Bhagyalakshmi: ಮತ್ತೆ ಮತ್ತೆ ತಾಂಡವ್ ತಾಳ್ಮೆ ಪರೀಕ್ಷೆ ಮಾಡುತ್ತಿರುವ ಶ್ರೇಷ್ಠಾ: ಟ್ರ್ಯಾಪ್ ಆಗಿಬಿಟ್ನಾ ತಾಂಡವ್..?

By ಶೃತಿ ಹರೀಶ್ ಗೌಡ

ಭಾಗ್ಯಲಕ್ಷ್ಮಿ ಧಾರಾವಾಹಿ ದಿನಕ್ಕೊಂದು ತಿರುವು ಪಡೆಯುತ್ತಾ ಸಾಗುತ್ತಾ ಇದೆ. ಭಾಗ್ಯಗೆ ಬಂದಿದ್ದ ಸಂಕಷ್ಟಗಳನ್ನೆಲ್ಲ ದುರ್ಗಾ ಮಾತೆ ಪರಿಹರಿಸಿದ್ದಾಳೆ . ಆದರೆ ತಾಂಡವ್ ತನ್ನ ಎಡವಟ್ಟಿನಿಂದ ಮಾಡಿದ ತಪ್ಪಿಗೆ ಯಾವುದೇ ರೀತಿಯ ಪರಿಹಾರ ಇಲ್ಲ ಎಂದು ಕಾಣಿಸುತ್ತಿದೆ ಇದಕ್ಕಾಗಿ ಪದೇ ಪದೇ ತೊಂದರೆಗೆ ಸಿಕ್ಕಿಹಾಕಿಕೊಳ್ಳುತ್ತಿದ್ದಾನೆ. ಕುಸುಮಾ ಮನೆಯಲ್ಲಿ ನವರಾತ್ರಿಯ ಸಂಭ್ರಮ ಮನೆ ಮಾಡಿದೆ. ಸುನಂದಾ ಬೊಂಬೆಗಳನ್ನೆಲ್ಲ ಅಚ್ಚುಕಟ್ಟಾಗಿ ಜೋಡಿಸಿಟ್ಟಿದ್ದು ಪೂಜೆ ಮಾಡಲು ಅಣಿಗೊಳಿಸಿದ್ದಾರೆ. ಕುಸುಮಾ ಸರಿಯಾದ ರೀತಿಯಲ್ಲಿ ಜೋಡಿಸಿದ್ದಾರಾ ಎಂದು ಪಕ್ಕದಲ್ಲಿ ಕುಳಿತುಕೊಂಡು ನೋಡುತ್ತಿದ್ದಾರೆ.

ಭಾಗ್ಯ ತನ್ನ ಶಾಲೆಯಲ್ಲಿ ಬಂದಂತಹ ಎಲ್ಲಾ ಕಷ್ಟಗಳನ್ನ ದೇವಿಯರ ಸಹಾಯದಿಂದ ನಿವಾರಿಸಿಕೊಂಡಿದ್ದಾಳೆ. ಹಾಜರಾತಿ ಕಡಿಮೆ ಇರುವವರು ಪರೀಕ್ಷೆಗೆ ಬರೆಯುವಂತಿಲ್ಲ ಎಂಬ ನಿಯಮವನ್ನು ಕನ್ನಿಕಾ ಭಾಗ್ಯ ಮೇಲೆ ಹೇರಿದ್ದಳು. ಇದಕ್ಕೂ ಕೂಡ ಭಾಗ್ಯಗೆ ಪರ್ಮಿಷನ್ ಸಿಕ್ಕಿದೆ ಭಾಗ್ಯ ಯೂನಿಫಾರ್ಮ್ ಇಲ್ಲದೆಯೂ ಸಹ ಶಾಲೆಗೆ ಬರುವಂತೆ ಕನ್ನಿಕಾ ಹೇಳಿದ್ದಾಳೆ. ಇನ್ನೂ ಇದೇ ವಿಚಾರವಾಗಿ ಭಾಗ್ಯ ಹರ್ಷ ವ್ಯಕ್ತಪಡಿಸಿದ್ದಾಳೆ.

Colors kannada Bhagyalakshmi serial Written Update on October 24th episode

ಇನ್ನು ಸುನಂದಾ ತಮ್ಮ ಮಗಳ ವಿಷಯದಲ್ಲಿ ಬಹಳಷ್ಟು ತಲೆ ಕೆಡಿಸಿಕೊಂಡಿದ್ದರು. ಅಳಿಯ ಏನಾದರೂ ಬಿಟ್ಟು ಹೋದರೆ ಮಗಳ ಗತಿ ಏನು? ಎಂದೆಲ್ಲಾ ಯೋಚನೆ ಮಾಡಿದ್ದರು. ಇದೆಲ್ಲವಕ್ಕೂ ಕೂಡ ಕುಸುಮಾ ಹಾಗೂ ಧರ್ಮರಾಜ್ ಉತ್ತರವನ್ನು ನೀಡಿದ್ದಾರೆ. ಆಕಸ್ಮಾತ್ ಆ ರೀತಿ ಏನಾದರೂ ತೊಂದರೆಯಾದರೂ ಸರಿಯೇ ನಾವು ಭಾಗ್ಯಳನ್ನ ಬಿಟ್ಟುಕೊಡುವ ಮಾತೇ ಇಲ್ಲ ಎಂದು ಸುನಂದಾಗೆ ಹೇಳಿದ್ದಾರೆ. ಅಷ್ಟೇ ಅಲ್ಲದೆ . ನಾವು ಯಾವತ್ತೂ ಭಾಗ್ಯಳನ್ನ ಮನೆಯಿಂದ ಹೊರಗೆ ಕಳುಹಿಸುವುದಿಲ್ಲ ಎಂದು ಸುನಂದಾಗೆ ಪ್ರಾಮಿಸ್ ಮಾಡಿದ್ದಾರೆ.

ತಾಂಡವ್‌ಗೆ ಬ್ಲಾಕ್ ಮೇಲ್ ಮಾಡುತ್ತಿರುವ ಪೂಜಾ

ಅಡ್ಡ ಕತ್ತರಿಯಲ್ಲಿ ಸಿಕ್ಕಿ ಬಿದ್ದ ಸೂರ್ಯವಂಶಿ

ಪೂಜಾಗೆ ತನ್ನ ಮನೆಗೆ ಹೋಗಲು ಇಷ್ಟವಿಲ್ಲ ತನ್ನ ಅಪ್ಪನನ್ನೇ ಹೇಗಾದರೂ ಮಾಡಿ ಇಲ್ಲಿಗೆ ‌ಕರೆಸಿಕೊಳ್ಳಬೇಕು ಎಂದು ಯೋಚನೆ ಮಾಡಿದ್ದಾಳೆ. ಇದೆ ವೇಳೆ ತಾಂಡವ್‌ ಬಳಿಯಲ್ಲಿ ನೀವು ಅಪ್ಪನನ್ನ ಹಬ್ಬಕ್ಕೆ ಈ ಮನೆಗೆ ಕರೆಯಲೇಬೇಕು. ಇಲ್ಲವಾದರೆ ನಿಮ್ಮ ವಿಷಯವನ್ನು ಅತ್ತೆಗೆ ಹೇಳುತ್ತೇನೆ ಎಂದು ಬ್ಲಾಕ್ ಮೇಲ್ ಮಾಡಿದ್ದಾಳೆ. ಪೂಜಾ ಮಾಡಿದ ಬ್ಲಾಕ್ ಮೇಲ್‌ಗೆ ಹೆದರಿ ಮಾವನನ್ನು ಮನೆಗೆ ಕರೆದಿದ್ದಾನೆ. ಇನ್ನು ಅಳಿಯ ಫೋನ್ ಮಾಡಿರುವುದಕ್ಕೆ ಮಾವ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಸುನಂದಾ ಮನೆಯಲ್ಲಿ ಹಬ್ಬವನ್ನು ಮಾಡುವ ವೇಳೆ ಪೂಜಾ ವಾಪಸ್ ಬಂದಿದ್ದಾಳೆ. ಇದನ್ನು ನೋಡಿದ ಕುಸುಮಾ ಯಾಕೆ ಮನೆಗೆ ಹೋಗಿಲ್ವಾ ಎಂದು ಕೇಳಿದಾಗ ಹಬ್ಬ ಮಾಡಲು ಮನೆಗೆ ಅಪ್ಪ ಬಂದಿದ್ದಾರೆ ಎಂದು ಹೇಳಿದ್ದಾಳೆ. ಮನೆಯಲ್ಲಿ ಎಲ್ಲರೂ ಕೂಡ ಸಂತಸಪಟ್ಟಿದ್ದಾರೆ. ಇದೇ ವೇಳೆ ಕುಸುಮಾ ತಮ್ಮ ಬೀಗತ್ತಿಯ ಕಾಲನ್ನ ಎಳೆದಿದ್ದಾರೆ. ಯಾವಾಗಲೂ ಲಕ್ಷ್ಮಿ ಕೈಯಲ್ಲಿ ಮಾಡಿಸುತ್ತಾ ಇದ್ರಿ. ಈಗ ನೀವೇ ಕೆಲಸವನ್ನು ಮಾಡುತ್ತಾ ಇದ್ದೀರಾ ಪರವಾಗಿಲ್ಲ ಎಂದು ಹೇಳುವ ಮೂಲಕ ಕಾಲು ಎಳೆದಿದ್ದಾರೆ.

Colors kannada Bhagyalakshmi serial Written Update on October 24th episode

ಮತ್ತೆ ತಾಂಡವ್‌ಗೆ ಕಾಟ ಕೊಡಲು ಬಂದ ಶ್ರೇಷ್ಠಾ

ತಾಂಡವ್‌ನನ್ನು ಬಿಡೋ ಮಾತೆ ಇಲ್ವಂತೆ!

ಶ್ರೇಷ್ಠಾಳಿಂದ ನಾನು ಎಲ್ಲರ ಮುಂದೆ ತಲೆತಗ್ಗಿಸುವಂತಾಗಿದೆ ಎಂದು ತಾಂಡವ್ ಕೋಪ ಮಾಡಿಕೊಂಡಿದ್ದಾನೆ. ಹೇಗಾದರೂ ಮಾಡಿ ನಾನು ಈ ಎಲ್ಲಾ ಸಂಕೋಲೆಗಳಿಂದ ಮುಕ್ತನಾಗಬೇಕು ಶ್ರೇಷ್ಠಾಳನ್ನು ದೂರ ಮಾಡಿಕೊಳ್ಳಬೇಕು ಎಂದು ಅಂದುಕೊಳ್ಳುವಷ್ಟರಲ್ಲೇ ಶ್ರೇಷ್ಠಾ ಅದು ಸಾಧ್ಯವಿಲ್ಲ ತಾಂಡವ್ ಎಂದು ಹೇಳಿದ್ದಾಳೆ. ತಾಂಡವ್ ಮುಂದೆ ಬಂದ ಶ್ರೇಷ್ಠಾ ನೀನು ನನ್ನನ್ನು ಮದುವೆಯಾಗಲೇಬೇಕು ಇಲ್ಲದಿಂದರೆ ನಾನು ಸುಮ್ಮನೆ ಇರೋದಿಲ್ಲ ಎಂದು ಹೇಳಿದ್ದಾಳೆ. ನೀನು ನನಗಾಗಿ ತಾಳಿ,‌ ಕಾಲುಂಗುರ ಎಲ್ಲವನ್ನು ಸಹ ತೆಗೆದಿದ್ದೀಯಾ ಎಂದು ಎಂಗೇಜ್‌ಮೆಂಟ್ ಆಗಲು ರಿಂಗ್ ತೋರಿಸಿದ್ದಾಳೆ.

More from Filmibeat

English summary
Bhagyalakshmi kannada serial October 24th episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X