Bhagyalakshmi: ಗಣೇಶನನ್ನು ತಯಾರಿಸಿದ ಭಾಗ್ಯ- ತಾಂಡವ್; ವಿಘ್ನ ನಿವಾರಿಸು ಎಂದು ಪ್ರಾರ್ಥಿಸಿದ ಕುಸುಮಾ

By ಶೃತಿ ಹರೀಶ್ ಗೌಡ

ತಾಂಡವ್ ಮನೆಯಲ್ಲಿ ಶ್ರೇಷ್ಠಾ ಕುಟುಂಬ ಬಂದು ಟೀ ಕುಡಿದು ನಂತರ ಹಿಂಭಾಗದ ಮೂಲಕ ವಾಪಸ್ ಹೋಗಿದ್ದರು. ಇನ್ನು ಇದೇ ವೇಳೆ ಮನೆಯಲ್ಲಿ ಕಳ್ಳತನವಾಗಿದೆ ಎಂದೇ ಎಲ್ಲರೂ ಸಹ ತಿಳಿದುಕೊಂಡಿದ್ದರು. ತಾಂಡವ್ ಮನೆಗೆ ಕ್ಲೈಂಟ್ಸ್ ಬಂದಿದ್ದರು ನಾನೇ ಅವರಿಗೆ ಟೀಯನ್ನ ಮಾಡಿಕೊಟ್ಟಿದ್ದೆ ಹಾಗಾಗಿ ಎಲ್ಲವೂ ಚೆಲ್ಲಿ ಹೋಗಿದೆ ಎಂದು ಮ್ಯಾನೇಜ್ ಮಾಡಿದ್ದನು. ಮನೆಯಲ್ಲಿ ಯಾರು ತಾಂಡವ್ ಮಾತನ್ನ ನಂಬುವ ಪರಿಸ್ಥಿತಿಯಲ್ಲಿ ಇರಲಿಲ್ಲ. ‌ಆದರೂ ಸಹ ಏನೂ ಒಂದು ಹೇಳುವ ಮೂಲಕ ತಾಂಡವ್ ಎಲ್ಲರ ಬಾಯನ್ನ ಮುಚ್ಚಿಸಿದನು. ಭಾಗ್ಯಗೆ ತನ್ನ ಗಂಡನ ಮೇಲೆ ಸಣ್ಣದೊಂದು ಅನುಮಾನ ಶುರುವಾಗಿದೆ. ಯಾಕೆಂದರೆ ತಾಂಡವನನ್ನ ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿರುವುದು ಭಾಗ್ಯ ಮಾತ್ರ.

ಶ್ರೇಷ್ಠಾ ಮನೆಯವರು ಶ್ರೇಷ್ಠಾಗೆ ತರುಣ್ ಜೊತೆ ನಿನ್ನ ಮದುವೆ ಮಾಡುವುದಿಲ್ಲ ಎಂದು ಹೇಳುತ್ತಾ ಇದ್ದಾರೆ. ನಮಗೆ ಅವನ ಹಾವಭಾವ ಸ್ವಲ್ಪ ಇಷ್ಟವಾಗಲಿಲ್ಲ ನೀನು ಅವನನ್ನ ಯಾವ ರೀತಿ ಪ್ರೀತಿ ಮಾಡಿದೆ ಎಂದು ಕೇಳುತ್ತಿದ್ದಾರೆ. ಅವರು ನಿನಗೆ ಮಾಟ-ಮಂತ್ರ ಮಾಡಿಸಿರಬೇಕು ಎಂದು ಶ್ರೇಷ್ಠಾ ತಾಯಿ ಹೇಳುತ್ತಾ ಇದ್ದಾರೆ. ಅವರನ್ನು ನೋಡಿದರೆ ಅದೇ ರೀತಿ ಅನಿಸುತ್ತದೆ ಎಂದು ಹೇಳಿದ್ದಾರೆ. ನೀವು ಎನೇ ಮಾಡಿದರೂ ಸರಿಯೇ ನಾನು ಅವನನ್ನೇ ನಾನು ಮದುವೆಯಾಗೋದು ಎಂದು ಹೇಳಿದ್ದಾಳೆ. ಶ್ರೇಷ್ಠಾ ತಂದೆ ತಾಯಿಗೆ ಶ್ರೇಷ್ಠಾ ವರ್ತನೆಯನ್ನು ಕಂಡು ತುಂಬಾ ಬೇಸರವಾಗುತ್ತಿದೆ.

Colors kannada Bhagyalakshmi serial Written Update on september 25th episode

ತಾಂಡವ್ ತನಗೆ ಬಂದು ಒದಗಿದ ಆಪತ್ತಿನಿಂದ ಪಾರಾಗಿದ್ದಕ್ಕೆ ನಿಟ್ಟುಸಿರು ಬಿಟ್ಟಿದ್ದಾನೆ. ಹೇಗೋ ಎನೋ ಒಂದು ಮ್ಯಾನೇಜ್ ಮಾಡಿ ಬಚಾವಾದೆ ಎಂದುಕೊಂಡಿದ್ದಾನೆ. ಕುಸುಮಾಗೆ ಮಾತ್ರ ತನ್ನ ಮಗನ ಮೇಲೆ ಬೇಸರವಾಗಿದೆ. ಯಾಕೆಂದರೆ ನಾನು ಆಸ್ಪತ್ರೆಯಲ್ಲಿದ್ದರೂ ಸಹ ನನ್ನ ಮಗ ನನ್ನನ್ನ ನೋಡಲು ಬರಲಿಲ್ಲ. ಇವನಿಗೆ ಈಗಲೇ ನಮ್ಮ ಮೇಲೆ ತಾತ್ಸರ ಉಂಟಾಗಿದೆ ಎಂದು ಬೇಸರ ಮಾಡಿಕೊಂಡಿದ್ದಾರೆ. ನನ್ನ ಸೊಸೆಯೇ ನನ್ನ ಪಾಲಿಗೆ ಇರುವುದು ಎಂದು ಮಗನ ಮುಂದೆಯೇ ಬೇಸರ ವ್ಯಕ್ತಪಡಿಸಿದ್ದು, ತಾಂಡವ್ ಅಮ್ಮ ಇನ್ನೊಮ್ಮೆ ಈ ರೀತಿ ಹೇಳಬೇಡ ಎಂದು ಕೈಹಿಡಿದುಕೊಂಡಿದ್ದಾನೆ.

ಗಣೇಶ ಹಬ್ಬದ ಸಂಭ್ರಮ, ಮಣ್ಣಿನ ಗಣಪತಿ ಮಾಡಿದ ದಂಪತಿ

ಗುಂಡಣ್ಣ ಅರ್ಚಕರು ಹೇಳಿದ್ದನ್ನ ಕೇಳಿಸಿಕೊಂಡು ಮಣ್ಣನ್ನು ಮನೆಗೆ ತಂದಿದ್ದಾನೆ. ಅದರಿಂದ ಭಾಗ್ಯ ಹಾಗೂ ತಾಂಡವ್ ಇಬ್ಬರು ಸಹ ಮಣ್ಣಿನ ಮೂರ್ತಿಯನ್ನು ಮಾಡಲು ತಯಾರು ಮಾಡಿದ್ದಾರೆ. ಕುಸುಮಾ ಇಬ್ಬರಿಗೂ ಸಹ ಪೂಜೆ ಮಾಡಿ ಮಡಿಯುಟ್ಟು ಗಣಪನ ಮೂರ್ತಿಯನ್ನು ಮಾಡಿ ಎಂದು ಹೇಳಿದ್ದಾರೆ. ಅದರಂತೆ ಭಾಗ್ಯ ಮಣ್ಣಿಗೆ ಅರಿಶಿನ ಕುಂಕುಮವನ್ನು ಹಾಕಿ ಪೂಜೆಯನ್ನ ಮಾಡಿ ಗಣಪತಿಯ ವಿಗ್ರಹ ಮಾಡಲು ಸಿದ್ಧತೆ ಮಾಡಿದ್ದಾಳೆ. ಭಾಗ್ಯ ಮಣ್ಣನ್ನ ಕಲಸುತ್ತಿದ್ದರೆ ತಾಂಡವ್ ನೀರನ್ನು ಹಾಕಿ ಸಹಾಯ ಮಾಡುತ್ತಿದ್ದಾನೆ. ಮನೆಯಲ್ಲಿ ಗಣಪತಿ ಹಬ್ಬದ ಸಂಭ್ರಮ ಮನೆ ಮಾಡಿದೆ.

Colors kannada Bhagyalakshmi serial Written Update on september 25th episode

ವಿಘ್ನ ಪರಿಹರಿಸಲು ವಿನಾಯಕನನ್ನ ಬೇಡಿಕೊಂಡ ಕುಸುಮಾ

ಇತ್ತೀಚಿನ ದಿನಗಳಲ್ಲಿ ತಾಂಡವ್ ಶ್ರೇಷ್ಠಾ ಸಹವಾಸ ಮಾಡಿರುವುದು ಮನೆಯವರ ನೆಮ್ಮದಿಗೂ ಸಹ ಭಂಗ ತಂದಿದೆ. ಆದರೆ ಅದು ತಾಂಡವ್‌ನಿಂದ ಆಗುತ್ತಿದೆ ಎಂಬುದು ಮಾತ್ರ ಯಾರ ಗಮನಕ್ಕೂ ಬಂದಿಲ್ಲ. ಇದಕ್ಕಾಗಿ ಕುಸುಮಾ ವಿನಾಯಕನಲ್ಲಿ ನಮ್ಮ ಮನೆಗೆ ಬಂದಿರುವ ವಿಘ್ನಗಳನ್ನೆಲ್ಲ ಪರಿಹಾರ ಮಾಡು, ಹಾಗೆ ನನ್ನ ಮಗನಿಗೆ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುವ ಬುದ್ಧಿಯನ್ನು ದಯಪಾಲಿಸು ಎಂದು ಬೇಡಿಕೊಳ್ಳುತ್ತಾ ಇದ್ದಾರೆ. ನಮ್ಮ ಮನೆಯಲ್ಲಿ ಏನು ನಡೆಯುತ್ತಿದೆ ಎಂಬುದು ನಮಗೆ ತಿಳಿಯುತ್ತಿಲ್ಲ ಇದರಿಂದ ಪಾರು ಮಾಡು ಎಂದು ಬೇಡಿಕೊಂಡಿದ್ದಾರೆ.

ಕುಸುಮಾ ಸುನಂದಾ ಅವರನ್ನು ಮನೆಯಲ್ಲಿ ಇದ್ದು ಹಬ್ಬವನ್ನು ಮುಗಿಸಿಕೊಂಡು ಹೋಗಿ ಎಂದು ಹೇಳಿದ್ದಾರೆ. ‌ಪೂಜಾ ಹಾಗೂ ಸುನಂದಾ ಇಬ್ಬರು ಬೀಗರ ಮನೆಯಲ್ಲಿ ಹಬ್ಬವನ್ನು ಮಾಡಲು ಉಳಿದುಕೊಂಡಿದ್ದಾರೆ. ಗುಂಡಣ್ಣ ಹಾಗೂ ತನ್ವಿ ಇಬ್ಬರೂ ಸಹ ತುಂಬಾ ಖುಷಿಯಿಂದ ಹಬ್ಬ ಆಚರಿಸಬೇಕು ಎಂದುಕೊಂಡಿದ್ದಾರೆ.

More from Filmibeat

English summary
colors kannada Bhagyalakshmi serial 25th episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X