Bhagyalakshmi: ಆತ್ಮಹತ್ಯೆಗೆ ಯತ್ನಿಸಿದ ಶ್ರೇಷ್ಠಾ! ತಾಂಡವನನ್ನು ಹುಡುಕಿಕೊಂಡು ಬಂದೇ ಬಿಟ್ರು ಪೊಲೀಸರು..!

By ಶೃತಿ ಹರೀಶ್ ಗೌಡ

ಶ್ರೇಷ್ಠಾ ಒಂದು ಗೇಮ್ ಶುರು ಮಾಡಿದ್ದು ತಾನು ತಾಂಡವ್‌ನನ್ನು ಮದುವೆ ಯಾಗಲೇಬೇಕು ಎಂದು ಬಿಗಿಪಟ್ಟು ಹಿಡಿದುಕೊಂಡಿದ್ದಾಳೆ. ಇದಕ್ಕಾಗಿ ಕೈ ಕುಯ್ದುಕೊಂಡು ತಾಂಡವ್ ಮನೆಗೆ ಬಂದಿದ್ದು ಆತ್ಮಹತ್ಯೆಯ ನಾಟಕವನ್ನು ಆಡಿದ್ದಾಳೆ. ಕುಸುಮಾಗೆ ಶ್ರೇಷ್ಠಾ ಕೆಳಗೆ ಬಿದ್ದಿದ್ದನ್ನು ನೋಡಿ ಗಾಬರಿಯಾಗಿದೆ. ಇದೆ ವೇಳೆ ಭಾಗ್ಯ ಶ್ರೇಷ್ಠಾ ಕೈಯಲ್ಲಿ ರಕ್ತ ಬರುತ್ತಿದೆ ಎಂದು ಹೇಳಿ ಮನೆ ಮಂದಿಯವರನ್ನೆಲ್ಲಾ ಮತ್ತಷ್ಟು ಗಾಬರಿ ಪಡಿಸಿದ್ದಾಳೆ. ಅಷ್ಟರಲ್ಲಿ ಒಂದು ಬಟ್ಟೆಯಿಂದ ಕಟ್ಟಿದ್ದಾಳೆ. ಪ್ರಜ್ಞೆ ತಪ್ಪಿ ಬಿದ್ದಿರುವ ಶ್ರೇಷ್ಠಾಳನ್ನು ಕುಸುಮ ಎಬ್ಬಿಸು ಎಂದು ಹೇಳಿದ್ದಾರೆ. ಈ ವೇಳೆ ತಾಂಡವ್ ಸುಮ್ಮನೆ ನಿಂತುಕೊಂಡಿದ್ದು ಸುನಂದಾ ತಮ್ಮ ಕೋಪವನ್ನು ಹೊರಹಾಕಿದ್ದಾರೆ.

ಮೊದಲು ಅವಳನ್ನ ಎತ್ತಿಕೊಳ್ಳಪ್ಪ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ ಯಾಕೆ ಮನೆಯವರ ಮುಂದೆ ಅವಳನ್ನ ಮುಟ್ಟಲು ಆಗುತ್ತಿಲ್ಲವೇ. ಮೊದಲು ನೀನು ಅವಳನ್ನ ಎತ್ತಿಕೋ ಎಂದು ಹೇಳಿದಾಗ ತಾಂಡವ್ ಅವಳನ್ನು ಎತ್ತುಕೊಂಡು ಕಾರಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾನೆ. ಮನೆಯಲ್ಲಿ ಕುಸುಮಾ, ಸುನಂದಾ ಹಾಗೂ ಧರ್ಮರಾಜ್ ಈ ಶ್ರೇಷ್ಠಾ ಯಾಕೆ ಈ ರೀತಿ ಮಾಡಿಕೊಂಡಳು ಎಂದು ಯೋಚನೆ ಮಾಡುತ್ತಿದ್ದಾರೆ. ಆದರೆ ತಾಂಡವ್‌ಗೆ ಶ್ರೇಷ್ಠಾ ಮೇಲೆ ತುಂಬಾ ಕೋಪ ಬರುತ್ತಿದ್ದು ನನ್ನ ಕುತ್ತಿಗೆಗೆ ತರುವ ಕೆಲಸವನ್ನ ಇವಳು ಮಾಡುತ್ತಿದ್ದಾಳೆ ಇವಳಿಗೆ ಎಷ್ಟು ಧೈರ್ಯ ಇರಬೇಕು ಎಂದು ಬೈದುಕೊಂಡಿದ್ದಾನೆ.

colors-kannada-bhagyalakshmi-serial

ಪೂಜಾಗೆ ಎಲ್ಲಾ ವಿಚಾರವೂ ಸಹ ಗೊತ್ತಿದೆ. ಆದ್ದರಿಂದ ಏನು ಮಾತನಾಡದೆ ಸುಮ್ಮನೆ ಇದ್ದಾಳೆ ಹೇಗಾದರೂ ಸರಿಯೇ ತಾಂಡವ್‌ನ ವಿಚಾರ ಎಲ್ಲವೂ ಸಹ ಮನೆಯವರಿಗೆ ಗೊತ್ತಾದರೆ ಸಾಕು ಎಂದು ಪೂಜಾ ಅಂದುಕೊಂಡಿದ್ದಾಳೆ. ಈಗ ಪೂಜಾಗೆ ಹಣದ ಅವಶ್ಯಕತೆ ಇದ್ದು ಎಷ್ಟು ಬೇಗ ಗೊತ್ತಾದರೆ ನನಗೆ ಸಿಗುವ ಹಣಕ್ಕೂ ಸಹ ತೊಂದರೆ ಯಾಗುತ್ತದೆ ಎಂದು ಅಂದುಕೊಂಡಿದ್ದಾಳೆ. ಆಸ್ಪತ್ರೆಗೆ ಶ್ರೇಷ್ಠಾಳನ್ನು ಸೇರಿಸಿದ್ದಾರೆ. ಆಸ್ಪತ್ರೆಯವರು ಇದೊಂದು ಸೂಸೈಡ್ ಕೇಸ್ ಆಗಿದ್ದರಿಂದ ಪೊಲೀಸರಿಗೆ ಕರೆ ಮಾಡಿ ವಿಷಯವನ್ನು ತಿಳಿಸಿದ್ದಾರೆ.

ತಾಂಡವ್ ಹುಡುಕಿಕೊಂಡು ಬಂದ ಪೊಲೀಸರು, ಪೊಲೀಸರ ಪ್ರಶ್ನೆಗೆ ತಾಂಡವ್ ಸುಸ್ತು

ಪೊಲೀಸರು ಆಸ್ಪತ್ರೆಗೆ ತಾಂಡವ್‌ನನ್ನು ಹುಡುಕಿಕೊಂಡು ಬಂದಿದ್ದಾರೆ. ಇದೆ ವೇಳೆ ಇಲ್ಲಿ ತಾಂಡವ್ ಸೂರ್ಯವಂಶಿ ಎಂದರೆ ಯಾರು ಎಂದು ಕೇಳಿದ್ದಾರೆ. ಇದಕ್ಕೆ ತಾಂಡವ್ ನಾನೇ ಎಂದು ಹೇಳಿದಾಗ ಶ್ರೇಷ್ಠಾ ಆತ್ಮಹತ್ಯೆಗೂ ನಿಮಗೂ ಏನು ಸಂಬಂಧ ಎಂದು ಕೇಳಿದ್ದಾರೆ. ಈ ವೇಳೆ ತಾಂಡವ್‌ಗೆ ಭಯ ಶುರುವಾಗಿದೆ. ಈ ಶ್ರೇಷ್ಠಾ ಮಾಡುವುದೆಲ್ಲ ಇಂತಹದ್ದೇ ಒಂದಲ್ಲ ಒಂದು ತಲೆ ನೋವನ್ನು ನನಗೆ ತಂದಿಡುತ್ತಾ ಇದ್ದಾಳೆ. ಈಗ ಪೊಲೀಸರು ಬಂದಿದ್ದು ಅವರಿಗೆ ನಾನು ಏನು ಉತ್ತರವನ್ನು ನೀಡಲಿ ಎಂದು ಯೋಚಿಸುತ್ತಾ ಇದ್ದಾನೆ.

colors-kannada-bhagyalakshmi-serial

ಶ್ರೇಷ್ಠಾ ನಿಮ್ಮ ಮನೆಗೆ ಬಂದು ಯಾಕೆ ಆತ್ಮಹತ್ಯೆಗೆ ಯತ್ನಿಸಿದಳು ಎಂದು ಪೊಲೀಸರು ಕೇಳುತ್ತಾ ಇದ್ದಾರೆ. ತಾಂಡವ್‌ಗೆ ಏನು ಹೇಳಬೇಕು ಎಂಬುದೇ ತಿಳಿಯುತ್ತಿಲ್ಲ. ಪೂಜಾ ತನ್ನಷ್ಟಕ್ಕೆ ತಾನು ನಿಂತುಕೊಂಡಿದ್ದಾಳೆ. ಈಗ ಭಾವ ಸಿಕ್ಕಿ ಹಾಕಿಕೊಳ್ಳಲೇಬೇಕು. ಶ್ರೇಷ್ಠಾ ಹಾಗೂ ತಾಂಡವ್ ಬಾವನಾ ನಡುವಿನ ಸಂಬಂಧ ಪೊಲೀಸರಿಗೆ ತಿಳಿದರೆ ಅದು ಮನೆಯವರಿಗು ತಿಳಿಯುತ್ತದೆ ಎಂದುಕೊಂಡಿದ್ದಾಳೆ.

ಗಂಡನ ಪರವಾಗಿ ನಿಂತ ಭಾಗ್ಯ, ಒಳಗೊಳಗೆ ಬೈದುಕೊಂಡ ತಾಂಡವ್

ಪೊಲೀಸರು ತಾಂಡವ್ ಸೂರ್ಯವಂಶಿಯನ್ನು ಪ್ರಶ್ನೆ ಮಾಡುತ್ತಾ ಇರುವಾಗ ಭಾಗ್ಯ ಮಧ್ಯಪ್ರವೇಶ ಮಾಡಿದ್ದಾಳೆ. ಇನ್ನು ತಾಂಡವ್ ಬಳಿ ಬಂದು ಪೊಲೀಸರು ಕೇಳುತ್ತಾ ಇದ್ದಾರೆ ತಾನೇ ಏನು ಎಂದು ಹೇಳಿ ಎಂದಿದ್ದಾಳೆ. ಇದಕ್ಕೆ ತಾಂಡವ್ ನಾನು ಏನನ್ನ ಹೇಳಬೇಕು ತಿಳಿಯುತ್ತಿಲ್ಲ ಎಂದಾಗ ಭಾಗ್ಯಳೇ ಶ್ರೇಷ್ಠಾ ತಮ್ಮ ಮನೆಗೆ ಆಗಾಗ ಬರುತ್ತಿದ್ದಳು ಎಂಬ ವಿಚಾರವನ್ನು ಹೇಳಿದ್ದಾಳೆ. ಅವರಿಗೆ ಮದುವೆ ಫಿಕ್ಸ್ ಆಗಿತ್ತು ಅವರ ತಂದೆ ತಾಯಿಗೆ ಪ್ರೀತಿಸಿದ ಹುಡುಗನಿಗೆ ಕೊಟ್ಟು ಮದುವೆ ಮಾಡಲು ಇಷ್ಟವಿರಲಿಲ್ಲ ಇದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿರಬೇಕು ಎಂದು ಹೇಳಿದ್ದಾಳೆ.

ಆಗ ಪೊಲೀಸರು ಮತ್ತಷ್ಟು ಪ್ರಶ್ನೆಗಳನ್ನ ಕೇಳಿದ್ದಾರೆ ತಾಂಡವ್ ಭಾಗ್ಯಳನ್ನ ಬೈದುಕೊಳ್ಳುತ್ತಾ ಇದ್ದಾನೆ. ಸುಮ್ಮನೆ ಏನು ಗೊತ್ತಿಲ್ಲ ಎನ್ನುವುದನ್ನ ಬಿಟ್ಟು ನನ್ನ ತಲೆಗೆ ಇನ್ನೊಂದು ಕಷ್ಟವನ್ನ ಈ ಭಾಗ್ಯಾ ಸಹ ತಂದು ಇಟ್ಟಿದ್ದಾಳೆ ಎಂದು ಅಂದುಕೊಂಡಿದ್ದಾನೆ. ಈಗ ತಾಂಡವ್ ಹಲವಾರು ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿಕೊಂಡಿದ್ದು ಶ್ರೇಷ್ಠಾ ಹಾಗೂ ತಾಂಡವ್ ನಡುವಿನ ಸಂಬಂಧ ಹೊರಗೆ ಬರುತ್ತದಾ ಎಂಬುದೇ ಕುತೂಹಲವಾಗಿದೆ.

More from Filmibeat

English summary
Bhagyalakshmi serial October 27th episode Update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X