Bhagyalakshmi Serial: ಅಮ್ಮ ಬಂದರೆ ಏನು ಮಾಡೋದು ಎಂದು ಭಯ ಪಟ್ಟ ತಾಂಡವ್? ಮುಂದೇನಾಯ್ತು?
ಕುಸುಮ ಹಾಗೂ ಧರ್ಮರಾಜ್ ಅವರನ್ನು ನೋಡಿದ ಶ್ರೇಷ್ಠಗೆ ಮಾತೆ ಬರುತ್ತಿಲ್ಲ. ಇದಕ್ಕೆ ಕುಸುಮ ಏನೇ ಶಾಕಾಂಬರಿ ನಮ್ಮನ್ನು ನೋಡಿ ಮಾತನಾಡಿಸುತ್ತಿಲ್ಲ ಎಂದು ಹೇಳಿದ್ದಾರೆ. ಶ್ರೇಷ್ಠ ಆಂಟಿ ನಿಮ್ಮಿಬ್ಬರನ್ನ ನೋಡಿ ತುಂಬಾ ಶಾಕ್ ಆಯಿತು ಎಂದು ಹೇಳಿದ್ದಾಳೆ. ಏನು ಶಾಕ್ ಆಯ್ತಾ ಎಂದು ಕುಸುಮ ಕೇಳಿದ್ದಾರೆ. ನಿನ್ನ ಮದುವೆಯನ್ನ ಸುಸೂತ್ರವಾಗಿ ಮಾಡಿಸಬೇಕು ಎಂದು ನಾವು ಅಂದುಕೊಂಡಿದ್ದರೆ ನೀನು ಈ ರೀತಿ ಮಾತನಾಡುತ್ತಿದ್ದೀಯ ಎಂದು ಹೇಳಿದ್ದಾರೆ.
ಇದೇ ವೇಳೆ ಕಾವ್ಯಾ ಅವರ ಅಮ್ಮ ನಾವು ಬರುತ್ತೇವೆ ಎಂದಿದ್ದಕ್ಕೆ ನಮ್ಮನ್ನು ಬೇಡ ಎಂದಳು. ಇನ್ನು ಈಗ ಈ ರೀತಿ ಮಾತನಾಡುತ್ತಿದ್ದಾಳೆ ಎಂದು ಕುಸುಮ ಬಳಿ ಹೇಳಿದ್ದಾರೆ. ನಾನು ಬಂದಿದ್ದೀನಲ್ಲ ಎಲ್ಲವನ್ನು ಸರಿ ಮಾಡುತ್ತೇನೆ ಎಂದು ಕುಸುಮ ಹೇಳಿದ್ದಾರೆ. ಕಾರ್ ಡ್ರೈವರ್‌ಗೆ ಹುಡುಗನ ಮನೆಯ ಅಡ್ರೆಸ್ ಎಲ್ಲಿ ಬರುತ್ತದೆ ಎಂದು ಗೊತ್ತಿದ್ಯಾ ಎಂದು ಕೇಳಿದ್ದಕ್ಕೆ. ಆ ಮೇಡಂ ಗೊತ್ತಿದೆ ನೀವು ಬನ್ನಿ ನಾನು ಕರೆದುಕೊಂಡು ಹೋಗುತ್ತೇನೆ ಎಂದಿದ್ದಾನೆ ಇನ್ನು ಎಲ್ಲರೂ ಸಹ ಕಾರಿನಲ್ಲಿ ಕುಸುಮ ಅವರ ಮನೆಯ ಕಡೆಗೆ ಹೊರಟಿದ್ದಾರೆ.

ಶ್ರೇಷ್ಠ ಹಾಗೂ ಕಾವ್ಯಾಗೆ ತುಂಬಾ ಟೆನ್ಶನ್ ಶುರುವಾಗಿದೆ. ಏನಪ್ಪಾ ಇದು ಇವರನ್ನೇ ಕರೆದುಕೊಂಡು ಇವರ ಮನೆಯ ಕಡೆ ನಾವು ಹೋಗುತ್ತಿದ್ದೆವಲ್ಲ. ತಾಂಡವ್ ನನ್ನನ್ನೇ ಮದುವೆಯಾಗುತ್ತಿರುವುದು ಎಂಬುದು ಎನಾದರೂ ಗೊತ್ತಾದರೆ, ಈ ಕುಸುಮಾ ಆಂಟಿ ಸತ್ತೇ ಹೋಗುತ್ತಾರೆ ಎಂದು ಯೋಚನೆ ಮಾಡುತ್ತಾ ಇದ್ದಾಳೆ. ಕುಸುಮಾ ಮಾತ್ರ ಶ್ರೇಷ್ಠ ಹಾಗೂ ಶ್ರೀವರ ಅವರ ಜೊತೆಯಲ್ಲಿ ತನ್ನ ಮನೆಗೆ ಹೋಗುತ್ತಾ ಇದ್ದಾಳೆ.
ತಾಂಡವ್‌ಗೆ ಶುರುವಾಯ್ತು ಟೆನ್ಶನ್
ಒಮ್ಮೆ ಯೋಚನೆ ಮಾಡುತ್ತಾ ಇದ್ದಾನೆ ಅಮ್ಮ ಹಾಗೂ ಅಪ್ಪ ಇಬ್ಬರೂ ಹೊರಗೆ ಹೋಗಿದ್ದಾರೆ ಅವರು ಏನಾದರೂ ಶ್ರೇಷ್ಠ ಫ್ಯಾಮಿಲಿಯ ಜೊತೆ ಇಲ್ಲಿಗೆ ಬಂದರೆ ಏನು ಮಾಡೋದು ಎಂದು ಯೋಚನೆ ಮಾಡುತ್ತಿದ್ದಾನೆ. ಅಮ್ಮ ಹಾಗೂ ಅಪ್ಪ ಇಬ್ಬರೂ ಹೊರಗಡೆ ಹೋಗಿದ್ದಾರೆ ಆದರೆ ಯಾವ ಕೆಲಸಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿಲ್ಲ ಅವರು ಏನಾದರೂ ನಮ್ಮ ಮನೆಗೆ ಶ್ರೇಷ್ಠ ಜೊತೆಯಲ್ಲಿ ಬಂದರೆ ಕೆಲಸ ಕೆಟ್ಟು ಹೋಗುತ್ತದೆ ಎಂದು ತಾಂಡವ್ ಯೋಚನೆ ಮಾಡುತ್ತಿದ್ದಾನೆ.

ಶ್ರೇಷ್ಠ ಸಹ ಕಾರಿನಲ್ಲಿ ಕುಳಿತುಕೊಂಡು ಇದೇನಪ್ಪಾ ಕುಸುಮ ಆಂಟಿ ಜೊತೆಯೇ ಅವರ ಮನೆಗೆ ನಾನು ಹೋಗುತ್ತಿದ್ದೇನೆ. ಅವರಿಗೆ ಸತ್ಯ ತಿಳಿದರೆ ಅವರಂತೂ ಎದೆ ಹೊಡೆದುಕೊಂಡು ಸತ್ತೇ ಹೋಗುತ್ತಾರೆ. ಈಗ ಏನಾದರೂ ಒಂದು ಮಾಡಬೇಕು ಎಂದು ಯೋಚನೆ ಮಾಡುತ್ತಾ ಇದ್ದಾಳೆ. ಹೇಗಾದರೂ ಮಾಡಿ ತಾಂಡವ್‌ಗೆ ಈ ವಿಷಯವನ್ನ ತಿಳಿಸಬೇಕು ಎಂದು ಶ್ರೇಷ್ಠ ಅಂದುಕೊಂಡಿದ್ದಾಳೆ. ಕುಸುಮ ಹಾಗೂ ಧರ್ಮರಾಜ್ ಇಬ್ಬರೂ ಶ್ರೀವರ ಅವರ ಜೊತೆಗೆ ಇದ್ದು ಅವರ ಮನೆಗೆ ಹೋಗುತ್ತಾರಾ ಅಥವಾ ಇಲ್ವ ಎಂಬುದು ಎಲ್ಲರಲ್ಲೂ ಕುತೂಹಲ ಹುಟ್ಟಿಸಿದೆ.
ಅಕ್ಕ ಪಕ್ಕದವರಿಗೆ ಪಾಠ ಮಾಡಿದ ಭಾಗ್ಯಾ
ಭಾಗ್ಯಾ ಮನೆಗೆ ಬಂದಿದ್ದಾಳೆ ಎಂದು ಮಾತನಾಡಿಸಲು ಅಕ್ಕ ಪಕ್ಕದವರು ಬಂದಿದ್ದಾರೆ. ಇದೇ ವೇಳೆ ಭಾಗ್ಯಳ ಬಳಿ ಯಾವುದೋ ವಿಚಾರವನ್ನ ಮಾತನಾಡಿದ್ದಾರೆ ಭಾಗ್ಯಗೆ ಇದು ಇಷ್ಟವಾಗಲಿಲ್ಲ. ಇನ್ನು ಕೋಪಗೊಂಡ ಭಾಗ್ಯ ಮನುಷ್ಯನಿಗೆ ಯಾವುದರಲ್ಲೂ ಸಹ ನೆಮ್ಮದಿ ಅನ್ನುವುದೇ ಇಲ್ಲ. ಹುಟ್ಟಿನಿಂದ ಸಾಯುವವರೆಗೂ ಹೆಣ್ಣಾದವಳು ಒಂದಲ್ಲ ಒಂದು ಸಂಕೋಲೆಯ ಒಳಗೆ ಬದುಕನ್ನ ಸಾಗಿಸಬೇಕಾಗಿದೆ ಎಂದು ಹೇಳಿದ್ದಾಳೆ. ಚಳಿ ಬಂದರೆ ಕೆಟ್ಟ ಚಳಿ ಎನ್ನುತ್ತಾರೆ ಬೇಸಿಗೆ ಬಂದರೆ ಬಿಸಿಲು ಎನ್ನುತ್ತಾರೆ. ಮಳೆಗಾಲ ಬಂದರೆ ಮಳೆ ಎನ್ನುತ್ತಾರೆ ಈ ಮನುಷ್ಯರು ಮೆಚ್ಚುವ ವಸ್ತು ಈ ಭೂಮಿಯ ಮೇಲೆ ಇಲ್ಲ ಎಂದು ಹೇಳಿದ್ದಾಳೆ.
ಗಂಡನ ಮನೆಯಲ್ಲಿ ಇದ್ದರೆ ಗಂಡನ ಮನೆಯಲ್ಲಿ ಇದ್ದಾಳೆ ಎನ್ನುತ್ತಾರೆ ಅಥವಾ ಗಂಡನನ್ನ ಬಿಟ್ಟು ತವರಿಗೆ ಬಂದರೆ ಪ್ರತಿದಿನವೂ ಆಡಿಕೊಳ್ಳುತ್ತಾರೆ. ಹೆಣ್ಣು ಮಗಳು ಹುಟ್ಟಿದ ದಿನದಿಂದ ಸಾಯುವ ತನಕ ಯಾವುದಾದರೂ ಒಂದು ಸಂಕೋಲೆಯಲ್ಲಿಯೇ ಬದುಕನ್ನ ನಡೆಸಬೇಕಾಗಿದೆ. ಅದು ಸಹ ನಾಲ್ಕು ಜನರು ಏನು ಅಂದುಕೊಳ್ಳುತ್ತಾರೋ ಎಂಬುದನ್ನು ನೆನೆಸಿಕೊಂಡೆ ಜೀವನವನ್ನು ಸಾಗಿಸಿ ಬಿಡುತ್ತಾಳೆ ಎಂದು ಭಾಗ್ಯ ಅಕ್ಕಪಕ್ಕದ ಮನೆಯವರಿಗೆ ಪಾಠವನ್ನ ಮಾಡಿದ್ದಾಳೆ. ಭಾಗ್ಯದ ಮಾತುಗಳನ್ನ ಕೇಳುತ್ತಿರುವ ಸುನಂದ ಹಾಗೂ ಆಕೆ ಆ ಗಂಡನಿಗೆ ಬಹಳಷ್ಟು ಖುಷಿಯಾಗುತ್ತಿದೆ.


Click it and Unblock the Notifications











