Bhagyalakshmi: ತಾಯಿ ಕೈಗೆ ಸಿಕ್ಕಿಬೀಳ್ತಾನಾ ತಾಂಡವ್? ಅಳಿಯನ ಮೇಲೆ ಸುನಂದಾಗೆ ಇನ್ನೂ ಅನುಮಾನ

By ಶೃತಿ ಹರೀಶ್ ಗೌಡ

ತಾಂಡವ್ ಹೇಗೋ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದೇನೆ ಎಂದು ಕೊಂಡಿದ್ದಾನೆ. ಆದರೆ ತನಗೆ ಮುಂದೆ ಮತ್ತೊಂದು ಮಾರಿಹಬ್ಬ ಕಾದಿದೆ ಅನ್ನೋದು ಮಾತ್ರ ಗೊತ್ತಿಲ್ಲ. ಧರ್ಮರಾಜ್ ಹಾಗೂ ಕುಸುಮಾ ಬೀಗರನ್ನ ಸಮಾಧಾನ ಮಾಡಿ ಮನೆಗೆ ಕಳುಹಿಸಿದ್ದಾರೆ. ಇನ್ನು ಧರ್ಮರಾಜ್, ಭಾಗ್ಯಳನ್ನ ನಿನ್ನ ತಂದೆ ತಾಯಿ ಮನೆಗೆ ಬಿಟ್ಟು ಅಲ್ಲೇ ಒಂದು ಸ್ವಲ್ಪ ಹೊತ್ತು ಇದ್ದು ಬಾ ಎಂದು ಹೇಳಿದ್ದಾರೆ

ತಾಂಡವ್ ಈಗ ಎಲ್ಲರೂ ಹೋದ ಮೇಲೆ ನಿಟ್ಟುಸಿರು ಬಿಟ್ಟಿದ್ದಾನೆ. ಎಲ್ಲವೂ ಹೇಗೋ ಸುಖಾಂತ್ಯ ಕಂಡಿತು ಎಂದು ಶ್ರೇಷ್ಠ ಬಳಿ ಹೋಗಲು ರೆಡಿಯಾಗುತ್ತಿದ್ದಾನೆ. ಈ ಕಡೆ ಶ್ರೇಷ್ಠ ತಂದೆ ಇಂದು ನೀನು ತರುಣ್ ಮನೆಯವರನ್ನ ಭೇಟಿ ಮಾಡಿಸಿದರೆ ಮಾತ್ರ ನಾನು ನಿನ್ನನ್ನ ಅವನ ಜೊತೆ ಮದುವೆ ಮಾಡುತ್ತೇನೆ ಇಲ್ಲವಾದರೆ ನೀನು ನನ್ನ ಜೊತೆ ಬಂದು ರಘುವನ್ನು ಮದುವೆ ಮಾಡಿಕೋ ಎಂದು ಹೇಳುತ್ತಾ ಇದ್ದಾರೆ.

colors-kannada-bhagyalakshmi-serial

ಇನ್ನು ತಾಂಡವ್ ಫೋನ್ ರಿಸೀವ್ ಮಾಡಿದಾಗ ಶ್ರೇಷ್ಠ ತಂದೆ ಶ್ರೀವರ ಮಾತನಾಡಿ ಇಂದು ನಾವು ನಿನ್ನ ಭೇಟಿಯಾಗಲೇಬೇಕು ನಿನ್ನ ಮನೆಗೆ ಬರುತ್ತೇವೆ ಎಂದು ಹೇಳಿದಾಗ ತಾಂಡವ್‌ಗೆ ಶಾಕ್ ಆಗಿದೆ. ಏನನ್ನು ಮಾತನಾಡದೆ ಸುಮ್ಮನಾಗಿದ್ದಾನೆ, ನಾನೇ ನಿಮ್ಮ ಮನೆಗೆ ಬರುತ್ತೇನೆ ಎಂದು ತಾಂಡವ್ ಹೇಳಿದ್ದಾನೆ.

ತನ್ವಿಗೆ ತಾಂಡವ್ ತಾಕೀತು

ತನ್ವಿ ಮನೆಯಲ್ಲಿ ಒಬ್ಬಳೇ ಇದ್ದಾಳೆ. ಈಗ ತನ್ವಿಗೆ ಏನಾದರೂ ಸುಳ್ಳು ಹೇಳಿ ತಾಂಡವ್ ಬೇರೆ ಕಡೆಗೆ ಹೋಗಬೇಕಾದ ಪರಿಸ್ಥಿತಿ ಬಂದಿದೆ. ನನಗೆ ಮೀಟಿಂಗ್ ಇದೆ ನೀನು ರೂಂಗೆ ಹೋಗಿ ಮೊಬೈಲ್‌ನಲ್ಲಿ ಸಿನಿಮಾ ನೋಡು ಎಂದು ತಾಂಡವ್ ತನ್ನ ಮಗಳಿಗೆ ಹೇಳಿದ್ದಾನೆ. ಪಪ್ಪಾ ನಾನು ಬಿಗ್‌ಸ್ಕ್ರೀನ್‌ನಲ್ಲೇ ಸಿನಿಮಾ ನೋಡುತ್ತೇನೆ. ಇವತ್ತು ಭಾನುವಾರ ನನಗೆ ಬೋರಾಗುತ್ತಿದೆ ಎಂದು ತನ್ವಿ ಹೇಳಿದರು ಸರಿ ತಾಂಡವ್ ಒಪ್ಪುತ್ತಿಲ್ಲ. ನೀನು ಮೊದಲು ರೂಮ್‌ಗೆ ಹೋಗು ಅಲ್ಲೇ ಕುಳಿತುಕೊಂಡು ಮೊಬೈಲ್ ನೋಡು ಎಂದಿದ್ದಾನೆ.

colors-kannada-bhagyalakshmi-serial

ಅಮ್ಮನ ಮಾತಿನಿಂದ ಚಿಂತಿತಳಾದ ಭಾಗ್ಯ

ಸುನಂದಾ ತನ್ನ ಮನೆಗೆ ಭಾಗ್ಯಳನ್ನ ಕರೆದುಕೊಂಡು ಬಂದಿದ್ದರೂ ಸಹ ಅಳಿಯನ ಮೇಲೆ ಇನ್ನೂ ಅವಳಿಗೆ ನಂಬಿಕೆ ಬಂದಿಲ್ಲ. ಭಾಗ್ಯ ಉಳಿದುಕೊಳ್ಳುವ ಕೋಣೆಯನ್ನ ಸಿದ್ದಪಡಿಸು ಎಂದು ಪೂಜಾಗೆ ಹೇಳಿದ್ದಾಳೆ. ಇನ್ನು ಪೂಜಾ ಅಕ್ಕ ಮನೆಗೆ ಹೋಗುತ್ತಾಳೆ. ಏಕೆ ಅವಳ ರೂಮನ್ನ ನಾನು ರೆಡಿ ಮಾಡಬೇಕು ಎಂದು ಕೇಳಿದ್ದಾಳೆ. ಇದಕ್ಕೆ ಸುನಂದಾ ಅವಳು ಮುಂದೆ ಬಂದಾಗ ಬೇಕಾಗುತ್ತದೆ. ನನಗೆ ತಾಂಡವ್ ಮೇಲೆ ಇನ್ನೂ ನಂಬಿಕೆ ಬಂದಿಲ್ಲ ಎಂದಿದ್ದಾಳೆ. ಭಾಗ್ಯಗೆ ತಾಯಿಯ ಮಾತು ಕೇಳಿ ಶಾಕ್ ಆಗಿದೆ. ಈ ರೀತಿಯಲ್ಲ ಮಾತನಾಡಬೇಡ ಎಂದು ಸಮಾಧಾನ ಮಾಡಿದ್ದಾಳೆ.

ಪೂಜಾ ಮಾತಿಗೆ ಭಾಗ್ಯ ಶಾಕ್

ಭಾಗ್ಯ ತಂದೆ-ತಾಯಿಯನ್ನು ಯಾವ ರೀತಿ ಸಂಭಾಳಿಸಬೇಕು ಎಂಬುದೇ ತಿಳಿಯುತ್ತಿಲ್ಲ. ಯಾವುದೋ ಹಳೇ ಕಥೆ ಇಟ್ಟುಕೊಂಡು ಸಂಸಾರ ಬಿಟ್ಟು ಬರಲು ಆಗುತ್ತಾ ಎಂದು ಭಾಗ್ಯ ಕೇಳುತ್ತಾ ಇದ್ದಾಳೆ. ಇದಕ್ಕೆ ಸುನಂದಾ ಅದು ಹಳೇ ಕಥೆಯಲ್ಲ, ಈಗಲೂ ಸಹ ನಡೆಯುತ್ತಿದೆ ಎಂದು ಹೇಳಿದ್ದಾಳೆ. ಭಾಗ್ಯ ಅದನ್ನೆಲ್ಲ ಬಿಡು ಎಂದು ಹೇಳಿದರು ಸಹ ಸುನಂದಆ ಕೇಳುತ್ತಿಲ್ಲ. ಪೂಜಾ, ಭಾಗ್ಯಳಿಗೆ ದಯವಿಟ್ಟು ನೀನು ಮಾತ್ರ ಗಂಡನ ಮನೆ ಬಿಟ್ಟು ಬರಬೇಡ ನನ್ನ ಫ್ಯೂಚರ್‌ಗೆ ಕಷ್ಟ ಆಗುತ್ತದೆ ಎಂದು ಹೇಳಿದ ಮಾತು ಕೇಳಿ ಭಾಗ್ಯಳ ಎದೆಯೇ ಹೊಡೆದು ಹೋಗಿದೆ.

ಕುಸುಮಾ ಕೈಗೆ ಸಿಕ್ಕಿ ಬೀಳ್ತಾನಾ ತಾಂಡವ್?

ಶ್ರೇಷ್ಠ ತಂದೆ ಗಂಡಿನ ಮನೆ ನೋಡಲು ಕುಸುಮಾರನ್ನು ಕರೆದುಕೊಂಡು ಹೋದರೆ ಚೆನ್ನಾಗಿ ಇರುತ್ತದೆ ಎಂದು ತಾಂಡವ್ ಮುಂದೆ ಹೇಳುತ್ತಿದ್ದಾರೆ. ಇದನ್ನೆಲ್ಲಾ ಕೇಳಿಸಿಕೊಳ್ಳುತ್ತಿರುವ ಕಾವ್ಯ, ಶ್ರೇಷ್ಠ ಬಳಿ ನಿಮ್ಮಿಬ್ಬರ ಆಟ ಇಂದಿಗೆ ಕೊನೆ ಆಗುತ್ತದೆ. ಕುಸುಮಾ ಆಂಟಿಗೆ ಎಲ್ಲವೂ ಗೊತ್ತಾಗುತ್ತದೆ ಎನ್ನುತ್ತಿದ್ದಾಳೆ. ಕಾವ್ಯ ಅಮ್ಮ ಸಹ ಕುಸುಮರನ್ನು ಕರೆದುಕೊಂಡು ಹೋಗುವುದೇ ಸರಿ ಎಂದು ಹೇಳುತ್ತಿದ್ದಾರೆ. ಇನ್ನು ಕುಸುಮಾ ಹೆಸರು ಕೇಳಿದ ಕೂಡಲೇ ತಾಂಡವ್‌ಗೆ ನಡುಕ ಶುರುವಾಗಿದೆ. ಕುಸುಮಾಗೆ ಶ್ರೇಷ್ಠಾಳನ್ನು ಮದುವೆಯಾಗುತ್ತಿರುವ ಹುಡುಗ ತನ್ನ ಮಗ ಎಂಬುದು ತಿಳಿದು ಹೋದರೆ ದೊಡ್ಡ ರಣರಂಗವೇ ಸೃಷ್ಟಿ ಆಗಲಿದೆ.

More from Filmibeat

English summary
Bhagyalakshmi Kannada serial Today Episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X