Bhagyalakshmi: ತಾಂಡವ್ ಕಳ್ಳಾಟ ಬಯಲು ಮಾಡ್ತಾಳಾ ಪೂಜಾ; ಮಗನಿಗಿಂತಲೂ ಸೊಸೆಯೇ ಕುಸುಮಾಗೆ ಅಚ್ಚುಮೆಚ್ಚು

By ಶೃತಿ ಹರೀಶ್ ಗೌಡ

ಭಾಗ್ಯಲಕ್ಷ್ಮಿ ಧಾರಾವಾಹಿ ಈಗ ಹೊಸದೊಂದು ತಿರುವನ್ನು ಪಡೆದಿದೆ. ಅದು ಏನೆಂದರೆ ಭಾಗ್ಯಳ ತಂಗಿ ಪೂಜಾಗೆ ತಾಂಡವ್ ಆಡುತ್ತಿರುವ ಕಳ್ಳಾಟಗಳೆಲ್ಲವೂ ತಿಳಿದಿದೆ. ಪೂಜಾ ತನ್ನ ಬಾವ ಹೀಗೆಲ್ಲಾ ತನ್ನ ಅಕ್ಕನಿಗೆ ಮೋಸ ಮಾಡುತ್ತಾರೆ ಎಂದು ತಿಳಿದುಕೊಂಡಿರಲಿಲ್ಲ. ಅವಳ ಅಮ್ಮ ಸಹ ತಾಂಡವ್ ಬಗ್ಗೆ ಕೆಟ್ಟದಾಗಿ ಮಾತನಾಡಿದಾಗಲೂ ಸಹ ಅವಳು ಸುಮ್ಮನೆ ಇದ್ದಳು.‌ ಈಗ ಡೈರೆಕ್ಟಾಗಿ ತಾಂಡವ್ ಮಾಡುತ್ತಿರುವ ಮೋಸ ಬಯಲುಗೊಂಡಿದೆ. ಶ್ರೇಷ್ಠ ಯಾವಾಗ ತಾಂಡವ್ ಮನೆ ಮುಂದೆ ಬಂದು ನಿಂತಿದ್ದಳು. ಆಗಲೇ ಸಹ ಪೂಜಾಗೆ ನಾನು ಎಲ್ಲವನ್ನು ಕಂಡು ಹಿಡಿಯಬೇಕು ಎಂಬ ಹಠ ಬಂದು ಕೊನೆಗೂ ತಾನು ಅದನ್ನು ಸಾಧಿಸಿಯೇ ಬಿಟ್ಟಿದ್ದಾಳೆ.

ತಾಂಡವ್ ಮಹೇಶ್‌ನನ್ನ ಭೇಟಿಯಾಗಿದ್ದು ಅಲ್ಲಿಂದ ಶ್ರೇಷ್ಠ ಕಳಿಸಿರುವ ಲೊಕೇಶನ್‌ಗೆ ಬರುತ್ತಾ ಇದ್ದಾನೆ. ಮನೆಯಲ್ಲಿ ಕುಸುಮಾ ಭಾಗ್ಯಗೆ ತರಾಟೆಯನ್ನು ತೆಗೆದುಕೊಂಡಿದ್ದಾರೆ. ನೀನು ಯಾಕೆ ತಾಂಡವ್‌ನನ್ನು ಅಲ್ಲಿಯೇ ಬಿಟ್ಟು ಬಂದೆ ಕರೆದುಕೊಂಡು ಬರಬೇಕು ತಾನೆ ಎಂದು ಹೇಳಿದ್ದಾಳೆ. ನಾನು ಹೇಳಿದರು ಸಹ ಅವರು ಬರಲಿಲ್ಲ ಏನೋ ಕೆಲಸವಿದೆ ಎಂದು ಹೊರಟು ಹೋದರು ಎಂದು ಭಾಗ್ಯ ಅತ್ತೆಯ ಬಳಿಯಲ್ಲಿ ಹೇಳಿದ್ದಾಳೆ. ಇದೆ ವೇಳೆ ಬೆಳ್ಳಿ ಸಾಮಾನುಗಳನ್ನೆಲ್ಲ ತೋರಿಸಿದ್ದು ತುಂಬಾ ಖುಷಿಯಾಗಿದೆ. ಸಂಜೆಯ ಪೂಜೆಗೆ ಬೆಳ್ಳಿ ಸಾಮಾನುಗಳನ್ನೆಲ್ಲ ಇಟ್ಟು ಪೂಜೆ ಮಾಡೋಣ ಎಂದು ಹೇಳಿದ್ದಾರೆ.

colors-kannada-bhagyalakshmi-serial

ತಾಂಡವ್ ಬರುವ ಮುಂಚೆಯೇ ಶ್ರೇಷ್ಠ ಹೋಗಿ ತಾಂಡವ್‌ನ ದಾರಿ ಕಾಯುತ್ತಾ ಇದ್ದಾಳೆ. ಇನ್ನೂ ಪೂಜಾ ಸಹ ಮರೆಯಲಿ ನಿಂತು ಎಲ್ಲವನ್ನು ನೋಡುತ್ತಾ ಇದ್ದಾಳೆ. ಇವರಿಬ್ಬರದ್ದು ಯಾವುದೋ ಬೇರೆ ರೀತಿಯ ಸಂಬಂಧವೇ ಇದೆ ನನ್ನ ಭಾವ ಯಾಕೆ ನನ್ನ ಅಕ್ಕನಿಗೆ ಮೋಸ ಮಾಡುತ್ತಿದ್ದಾರೆ ತಿಳಿಯುತ್ತಿಲ್ಲ ಎಂದು ಪೂಜಾ ಯೋಚನೆ ಮಾಡುತ್ತಾ ಇದ್ದಾಳೆ. ಇಂದು ಇವರಿಬ್ಬರ ಸಂಬಂಧವನ್ನು ಎಲ್ಲರ ಮುಂದೆ ಬಹಿರಂಗ ಮಾಡಲೇಬೇಕು ಎಂಬ ಯೋಚನೆಯಲ್ಲಿದ್ದಾಳೆ ಪೂಜಾ.

ಶುರುವಾಯ್ತು ತಾಂಡವ್‌ಗೆ ಬ್ಯಾಡ್ ಟೈಮ್, ವಿಡಿಯೋ ಮಾಡಿಕೊಳ್ಳತ್ತಿರುವ ಪೂಜಾ

ತಾಂಡವ್ ಬಂದ ತಕ್ಷಣ ಶ್ರೇಷ್ಠ ತಾಂಡ‌ವ್‌ನನ್ನು ತಬ್ಬಿಕೊಂಡಿದ್ದಾಳೆ. ಈ ವೇಳೆ ತಾಂಡವ್ ತನ್ನ ಮನಸ್ಸಿನಲ್ಲಿರುವ ಕೋಪವನ್ನ ಹೊರಗೆ ಹಾಕಿದ್ದಾನೆ. ಸ್ವಲ್ಪ ನೆಮ್ಮದಿಯನ್ನ ಕೊಡು ಎಂದು ಶ್ರೇಷ್ಠಾ ಬಳಿ ಹೇಳಿದಾಗ ನನ್ನ ತಂದೆ ತಾಯಿ ಏನು ನನಗೆ ರಾಜಮರ್ಯಾದೆ ಕೊಡುತ್ತಾ ಇದ್ದಾರಾ ಎಂದು ಹೇಳಿದ್ದಾಳೆ. ನಮ್ಮಿಬ್ಬರ ಪ್ರೀತಿ ಯಾವ ರೀತಿಯಲ್ಲಿ ಇತ್ತು, ಈಗ ನೀನು ಮದುವೆ ಎಂಬ ಬಂಧವನ್ನು ತಂದು ಇಷ್ಟು ಹಿಂಸೆಯನ್ನ ಕೊಡುತ್ತಾ ಇದ್ದೀಯಾ. ಅಲ್ಲಿಂದಲೇ ಪ್ರಾಬ್ಲಮ್ ಶುರುವಾಗಿದ್ದು ನನ್ನ ತಾಯಿಯ ಕಣ್ಣಲ್ಲಿ ನಾನು ಎಂತಹ ಪರಿಸ್ಥಿತಿಗೆ ತಲುಪಿದ್ದೇನೆ ಗೊತ್ತಾ ಎಂದು ತಾಂಡವ್ ಹೇಳುತ್ತಾ ಇದ್ದಾನೆ.

colors-kannada-bhagyalakshmi-serial

ತಾಂಡವ್ ನೀನು ಏನಾದ್ರು ಮಾಡಿಕೋ ನನಗೆ ನೀನು ಬೇಕೇ ಬೇಕು ನಿನ್ನ ನಾ ನಾನು ಮದುವೆಯಾಗಿ ತೀರುತ್ತೇನೆ ಎಂದು ತಾಂಡವ ಬಳಿಯಲ್ಲಿ ಶ್ರೇಷ್ಠ ಹೇಳುತ್ತಾ ಇದ್ದಾಳೆ. ಇದೆಲ್ಲವನ್ನು ಸಹ ಪೂಜಾ ತನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡುತ್ತಾ ಇದ್ದಾಳೆ. ಏನು ಬಾವ ಇವಳನ್ನ ಮದುವೆ ಮಾಡಿಕೊಳ್ಳಬೇಕು ಎನ್ನುತ್ತಿದ್ದಾರೆ ಎಂದು ಪೂಜಾ ಶಾಕ್‌ಗೆ ಒಳಗಾಗಿದ್ದಾಳೆ. ತಾಂಡವ್‌ನ ಗುಟ್ಟು ಈಗ ಪೂಜಾಗೆ ತಿಳಿದು ಹೋಗಿದೆ. ಅವಳು ಮನೆಗೆ ಬಂದೆ ಏನು ಮಾಡುತ್ತಾಳೆ ಎಂಬುದೇ ಕುತೂಹಲವಾಗಿದೆ.

ಸೊಸೆಯನ್ನೇ ಮಗ ಎಂದ ಕುಸುಮಾ, ಸುನಂದಾಳ ಮುಖದಲ್ಲಿ ಸಂತಸ

ತಾಂಡವ್ ಮನೆಗೆ ಗಣೇಶನ ಪೂಜೆಗೆ ಬಂದಿಲ್ಲ ಎಂದು ಕುಸುಮಾ ಕೋಪ ಮಾಡಿಕೊಂಡಿದ್ದಾಳೆ. ನನ್ನ ಸೊಸೆ ಭಾಗ್ಯಳ ಮೇಲೆ ನನಗೆ ಇತ್ತೀಚಿನ ದಿನಗಳಲ್ಲಿ ನಂಬಿಕೆ ಜಾಸ್ತಿಯಾಗಿದೆ. ಪ್ರತಿ ದಿನ ಹೇಗೆ ಭಾಗ್ಯಳೇ ಪೂಜೆ ಮಾಡುತ್ತಿದ್ದಳೋ ಹಾಗೇ ಇಂದು ಗಣೇಶನ ಪೂಜೆಯನ್ನು ಮಾಡಿ ವಿಸರ್ಜನೆ ಮಾಡಲಿ ಎಂದು ಹೇಳಿದ್ದಾಳೆ. ಸುನಂದಾಗೆ ಬೀಗತಿಯ ಮಾತನ್ನ ಕೇಳಿ ತುಂಬಾನೇ ಖುಷಿಯಾಗಿದೆ ನನ್ನ ಮಗಳ ಮೇಲೆ ನಂಬಿಕೆ ಇದೆ ಇಷ್ಟು ಸಾಕು ಎಂಬುವುದು ಸುನಂದಾಳಿಗೆ ತೃಪ್ತಿಯನ್ನು ಕೊಟ್ಟಿದೆ. ಅಮ್ಮನ ಕಣ್ಣಲ್ಲಿ ತಾಂಡವ್ ದಿನದಿಂದ ದಿನಕ್ಕೆ ನಿಕೃಷ್ಟನಾಗಿ ಹೋಗುತ್ತಾ ಇದ್ದಾನೆ. ಈಗ ಪೂಜಾ ಕೈಯಲ್ಲಿ ಸಾಕ್ಷಿ ಇದ್ದು ಮುಂದೆ ಕಥೆ ಯಾವ ತಿರುವು ಪಡೆಯಲಿದೆ ಎಂಬುದೇ ಕುತೂಹಲವಾಗಿದೆ.

More from Filmibeat

colors kannada Bhagyalakshmi serial today episode.

English summary
Kannada serial Hitler kalyana written update on 4th October.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X