Bhagyalakshmi Serial: ಕೆಳಗೆ ಬಿದ್ದ ಕುಸುಮಾ..?! ಕ್ಯಾನ್ಸಲ್ ಆಗುತ್ತಾ ಗಂಡಿನ ಮನೆಗೆ ಹೋಗುವ ಪ್ರೋಗ್ರಾಮ್..?
ಭಾಗ್ಯಲಕ್ಷ್ಮಿ ಧಾರಾವಾಹಿ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಾ ಮುಂದೆ ಸಾಗುತ್ತಾ ಇದೆ. ತಾಂಡವ್ ಎರಡು ಬಾರಿ ಸಿಕ್ಕಿ ಬೀಳಬೇಕಿತ್ತು. ಆದರೆ, ಯಾವುದೋ ಕಾರಣಾಂತರಗಳಿಂದ ಕುಸುಮಾ ಕಣ್ಣಿಗೆ ಮಣ್ಣೆರೆಚಿ ತಪ್ಪಿಸಿಕೊಂಡಿದ್ದನು. ಈ ಬಾರಿಯೂ ಸಹ ಕುಸುಮಾ ತನ್ನ ಮಗನನ್ನು ನೋಡಲು ಹೋಗುವ ವೇಳೆ ಶ್ರೇಷ್ಠ ಮತ್ತೊಂದು ಪ್ಲಾನ್ ಮಾಡುವ ಮೂಲಕ ಕುಸುಮಾಳ ಕಾಲಿಗೆ ಪೆಟ್ಟು ಮಾಡಿದ್ದಾಳೆ. ಇದರಿಂದಾಗಿ ಧಾರಾವಾಹಿಯಲ್ಲಿ ಒಂದು ರೋಚಕ ಟ್ವಿಸ್ಟ್ ಸಿಕ್ಕಿದೆ.
ಶ್ರೇಷ್ಠಾ ಈ ಮೊದಲೇ ತಾಂಡವ್‌ಗೆ ಮೆಸೇಜ್ ಮಾಡಿದ್ದಳು ಒಂದು ದೊಡ್ಡದಾದ ಸಮಸ್ಯೆ ಉದ್ಭವವಾಗಿದೆ ಎಂದು. ಇದೆ ವೇಳೆ ತಾಂಡವ್ ಶ್ರೇಷ್ಠಗೆ ಕರೆ ಮಾಡಿ ಏನಾಯಿತು ಎಂದು ಕೇಳಿದ್ದನು. ನಿನ್ನ ತಂದೆ ತಾಯಿ ಕೂಡ ಗಂಡು ನೋಡುವ ಶಾಸ್ತ್ರಕ್ಕೆ ಬರುತ್ತಾ ಇದ್ದಾರೆ ಎಂದಿದ್ದಳು. ಇನ್ನು ತಾಂಡವ್‌ಗೆ ತನ್ನ ತಂದೆ ತಾಯಿ ಮನೆಗೆ ಬರುತ್ತಾ ಇದ್ದಾರೆ ಎಂದು ಕೇಳಿದ ಮೇಲೆ ದೊಡ್ಡದೊಂದು ಗಂಡಾಂತರ ಶುರುವಾಗಿದೆ ಎಂದು ಎನಿಸಿದೆ. ಇದಕ್ಕಾಗಿ ಶ್ರೇಷ್ಠ ಬಳಿಯಲ್ಲಿ ಹೇಗಾದರೂ ಅವರು ಬರುವುದನ್ನು ತಪ್ಪಿಸು. ನಮ್ಮ ಮನೆಗೆ ಇಂದು ಗಂಡು ನೋಡುವ ಶಾಸ್ತ್ರಕ್ಕೆ ಯಾರು ಬರಬಾರದು. ಆ ರೀತಿ ಏನಾದರೂ ಪ್ಲಾನ್ ಮಾಡಿ ಕ್ಯಾನ್ಸಲ್ ಮಾಡಿಸು ಎಂದು ಹೇಳಿದ್ದಾನೆ.

ಈ ಕಡೆ ತನ್ವಿ ರೂಮಿನಲ್ಲಿ ಲಾಕ್ ಆಗಿದ್ದು ಅಪ್ಪ ಬಾಗಿಲು ತೆಗಿರಿ ಎಂದು ಕೂಗಿ ಕೊಳ್ಳುತ್ತಾ ಇದ್ದಾಳೆ. ಆದರೆ ತಾಂಡವ್‌ಗೆ ತನ್ನ ಆತಂಕವೇ ದೊಡ್ಡದಾಗಿದೆ. ಇದಕ್ಕಾಗಿ ಶ್ರೇಷ್ಠಗೆ ಬೈಯುತ್ತಾ ಇದ್ದಾನೆ. ಇನ್ನು ತಾಂಡವ್ ಬಾಡಿಗೆ ತಾಯಿ ಸುಂದರಿ ಮನೆಯಯನ್ನೆಲ್ಲ ಹುಡುಕುತ್ತಾ ಇದ್ದಾಳೆ . ಕುಸುಮಾ ರೂಮ್‌ಗೆ ಹೋಗಿರುವ ಅವಳು ರೂಮಿನಲ್ಲಿ ಏನೇನು ಇದೆ ಎಂದು ಹುಡುಕಾಟ ನಡೆಸಿದ್ದಾಳೆ. ಇದೇ ವೇಳೆ ಹೂಕುಂಡವನ್ನು ಕೆಳಗಡೆ ಬೀಳಿಸಿದ್ದಾಳೆ. ತಾಂಡವ್ ರೂಮಿಗೆ ಬಂದವನೇ ಇಲ್ಲೇನು ಮಾಡುತ್ತಾ ಇದ್ದೀಯ ಎಂದು ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಮನೆ ಯಾವ ರೀತಿ ಇದೆ ಎಂದು ನೋಡುತ್ತಿದ್ದೇನೆ ಎಂದು ಸುಳ್ಳು ಹೇಳಿದ್ದಾಳೆ.
ಕುಸುಮಾ ಕಾಲಿಗೆ ಆಯ್ತು ಪೆಟ್ಟು, ಶ್ರೇಷ್ಠಗೆ ಮಂಗಳಾರತಿ!
ಕುಸುಮಾ ಶ್ರೇಷ್ಠ ಯಾವ ರೀತಿ ಆಡುತ್ತಿದ್ದಾಳೆ ಎಂಬುದನ್ನು ಗಮನಿಸುತ್ತಾ ಇದ್ದಾರೆ. ಅವರಿಗೆ ಶ್ರೇಷ್ಠ ಯಾವುದೋ ಒಂದು ಪ್ಲಾನ್ ಮಾಡುತ್ತಾ ಇದ್ದಾಳೆ ಎಂದು ಅನಿಸಿದೆ. ನನಗೆ ಬಾಯಾರಿಕೆಯಾಗುತ್ತಿದೆ ಹೋಗಿ ಎಲ್ಲರಿಗೂ ಜ್ಯೂಸ್ ತರುತ್ತೇನೆ ಎಂದು ಶ್ರೇಷ್ಠ ಓಡಿಹೋಗಿ ಜ್ಯೂಸ್ ತಂದಿದ್ದಾಳೆ. ಇದೇ ಸಂದರ್ಭದಲ್ಲಿ ಬೇಕು ಅಂತಲೇ ಕುಸುಮಾರನ್ನ ಕೆಳಗಡೆ ಬೀಳಿಸಿದ್ದಾಳೆ. ಕುಸುಮಾ ಕಾಲನ್ನ ಏಟು ಮಾಡಿಕೊಂಡಿದ್ದಾರೆ. ಇನ್ನು ಇದೇ ವೇಳೆ ಕುಸುಮಾ ನರಳಾಡುತ್ತಾ ಇದ್ದರೆ ಶ್ರೇಷ್ಠ ಖುಷಿ ಪಡುತ್ತಾ ಇದ್ದಾಳೆ. ಹೇಗೋ ನನ್ನ ಪ್ಲಾನ್ ಸಕ್ಸಸ್ ಆಗುವಂತೆ ಕಾಣುತ್ತಿದೆ ಎಂದು ಖುಷಿ ಪಟ್ಟಿದ್ದಾಳೆ.

ಅಯ್ಯೋ ಆಂಟಿ ಕೆಳಗಡೆ ಬಿದ್ದುಬಿಟ್ರಾ ಸಾರೀ ಕಾಲು ಎಡವಿ ಈ ರೀತಿಯೆಲ್ಲ ಆಯಿತು ಎಂದು ಶ್ರೇಷ್ಠ ಕುಸುಮಾ ಮುಂದೆ ನಾಟಕ ಆಡುತ್ತಿದ್ದಾಳೆ. ಇದಕ್ಕೆ ಕುಸುಮಾ ಶ್ರೇಷ್ಠಗೆ ಮುಚ್ಚೆ ಬಾಯಿ ನಾನು ನಿನ್ನನ್ನು ನೋಡುತ್ತಾ ಇದ್ದೇನೆ. ನೀನು ಬೇಕು ಅಂತಲೇ ನನ್ನನ್ನ ಬೀಳಿಸಿದೆ. ಈಗ ನೀನೇನು ನಾಟಕ ಆಡಬೇಡ ಎಂದು ಶ್ರೇಷ್ಠಾಗೆ ಬೈದಿದ್ದಾರೆ. ಇದಕ್ಕೆ ಶ್ರೇಷ್ಠ ಇಲ್ಲ ಆಂಟಿ ನಾನು ನೋಡದೆ ಎಡವಿ ನಿಮ್ಮನ್ನ ಬೆಳಿಸಿ ಬಿಟ್ಟೆ. ನಾನ್ಯಾಕೆ ನಾಟಕವಾಡಲಿ ಎಂದು ಸಮಜಾಯಿಸಿ ಕೊಡುತ್ತಿದ್ದಾಳೆ. ಧರ್ಮರಾಜ್ ಅವರು ಕುಸುಮಾಗೆ ಏನೋ ಆಯಿತು ಎಂದು ಗಾಬರಿ ಮಾಡಿಕೊಂಡಿದ್ದಾರೆ. ಯಶೋಧ ಹಾಗೂ ಶ್ರೀವರ ಅವರಿಗೂ ಸಹ ಟೆನ್ಶನ್ ಆಗುತ್ತಿದೆ.
ಗಂಡಿನ ಮನೆಗೆ ಹೋಗೋಣ ಎಂದ ಕುಸುಮಾ!
ಕುಸುಮಾಗೆ ಶ್ರೇಷ್ಠ ಏನೆಲ್ಲ ಮಾಡುತ್ತಿದ್ದಾಳೆ ಎಂಬುದನ್ನು ತಿಳಿದಿದೆ. ಯಶೋಧ ಹಾಗೂ ಶ್ರೀವರ ಇಬ್ಬರಿಗೂ ಸಹ ಕುಸುಮಾಗೆ ತಮ್ಮ ಮಗಳು ಮಾಡಿರುವ ಪ್ಲಾನ್ ಬಗ್ಗೆ ತಿಳಿಸಿದ್ದಾರೆ. ಈ ರೀತಿಯಲ್ಲ ಮಾಡಿದರೆ ನಾವು ಗಂಡಿನ ಮನೆಗೆ ಹೋಗುವುದನ್ನು ಕ್ಯಾನ್ಸಲ್ ಮಾಡುತ್ತೇವೆ ಎಂದುಕೊಂಡು ಇವಳು ಈ ರೀತಿಯಲ್ಲ ಆಟವಾಡುತ್ತಿದ್ದಾಳೆ ಎಂದು ಕುಸುಮಾ ಹೇಳಿದ್ದಾರೆ. ನಾವು ಯಾವುದೇ ಕಾರಣಕ್ಕೂ ಗಂಡಿನ ಮನೆಗೆ ಇಂದು ಹೋಗೋದನ್ನು ನಿಲ್ಲಿಸಬಾರದು. ನೀವೆಲ್ಲರೂ ಗಂಡಿನ ಮನೆಗೆ ಹೋಗಿ ನಾನು ನನ್ನ ಮಗನಿಗೆ ಫೋನ್ ಮಾಡಿ ಕರೆಸಿಕೊಂಡು ಮನೆಗೆ ಹೋಗುತ್ತೇನೆ ಎಂದು ಹೇಳುತ್ತಾ ಇದ್ದಾರೆ. ಶ್ರೇಷ್ಠ ಮಾಡಿರುವ ಪ್ಲಾನ್ ವರ್ಕ್ ಔಟ್ ಆಗುತ್ತಾ ಇಲ್ವಾ ಅನ್ನೋದೇ ಕುತೂಹಲ.


Click it and Unblock the Notifications











