Bhagyalakshmi: ಮನೆಯವರ ಮುಂದೆ ಬಯಲಾಗುತ್ತಾ ತಾಂಡವ್ ನಿಜ ಬಣ್ಣ...?

By ಶೃತಿ ಹರೀಶ್ ಗೌಡ

ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಈಗ ಹೊಸದೊಂದು ತಿರುವು ಪಡೆದುಕೊಂಡಿದೆ ಶ್ರೇಷ್ಠಾ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಅದು ಸಹ ತಾಂಡವ್ ಮನೆಗೆ ಹೋಗಿ ಇದೆಲ್ಲವೂ ಸುನಂದಾಳನ್ನು ಕೆರಳಿಸಿದೆ. ಇದಕ್ಕಾಗಿ ತಾಂಡವ್ ನಿಜ ಸ್ವರೂಪ ನಿಮಗೆ ಇನ್ನೂ ತಿಳಿದಿಲ್ವ ಎಂದು ಬೀಗತಿಯನ್ನ ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕೆ ಕುಸುಮಾ ನನ್ನ ಮಗ ಆ ರೀತಿ ಇಲ್ಲ ಒಂದೇ ಆಫೀಸ್‌ನಲ್ಲಿ ಕೆಲಸ ಮಾಡುತ್ತಿದ್ದವರು. ಇದಕ್ಕಾಗಿ ಅವನ ಬಳಿಯಲ್ಲಿ ಮನದ ನೋವನ್ನ ತೋಡಿಕೊಳ್ಳಲು ಬಂದಿದ್ದಾಳೆ ಅಷ್ಟೇ ಎಂದು ಮಗನ ಪರವಾಗಿ ಮಾತನಾಡುತ್ತಿದ್ದಾರೆ. ಆದರೆ ಸುನಂದಾಗೆ ಅನುಮಾನ ಮತ್ತಷ್ಟು ಬಲವಾಗುತ್ತಿದೆ.

ಯಾಕೆಂದರೆ ಮೊದಲು ತಾಂಡವ್ ಇದೇ ರೀತಿ ಆಡಿದ್ದನು. ಇದಕ್ಕಾಗಿ ತಾಂಡವ್ ಮೇಲೆ ಕೋಪ ಮಾಡಿಕೊಂಡಿದ್ದಾರೆ. ನಿಮ್ಮ ಕಣ್ಣಿಗೆ ಕಟ್ಟಿರುವ ಪೊರೆ ಇನ್ನೂ ಕಳಚಿಲ್ಲ ಎಂದು ಅನಿಸುತ್ತಿದೆ ಸುಮ್ಮನೆ ಶ್ರೇಷ್ಠಾ ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದಳಾ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ನೀವೇ ಏನು ಎಂದು ಕೇಳಿ ಎಂದು ಕೆರಳಿಸಿದ್ದಾರೆ. ನಾನೇ ಶ್ರೇಷ್ಠಾ ಬಳಿಯಲ್ಲಿ ಕೇಳುತ್ತೇನೆ ಆಗ ನಿಮಗೆ ನನ್ನ ಮಗನ ಮೇಲೆ ಬಂದಿರುವ ಅನುಮಾನ ಪರಿಹಾರವಾಗುತ್ತಾ ನೋಡುತ್ತೇನೆ ಎಂದು ಬೀಗತಿ ಬಳಿ ಹೇಳಿದ್ದಾರೆ. ಇನ್ನು ಗುಂಡಣ್ಣ ಬಂದವನೇ ನನ್ನ ತಂದೆಗೆ ಅಮ್ಮನನ್ನು ಕಂಡ್ರೆ ಇಷ್ಟ ಇಲ್ವಾ ಶ್ರೇಷ್ಠಾ ಆಂಟಿಯನ್ನು ಪಪ್ಪಾ ಲವ್ ಮಾಡುತ್ತಾ ಇದ್ದಾರಾ ಎಂದು ಕೇಳಿದ್ದಾನೆ.

colors kannada Bhagyalakshmi serial Written Update on October 30th

ಗುಂಡಣ್ಣನಿಗೆ ಧರ್ಮರಾಜ್ ಸಮಾಧಾನವನ್ನು ಮಾಡಿದ್ದಾರೆ. ಆ ರೀತಿ ಏನೂ ಇಲ್ಲ ನಿನ್ನ ತಂದೆ ನಿನ್ನ ತಾಯಿಯನ್ನೇ ಪ್ರೀತಿಸೋದು ಎಂದು ಹೇಳಿದ್ದಾರೆ. ಇನ್ನು ಕುಸುಮಾ ತಮ್ಮ ಬೀಗತಿ ತಮ್ಮ ಮಗನ ಮೇಲೆ ಮಾಡಿರುವ ಎಲ್ಲಾ ಆರೋಪಗಳು ಸುಳ್ಳು ಎಂದು ಹೇಳಲು ಸುನಂದಾ ಜೊತೆಗೆ ಆಸ್ಪತ್ರೆಗೆ ಬರುತ್ತಾ ಇದ್ದಾರೆ ಆಸ್ಪತ್ರೆಗೆ ಬಂದವರೇ ಶ್ರೇಷ್ಠಾ ಬಳಿ ಹೋಗಬೇಕು ಎಂದುಕೊಂಡಿದ್ದಾರೆ. ಅಷ್ಟರಲ್ಲಿ ಪೋಲೀಸ್ ಬಂದು ಶ್ರೇಷ್ಠಾ ಎಲ್ಲರ ಮುಂದೆ ಮಾತನಾಡಬೇಕಂತೆ ಎಂದು ಹೇಳಿದ್ದಾರೆ. ಆ ವೇಳೆ ಕುಸುಮಾ ನಾವು ಸಹ ಬಂದಿದ್ದೇವೆ ನಮ್ಮ ಮುಂದೆ ಮಾತನಾಡಲಿ ಎಂದಾಗ ತಾಂಡವ್‌ಗೆ ಶಾಕ್ ಆಗಿದೆ.

ಶ್ರೇಷ್ಠಾಳಿಗೆ ಪೊಲೀಸರ ಪ್ರಶ್ನೆ, ಎಲ್ಲರ ಮುಂದೆ ಹೇಳುತ್ತೇನೆ ಎಂದು ಶ್ರೇಷ್ಠಾ!

ಪ್ರಜ್ಞೆ ಬಂದ ಶ್ರೇಷ್ಠಾ ಬಳಿ ಪೊಲೀಸರು ಪ್ರಶ್ನೆಯನ್ನು ಮಾಡುತ್ತಾ ಇದ್ದಾರೆ ಯಾಕೆ ರೀತಿ ಮಾಡಿಕೊಂಡ್ರಿ ಇದಕ್ಕೆ ಕಾರಣವೇನು ಎಂದು ಕೇಳುತ್ತಿದ್ದಾರೆ. ಇದಕ್ಕೆ ಶ್ರೇಷ್ಠಾ ಕಣ್ಣೀರು ಹಾಕುತ್ತಾ ನಾನು ಎಲ್ಲರ ಮುಂದೆಯೂ ಸಹ ಸತ್ಯವನ್ನ ಹೇಳುತ್ತೇನೆ ಎಂದು ಹೇಳಿದ್ದಾಳೆ. ಪೋಲೀಸ್ ಒಬ್ಬರು ತಾಂಡವ್ ಬಳಿ ಬಂದು ಆ ಹುಡುಗಿಗೆ ಎಚ್ಚರವಾಗಿದೆ. ಅವಳು ಸತ್ಯವನ್ನ ಹೇಳುತ್ತೇನೆ ಎಂದು ಅನ್ನುತ್ತಿದ್ದಾಳೆ. ನೀವೆಲ್ಲರೂ ಸಹ ಮುಂದೆ ಬರಬೇಕಂತೆ ಎಂದು ಅನ್ನುತ್ತಿದ್ದಾರೆ.

colors kannada Bhagyalakshmi serial Written Update on October 30th

ಈ ವೇಳೆ ತಾಂಡವ್‌ಗೆ ತುಂಬಾ ಟೆನ್ಶನ್ ಆಗುತ್ತಿದೆ. ಶ್ರೇಷ್ಠಾ ಏನಾದರೂ ಅಪ್ಪಿ ತಪ್ಪಿ ನಮ್ಮಿಬ್ಬರ ಪ್ರೀತಿ ವಿಷಯವನ್ನು ಬಾಯಿಬಿಟ್ಟರೆ ನನ್ನಮ್ಮನ ಕಣ್ಣಿನಲ್ಲಿ ನಾನು ಕೆಟ್ಟವನಾಗುತ್ತೇನೆ. ಇಲ್ಲಿ ರಣರಂಗವೇ ಸೃಷ್ಟಿಯಾಗುತ್ತದೆ ಎಂದು ಯೋಚನೆ ಮಾಡುತ್ತಾ ಇದ್ದಾನೆ. ನಾನೊಬ್ಬನೇ ಬಂದರೆ ಸಾಕಲ್ವಾ? ಎಂದು ಕೇಳುತ್ತಿದ್ದಾನೆ. ಅಷ್ಟರಲ್ಲಿ ಭಾಗ್ಯ ಅಲ್ಲಿಗೆ ಬಂದಿದ್ದು ನಾವೆಲ್ಲರೂ ಬರುತ್ತೇವೆ ಎಂದಿದ್ದಾಳೆ.

ತಾಂಡವ್ ಕೈ ಹಿಡಿದುಕೊಂಡ ಶ್ರೇಷ್ಠಾ, ಮನೆಯವರೆಲ್ಲರಿಗೂ ಶಾಕ್

ಶ್ರೇಷ್ಠಾ ನಾನು ಎಲ್ಲರಿಗೂ ಒಂದು ಸತ್ಯ ಹೇಳುತ್ತೇನೆ ಎಂದಾಗ ಸುನಂದಾ ನೀನು ಪ್ರೀತಿ ಮಾಡಿದ ಹುಡುಗ ಇವನೇನಾ ಎಂದು ಕೇಳಿದ್ದಾರೆ. ಈ ವೇಳೆ ಕುಸುಮಾ ಸಹ ಎಲ್ಲರೂ ತಮ್ಮ ಪ್ರಾಣ ಉಳಿಸಿಕೊಳ್ಳಲು ಹರಸಾಹಸ ಪಟ್ಟರೆ., ನೀನು ಪ್ರಾಣ ತೆಗೆದುಕೊಳ್ಳುವ ಕೆಲಸವನ್ನ ಮಾಡಿದ್ದೀಯಾ ಯಾಕೆ ಎಂದು ಪ್ರಶ್ನಿಸಿದ್ದಾರೆ. ಮಧ್ಯಪ್ರವೇಶಿಸಿದ ಪೊಲೀಸರು ನಾವು ಪ್ರಶ್ನೆ ಮಾಡುತ್ತಿದ್ದೇವೆ ದಯವಿಟ್ಟು ಸುಮ್ಮನಿರಿ ಎಂದಿದ್ದಾರೆ. ಈ ವೇಳೆ ಶ್ರೇಷ್ಠಾ ಇನ್ನೂ ಸತ್ಯ ಹೇಳದೆ ಬೇರೆ ದಾರಿ ಇಲ್ಲ ಎಂದುಕೊಂಡು ಮುಂದೆ ಮಾತನಾಡಲು ಬಂದಿದ್ದಾಳೆ. ಈ ವೇಳೆ ತಾಂಡವ್‌ಗೆ ಭಯವಾಗುತ್ತಿದೆ. ಎಲ್ಲಿ ಶ್ರೇಷ್ಠಾ ತಮ್ಮಿಬ್ಬರ ಸಂಬಂಧದ ಬಗ್ಗೆ ಎಲ್ಲರಿಗೂ ತಿಳಿಸಿ ಒಂದು ಅವಾಂತರ ಸೃಷ್ಟಿ ಮಾಡುತ್ತಾಳಾ ಅಂದುಕೊಂಡಿದ್ದಾನೆ.

More from Filmibeat

English summary
Bhagyalakshmi serial October 30th episode Update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X