Bhagyalakshmi: ಬೆಂಕಿಯಿಂದ ಬಾಣಲೆಗೆ ಬಿದ್ದ ಪರಿಸ್ಥಿತಿಯಲ್ಲಿ ತಾಂಡವ್: ಶ್ರೇಷ್ಠಾ ಮನೆಗೆ ಹೊರಟು ನಿಂತ ಕುಸುಮಾ..!
ಶ್ರೇಷ್ಠಾ ಎಲ್ಲಿ ಸತ್ಯ ಹೇಳಿ ತನ್ನನ್ನು ಸಿಕ್ಕಿಹಾಕಿಸುತ್ತಾಳೆ ಎಂದು ತಾಂಡವ್ ಅಂದುಕೊಂಡಿದ್ದನು. ಆದರೆ ಶ್ರೇಷ್ಠಾ ತಾಂಡವ್ ಮೇಲೆ ಯಾವುದೇ ಆರೋಪ ಮಾಡದೆ ಕುಸುಮಾ ಬಳಿಯಲ್ಲಿಯೇ ಡ್ರಾಮಾ ಮಾಡಿದ್ದಾಳೆ. ಬಣ್ಣದ ಮಾತುಗಳನ್ನ ಆಡುತ್ತಾ ಕುಸುಮಾಗೆ ಮೋಡಿ ಮಾಡಿದ್ದಾಳೆ. ನಾನು ಇಷ್ಟಪಟ್ಟ ಹುಡುಗನ ಜೊತೆಗೆ ಮದುವೆ ಮಾಡುವುದಿಲ್ಲ ಎಂದು ಕೊನೆಗೆ ಹೇಳಿದರು ಇದಕ್ಕಾಗಿ ನಾನು ಆತ್ಮಹತ್ಯೆಗೆ ಪ್ರಯತ್ನ ಮಾಡಿದೆ ಎಂದು ಶ್ರೇಷ್ಠಾ ಹೇಳಿದ್ದಾಳೆ. ಅಷ್ಟೇ ಅಲ್ಲದೆ ತಾಂಡವ್ ಕೈ ಹಿಡಿದುಕೊಂಡು ಇನ್ಮುಂದೆ ನನಗೆ ಎಲ್ಲವೂ ನೀವೇ ಎಂದು ಹೇಳಿದ್ದಾಳೆ. ಇದಕ್ಕೆ ಸುನಂದಾ ಕೋಪ ಮಾಡಿಕೊಂಡು ನನ್ನ ಅಳಿಯನ ಮನೆಗೆ ನೀನು ಏಕೆ ಬಂದೆ ಅದನ್ನ ಮೊದಲು ಹೇಳು ಎಂದು ಹೇಳಿದ್ದಾರೆ.
ಇದಕ್ಕೆ ಶ್ರೇಷ್ಠಾ ನನಗೆ ಇಲ್ಲಿ ಗೊತ್ತಿರುವವರು ಕುಸುಮಾ ಆಂಟಿ ಹಾಗೂ ತಾಂಡವ್ ಸರ್ ಒಬ್ಬರೇ ಅದಕ್ಕಾಗಿ ನನ್ನವರು ಎಂದುಕೊಂಡು ನಾನು ಇವರ ಮನೆಗೆ ಬಂದೆ ಎಂದಿದ್ದಾಳೆ. ನಾನು ಆ ಮನೆಗೆ ಬಂದ ವೇಳೆ ನೀವೆಲ್ಲರೂ ನನ್ನನ್ನ ಆಸ್ಪತ್ರೆಗೆ ಸೇರಿಸಿ ಬದುಕಿಸಿಬಿಟ್ಟಿರಿ ಎಂದಿದ್ದಾಳೆ. ನಾನು ತಪ್ಪು ಮಾಡಿದ ಕುಸುಮಾ ಆಂಟಿ ನನಗೆ ಅಮ್ಮನ ಸ್ಥಾನದಲ್ಲಿ ನಿಂತು ನನ್ನ ಎಲ್ಲಾ ತಪ್ಪುಗಳನ್ನು ತಿದ್ದಿದ್ದಾರೆ. ಈಗಾಗಿ ನಾನು ಅವರನ್ನು ಅಮ್ಮ ಎಂದುಕೊಂಡೆ ಅವರ ಮನೆಗೆ ಬಂದೆ ಎಂದು ಬಣ್ಣದ ಮಾತುಗಳನ್ನು ಆಡಿ ಕುಸುಮಾ ಅವರು ಉಬ್ಬಿಹೋಗುವಂತೆ ಮಾಡಿದ್ದಾಳೆ. ಕುಸುಮಾ ನಾಲ್ಕು ಹೊಗಳಿಕೆ ಮಾತುಗಳನ್ನ ಹಾಡಿದರೆ ಕಳೆದೆ ಹೋಗುತ್ತಾರೆ. ಇದಕ್ಕಾಗಿ ಇಂತಹ ಸಂದರ್ಭವನ್ನು ಶ್ರೇಷ್ಠಾ ಬಳಸಿಕೊಂಡಿದ್ದಾಳೆ.

ನನ್ನ ತಂದೆ ತಾಯಿ ಊರಿಗೆ ಕರೆದುಕೊಂಡು ಹೋದರು. ಈ ವೇಳೆ ನನ್ನನ್ನು ಬೇರೆಯವನೊಂದಿಗೆ ಮದುವೆ ಮಾಡಲು ನೋಡಿದರು. ಆದರೆ ನಾನು ಪ್ರೀತಿಸಿದ ಹುಡುಗನನ್ನ ಬಿಟ್ಟು ಬೇರೆಯವನನ್ನು ಮದುವೆಯಾಗುವುದಿಲ್ಲ. ಇದಕ್ಕಾಗಿ ಅವರ ಸಂಬಂಧವನ್ನೇ ಕಳೆದುಕೊಂಡು ಬೆಂಗಳೂರಿಗೆ ಬಂದೆ ಈ ವೇಳೆ ನನಗೆ ಬದುಕೇ ಬೇಡವಾಯಿತು. ಅದಕ್ಕಾಗಿ ಸಾಯುವ ಪ್ರಯತ್ನ ಮಾಡಿದೆ ಎಂದು ಪೊಲೀಸರ ಮುಂದೆ ಹೇಳಿದ್ದಾಳೆ. ಈ ಹೇಳಿಕೆ ಕೇಳಿದ ತಾಂಡವ್ ನಿಟ್ಟುತ್ತಿರುವ ಬಿಟ್ಟಿದ್ದಾನೆ. ಇನ್ನು ಕುಸುಮಾ ಬಳಿ ಆ ಹುಡುಗ ನನ್ನ ತಂದೆ ತಾಯಿ ಒಪ್ಪಿದರೆ ಮಾತ್ರ ಮದುವೆಯಾಗುವುದಾಗಿ ಹೇಳಿದ್ದಾನೆ. ಅದಕ್ಕಾಗಿ ನಾನು ಈ ರೀತಿಯಲ್ಲ ಮಾಡಿದೆ ಎಂದು ಹೇಳಿರುವ ಮೂಲಕ ಕುಸುಮಾ ಮನಸ್ಸಿನಲ್ಲಿ ಶ್ರೇಷ್ಠಾ ಜಾಗ ಪಡೆದಿದ್ದಾಳೆ.
ಶ್ರೇಷ್ಠಾಳನ್ನು ಊರಿಗೆ ಕರೆದುಕೊಂಡು ಹೊರಟ ಕುಸುಮಾ, ಶ್ರೇಷ್ಠಾಗೆ ಧರ್ಮ ಸಂಕಟ!
ಶ್ರೇಷ್ಠಾ ಸಂಪೂರ್ಣವಾಗಿ ರಿಕವರಿಯಾಗಿದ್ದು ಕುಸುಮಾ ಶ್ರೇಷ್ಠಾಳನ್ನು ಡಿಸ್ಚಾರ್ಜ್ ಮಾಡಿಸಿದ್ದಾರೆ. ಅಲ್ಲಿಯ ತನಕವು ಭಾಗ್ಯ, ಪೂಜಾ, ಸುನಂದಾ ಎಲ್ಲರೂ ಸಹ ಆಸ್ಪತ್ರೆಯಲ್ಲಿದ್ದಾರೆ. ಈ ವೇಳೆ ತಾಂಡವ್ ತಲೆನೋವು ತಪ್ಪಿತು ಎಂದು ಅಂದುಕೊಂಡಿದ್ದಾನೆ. ಆದರೆ ಕುಸುಮಾ ಶ್ರೇಷ್ಠಾಳನ್ನು ತಮ್ಮ ಮನೆಗೆ ಕರೆದುಕೊಂಡು ಹೋಗದೆ ಊರಿಗೆ ಹೋಗುವ ಮಾತನ್ನ ಆಡಿದ್ದಾರೆ. ಇದಕ್ಕೆ ಶ್ರೇಷ್ಠಾ ಬಯ್ಯುತ್ತಿದ್ದಾಳೆ ನಾನು ನನ್ನ ಗಂಡನ ಮನೆಯಲ್ಲಿ ಇರೋಣ ಎಂದು ಕೊಂಡರೆ ಈ ಆಂಟಿ ನೋಡಿದರೆ ನನ್ನನ್ನು ಊರಿಗೆ ಕಳುಹಿಸುವ ಪ್ಲ್ಯಾನ್ ಮಾಡಿದ್ದಾರೆ ಎಂದು ಕೊಂಡಿದ್ದಾಳೆ. ಇದಕ್ಕೆ ಸುನಂದಾ ಸಹ ನೀವು ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ನಾನು ಇವಳನ್ನ ನಿಮ್ಮ ಮನೆಯಲ್ಲೇ ಇಟ್ಟುಕೊಳ್ಳುತ್ತೀರಾ ಎಂದುಕೊಂಡಿದ್ದೆ ಎಂದಿದ್ದಾರೆ. ನನಗೆ ತಲೆ ಕೆಟ್ಟಿದೆಯಾ? ಮದುವೆಯಾಗದ ಹೆಣ್ಣು ಮಗಳನ್ನ ನನ್ನ ಮನೆಯಲ್ಲಿ ಇಟ್ಟುಕೊಳ್ಳೋದಕ್ಕೆ ನನ್ನ ಬಗ್ಗೆ ಸಮಾಜ ಏನೆಂದು ಕೊಳ್ಳುತ್ತದೆ. ಅದಕ್ಕಾಗಿ ನಾನು ಶ್ರೇಷ್ಠಾಳನ್ನು ಅವಳ ಮನೆಗೆ ಬಿಟ್ಟು ಬರುತ್ತೇನೆ ಎಂದು ಕುಸುಮಾ ಹೇಳಿದ್ದಾರೆ.

ತಾಂಡವ್ ಕಾರಿನಲ್ಲಿ ಪ್ರಯಾಣ ಮಾಡುವ ಮಾತು
ಟ್ಯಾಕ್ಸಿ ಮಾಡುವ ಮಾತುಗಳನ್ನು ಆಡಿದ ತಾಂಡವ್
ಶ್ರೇಷ್ಠಾ ಊರಿಗೆ ಹೊರಟು ನಿಂತಿದ್ದಕ್ಕೆ ತಾಂಡವ್‌ಗೂ ಸಹ ಖುಷಿಯಾಗಿದೆ. ಆದರೆ ಕುಸುಮಾ ತಾಂಡವ್ ನಿನ್ನ ಕಾರಿನಲ್ಲೇ ನಾನು ಇವಳನ್ನ ಅವಳ ಊರಿಗೆ ಬಿಟ್ಟು ಬರುವುದು ಎಂದಾಗ ತಾಂಡವ್ ಪರಿಸ್ಥಿತಿ ಯಾವುದಕ್ಕೂ ಬೇಡವಾಗಿದೆ. ಯಾಕೆಂದರೆ ಶ್ರೇಷ್ಠಾ ಪ್ರೀತಿ ಮಾಡಿದ ಹುಡುಗ ತಾಂಡವ್ ಏನಾದರೂ ಅದೇ ಕಾರಿನಲ್ಲಿ ಶ್ರೇಷ್ಠಾಳನ್ನು ಕರೆದುಕೊಂಡು ಹೋದರೆ ಅಲ್ಲಿಗೆ ತಾಂಡವ್ ಕತೆ ಮುಗಿದಂತೆಯೇ. ಅದಕ್ಕಾಗಿ ತಾಂಡವ್ ಟ್ಯಾಕ್ಸಿ ಮಾಡುತ್ತೇನೆ ಎಂದರು ಸಹ ಕುಸುಮಾ ಒಪ್ಪುತ್ತಿಲ್ಲ ತಾಂಡವ್ ಈಗ ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿದ್ದಾನೆ.


Click it and Unblock the Notifications











