Bhagyalakshmi: ಎಲ್ಲವನ್ನು ಕಳೆದುಕೊಳ್ಳುವ ಮುಂಚೆ ಎಚ್ಚರಗೊಳ್ತಾನ ತಾಂಡವ್? ಪೂಜಾ ಕೈಗೆ ಸಿಕ್ಕಿಬಿದ್ದ ಶ್ರೇಷ್ಠಾ..?

By ಶೃತಿ ಹರೀಶ್ ಗೌಡ

ತಾಂಡವ್ ಭಾಗ್ಯಳನ್ನು ಆಡಿಕೊಂಡರು ಸಹ ಆಕೆ ಬಗ್ಗುತ್ತಿಲ್ಲ. ಈಗ ಭಾಗ್ಯ ಸಂಪೂರ್ಣವಾಗಿ ಬದಲಾಗಿ ಹೋಗಿದ್ದಾಳೆ. ಅದು ತಾಂಡವ್‌ಗೆ ಕೂಡ ಗೊತ್ತಿದೆ. ಹೀಗಾಗಿ ನನಗೆ ಕೆಲಸವಿದೆ ನೀನು ಒಬ್ಬಳೇ ಮನೆಗೆ ಹೋಗು ಎಂದು ತಾಂಡವ್ ಪಾರ್ಕ್ ನಿಂದ ಹೊರಟಿದ್ದಾನೆ. ಇವರು ಯಾಕೆ ಇಷ್ಟೊಂದು ಸುಳ್ಳು ಹೇಳಲು ಕಲಿತರು. ಒಮ್ಮೆಯೂ ಸಹ ಹೀಗೆ ನಡೆದುಕೊಳ್ಳುತ್ತಾ ಇರಲಿಲ್ಲ. ಇತ್ತೀಚಿನ ದಿನಗಳಲ್ಲಿ ಇವರು ನಮ್ಮಿಂದ ಏನನ್ನು ಮುಚ್ಚಿ ಇಡಲು ಪ್ರಯತ್ನ ಮಾಡುತ್ತಾ ಇದ್ದಾರೆ ಎಂದು ಭಾಗ್ಯ ಯೋಜನೆ ಮಾಡುತ್ತಾ ನಿಂತಿದ್ದಾಳೆ.

ಡೂಪ್ಲಿಕೇಟ್ ಅಪ್ಪ ಮಹೇಶ್ ಫೋನ್ ಮಾಡಿದ್ದು ನೀನು ಈಗಲೇ ನನಗೆ ಸಿಗಬೇಕು ಎಂದು ಹೇಳಿದ್ದಾನೆ. ಈ ವೇಳೆ ಭಾಗ್ಯ ತಾಂಡವ್‌ನನ್ನು ತಡೆದಿದ್ದಾಳೆ. ಭಾಗ್ಯ ಎಲ್ಲಾ ಬೆಳ್ಳಿ ಸಾಮಾನುಗಳನ್ನ ತೆಗೆದುಕೊಂಡು ಮನೆಗೆ ಹೊರಡಲು ಸಿದ್ದಳಾಗಿದ್ದಾಳೆ. ಇನ್ನು ಶ್ರೇಷ್ಠ ಸಹ ತಾಂಡವ್‌ಗೆ ಫೋನ್ ಮಾಡಿ ಬೈಯುತ್ತಾ ಇದ್ದಾಳೆ. ನಾವಿಬ್ಬರೂ ಯಾವಾಗಲೂ ಭೇಟಿಯಾಗುವ ಜಾಗಕ್ಕೆ ನೀನು ಬರಲೇಬೇಕು ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಾಳೆ.

colors-kannada-bhagyalakshmi-serial

ಅಷ್ಟೇ ಅಲ್ಲದೆ ತಾಂಡವ್‌ಗೆ ಬ್ಲಾಕ್ ಮೇಲ್ ಮಾಡಿದ್ದಾಳೆ ನೀನು ಆ ಜಾಗಕ್ಕೆ ಬರದೇ ಹೋದರೆ, ನಿನ್ನ ಮನೆಗೆ ಹೋಗಿ ನಾನು ಅಲ್ಲೋಲ ಕಲ್ಲೋಲ ಮಾಡಬೇಕಾಗುತ್ತದೆ ಎಂದು ತಾಂಡವ್ ನನ್ನ ಹೆದರಿಸಿದ್ದಾಳೆ. ತಾಂಡವ್ ಶ್ರೇಷ್ಠ ಮಾತಿಗೆ ಹೆದರಿ ನಾನು ಆ ಜಾಗಕ್ಕೆ ಬರುತ್ತೇನೆ ಎಂದು ಒಪ್ಪಿಕೊಂಡಿದ್ದಾನೆ. ಶ್ರೇಷ್ಠ ಮಾತನಾಡುತ್ತಿರುವುದನ್ನ ಪೂಜಾ ಮರೆಯಲ್ಲಿ ನಿಂತು ಕೇಳಿಸಿಕೊಳ್ಳುತ್ತಾ ಇದ್ದಾಳೆ. ಇವರಿಬ್ಬರದ್ದು ಕೋಲಿಗ್ ಸಂಬಂಧ ಅಲ್ಲ ಬೇರೆ ರೀತಿಯ ಸಂಬಂಧವಿದೆ ಅದನ್ನು ನಾನು ಇಂದು ಕಂಡು ಹಿಡಿಯಲೇಬೇಕು ಎಂದು ಪೂಜಾ ಅಂದುಕೊಂಡಿದ್ದಾಳೆ.

ಸಮಸ್ಯೆಗೆ ಸಿಲುಕಿಕೊಳ್ತಾನಾ ತಾಂಡವ್..?

ತಾಂಡವ್‌ಗೆ ಮಹೇಶ್ ಕರೆ ಮಾಡಿದ್ದರಿಂದ ಮಹೇಶ್ ಬಳಿಗೆ ಓಡೋಡಿ ಬಂದಿದ್ದಾನೆ. ದಾರಿಯಲ್ಲಿ ಎಂದಿನಂತೆ ಭಾಗ್ಯ ಕಷ್ಟಕ್ಕೆ ಸಿಲುಕಿದಾಗ ಪ್ರತ್ಯಕ್ಷವಾಗುವ ಮುಸ್ಲಿಂ ಧರ್ಮ ಗುರುಗಳು ತಾಂಡವ್ ಕಣ್ಣೆದುರಿಗೆ ಬಂದಿದ್ದಾರೆ. ತಾಂಡವ್‌ಗೆ ಬುದ್ಧಿವಾದ ಹೇಳಿದ್ದಾರೆ. ಮೇಲಿಂದ ಕೆಳಗೆ ಬೀಳುವ ಮುನ್ನವೇ ನೀನು ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಇರುವುದೆಲ್ಲವನ್ನ ಕಳೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ. ಅವರ ಮಾತನ್ನು ಕೇಳಿ ಚಿಂತೆಗೆ ಒಳಗಾಗಿದ್ದಾನೆ. ಇದೇ ವೇಳೆ ಮಹೇಶ್‌ಗೆ ಹಣವನ್ನ ಟ್ರಾನ್ಸ್ಫರ್ ಮಾಡಿದ್ದಾನೆ.

colors-kannada-bhagyalakshmi-serial

ಹಣ ಟ್ರಾನ್ಸ್ಫರ್ ಮಾಡಿದ ಬಳಿಕ ತನ್ನ ಬ್ಯಾಂಕ್ ಬ್ಯಾಲೆನ್ಸ್ ನೋಡಿಕೊಂಡಿದ್ದು ಇದೇನಪ್ಪಾ ದೇವರೇ ನಾನು ಏನು ಮಾಡುತ್ತಿದ್ದೇನೆ ಇಷ್ಟೊಂದು ಹಣ ನೀರಿನಂತೆ ಖರ್ಚಾಗುತ್ತಿದೆ. ಇದೇ ರೀತಿ ಆದರೆ ನಾನು ಇಎಂಐ ಕಟ್ಟೋದು ಹೇಗೆ ಮನೆಯನ್ನ ನಡೆಸುವುದು ಹೇಗೆ ಎಂದು ಬೇಸರ ಮಾಡಿಕೊಂಡಿದ್ದಾನೆ. ನಂತರ ಧರ್ಮ ಗುರುಗಳು ಹೇಳಿದ ಮಾತು ತಾಂಡವ್‌ನನ್ನು ಎಚ್ಚರಿಸಿದೆ. ನೀನು ಎಚ್ಚರಗೊಳ್ಳದ ಹೊರತು ನೀನು ಉದ್ಧಾರವಾಗಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದನ್ನು ತಾಂಡವ ನೆನಪಿಸಿಕೊಳ್ಳುತ್ತಾ ಇದ್ದಾನೆ.

ಪೂಜಾ ಕೈಗೆ ಸಿಕ್ಕಿ ಬಿದ್ದ ತಾಂಡವ್ ಶ್ರೇಷ್ಠ, ಇಬ್ಬರ ಗುಟ್ಟು ರಟ್ಟಾಗಿ ಹೋಯ್ತು!

ಪೂಜಾ ಶ್ರೇಷ್ಠಳ ಪ್ರತಿಯೊಂದು ಚಲನವಲನಗಳನ್ನ ಗಮನಿಸುತ್ತಾ ಇದ್ದಳು. ಇನ್ನು ತಾಂಡವ್‌ಗೆ ನಮ್ಮ ಮಾಮೂಲಿ ಜಾಗಕ್ಕೆ ಬಾ ಎಂದು ಹೇಳಿದ್ದನ್ನು ಕೇಳಿ ತಾನು ಸಹ ಹೊರಟಿದ್ದಳು. ಪೂಜಾ ಸಹ ಶ್ರೇಷ್ಠ ಹೊರಟ ಮೇಲೆ ತಾನು ಸಹ ಆಟೋದಲ್ಲಿ ಬೆಟ್ಟಕ್ಕೆ ತೆರಳಿದ್ದಾಳೆ. ನನ್ನ ಅಕ್ಕನಿಗೆ ಭಾವ ಮೋಸ ಮಾಡಿ ಈ ಶ್ರೇಷ್ಠಳನ್ನು ಈ ಬೆಟ್ಟದಲ್ಲಿ ಭೇಟಿಯಾಗುತ್ತಿದ್ದಾರಲ್ಲ, ಇವರ ಗುಟ್ಟನ್ನೆಲ್ಲ ನಾನು ರಟ್ಟು ಮಾಡಿಯೇ ತೀರುತ್ತೇನೆ ಎಂದು ಮರೆಯಲಿ ನಿಂತು ಭಾವ ಬರುವುದನ್ನೇ ನೋಡುತ್ತಾ ಇದ್ದಾಳೆ. ತಾಂಡವ್ ಬಂದ ಕೂಡಲೇ ಶ್ರೇಷ್ಠ ಹೋಗಿ ತಾಂಡವ್‌ನನ್ನು ತಬ್ಬಿ ಕೊಂಡಿದ್ದಾಳೆ. ಇದನ್ನೆಲ್ಲಾ ನೋಡುತ್ತಿರುವ ಪೂಜಾಗೆ ಅಸಾಧ್ಯವಾದ ಸಿಟ್ಟು ಬಂದಿದೆ. ನನ್ನ ಭಾವ ನನ್ನ ಅಕ್ಕನಿಗೆ ಮೋಸ ಮಾಡುತ್ತಿದ್ದಾರೆ ಎಂದು ಕೋಪ ಮಾಡಿಕೊಂಡಿದ್ದಾಳೆ.

More from Filmibeat

English summary
colors kannada Bhagyalakshmi serial today episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X