದು ಹೇಳಿ ಕುಸುಮ ಅವರು ಜೋರಾಗಿ ತಾಂಡವ್ ನನ್ನು ತಳ್ಳಿ ಮನೆಯ ಬಾಗಿಲನ್ನು ಹಾಕಿದ್ದಾರೆ. ಅತ್ತೆಯ ಕೋಪವನ್ನ ನೋಡುತ್ತಾ ಇರುವ ಭಾಗ್ಯಗೆ ಶಾಕ್ ಆಗಿದೆ. ತಾಂಡವ್ ಈಗ ಅಮ್ಮನ ಮನಸ್ಸನ್ನು ಶಾಂತ ಮಾಡಿ ಮನೆ ಒಳಗೆ ಹೋಗುತ್ತಾನಾ ಎಂಬುದೇ ಕುತೂಹಲವಾಗಿದೆ.


Click it and Unblock the Notifications











