Bhagyalakshmi: ಮನೆಯವರ ಮುಂದೆ ಸಣ್ಣವನಾದ ತಾಂಡವ್: ಮಗನ ಮೇಲೆ ಕುಸುಮಾ ಕೋಪ!

By ಶೃತಿ ಹರೀಶ್ ಗೌಡ

ತಾಂಡವ್ ಹಾಗೂ ಶ್ರೇಷ್ಠ ತಮ್ಮ ನಾಟಕದಿಂದ ಎಲ್ಲರ ಮುಂದೆ ಸಿಕ್ಕಿಹಾಕಿಕೊಳ್ಳುವುದಿಲ್ಲ ಎಂದು ಪ್ರೇಕ್ಷಕರು ಅಂದುಕೊಂಡಿದ್ದರು. ಪ್ರೇಕ್ಷಕರ ಊಹೆ ನಿಜವಾಗಿದೆ. ಯಾಕೆಂದರೆ, ಇಷ್ಟು ಬೇಗ ತಾಂಡವ್ ಹಾಗೂ ಶ್ರೇಷ್ಠ ನಾಟಕ ಗೊತ್ತಾದರೆ ಸೀರಿಯಲ್ ಮುಂದೆ ಹೋಗೋದಿಲ್ಲ ಎಂಬುವುದು ಪ್ರೇಕ್ಷಕರ ಅಭಿಪ್ರಾಯವಾಗಿದೆ. ಇದಕ್ಕಾಗಿ ಇನ್ನೂ ಒಂದಷ್ಟು ದಿನ ಹಾಗೂ ಶ್ರೇಷ್ಠ ಪಾತ್ರ ಇದ್ದೇ ಇರುತ್ತದೆ ಎಂದು ಕಾಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಅದರಂತೆ ತಾಂಡವ್ ಹಾಗೂ ಶ್ರೇಷ್ಠ ಸಿಕ್ಕಿಬಿದ್ದಿಲ್ಲ. ಆದರೆ ಮನೆಯವರ ಮುಂದೆ ತಾನೇ ಕಳ್ಳನಾಗಿದ್ದಾನೆ ತಾಂಡವ್.

ಶ್ರೇಷ್ಠ ತಂದೆ ತಾಯಿ ತಾಂಡವ್‌ಗೆ ಚೆನ್ನಾಗಿ ಬೈದಿದ್ದಾರೆ. ಅದೇ ಗುಂಗಿನಲ್ಲಿ ತಾಂಡವ್ ಮನೆಗೆ ಬಂದಿದ್ದಾನೆ. ಇನ್ನು ಮನೆಗೆ ಬಂದಂತಹ ಕುಸುಮಾ ಮನೆಯಲ್ಲಿ ಕಳ್ಳತನವಾಗಿದೆ ಎಂದು ಭಯಭೀತರಾಗಿದ್ದಾರೆ. ಸುನಂದ ಅಡುಗೆ ಮನೆಗೆ ಹೋದವರೇ ಅಡುಗೆ ಮನೆಯಲ್ಲಿ ಸಕ್ಕರೆ ಹಾಲು ಎಲ್ಲವೂ ಸಹ ಚೆಲ್ಲಿದೆ ಎಂದು ಹೇಳಿದ್ದಾರೆ. ಯಾರಾದರೂ ಮನೆಗೆ ಬಂದು ಈ ರೀತಿ ಮಾಡಿದ್ದಾರಾ ಎಂದು ಕುಸುಮಾ ಅನುಮಾನ ಪಟ್ಟಿದ್ದಾರೆ. ಇದೇನಿದು ಟೀಯನ್ನು ಸಹ ಸರಿಯಾಗಿ ಮಾಡಿಲ್ಲ ಹಾಲನ್ನು ಸರಿಯಾದ ರೀತಿಯಲ್ಲಿ ಕುದಿಸಿಲ್ಲ. ಯಾರು ತಾಂಡವ್ ಟೀ ಮಾಡಿದ್ನಾ ಎಂದು ಕುಸುಮಾ ಅಂದುಕೊಂಡಿದ್ದಾರೆ.

colors-kannada-bhagyalakshmi-serial

ಈ ಕಡೆ ತಾಂಡವ್‌ನ ಡುಪ್ಲಿಕೇಟ್ ತಾಯಿಯಾಗಿ ಬಂದಿದ್ದ ಸುಂದರಿ ಮನೆಯಲ್ಲಿದ್ದ ಬೆಳ್ಳಿ ಸಾಮಾನುಗಳನ್ನೆಲ್ಲ ಕದ್ದುಕೊಂಡು ಹೋಗಿದ್ದಾಳೆ. ಅದು ಇನ್ನು ಯಾರ ಗಮನಕ್ಕೂ ಸಹ ಬಂದಿ.ಲ್ಲ ಅದೇನಾದರೂ ಎಲ್ಲರ ಆಗಮನಕ್ಕೆ ಬಂತು ಎಂದರೆ ಮನೆಗೆ ಯಾರೋ ಕಳ್ಳರು ನುಗ್ಗಿ ಕಳ್ಳತನ ಮಾಡಿದ್ದಾರೆ ಎಂಬುವುದು ಗೊತ್ತಾಗಲಿದೆ. ಸದ್ಯಕ್ಕೆ ಎಲ್ಲರೂ ತಾಂಡವ್ ಬರುವುದನ್ನೇ ಕಾಯುತ್ತಾ ಇದ್ದಾರೆ. ಯಾಕೆಂದರೆ ಮನೆಯಲ್ಲಿ ಏನಾಗಿದೆ ಎಂಬುವುದು ತಾಂಡವ್‌ಗೆ ಮಾತ್ರ ಗೊತ್ತಿದೆ. ಅದಕ್ಕಾಗಿ ತಾಂಡವ್‌ನ ದಾರಿಯನ್ನು ಕುಸುಮಾ, ಧರ್ಮರಾಜ್ ಕಾಯುತ್ತಾ ಇದ್ದಾರೆ. ಧರ್ಮರಾಜ್‌ರಂತು ಒಂದು ಹೆಜ್ಜೆ ಮುಂದೆ ಹೋಗಿ ತಾಂಡವ್ ನಮಗೆ ಗೊತ್ತಿಲ್ಲದೆ ಏನೋ ನಡೆಸುತ್ತಾ ಇದ್ದಾನೆ ಎಂದಿದ್ದಾರೆ.

ಮಗನ ಮೇಲೆ ಮುನಿಸಿಕೊಂಡ ಕುಸುಮಾ, ಮತ್ತಷ್ಟು ತುಪ್ಪ ಸುರಿದ ಸುನಂದಾ!

ತಾಂಡವ್ ಮನೆಗೆ ಬಂದಿದ್ದು ಕುಸುಮಾ ಮಗನ ಮೇಲೆ ಮುನಿಸಿಕೊಂಡಿದ್ದಾರೆ. ನಾನು ಅಲ್ಲಿ ಕಾಲು ಮುರಿದುಕೊಂಡು ಕುಳಿತಿದ್ದರು ಸಹ ನಿನಗೆ ನಿನ್ನ ಕೆಲಸವೇ ಹೆಚ್ಚಾಯಿತು ಎಂದು ಬೈದಿದ್ದಾರೆ. ತಾಂಡವ್ ಸಮಜಾಯಿಷಿ ಕೊಡಲು ಹೊರಟಾಗ ನೀನೇನು ಸಮಾಧಾನ ಮಾಡಲು ಬರಬೇಡ. ನಿನಗೆ ನನ್ನ ಮೇಲೆ ಪ್ರೀತಿ ಎಷ್ಟಿದೆ ಎಂಬುದು ನನಗೆ ತಿಳಿದು ಹೋಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

colors-kannada-bhagyalakshmi-serial

ಈ ಕಡೆ ಸುನಂದಾ ನಿನ್ನ ಅಮ್ಮ ರಾಜ-ರಾಜ ಎಂದು 100 ಬಾರಿ ನಿನ್ನ ಜಪ ಮಾಡಿದರು. ಅದರ ಹೊರೆತು ರಾಮನ ಜಪವನ್ನ ಮಾಡಿದರೆ ಅವರ ನೋವಾದರೂ ಕಮ್ಮಿ ಆಗುತ್ತಿತ್ತು ಎಂದು ಹೇಳಿದ್ದಾರೆ. ಭಾಗ್ಯಳನ್ನು ಕರೆದ ಕುಸುಮಾ ಭಾಗ್ಯ ನನ್ನನ್ನ ಕರೆದುಕೊಂಡು ರೂಮಿಗೆ ಬಿಡು ಇವನ ಜೊತೆ ನನಗೆ ಮಾತನಾಡಲು ಇಷ್ಟವಿಲ್ಲ ಎಂದಿದ್ದಾರೆ. ಕುಸುಮಾ ತಾಂಡವ್ ಮುಖವನ್ನು ನೋಡದೆ ಮೇಲೆ ಹೇಳಲು ಹೋಗಿದ್ದಾರೆ. ತಾಂಡವ್‌ಗೆ ತನ್ನ ಅಮ್ಮ ಈ ರೀತಿ ತನ್ನನ್ನು ದ್ವೇಷ ಮಾಡುತ್ತಿರುವುದಕ್ಕೆ ಬೇಸರವಾಗಿದೆ.

ಅಮ್ಮನ ಪ್ರಶ್ನೆಗೆ ಉತ್ತರವಿಲ್ಲ ತಾಂಡವ್ ಬಳಿ, ತಂದೆ ಮೇಲೆ ಕೋಪಗೊಂಡ ತನ್ವಿ

ಮನೆಗೆ ಯಾರಾದರೂ ಕಳ್ಳರು ಬಂದಿದ್ದರಾ ಎಂದು ಕುಸುಮಾ ತಾಂಡವ್ ಬಳಿ ಕೇಳಿದ್ದಾರೆ ಇಲ್ಲ ಅಮ್ಮ ಎಂದು ತಾಂಡವ್ ಹೇಳಿದ್ದಾನೆ. ನಂತರ ಇಲ್ಲಿ ಮೂರು ಕಪ್ ಟೀ ಲೋಟಗಳು ಇತ್ತು ಇದನ್ನ ಯಾರು ಮಾಡಿದ್ರು ಎಂದೆಲ್ಲ ಕೇಳಿದ್ದಕ್ಕೆ ತಾಂಡವ್ ಬಳಿ ಉತ್ತರವಿಲ್ಲ. ಇದೇ ವೇಳೆ ಭಾಗ್ಯ ನಾನು ಮನೆಗೆ ಬಂದಾಗ ಮನೆಯಲ್ಲಿ ಯಾರೋ ಇರುವಂತೆ ಸೌಂಡ್ ಬರುತ್ತಿತ್ತು ಎಂದು ಹೇಳಿದ್ದಾಳೆ.

ಇನ್ನು ತನ್ವಿ ಸಹ ತನ್ನ ತಂದೆಯನ್ನು ಪ್ರಶ್ನೆ ಮಾಡಿದ್ದಾಳೆ ಹಾಗಾದರೆ ನೀವು ಮನೆಯಲ್ಲೇ ಇದ್ದು ರೂಮ್ ಲಾಕ್ ಮಾಡಿದ್ರಾ ಎಂದು ಪ್ರಶ್ನೆ ಮಾಡಿದ್ದಾಳೆ. ಇದಕ್ಕೂ ಸಹ ತಾಂಡವ್ ಉತ್ತರ ನೀಡಿದ್ದಾನೆ. ನಾನು ನಿನಗೆ ಪಿಜ್ಜಾ ತಂದು ಕೊಟ್ಟು ಹೊರಗಡೆ ಹೋಗಿದ್ದೆ ಎಂದು ಹೇಳಿದ್ದಾನೆ. ಇದಕ್ಕೆ ಮನೆಯವರೆಲ್ಲರೂ ಸಹ ತಾಂಡವನ್ನ ಮುಖವನ್ನ ನೋಡಿದ್ದಾರೆ. ಮನೆಯವರ ಮುಂದೆ ತಾಂಡವ್ ಕಳ್ಳನಂತೆ ತಲೆತಗ್ಗಿಸಿದ್ದಾನೆ.

More from Filmibeat

English summary
colors kannada Bhagyalakshmi serial september 21th episode details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X