Bhagyalakshmi: ಕೊನೆಗೂ ಶ್ರೇಷ್ಠಾಗೆ ಗುಡ್ ಬೈ ಹೇಳಿದ ತಾಂಡವ್: ಗಣೇಶನ ಬಳಿ ಭಾಗ್ಯ ಮೊರೆ ಇಟ್ಟಿದ್ದೇನು?

By ಶೃತಿ ಹರೀಶ್ ಗೌಡ

ಭಾಗ್ಯಲಕ್ಷ್ಮಿ ಧಾರಾವಾಹಿ ಹೊಸದೊಂದು ತಿರುವನ್ನ ಪಡೆದುಕೊಂಡು ಸಾಗುತ್ತಿದೆ ಈಗ ಶ್ರೇಷ್ಠಾಳ ಸಂಬಂಧವನ್ನೇ ಕಳೆದುಕೊಳ್ಳುವ ಮಾತನ್ನು ತಾಂಡವ್ ಆಡಿದ್ದು ರೋಚಕ ತಿರುವು ಸಿಕ್ಕಿದೆ. ಭಾಗ್ಯಲಕ್ಷ್ಮೀ ಧಾರಾವಾಹಿ ನೋಡುಗರಿಗಂತು ಈಗ ಬಹಳಷ್ಟು ಕುತೂಹಲ ಕೆರಳಿಸುತ್ತಿದೆ. ಯಾಕೆಂದರೆ ಶ್ರೇಷ್ಠಾಳನ್ನ ಅಷ್ಟು ಪ್ರೀತಿಸುತ್ತಿದ್ದ ತಾಂಡವ್ ನಿಜವಾಗಿಯೂ ತಮ್ಮ ಸಂಬಂಧಕ್ಕೆ ಗುಡ್ ಬಾಯ್ ಹೇಳುತ್ತಾ ಇದ್ದಾನ ಎಂದು ಪ್ರೇಕ್ಷಕರೇ ಕೇಳುತ್ತಿದ್ದಾರೆ. ಇದು ಶ್ರೇಷ್ಠಾ ಅಥವಾ ತಾಂಡವ್ ಕಾಣುತ್ತಿರುವ ಕನಸಾ ಎಂಬ ಪ್ರಶ್ನೆ ಪ್ರೇಕ್ಷಕರಲ್ಲೂ ಕಾಡುತ್ತಿದೆ.

ತನ್ನ ತಾಯಿಯ ಮೇಲೆ ಅಪಾರ ಪ್ರೀತಿ ಹೊಂದಿರುವ ತಾಂಡವ್‌ಗೆ ತನ್ನ ತಾಯಿಯನ್ನ ಕೆಳಗೆ ಬೀಳಿಸಿದ್ದು ಶ್ರೇಷ್ಠಾ ಎಂಬುದು ತಿಳಿದ ಮೇಲಂತೂ ವ್ಯಾಘ್ರನಾಗಿಬಿಟ್ಟಿದ್ದಾನೆ. ಪೂಜಾ ಇವರಿಬ್ಬರ ನಡುವೆ ನಡೆಯುತ್ತಿರುವ ಸಂಭಾಷಣೆಯನ್ನು ವಿಡಿಯೋ ಮಾಡುತ್ತಾ ಇದ್ದಾಳೆ. ಇವರು ಇಂತಹ ದೊಡ್ಡ ಸತ್ಯವನ್ನು ಹೇಳದೆ ಮುಚ್ಚಿಟ್ಟಿದ್ದಾರೆ ಎಂದು ಬೇಸರ ಮಾಡಿಕೊಂಡಿದ್ದಾಳೆ. ಬಾಡಿಗೆ ತಂದೆ ತಾಯಿಯ ಮೂಲಕ ಮದುವೆ ಮಾತುಕತೆಯನ್ನು ಮಾಡಿಕೊಂಡಿದ್ದಾರೆ ಎಂದು ಪೂಜಾ ಶಾಕ್ ಆಗಿದ್ದಾಳೆ. ಮನೆಯಲ್ಲಿ ಏನಿಲ್ಲ ನಡೆಯುತ್ತಿದೆ ಇದಕ್ಕೆ ತಾಂಡವ್ ಭಾವ ಈ ರೀತಿಯಲ್ಲ ನಡೆದುಕೊಳ್ಳುತ್ತಿರುವುದು ಎಂದು ಪೂಜಾ ಅಂದುಕೊಂಡಿದ್ದಾಳೆ.

colors-kannada-bhagyalakshmi-serial

ಈ ಕಡೆ ಶ್ರೇಷ್ಠಾಗೆ ತಾಂಡವ್ ಚೆನ್ನಾಗಿ ಕ್ಲಾಸ್ ತೆಗೆದುಕೊಂಡಿದ್ದಾನೆ. ನಾನು ನಿನ್ನನ್ನ ಅತಿಯಾಗಿ ನಂಬಿದ್ದೆ ಪ್ರೀತಿ ಮಾಡಿದ್ದೆ ಆದರೆ ನೀನು ಮಾಡಿದ್ದಾದರೂ ಏನು ಎಂದು ಕೇಳಿದ್ದಾನೆ. ನನ್ನ ತಾಯಿಯನ್ನು ಕೆಳಗಡೆ ತಳ್ಳಿದ್ದೀಯಲ್ಲ ನಿನಗೆ ಸ್ವಲ್ಪವಾದರೂ ಮಾನವೀಯತೆ ಎಂಬುದು ಇದಿಯಾ ಎಂದು ಶ್ರೇಷ್ಠಾಳಿಗೆ ಕೇಳಿದ್ದಾನೆ. ಆ ಪರಿಸ್ಥಿತಿಯನ್ನ ನಿಭಾಯಿಸಲು ನಾನು ಆ ರೀತಿ ಮಾಡಬೇಕಾಯಿತು ಎಂದು ಕುಸುಮರನ್ನು ಕೆಳಗಡೆ ತಳ್ಳಿದ್ದಕ್ಕೆ ತಾಂಡವ್ ಬಳಿ ಶ್ರೇಷ್ಠಾ ಕ್ಷಮೆ ಕೇಳಿದ್ದಾಳೆ. ಆದರೆ ತಾಂಡವ್ ಮಾತ್ರ ಕ್ಷಮಿಸುವ ಪರಿಸ್ಥಿತಿಯಲ್ಲಿ ಇಲ್ಲ.

ಅಮ್ಮನಿಗಾಗಿ ಶ್ರೇಷ್ಠಾಗೆ ಗುಡ್ ಬೈ, ನಿಜವಾಗಿಯೂ ತಾಂಡವ್ ಬದಲಾಗಿದ್ದಾನಾ?

ಯಾವಾಗ ಶ್ರೇಷ್ಠಾಳ ನಿಜ ಬಣ್ಣ ಗೊತ್ತಾಯಿತು ಆಗಲೇ ತಾಂಡವ್ ಶ್ರೇಷ್ಠಾ ಕೆನ್ನೆಗೆ ಬಾರಿಸಿದ್ದಾನೆ. ನನ್ನ ತಂದೆ ತಾಯಿಗೆ ಗೌರವ ಕೊಡದವರನ್ನು ನಾನು ಎಂದಿಗೂ ಸಹ ಕ್ಷಮಿಸುವುದಿಲ್ಲ. ಇಂದು ನೀನು ನನ್ನ ತಾಯಿಯನ್ನ ತಳ್ಳಿ ಗಾಯ ಮಾಡಿರಬಹುದು. ಮುಂದೊಂದು ದಿನ ನನ್ನ ತಂದೆ ತಾಯಿಯನ್ನು ಸಾಯಿಸುವ ಕೆಲಸವನ್ನು ಮಾಡುತ್ತೀಯಾ ಎಂದು ಕೋಪ ಮಾಡಿಕೊಂಡಿದ್ದಾನೆ. ನನಗೆ ನನ್ನ ಕುಟುಂಬ ಮಕ್ಕಳು ಇದ್ದಾರೆ ಎಂದು ಹೇಳುತ್ತಾ ಶ್ರೇಷ್ಠಾಳ ಸಂಬಂಧಕ್ಕೆ ಗುಡ್ ಬೈ ಹೇಳಿದ್ದಾನೆ.

colors-kannada-bhagyalakshmi-serial

ತಾಂಡವ್ ತನ್ನ ಸಂಬಂಧವನ್ನೇ ಕಡಿದುಕೊಂಡು ಹೋಗುತ್ತಿರುವುದಕ್ಕೆ ಶ್ರೇಷ್ಠವಾಗಿ ಬಹಳ ಬೇಸರವಾಗಿದೆ. ನನಗೆ ನೀನು ಬೇಡ ನಿನ್ನ ದರಿದ್ರ ಪ್ರೀತಿಯು ಬೇಡ ನನಗೆ ನನ್ನ ಕುಟುಂಬ ಬೇಕು ನನ್ನ ಮಕ್ಕಳು ಬೇಕು ಎಂದು ತಾಂಡವ್ ಶ್ರೇಷ್ಠ ಮುಂದೆ ಹೇಳಿದ್ದಾನೆ. ಇದಕ್ಕೆ ಶ್ರೇಷ್ಠ ನಿನ್ನ ತಾಯಿ ಏನು ದೊಡ್ಡ ದೇವತೆನ ತಾಯಿ ಗೋಸ್ಕರ ಪ್ರೀತಿಯನ್ನೇ ಕಳೆದುಕೊಳ್ಳುತ್ತಾ ಇದ್ದೀಯಾ ಎಂದಿದ್ದಾಳೆ. ನನಗೆ ನನ್ನ ತಾಯಿಯೇ ದೇವತೆ ನನಗೆ ನೀನು ಬೇಡ ಎಂದು ತಾಂಡವ್ ಕಡ್ಡಿ ತುಂಡು ಮಾಡಿದಂತೆ ಶ್ರೇಷ್ಠಾಗೆ ಹೇಳಿ ಅವಳ ಸಂಬಂಧವನ್ನೇ ಕಳೆದುಕೊಂಡಿದ್ದಾನೆ.

ಭಾಗ್ಯಳ ಕೋರಿಕೆಗೆ ಅಸ್ತು ಎಂದ ಗಣೇಶ, ಮಗಳ ಕುಟುಂಬದ ಸುಖಕ್ಕಾಗಿ ಸುನಂದ ಪ್ರಾರ್ಥನೆ

ಭಾಗ್ಯ ಗಣೇಶನಿಗೆ ಪೂಜೆ ಸಲ್ಲಿಸುವ ವೇಳೆ ನನ್ನ ಸಂಸಾರ ಚೆನ್ನಾಗಿ ಇರಲಿ ಎಂದು ಕೇಳಿಕೊಂಡಿದ್ದಾಳೆ. ಇದಕ್ಕೆ ಗಣೇಶ ಅಸ್ತು ಎಂದ ಅನಿಸುತ್ತದೆ ಆ ಕಡೆ ಶ್ರೇಷ್ಠ ಸಂಬಂಧವನ್ನು ಕಳೆದುಕೊಂಡು ತಾಂಡವ್ ಮನೆಗೆ ಬರುತ್ತಿದ್ದಾನೆ. ತಾಯಿಗೆ ತನ್ನ ಮಕ್ಕಳು ಚೆನ್ನಾಗಿದ್ದರೆ ಅಷ್ಟೇ ಸಾಕು‌. ಇದಕ್ಕಾಗಿ ಸುನಂದ ಸಹ ತನ್ನ ಮಗಳ ಕುಟುಂಬ ಸುಖವಾಗಿ ಇರಲಿ ಎಂದು ಗಣೇಶನ ಬಳಿ ಪ್ರಾರ್ಥನೆಯನ್ನು ಮಾಡಿಕೊಳ್ಳುತ್ತಾ ಇದ್ದಾಳೆ.

ನನ್ನ ಮಗಳ ಸಂಸಾರದ ಮೇಲೆ ಯಾರ ಕಣ್ಣು ಬೀಳದೆ ಇರಲಿ ಅವಳ ಸಂಸಾರ ಅವಳಿಗೆ ಉಳಿಯಲಿ ಎಂದು ಸುನಂದ ಗಣೇಶನ ಬಳಿ ಬೇಡಿಕೊಂಡಿದ್ದಾರೆ. ತಾಂಡವ್ ಮನಸ್ಸಿನಲ್ಲಿದ್ದ ಭಾರವನ್ನೆಲ್ಲಾ ಬೆಟ್ಟದ ಮೇಲೆ ಬಿಟ್ಟು ಮನೆಗೆ ಬರುತ್ತಿದ್ದಾನೆ. ಈಗ ತಾಂಡವ್ ಹಾಗೂ ಶ್ರೇಷ್ಠಾ ನಾನೊಂದು ತೀರ ನೀನೊಂದು ತೀರ ಎಂಬ ಪರಿಸ್ಥಿತಿಗೆ ತಲುಪಿದ್ದಾರೆ. ಎಲ್ಲಾ ಸತ್ಯವನ್ನು ಕಂಡಿರುವ ಪೂಜಾಳ ಮುಂದಿನ ನಡೆಯ ಬಗ್ಗೆ ಪ್ರೇಕ್ಷಕರಿಗೆ ಕುತೂಹಲವಿದೆ.

More from Filmibeat

English summary
colors kannada Bhagyalakshmi serial today episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X