ತಾಂಡವ್ ಪರ ನಿಂತ ಭಾಗ್ಯ: ಇನ್ಮೇಲಾದ್ರೂ ಬುದ್ಧಿ ಕಲಿಯುತ್ತಾನ ತಾಂಡವ್..? ಸೊಸೆಯನ್ನು ಮೆಚ್ಚಿದ ಕುಸುಮಾ..!
ಭಾಗ್ಯಲಕ್ಷ್ಮಿ ಧಾರಾವಾಹಿ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನ ಪಡೆದುಕೊಂಡು ಮುಂದೆ ಸಾಗುತ್ತಿದೆ. ಈಗ ಕುಸುಮಾ ತಮ್ಮ ಮಗನನ್ನೇ ಮನೆಯಿಂದ ಹೊರಗೆ ಹಾಕಿದ್ದು ಭಾಗ್ಯಗೆ ಬೇಸರವಾಗಿದೆ. ಸುನಂದಾ ಮಾತ್ರ ಬೇಸರ ಮಾಡಿಕೊಂಡಿಲ್ಲ ಖುಷಿಯಾಗಿ ಇದ್ದಾಳೆ. ಈ ರೀತಿ ಶಿಕ್ಷೆ ಆಗಬೇಕಿತ್ತು ಅದನ್ನ ಕುಸುಮಾ ಕೊಟ್ಟಿದ್ದಾರೆ ಎಂದುಕೊಂಡಿದ್ದಾರೆ. ಬಾವನ ಸೀಕ್ರೆಟ್ ಎಲ್ಲಾ ಪೂಜಾಗೆ ಗೊತ್ತಾಗಿದ್ದು ಅವಳ ಮುಖಭಾವ ಏನು ಚೇಂಜ್ ಆಗದೇ ಇರುವುದು ಭಾಗ್ಯಗೂ ಅನುಮಾನ ತರಿಸಿದೆ. ಭಾಗ್ಯ ಪೂಜಾಳ ಮುಖವನ್ನ ನೋಡಿ ಇವಳು ಬೆಳಗ್ಗೆಯಿಂದ ಎಲ್ಲಿಗೆ ಹೋಗಿದ್ದಳು ಎಂದುಕೊಂಡಿದ್ದಾಳೆ.
ಮನೆಯ ಹೊರಗಡೆ ತಾಂಡವ್ ಇದ್ದಾನೆ ಇದೆ ವೇಳೆ ಶ್ರೇಷ್ಠಾ ತಾಂಡವ್‌ಗೆ ಕಾಲ್ ಮಾಡಿದ್ದು ಇವಳಿಂದಲೇ ಇಷ್ಟೆಲ್ಲ ಆಗಿದ್ದು. ನನ್ನನ್ನ ಬ್ಲಾಕ್ ಮೇಲ್ ಮಾಡಿ ಬೆಟ್ಟಕ್ಕೆ ಕರೆಸಿಕೊಂಡಿರಲಿಲ್ಲ ಎಂದರೆ ನಾನು ಪೂಜೆಯಲ್ಲಿ ಭಾಗಿಯಾಗುತ್ತಿದ್ದೆ. ಆಗ ಯಾವುದೇ ರೀತಿಯಲ್ಲಿ ಸಮಸ್ಯೆಗಳು ಎದುರಾಗುತ್ತಿರಲಿಲ್ಲ ಎಂದು ಸುಮ್ಮನೆ ಆಗಿದ್ದಾನೆ. ಇನ್ನು ಶ್ರೇಷ್ಠಾ ತನ್ನ ತವರು ಮನೆಗೆ ಹೋಗಿದ್ದು ಅವರ ತಂದೆ ತಾಯಿ ಶ್ರೇಷ್ಠಾಳನ್ನು ಕಟ್ಟಿ ಹಾಕಿದ್ದಾರೆ. ನಿನಗೆ ನಾವು ಬೇಕಾ ಅಥವಾ ಆ ತರುಣ್ ಬೇಕಾ ನೀನೆ ಆಯ್ಕೆ ಮಾಡಿಕೋ ಎಂದು ಹೇಳಿದ್ದಾರೆ. ನೀನು ಅವನನ್ನೇ ಆಯ್ಕೆ ಮಾಡಿಕೊಂಡರೆ ವಿಷ ಕುಡಿಯುವುದಾಗಿ ಹೇಳಿದ್ದಾರೆ.

ಇನ್ನು ಮನೆಯಲ್ಲಿರುವ ಗುಂಡಣ್ಣ ಹಾಗೂ ತನ್ವಿ ಇಬ್ಬರು ಅಪ್ಪ ಇತ್ತೀಚಿನ ದಿನಗಳಲ್ಲಿ ಸುಳ್ಳು ಹೇಳುವುದನ್ನು ಕಲಿತಿದ್ದಾರೆ ಎಂದು ಹೇಳಿ ಮಾತನಾಡಿಕೊಂಡಿದ್ದಾರೆ. ಈ ಮಾತು ಭಾಗ್ಯ ಕಿವಿಗೂ ಸಹ ಬಿದ್ದಿದೆ ಬೇಸರ ಮಾಡಿಕೊಂಡಿದ್ದಾಳೆ. ಮಕ್ಕಳ ಬಳಿ ಹೋಗಿ ಅಪ್ಪ ತುಂಬಾ ಒಳ್ಳೆಯವರು ಆ ರೀತಿ ಏನು ಆಗಿಲ್ಲ ಎಂದು ಮಕ್ಕಳಿಗೆ ತಿಳಿ ಹೇಳಿದ್ದಾಳೆ. ರೂಮಿಂದ ಹೊರಗೆ ಬಂದವಳೇ ತಾಂಡವ್‌ನನ್ನ ಹೇಗಾದರೂ ಮಾಡಿ ಮನೆಯೊಳಗೆ ಕರೆದುಕೊಳ್ಳಬೇಕು ಇಲ್ಲದಿದ್ದರೆ ಮಕ್ಕಳ ಮನಸ್ಸಿನ ಮೇಲೆ ಬಹಳ ಪರಿಣಾಮ ಬೀರುತ್ತದೆ ಎಂದು ಯೋಚನೆ ಮಾಡುತ್ತಾ ಕುಸುಮಾ ಬಳಿಗೆ ಬಂದಿದ್ದಾಳೆ.
ಗಂಡನ ಪರವಾಗಿ ಮಾತನಾಡಿದ ಭಾಗ್ಯ, ಸೊಸೆಯನ್ನು ಮುದ್ದು ಮಾಡಿದ ಕುಸುಮಾ
ಭಾಗ್ಯ ಕುಸುಮಾ ಬಳಿ ಬಂದವಳೇ ತಾಂಡವ್ ಪರವಾಗಿ ಮಾತನಾಡುತ್ತಿದ್ದಾಳೆ. ಅತ್ತೆ ಅವರು ನೀವೇ ಸಾಕಿ ಬೆಳೆಸಿದ ಮಗ. ಅವರನ್ನು ನೀವು ಹೊರಗೆ ಹಾಕುವುದು ಸರಿಯಲ್ಲ ದಯವಿಟ್ಟು ಒಳಗೆ ಕರೆದುಕೊಳ್ಳಿ ಎಂದು ಕೇಳಿಕೊಂಡಿದ್ದಾಳೆ. ಕುಸುಮಾ ಭಾಗ್ಯಗೆ ಬೈದಿದ್ದಾರೆ ನೀನು ಗಂಡನ ಪರ ವಕಾಲತ್ತು ವಹಿಸಿಕೊಂಡು ಬರಬೇಡ. ಅವನು ಮಾಡಿರುವ ತಪ್ಪಿಗೆ ಶಿಕ್ಷೆ ಸರಿಯಾಗಿದೆ ಎಂದು ಹೇಳಿದ್ದಾರೆ.
ಸುನಂದಾ ಸಹ ಬೀಗತಿಯಮ್ಮ ಮಾಡಿರುವುದು ಸರಿಯಾಗಿದೆ ಎಂದು ಉಪ್ಪು ಕಾರವನ್ನು ಹಾಕಿದ್ದಾರೆ. ಆದರೆ ಭಾಗ್ಯ ಮಾತ್ರ ತನ್ನ ಗಂಡ ಒಳ್ಳೆಯವನು ಎಂದೇ ಹೇಳುತ್ತಿದ್ದಾಳೆ. ಅತ್ತೆ ನೀವು ಈಗ ಅವರನ್ನು ಹೊರಗೆ ಹಾಕಿರುವುದು ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ. ಅವರು ತಮ್ಮ ತಂದೆಯನ್ನ ವಿಲನ್ ರೀತಿ ನೋಡುತ್ತಿದ್ದಾರೆ. ದಯವಿಟ್ಟು ಒಳಗೆ ಕರೆಸಿಕೊಳ್ಳಿ ಈ ಬಾರಿ ಕ್ಷಮಿಸಿ ಎಂದು ಭಾಗ್ಯ ಹೇಳಿದ್ದಾಳೆ. ಇದಕ್ಕೆ ಅವರ ಮಾವ ಸಹ ದನಿಗೂಡಿಸಿದ್ದು ಕುಸುಮಾಗೆ ಇದೇ ಸರಿ ಎನಿಸಿದೆ ಭಾಗ್ಯಳನ್ನು ನೀನೇ ನನ್ನ ಬೆಸ್ಟ್ ಸೊಸೆ ಎಂದು ಮುದ್ದಾಡಿದ್ದಾರೆ.

ಇನ್ಮುಂದೆ ಬದಲಾಗುತ್ತಾನ ತಾಂಡವ್? ಭಾಗ್ಯ ಮೇಲೆ ಬರುತ್ತಾ ಕಾಳಜಿ ..?
ತಾಂಡವ್ ಕಿಟಕಿಯ ಬಳಿ ನಿಂತುಕೊಂಡು ಭಾಗ್ಯ ತನ್ನ ಪರ ಮಾತನಾಡುತ್ತಿರುವುದನ್ನು ಕೇಳಿಸಿಕೊಳ್ಳುತ್ತಿದ್ದಾನೆ. ಇದೇ ವೇಳೆ ಮನಸ್ಸಿನಲ್ಲಿ ನಿಜವಾಗಿಯೂ ಭಾಗ್ಯ ನನ್ನ ಮೇಲೆ ಇಷ್ಟೊಂದು ಕಾಳಜಿ ಇಟ್ಟುಕೊಂಡಿದ್ದಾಳೆ ನಾನೇನಾದರೂ ತಪ್ಪು ಮಾಡಿಬಿಟ್ನಾ ಎಂದು ಅಂದುಕೊಂಡಿದ್ದಾನೆ. ಭಾಗ್ಯ ಮಾತಿಗೆ ಒಪ್ಪಿಕೊಂಡ ಕುಸುಮಾ ಮಗನನ್ನು ಮನೆಯ ಒಳಗಡೆ ಕರೆದುಕೊಂಡಿದ್ದಾಳೆ.
ಒಳಗಡೆ ಬಂದ ತಾಂಡವ್‌ಗೆ ಭಾಗ್ಯ ನೀವಂತೂ ಆಫೀಸ್ ಕೆಲಸದ ಮೇಲೆ ಮನೆಯಿಂದ ಹೊರಗೆ ಹೋಗಿರಲಿಲ್ಲ. ಆದರೂ ನಾನಂತೂ ಎಲ್ಲಿಗೆ ಹೋಗಿದ್ದೀರಿ ಎಂದು ಕೇಳುವುದಿಲ್ಲ ಎಂದು ಹೇಳಿದ್ದಾಳೆ. ಭಾಗ್ಯ ಮಾತಿಗೆ ತಾಂಡವ್‌ಗೆ ಶಾಕ್ ಆಗಿದೆ. ಇಷ್ಟೆಲ್ಲಾ ಆದಮೇಲೆ ತಾಂಡವ್ ಬದಲಾಗುತ್ತಾನಾ ಎಂದು ಕಾದು ನೋಡಬೇಕಾಗಿದೆ.


Click it and Unblock the Notifications











