Bhagyalakshmi: ಭಯದಿಂದ ಮೂರ್ಛೆ ಹೋದ ತನ್ವಿ: ಶ್ರೇಷ್ಠ ಕುಟುಂಬ ಮನೆ ಒಳಗೆ ಲಾಕ್..?!

By ಶೃತಿ ಹರೀಶ್ ಗೌಡ

ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಪ್ರತಿದಿನವೂ ಒಂದೊಂದು ಟ್ವಿಸ್ಟ್ ಬರುತ್ತಲೇ ಇದೆ. ಈಗ ಶ್ರೇಷ್ಠ ಫ್ಯಾಮಿಲಿ ಗಂಡು ನೋಡುವ ಶಾಸ್ತ್ರವನ್ನ ಹಮ್ಮಿಕೊಂಡಿದ್ದು ತಾಂಡವ್ ಮನೆಗೆ ಬಂದಿದ್ದಾರೆ. ಇನ್ನು ತಾಂಡವ್ ಮನೆಗೆ ಬರುವಷ್ಟರಲ್ಲಿ ಎರಡು ವಾರ ಕಳೆದು ಹೋಗಿದೆ ಇದಕ್ಕಾಗಿ ಪ್ರೇಕ್ಷಕರು ಬೇಸರವನ್ನ ವ್ಯಕ್ತಪಡಿಸುತ್ತಾ ಇದ್ದಾರೆ. ಇದೇ ಮೊದಲ ಬಾರಿಗೆ ಇಷ್ಟು ದೊಡ್ಡದಾಗಿ ಸ್ಟೋರಿಯನ್ನ ಎಳೆಯುತ್ತಾ ಇದ್ದೀರಾ ನಾವು ನಿಮ್ಮಿಂದ ಇದನ್ನ ನಿರೀಕ್ಷೆ ಮಾಡಿರಲಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಇಷ್ಟು ದಿ‌ನ ಸ್ಟೋರಿ ತುಂಬಾ ಫಾಸ್ಟ್ ಆಗಿ ಸಾಗುತ್ತಾ ಇತ್ತು. ಆದರೆ ಇತ್ತೀಚಿಗೆ ಯಾಕೆ ನೀವು ಸಹ ಸ್ಟೋರಿಯನ್ನು ತುಂಬಾ ಎಳೆಯುತ್ತಿದ್ದೀರಾ ಎಂದೆಲ್ಲಾ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆದಷ್ಟು ಬೇಗ ತಾಂಡವ್ ಹಾಗೂ ಶ್ರೇಷ್ಠ ಸಂಬಂಧ ಮನೆಯವರಿಗೆ ಗೊತ್ತಾಗುವಂತೆ ಮಾಡುತ್ತೀರೋ ಇಲ್ವೋ ಎಂದೆಲ್ಲಾ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಕಳೆದೆರಡು ವಾರದಿಂದಲೂ ಸಹ ಶ್ರೇಷ್ಠ ಫ್ಯಾಮಿಲಿ ಹಾಗೂ ತಾಂಡವ್ ನಡುವೆ ಸರ್ಕಸ್ ನಡೆಯುತ್ತಿದೆ. ಇದನ್ನೆಲ್ಲಾ ಆದಷ್ಟು ಬೇಗ ಮುಗಿಸಿ ಎಂದು ಭಾಗ್ಯಲಕ್ಷ್ಮಿ ಧಾರಾವಾಹಿ ತಂಡವನ್ನು ಪ್ರೇಕ್ಷಕರು ಕೇಳಿಕೊಳ್ಳುತ್ತಾ ಇದ್ದಾರೆ.

colors-kannada-bhagyalakshmi-serial

ಭಾಗ್ಯ ಮನೆಗೆ ಬಂದವಳೇ ಸೀದಾ ಹೋಗಿ ತನ್ವಿ ರೂಮನ್ನ ತೆಗೆದಿದ್ದಾಳೆ. ಇದೇ ವೇಳೆ ತನ್ವಿ ಪ್ರಜ್ಞೆಯನ್ನು ತಪ್ಪಿ ಬಿದ್ದಿದ್ದಾಳೆ. ಭಾಗ್ಯಗೆ ತುಂಬಾ ಗಾಬರಿಯಾಗಿ ತಾಂಡವ್‌ನನ್ನು ಜೋರಾಗಿ ಕರೆದಿದ್ದಾಳೆ. ರೂಮ್ ಒಳಗಡೆ ಬಂದ ತಾಂಡವ್ ಗಾಬರಿಯಿಂದ ಏನಾಯಿತು ಎಂದು ಕೇಳಿದ್ದಾನೆ. ಇದಕ್ಕೆ ತನ್ವಿ ಮಾತನಾಡುತ್ತಿಲ್ಲ ದಯವಿಟ್ಟು ಬೇಗ ಮನೆಗೆ ಡಾಕ್ಟರ್ ಅನ್ನ ಕರೆಯಿಸಿ, ಎಂದು ಭಾಗ್ಯ ಹೇಳಿದ್ದಾಳೆ. ತಾಂಡವ್ ಡಾಕ್ಟರನ್ನು ಮನೆಗೆ ಕರೆಸೋದು ಬೇಡ. ನಾವೇ ಆಸ್ಪತ್ರೆಗೆ ಹೋಗಿ ಬರೋಣ ಎಂದು ಭಾಗ್ಯಳಿಗೆ ಹೇಳಿ ಮಗಳನ್ನು ಎತ್ತುಕೊಂಡಿದ್ದಾನೆ.

ಕಣ್ಣು ಬಿಟ್ಟ ತನ್ವಿ, ಬೇಸರದಲ್ಲಿ ತಾಂಡವ್!

ಕಾರಿನ ಒಳಗೆ ಕರೆದುಕೊಂಡು ಹೋಗಾಗ ತನ್ವಿ ಸ್ವಲ್ಪ ಸ್ವಲ್ಪ ಕಣ್ಣು ಬಿಟ್ಟಿದ್ದಾಳೆ. ಇದೇ ವೇಳೆ ಕೆಮ್ಮಿದ್ದು ಭಾಗ್ಯ ನೀರನ್ನು ಕುಡಿಸಿದ್ದಾಳೆ. ಅಮ್ಮ ಪಪ್ಪಾ ರೂಮನ್ನು ಲಾಕ್ ಮಾಡಿಕೊಂಡು ಹೋಗಿದ್ದರು ಎಂದು ಭಯ ಬಿದ್ದಿದ್ದಾಳೆ. ಅಷ್ಟರಲ್ಲಿ ತಾಂಡವ್‌ಗೆ ತನ್ನ ತಪ್ಪಿನ ಅರಿವಾಗಿದೆ. ಎಷ್ಟು ಗಾಬರಿ ಮಾಡಿಕೊಂಡಿದ್ದಾಳೆ ಇದೆಲ್ಲ ಬೇಸರವನ್ನು ಮಾಡಿಕೊಂಡಿದ್ದಾನೆ. ಭಾಗ್ಯ ತನ್ನ ಗಂಡ ಒಳ್ಳೆಯವನು ಎಂದು ಮಕ್ಕಳ ಮುಂದೆ ಬಿಂಬಿಸಲು ಬ್ಯುಸಿ ಇದ್ದರು ಹಾಗಾಗಿ ಈ ರೀತಿಯಲ್ಲ ಆಗಿದೆ ಎಂದು ಪರ ವಹಿಸಿಕೊಂಡಿದ್ದಾಳೆ.

colors-kannada-bhagyalakshmi-serial

ಈ ಕಡೆ ಶ್ರೇಷ್ಠ ಕುಟುಂಬ ಮನೆಯೊಳಗಡೆ ಲಾಕ್ ಆಗಿದೆ. ಶ್ರೇಷ್ಠಗೆ ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ. ಶ್ರೇಷ್ಠ ತಂದೆ ಶ್ರೀವರ ತಾಂಡವ್ ಮೇಲೆ ಕೋಪವನ್ನ ಮಾಡಿಕೊಂಡಿದ್ದಾರೆ. ಈ ಮನುಷ್ಯನಿಗೆ ಏನಾಗಿದೆ ಯಾಕೆ ಈ ರೀತಿ ನಮ್ಮನ್ನೆಲ್ಲ ಲಾಕ್ ಮಾಡಿಕೊಂಡು ಹೊರಗಡೆ ಹೋಗಿದ್ದಾನೆ. ಅಷ್ಟಾದರೂ ಕನಿಷ್ಠ ಜ್ಞಾನ ಬೇಡ್ವಾ? ನಾವು ಹೊರಗಡೆ ಹೋಗುವುದಾದರೂ ಹೇಗೆ ಎಂದೆಲ್ಲಾ ತಾಂಡವ್‌ಗೆ ಬೈಯುತ್ತಾ ಇದ್ದಾರೆ.

ಆಸ್ಪತ್ರೆಯಿಂದ ಮನೆಗೆ ಬಂದ ಕುಸುಮಾ, ಶಾಕ್ ಆದ ಶ್ರೇಷ್ಠ!

ಕುಸುಮಾರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡು ಮನೆಗೆ ಕರೆದುಕೊಂಡು ಬರಲಾಗಿದೆ. ಇನ್ನು ಶ್ರೇಷ್ಠ ಕುಸುಮಾ ಬಂದಿದ್ದನ್ನ ಕಿಟಕಿಯಿಂದ ನೋಡಿ ಬಿಟ್ಟಿದ್ದಾಳೆ. ಕುಸುಮಾರನ್ನು ನೋಡಿ ಶಾಕ್ ಆಗಿ ನಿಂತುಕೊಂಡಿದ್ದಾಳೆ. ಅಯ್ಯೋ ದೇವರೇ ಏನು ಮಾಡೋದಪ್ಪ ನಾವು ಕುಸುಮಾ ಆಂಟಿ ಕೈಗೆ ಸಿಕ್ಕಿ ಬೀಳುತ್ತೇವೆ ಎಂಬ ಟೆನ್ಶನ್ ಈಗ ಶುರುವಾಗಿದೆ. ಆದರೆ ಶ್ರೇಷ್ಠ ತಂದೆ ಶ್ರೀವರ ಅವರು ತಾಂಡವ್ ಮಾಡಿರುವ ಕೆಲಸಕ್ಕೆ ಸಹಸ್ರನಾಮಾರ್ಚನೆ ಮಾಡುತ್ತಾ ಇದ್ದಾರೆ. ಇಂದು ಕುಸುಮಾ ಮುಂದೆ ಶ್ರೇಷ್ಠ ಫ್ಯಾಮಿಲಿ ಅವರು ಸಿಕ್ಕಿ ಬಿದ್ದು ತಾಂಡವ್ ಆಟಕ್ಕೆ ಬ್ರೇಕ್ ಬೀಳುತ್ತಾ ಎಂಬುದೇ ಕುತೂಹಲವಾಗಿದೆ.

More from Filmibeat

English summary
colors kannada Bhagyalakshmi serial 19th episode episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X