Bhagyalakshmi: ಭಾಗ್ಯ ಬೆಂಬಲಕ್ಕೆ ನಿಂತ ನವ ದುರ್ಗೆಯರು! ತಂದೆ-ತಾಯಿಗೆ ಅವಮಾನ ಮಾಡಿದ ಶ್ರೇಷ್ಠಾ..!
ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ನವರಾತ್ರಿ ಸಂಭ್ರಮ ಮನೆ ಮಾಡಿದೆ ಭಾಗ್ಯ ಮನೆಯಲ್ಲಿ ಸುನಂದಾ ಬೊಂಬೆಗಳನ್ನ ಕೂರಿಸಿ ಮಗಳಿಗೆ ಆದಷ್ಟು ಅನುಕೂಲವನ್ನು ಮಾಡಿಕೊಡುತ್ತಿದ್ದಾರೆ. ಸುನಂದಾ ಜೊತೆಗೆ ಅವರ ಮೊಮ್ಮಗ ಗುಂಡಣ್ಣ ಸಹ ಅಜ್ಜಿಗೆ ಬೊಂಬೆಗಳನ್ನ ಕೂರಿಸಿ ಅಮ್ಮ ಬರುವ ದಾರಿಯನ್ನೇ ಕಾಯುತ್ತಾ ಇದ್ದಾನೆ. ಪೂಜಾ ಮಾತ್ರ ತನ್ನ ಮನೆಗೆ ಹೋಗದೆ ಭಾವನಾ ಮನೆಯಲ್ಲಿ ಸೇರಿಕೊಂಡಿದ್ದಾಳೆ. ಯಾಕೆಂದರೆ ಪೂಜಾಗೆ ಭಾವನ ವಿಕ್‌ನೆಸ್ ಪ್ಲಸ್ ಪಾಯಿಂಟ್ ಆಗಿ ಪರಿಣಮಿಸಿದೆ. ಭಾವನ ಬಳಿ ಎಷ್ಟು ಹಣ ಬೇಕೋ ಅಷ್ಟು ಹಣವನ್ನು ಪಡೆಯಬಹುದು ಎಂದುಕೊಂಡಿದ್ದಾಳೆ.
ಭಾಗ್ಯ ಶಾಲೆಯಿಂದ ಹೊರಗೆ ಬಂದಿದ್ದಾಳೆ. ಅವಳು ಶಾಲೆಯವರೆಗೆ ನಿಂತು ಯೋಚನೆ ಮಾಡುತ್ತಿದ್ದಾಳೆ. ನನಗೆ ಸಹಾಯವನ್ನ ಮಾಡುವವರು ಯಾರು ಈ ಸೊಸೈಟಿಯಲ್ಲಿ ಹಣ ಇರುವವರಿಗೆ ಮಾತ್ರ ಒಂದು ಉತ್ತಮವಾದ ಭವಿಷ್ಯ ಸಿಗಲಿದೆ ಅಂದುಕೊಂಡಿದ್ದಾಳೆ. ಅಷ್ಟರಲ್ಲಿ ಅಲ್ಲಿಗೆ ದುರ್ಗೆಯ ಅವತಾರದಲ್ಲಿ ಮಂಗಳ ಗೌರಿ ಎಂಟ್ರಿ ಕೊಟ್ಟಿದ್ದು, ಶಾಲೆಯ ಒಳಗೆ ಭಾಗ್ಯಾಳನ್ನ ಕರೆದುಕೊಂಡು ಹೋಗಿದ್ದಾರೆ. ಆದರೆ ಕನ್ನಿಕಾ ಮಾತ್ರ ತನ್ನ ನರಿ ಬುದ್ಧಿಯನ್ನ ತೋರಿಸಿ ಭಾಗ್ಯದ ಅಡ್ಮಿಶನ್ ಲೆಟರ್‌ನ್ನು ಹರಿದು ಹಾಕಿದ್ದಾಳೆ. ಇದೇ ವೇಳೆ ಕನ್ನಿಕಾ ಮುಂದೆ ದುರ್ಗೆ ಪ್ರತ್ಯಕ್ಷವಾಗಿದ್ದು ಕನ್ನಿಕಾ ಶಾಕ್‌ಗೆ ಒಳಗಾಗಿದ್ದಾಳೆ.

ಶ್ರೇಷ್ಠಾ ಮನೆಯವರ ಬಳಿ ರಘುವನ್ನ ಮದುವೆಯಾಗುವುದಾಗಿ ಹೇಳಿದಳು. ಆದರೆ ಅವಳ ಮನಸ್ಸಿನಲ್ಲಿ ಬೇರೆಯದ್ದೇ ರೀತಿಯ ಪ್ಲ್ಯಾನ್ ಮಾಡಿಕೊಂಡಿದ್ದಾಳೆ. ಎಂಗೇಜ್‌ಮೆಂಟ್ ಮಾಡಲು ರೆಡಿ ಮಾಡಿದ್ದು, ದೇವಸ್ಥಾನದಲ್ಲಿ ಶ್ರೀವರ ಅವರು ಎಂಗೇಜ್ಮೆಂಟ್‌ಗೆ ಬೇಕಾದ ಸಿದ್ಧತೆಗಳನ್ನೆಲ್ಲ ಮಾಡಿಕೊಂಡಿದ್ದಾರೆ. ಜೊತೆಗೆ ರಘು ಸಹ ಇದ್ದು ಇನ್ನೇನು ಎಂಗೇಜ್‌ಮೆಂಟ್ ಆಗಬೇಕು ಎಂದಾಗ ಶ್ರೇಷ್ಠಾ ತನ್ನ ಹೊಸ ಮುಖವಾಡವನ್ನು ತೋರಿಸಲು ಶುರು ಮಾಡಿದ್ದಾಳೆ.
ಕನ್ನಿಕಾಳನ್ನು ಪ್ರಶ್ನೆ ಮಾಡಿದ ದುರ್ಗೆಯರು, ಸುಳ್ಳು ಹೇಳಿ ಸಿಕ್ಕಿಬಿದ್ದ ಕನ್ನಿಕಾ
ಇಲ್ಲಿ ಹೊಸದಾಗಿ ಭಾಗ್ಯ ಎಂಬುವವರು ಅಡ್ಮಿಶನ್ ಆಗಿದ್ದಾರಲ್ಲ ಅವರು ಎಲ್ಲಿ ಎಂದು ಕನ್ನಿಕಾ ಬಳಿಯೇ ಮಂಗಳ ಗೌರಿ ಪ್ರಶ್ನೆಯನ್ನು ಮಾಡಿದ್ದಾರೆ. ಇನ್ನು ಕನ್ನಿಕಾ ಅವಳು ಶೋಕಿಗಾಗಿ ಶಾಲೆಗೆ ಬರುತ್ತಿದ್ದಳು. ಈಗ ಪಬ್ಲಿಸಿಟಿ ಸಿಕ್ಕ ಮೇಲೆ ಶಾಲೆಗೆ ಬರುತ್ತಿಲ್ಲ ಒಂದೇ ಒಂದು ದಿನ ಪ್ರೇಯರ್‌ಗೆ ಬಂದು ವಾಪಸ್ ಹೋಗಿದ್ದಾಳೆ ಎಂದು ಸುಳ್ಳು ಹೇಳಿದ್ದಾಳೆ.
ಇದೇ ವೇಳೆ ಹರೀಶ್ ಬೆಳಗ್ಗೆ ಬಂದಿದ್ದರು ಎಂದಾಗ ಒಂದು ವಾರದ ಹಿಂದೆ ಬಂದಿದ್ದರು. ಈಗ ಶಾಲೆಗೆ ಬರುತ್ತಿಲ್ಲ ಎಂದು ಹೇಳಿದ್ದಾಳೆ. ಭಾಗ್ಯ ಬಗ್ಗೆ ಕನ್ನಿಕಾ ಬರೀ ಸುಳ್ಳನ್ನೇ ಹೇಳುತ್ತಾ ಇದ್ದಾಳೆ. ಇದೇ ವೇಳೆ ನವದುರ್ಗೆಯರು ನಗುತ್ತಾ ಇದ್ದಾರೆ. ಯಾಕೆಂದರೆ ಕನ್ನಿಕಾ ಸುಳ್ಳು ಹೇಳಿದ್ದಾಳೆ ಎಂದು ದೇವಿಯರಿಗೆ ಗೊತ್ತಿದೆ ಇದಕ್ಕಾಗಿ ಸುಮ್ಮನೆ ನಿಂತಿದ್ದಾರೆ.

ತಂದೆ ತಾಯಿಗೆ ಅವಮಾನ ಮಾಡಿದ ಶ್ರೇಷ್ಠಾ
ಎಲ್ಲದರೂ ಹೋಗಿ ಸಾಯಿ ಎಂದ ರಘು
ಎಂಗೇಜ್ಮೆಂಟ್ ಎಂದು ಶ್ರೇಷ್ಠಾಳನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಲಾಯಿತು. ಇದೇ ವೇಳೆ ಶ್ರೇಷ್ಠಾ ರಘು ಕಡೆಯವರು ಯಾರು ಬರೋದಿಲ್ವ ಎಂದು ಕೇಳಿದ್ದಾಳೆ. ಇದಕ್ಕೆ ಶ್ರೀವರ ನಾವೇ ರಘು ಕಡೆಯವರಾಗಿ ಮುಂದೆ ನಿಂತು ಎಂಗೇಜ್ಮೆಂಟ್ ಮಾಡುತ್ತೇವೆ ಎಂದಾಗ ಊರಿನವರೆಲ್ಲರಿಗೂ ಸಹ ಎಂಗೇಜ್ಮೆಂಟ್ ವಿಚಾರ ತಿಳಿಯಲಿ ಎಂದು ಫೋನ್ ಮಾಡಿಸಿ ಎಲ್ಲರನ್ನು ಕರೆದಿದ್ದಾಳೆ.
ಬಳಿಕ ನನಗೆ ಇಷ್ಟವಿಲ್ಲದ ಎಂಗೇಜ್ಮೆಂಟ್ ಮಾಡುತ್ತಿದ್ದಾರೆ ಎಂದು ತಂದೆಗೆ ಅವಮಾನ ಮಾಡಿದ್ದಾಳೆ. ಇದೆ ವೇಳೆ ಅಲ್ಲಿಗೆ ಬಂದ ಜನರು ಏನು ಶ್ರೀವರ ನೀನೇ ಬೆಳೆಸಿದ ಹುಡುಗನ ಜೊತೆಗೆ ಮದುವೆ ಮಾಡಲು ಹೊರಟಿದ್ದಿಯಲ್ಲ. ಅದು ಸಹ ಮಗಳಿಗೆ ಇಷ್ಟವಿಲ್ಲ ಎಂದು ಕುಹಕವಾಡಿದ್ದಾರೆ. ಜನರ ಮಾತನ್ನ ಕೇಳಿದ ಶ್ರೀವರ ಕೆಳಗೆ ಕುಸಿದು ಬಿದ್ದಿದ್ದಾರೆ .ಇದೇ ವೇಳೆ ರಘು ಮಾವನಿಗೆ ಈ ರೀತಿ ಆಯಿತಲ್ಲ ಎಂದು ಶ್ರೇಷ್ಠಾಳನ್ನು ಎಲ್ಲದರೂ ಹೋಗಿ ಸಾಯಿ ಇನ್ಮುಂದೆ ನೀನು ಈ ಊರಿಗೆ ಕಾಲಿಡಬೇಡ ಎಂದು ಹೇಳಿದ್ದಾನೆ.


Click it and Unblock the Notifications











