Bhagyalakshmi: ನಮ್ಮ ತಾಳ್ಮೆ ಪರೀಕ್ಷೆ ಮಾಡ್ತಾ ಇದ್ದೀರಾ; ರೊಚ್ಚಿಗೆದ್ದ 'ಭಾಗ್ಯಲಕ್ಷ್ಮೀ' ವೀಕ್ಷಕರು!
'ಭಾಗ್ಯಲಕ್ಷ್ಮೀ' ಧಾರಾವಾಹಿಗೆ ದಿನೇ ದಿನೇ ಅಭಿಮಾನಿಗಳು ಹೆಚ್ಚಾಗುತ್ತಿದ್ದಾರೆ. ಮೊದಲಿನಿಂದಲೂ ಈ ಧಾರಾವಾಹಿ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದೆ. ಅದರಲ್ಲೂ ಅತ್ತೆ ಸೊಸೆ ವಿಚಾರಕ್ಕೆ ಹೆಚ್ಚು ಫಾಲೋವರ್ಸ್ ಇದಾರೆ. ಸಿಕ್ಕರೆ ಇಂಥ ಅತ್ತೆ ಸಿಗಬೇಕು ಎಂದೇ ಸುಮಾರು ಮಹಿಳೆಯರು ಬಯಸುತ್ತಿದ್ದರು.
ಸೊಸೆಗೆ ಬೆಂಗಾವಲಾಗಿ ಅತ್ತೆ ನಿಂತಿದ್ದರು. ಸೊಸೆಯನ್ನು ಮಗ ಹಿಯಾಳಿಸಿದ್ದಕ್ಕೆ ಸೊಸೆಯ ಪರವಾಗಿ ನಿಂತರು. ಮಗನಿಗೆ ಬುದ್ದಿ ಕಲಿಸುವುದಕ್ಕೆ ರೆಡಿಯಾದರು. ಈ ರೀತಿಯ ಅತ್ತೆ ಎಲ್ಲಿ ಸಿಗುತ್ತಾರೆ ಹೇಳಿ ಎಂದು ವೀಕ್ಷಕರು ಹೇಳುತ್ತಿದ್ದಾರೆ.

ಭಾಗ್ಯ ಈಗ ಒಂದೊಳ್ಳೆ ಸಾಧನೆ ಮಾಡಿದ್ದಾಳೆ. ಮನೆಯನ್ನು ನೋಡಿಕೊಳ್ಳುತ್ತಿದ್ದಾಳೆ. ತನಗೆ ಬೇಕಾದಂತೆ ಬದಲಾದರೂ ತಾಂಡವ್ ಮಾತ್ರ ಭಾಗ್ಯಾಳನ್ನು ಒಪ್ಪುತ್ತಿಲ್ಲ. ಭಾಗ್ಯಾ ಬೇಡವೇ ಬೇಡ ಎನ್ನುತ್ತಿದ್ದಾನೆ. ಇದಕ್ಕೆ ಕಾರಣವೇನು ಎಂದು ಹುಡುಕಾಟ ನಡೆಸಿದ್ದ ಕುಸುಮಾಗೆ ಲಗ್ನ ಪತ್ರಿಕೆಯ ಮೂಲಕ ಉತ್ತರ ಸಿಕ್ಕಿದೆ.
ಶ್ರೇಷ್ಠಾ-ತಾಂಡವ್ ಮದುವೆ ಸಂಭ್ರಮ
ಅತ್ತ ಅಪ್ಪ ಅಮ್ಮನೇ ಈ ಮದುವೆ ಬೇಡ ಎಂದಾಗ ಶ್ರೇಷ್ಠಾ ಅವರಿಬ್ಬರನ್ನೇ ಧಿಕ್ಕರಿಸಿ ಹೋದಳು. ಭಾಗ್ಯಾಳ ಮೇಲೆ ಜಿದ್ದಿಗೆ ಬಿದ್ದಿರುವ ಶ್ರೇಷ್ಠಾ, ತಾಂಡವ್ ನ ಮದುವೆಯಾದರೆ ಎಲ್ಲಾ ಸಮಸ್ಯೆಗೂ ಪರಿಹಾರ ಸಿಗುತ್ತೆ, ಭಾಗ್ಯಾಳ ಅಧಿಕಾರವನ್ನು ನಾನು ಕಿತ್ತುಕೊಂಡಂತೆ ಆಗುತ್ತದೆ ಎಂದು ಕಾಯುತ್ತಿದ್ದಾಳೆ. ಆದರೆ ಅಧಿಕಾರ ಯಾವತ್ತು ಭಾಗ್ಯಾಳದ್ದೆ, ಶ್ರೇಷ್ಠಾ ಕಾನೂನಿಗೆ ವಿರುದ್ಧವಾಗಿ ಹೋಗುತ್ತಿದ್ದಾಳೆ ಎಂಬುದೇ ಗೊತ್ತಾಗುತ್ತಿಲ್ಲ.
ತಲೆ ಮೇಲೆ ಕೈ ಹೊತ್ತ ಕುಸುಮಾ
ಲಗ್ನ ಪತ್ರಿಕೆ ನೋಡುತ್ತಿದ್ದಂತೆ ಕುಸುಮಾಗೆ ತಲೆ ತಿರುಗಿದೆ. ಭೂಮಿ ಆಕಾಶ ಒಂದಾದಂತೆ ಫೀಲ್ ಆಗಿದೆ. ಮಗನ ಈ ಕೆಟ್ಟ ಯೋಚನೆಗೆ ಏನು ಮಾಡಬೇಕು ಎಂಬುದು ತಿಳಿಯದೆ ಸೈಲೆಂಟ್ ಆಗಿ ಕುಳಿತು ಬಿಟ್ಟಿದ್ದಾಳೆ. ಮಗನ ಈ ಮೋಸಕ್ಕೆ ಏನು ಮಾಡಬೇಕು ಎಂಬುದೇ ತೋಚದಂತೆ ಆಗಿದೆ ಅವಳಿಗೆ. ನಾನೆತ್ತ ಮಗ ಈ ರೀತಿ ಮಾಡಿಬಿಟ್ಟನಲ್ಲ ಎಂಬ ಚಿಂತೆಯಾಗಿದೆ. ಸುನಂದಾಗೆ ಈ ಮೊದಲೇ ತಾಂಡವ್ ಬಯಲಾಟ ಗೊತ್ತಿತ್ತು. ಆಗಾಗ ಆ ವಿಚಾರವನ್ನು ಹೊರಗೆ ಹಾಕುತ್ತಿದ್ದಳು. ಆದರೆ ಅದು ಕುಸುಮಾಗೆ ಇಷ್ಟವಾಗುತ್ತಿರಲಿಲ್ಲ. ಈಗ ಅದೆಲ್ಲ ಕಣ್ಣ ಮುಂದೆ ಬರ್ತಿದೆ.

ಮದುವೆ ನಿಲ್ಲಿಸಬೇಕೆಂದು ಯೋಚನೆ
ಈ ಲಗ್ನ ಪತ್ರಿಕೆ ನೋಡಿ ಶಾಕ್ ಆದ ಕುಸುಮಾ, ಮೊದಲು ಯೋಚನೆ ಮಾಡಿದ್ದೆ ತನ್ನ ಸೊಸೆ ಬಗ್ಗೆ. ಅವಳಿಗೆ ಅನ್ಯಾಯವಾಗಬಾರದು, ಮೊದಲು ಮದುವೆ ನಿಲ್ಲಿಸಬೇಕು ಎಂದು ಕಣ್ಣೀರು ಹೊಡೆಸಿಕೊಳ್ಳುತ್ತಾಳೆ. ಮಗನಿಗೆ ಗ್ರಹಚಾರ ಬಿಡಿಸಿ, ಆ ಶ್ರೇಷ್ಠಾಗೆ ತಕ್ಕ ಬುದ್ದಿ ಕಲಿಸಲು ನಿರ್ಧಾರ ಮಾಡುತ್ತಾಳೆ.
ವೀಕ್ಷಕರ ತಾಳ್ಮೆ ಕಟ್ಟೆ ಒಡೆಯುತ್ತಿದೆ
ಇದನ್ನೆಲ್ಲಾ ನೋಡಿ ನೋಡಿ ವೀಕ್ಷಕರ ತಲೆ ಬಿಸಿಯಾಗಿದೆ. ಅದಕ್ಕೆ ಈಗ ರೊಚ್ಚಿಗೆದ್ದಿದ್ದಾರೆ. ನೀವೂ ನಮ್ಮ ತಾಳ್ಮೆ ಪರೀಕ್ಷೆ ಮಾಡ್ತಾ ಇದೀರಾ ಅನ್ಸುತ್ತೆ. ಕುಸುಮಾಗೆ ವಿಚಾರ ಗೊತ್ತಾಗಿರೋದನ್ನ ತೋರಿಸಿ ಎಷ್ಟು ದಿನ ಆಯ್ತು. ಇನ್ನು ಮದುವೆ ಮಂಟಪಕ್ಕೆ ಬಂದಿಲ್ಲ. ಕುಸುಮಾ ತಲೆಯಿಂದ ಕೈ ತೆಗೆಯುವುದಕ್ಕೆ ಒಂದು ವಾರ, ಮಂಟಪಕ್ಕೆ ಹೋಗುವುದಕ್ಕೆ ಒಂದು ವಾರ ಹೀಗೆ ವಾರಗಳನ್ನ ತಳ್ಳಿಕೊಂಡೇ ಬರುತ್ತೀರಾ ಎಂದು ಕೋಪದ ಮಾತುಗಳನ್ನ ಆಡಿದ್ದಾರೆ. ರಿಯಲ್ ಲೈಫ್‌ನಲ್ಲಿ ಒಂದು ಅದ್ದೂರಿ ಮದುವೆಯನ್ನೇ ಮುಗಿಸಿ ಬಿಡುತ್ತಾ ಇದ್ದೆವು ಎಂದೆಲ್ಲ ಕಮೆಂಟ್ ಹಾಕಿದ್ದಾರೆ.


Click it and Unblock the Notifications











