Bhagyalakshmi: ಮನೆಗೆ ನುಗ್ಗಿ ತಾಂಡವ್‌ನನ್ನು ತಬ್ಬಿಕೊಂಡ ಶ್ರೇಷ್ಠಾ..! ಮನೆ ಮಂದಿಗೆಲ್ಲಾ ಶಾಕ್ ಕೊಟ್ಟ ತಾಂಡವ್ ಪ್ರೇಯಸಿ..!

By ಶೃತಿ ಹರೀಶ್ ಗೌಡ

ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಈಗ ಹೊಸದೊಂದು ತಿರುವು ಶುರುವಾಗಿದೆ. ಇಷ್ಟು ದಿನ ಕದ್ದು ಮುಚ್ಚಿ ಶ್ರೇಷ್ಠಾ ಹಾಗೂ ತಾಂಡವ್ ಭೇಟಿಯಾಗಿ ಪ್ರೀತಿಯನ್ನ ಮಾಡುತ್ತಿದ್ದರು. ಕೊನೆಗೆ ಪೂಜಾಗೆ ಎಲ್ಲಾ ವಿಚಾರ ಗೊತ್ತಾಗಿದೆ. ತಾಂಡವ್ ಶ್ರೇಷ್ಠಾಳನ್ನು ದೂರ ಮಾಡಿಕೊಂಡು ಬಂದಾದ ಮೇಲೂ ಶ್ರೇಷ್ಠಾಗೆ ತಾಂಡವ್‌ನನ್ನ ಬಿಟ್ಟಿರಲು ಆಗುತ್ತಿಲ್ಲ. ತಾಂಡವ್ ಎಷ್ಟೇ ಕಠೋರವಾಗಿ ನಡೆದುಕೊಂಡರು ಸಹ ಶ್ರೇಷ್ಠಾ ಹಠ ಮಾಡುತ್ತಿದ್ದಾಳೆ. ಇನ್ನೂ ಕಠೋರವಾಗಿ ತಾಂಡವ್ ನಡೆದುಕೊಂಡಿದ್ದಾನೆ .ಆಗಲು ಸಹ ಶ್ರೇಷ್ಠ ಕೋಪ ಮಾಡಿಕೊಂಡಿದ್ದು, ಇನ್ನು ಮುಂದೆ ನಾನು ಇವನಿಗೆ ಸರಿಯಾಗಿ ಬುದ್ಧಿಯನ್ನ ಕಲಿಸುತ್ತೇನೆ ಎಂದುಕೊಂಡಿದ್ದಾಳೆ.

ಈಗ ಶ್ರೇಷ್ಠಾ ನಿಜವಾದ ಗೇಮ್ ಶುರು ಮಾಡಿದ್ದಾಳೆ ಕಾವ್ಯ ಬಳಿ ಇನ್ನೂ 20 ದಿನಗಳ ಒಳಗೆ ತಾಂಡವ್‌ ಎಂಗೇಜ್ಮೆಂಟ್ ಮಾಡಿ ಕೊಳ್ಳಲೇಬೇಕು ಆ ರೀತಿ ನಾನು ಮಾಡುತ್ತೇನೆ ನೋಡುತ್ತಾ ಇರು ಎಂದು ಹೇಳಿದ್ದಾಳೆ. ಕಾವ್ಯ ಶ್ರೇಷ್ಠಾಗೆ ಸಮಾಧಾನ ಮಾಡುತ್ತಿದ್ದರು ಸಹ ಸಮಾಧಾನವಾಗುತ್ತಿಲ್ಲ ಇವನಿಗೆ ನಾನು ಹೆಣ್ಣು ಎಂಬ ಅಸಡ್ಡೆ ಇದೆ. ನನ್ನ ಮಾನ ಮರ್ಯಾದೆ ಹೋಗುತ್ತದೆ ಎಂದು ಹೇಳುತ್ತಿದ್ದಾನೆ ಇವನೇ ಪ್ರೆಸ್ಟೀಜ್ ಎಂದು ಹೆದರುಕೊಳ್ಳುತ್ತಾನೆ. ಅವನ ಹೆಸರಿಗೆ ಮಸಿ ಬೆಳೆಯುವ ಕೆಲಸವನ್ನ ನಾನು ಮಾಡುತ್ತೇನೆ ನೋಡುತ್ತಾ ಇರು ಎಂದು ಕೋಪದಿಂದ ಹೇಳಿದ್ದಾಳೆ.

Colors kannada Bhagyalakshmi serial Written Update on October 26th episode

ಮನೆಗೆ ಬಂದಿರುವ ತಾಂಡವ್ ಪೂಜೆಗೆ ಸಿದ್ಧತೆಯನ್ನು ಮಾಡಿರುವುದನ್ನ ನೋಡಿ ಸಂಭ್ರಮಿಸಿದ್ದಾನೆ. ಮಗ ಸರಿಯಾದ ಸಮಯಕ್ಕೆ ಪೂಜೆಗೆ ಬಂದಿರುವುದು ಕುಸುಮಾಗೆ ಖುಷಿ ಕೊಟ್ಟಿದೆ. ಇದೆ ವೇಳೆ ಭಾಗ್ಯ ಬೇಗನೆ ರೆಡಿಯಾಗಿ ಬನ್ನಿ ಎಂದು ಹೇಳಿದ್ದಾಳೆ. ತಾಂಡವ್ ಭಾಗ್ಯಳನ್ನ ಹೊಗಳಲು ಹೋದಾಗ ಅಲ್ಲಿ ಭಾಗ್ಯಳೆ ಇರುವುದಿಲ್ಲ. ಇದೇ ವೇಳೆ ತಾಂಡವ್ ಕೋಪ ಮಾಡಿಕೊಂಡಿದ್ದು, ಇವಳ ಜ್ಞಾನವು ಸಹ ಬೆಳೆದಿದೆ ಮೊದಲು ಹೆದರುತ್ತಾ ಇದ್ದಳು. ಈಗ ಏನೇ ಹೇಳಿದರೂ ಕೇಳುವುದೇ ಇಲ್ಲ ಎಂದು ಬೇಸರ ಮಾಡಿಕೊಂಡಿದ್ದಾನೆ. ನನ್ನ ಪರಿಸ್ಥಿತಿ ಯಾವ ರೀತಿ ಇದೆ ಎಂದರೆ ಎಂದು ಬೇಸರ ಮಾಡಿಕೊಂಡಿದ್ದಾನೆ.

ಸಂಭ್ರಮದಲ್ಲಿರುವ ಮನೆ ಮಂದಿ

ಸುನಂದಾ-ಭಾಗ್ಯಳಿಗೆ ಸಣ್ಣ ಅನುಮಾನ

ಮನೆಯಲ್ಲಿ ಪೂಜೆ ನಿರ್ವಿಘ್ನವಾಗಿ ನೆರವೇರಿರುವುದಕ್ಕೆ ಕುಸುಮಾ ಸಾಕಷ್ಟು ಸಂತಸಪಟ್ಟಿದ್ದಾಳೆ. ನಮ್ಮ ಸಂತೋಷದ ಮೇಲೆ ಯಾರ ಕೆಟ್ಟ ದೃಷ್ಟಿಯು ಬೀಳದೆ ಇರಲಿ ಎಂದು ಹೇಳಿದ್ದಾಳೆ. ಇದಕ್ಕೆ ಪೂಜಾ ಯಾರ ಕೆಟ್ಟ ದೃಷ್ಟಿ ಬೀಳೋದಿಲ್ಲ ಎಂದಾಗ ಸುನಂದಾ ನೀನು ದೃಷ್ಟಿ ಬೊಂಬೆಯಂತೆ ಇದ್ದೀಯಲ್ಲ ಅದಕ್ಕೆ ಕೆಟ್ಟ ದೃಷ್ಟಿ ಬೀಳಲ್ಲ ಎಂದು ಹೇಳಿದ್ದಾರೆ. ದುಡ್ಡು ಕೊಟ್ಟರೆ ನಾನೇ ದೃಷ್ಟಿ ಬೊಂಬೆಯಂತೆ ನಿಂತುಕೊಳ್ಳುತ್ತೇನೆ ಎಂದು ಪೂಜಾ ಹೇಳಿದ್ದಾಳೆ.

ಈ ವೇಳೆ ಪೂಜಾ ಮಾತು ಕೇಳಿದ ತಾಂಡವ್ ಮುಖದಲ್ಲಿ ಬದಲಾವಣೆ ಕಾಣುತ್ತಿದೆ ಎಂದು ಯೋಚಿಸಿದ್ದಾರೆ. ಭಾಗ್ಯ ಸಹ ಗಂಡನ ಮುಖವನ್ನ ನೋಡಿ ಪೂಜಾ ಮಾತನಾಡುತ್ತಿದ್ದರೆ ಇವರ ಮುಖದಲ್ಲಿ ಹೇಗೆ ಬದಲಾವಣೆ ಕಾಣುತ್ತಿದೆ ಎಂದು ಅಂದುಕೊಂಡಿದ್ದಾಳೆ. ಅಷ್ಟರಲ್ಲಿ ಮನೆಯ ಕಾಲಿಂಗ್ ಬೆಲ್ ಆಗಿದ್ದು ಭಾಗ್ಯ ಬಾಗಿಲನ್ನು ತೆಗೆದಿದ್ದಾಳೆ. ಬಾಗಿಲು ತೆಗೆದ ತಕ್ಷಣವೇ ಶ್ರೇಷ್ಠ ಭಾಗ್ಯಳನ್ನೇ ತಳ್ಳಿಕೊಂಡು ಓಡೋಡಿ ಮನೆಯೊಳಗೆ ಹೋಗಿದ್ದಾಳೆ.

Colors kannada Bhagyalakshmi serial Written Update on October 26th episode

ತಾಂಡವ್‌ನನ್ನು ತಬ್ಬಿಕೊಂಡ ಶ್ರೇಷ್ಠಾ, ಮನೆಯವರಿಗೆ ಶಾಕ್

ಓಡೋಡಿ ಬಂದಿರುವ ಶ್ರೇಷ್ಠಾ ತಾಂಡವ್‌ಗೆ ಸಖತ್ ಶಾಕ್ ನೀಡಿದ್ದಾಳೆ. ಓಡಿ ಬಂದ ವೇಳೆ ತಾಂಡವ್‌ನನ್ನು ಗಟ್ಟಿಯಾಗಿ ತಬ್ಬಿಕೊಂಡಿದ್ದಾಳೆ. ಶ್ರೇಷ್ಠಾ ತಬ್ಬಿಕೊಂಡಿದ್ದನ್ನು ಕುಸುಮಾ, ಧರ್ಮರಾಜ್, ಸುನಂದಾ ಹಾಗೂ ಭಾಗ್ಯ ನೋಡಿದ್ದು ಶಾಕ್ ಆಗಿದ್ದಾರೆ. ಶ್ರೇಷ್ಠಾಳ ವರ್ತನೆಗೆ ಎಲ್ಲರು ಕೂಡ ಶಾಕ್‌ಗೆ ಒಳಗಾಗಿದ್ದು, ಶ್ರೇಷ್ಠಾ ಮಾತ್ರ ತಾಂಡವ್ ಬಳಿಯಲ್ಲಿ ನಾನು ಆ ಹುಡುಗನನ್ನ ಮದುವೆ ಆಗೋದಿಲ್ಲ. ನನಗೆ ಮದುವೆ ಇಷ್ಟವಿಲ್ಲ ಎಂದು ಹೇಳುತ್ತಿದ್ದಾಳೆ. ತಾಂಡವ್ ಕೈಯನ್ನು ಮುಷ್ಟಿ ಮಾಡುತ್ತಿದ್ದಾನೆ. ಶ್ರೇಷ್ಠಾ ತಾಂಡವ್‌ಗೆ ಕಾಟ ಕೊಡಲು ಮೊದಲನೇ ಆಟವನ್ನು ಈಗ ಶುರು ಮಾಡಿದ್ದಾಳೆ.

More from Filmibeat

English summary
Bhagyalakshmi serial October 26th episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X