Bhagyalakshmi: ಕೊನೆಗೂ ಪೊಲೀಸ್ ಸ್ಟೇಷನ್‌ಗೆ ಹೋಗಲು ಒಪ್ಪಿಕೊಂಡ ತಾಂಡವ್, ಅಂಡು ಸುಟ್ಟ ಬೆಕ್ಕಿನಂತಹ ಸ್ಥಿತಿ!

By ಶೃತಿ ಹರೀಶ್ ಗೌಡ

ತಾಂಡವ್ ಈಗ ಕುಸುಮಾ ಕೈಯಲ್ಲಿ ಲಾಕ್ ಆಗಿದ್ದಾನೆ. ಯಾರು ಮನೆಗೆ ಬಂದಿದ್ದರು ಎಂಬ ವಿಚಾರವನ್ನು ಹೇಳುವಲ್ಲಿ ತಾಂಡವ್ ಈ ಬಾರಿ ವಿಫಲನಾಗಿದ್ದಾನೆ. ಒಂದರ ಮೇಲಂತೆ ಒಂದು ಸುಳ್ಳನ್ನು ಪೋಣಿಸಿ ಹೇಳುತ್ತಿದ್ದಾನೆ. ಆದರೂ ಸಹ ಕುಸುಮಾ ತಾಂಡವ್‌ನನ್ನು ಬಿಡುತ್ತಿಲ್ಲ. ಮನೆಗೆ ಬಂದಿದ್ದವರು ಯಾರು ಎಂಬುದನ್ನು ಮೊದಲು ತಿಳಿಸು, ಆದಾದ ಮೇಲೆ ನೀನು ಮಾತನಾಡುವೆಯಂತೆ. ‌ನನ್ನ ತವರು ಮನೆಯಿಂದ ಕೊಟ್ಟಿದ್ದ ಬೆಳ್ಳಿ ಸಾಮಾನುಗಳು ಬಹಳಷ್ಟು ಬೆಳೆ ಬಾಳುವಂತದ್ದು, ನೀನು ಇವಾಗ ದುಡಿಯುತ್ತಿರಬಹುದು. ಆದರೆ ತವರು ಮನೆ ಉಡುಗೊರೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನೀನು ದೊಡ್ಡ ಮನುಷ್ಯ ಆದರೆ ಅದು ನಿನ್ನಲ್ಲಿ ಮಾತ್ರ ಇರಲಿ ಎಂದು ಮಗನಿಗೆ ಬೈದಿದ್ದಾರೆ.

ತಾಂಡವ್ ಮನದಲ್ಲೇ ಶ್ರೇಷ್ಠಾಳನ್ನ ಬೈಯುತ್ತಿದ್ದಾನೆ. ಅವರ ಮನೆಯವರು ಬಂದಿದ್ದಕ್ಕೆ ಈ ರೀತಿ ಆಯಿತು. ನಾನು ಅಮ್ಮನ ಮುಂದೆ ಸಣ್ಣವನಾಗಬೇಕಾದ ಪರಿಸ್ಥಿತಿ ಬಂತು ಎಂದು ಬೇಸರ ಮಾಡಿಕೊಂಡಿದ್ದಾನೆ. ಇನ್ನು ಇದೇ ವೇಳೆ ಸುನಂದಾ ಮನೆಗೆ ಬಂದಿದ್ದವರನ್ನ ಒಳಗಡೆ ಯಾಕೆ ನೀವು ಕರೆದುಕೊಂಡು ಬರುವ ಕೆಲಸ ಮಾಡಿದಿರಿ ಎಂದು ಅಳಿಯನನ್ನು ಪ್ರಶ್ನೆ ಮಾಡಿದ್ದಾಳೆ. ಇದಕ್ಕೆ ತಾಂಡವ್ ಮಾನವೀಯತೆಯ ಗುಣದಿಂದ ನಾನು ಅವರನ್ನ ಮನೆಯೊಳಗೆ ಕರೆದುಕೊಂಡು ಬಂದು ಒಂದು ಲೋಟ ನೀರು ಕೊಟ್ಟೆ ಎಂದು ಹೇಳಿದ್ದಾನೆ .ಇದಕ್ಕೆ ಕುಸುಮಾಗೆ ಕೋಪ ಬಂದಿದೆ. ಅಲ್ಲಿ ಅಮ್ಮ ಕಾಲು ಮುರಿದುಕೊಂಡು ಬಿದ್ದಿದ್ದರೆ ಇಲ್ಲಿ ನೀನು ಸೇವೆ ಮಾಡುತ್ತಿದ್ದೀಯಾ ಎಂದು ಕೇಳಿದ್ದಾರೆ.

Colors kannada Bhagyalakshmi serial Written Update on september 28th episode

ನಿನಗೆ ನಿನ್ನ ಅಮ್ಮನಿಗಿಂತ ಬೇರೆ ಬೇರೆ ಅವರೇ ಹೆಚ್ಚಾದರೂ ಅಂದು ನೀನು ಬಾಯಿ ಮುಚ್ಚಿಕೊಂಡು ನನ್ನನ್ನ ನೋಡಲು ಬಂದಿದ್ದರೆ. ನನ್ನ ಮನೆಯವರು ಕೊಟ್ಟ ಬೆಳ್ಳಿ ಸಾಮಾಗ್ರಿಗಳು ನನ್ನ ಬಳಿಯೇ ಉಳಿದುಕೊಳ್ಳುತ್ತಿದ್ದವು. ಈಗ ನೋಡು ಯಾರೋ ಬಂದು ಬೆಳ್ಳಿ ಸಾಮಾಗ್ರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದಿದ್ದಾರೆ. ಇದು ಈ ಗಣಪತಿಯೇ ಕಳ್ಳರನ್ನ ಹುಡುಕಿಸಲು ಸಹಾಯ ಮಾಡುತ್ತಾನೆ ಎಂದು ಕುಸುಮಾಗೆ ಸುನಂದ ಹೇಳಿದ್ದಾಳೆ. ಈಗ ಅಕ್ಕಪಕ್ಕದವರ ನೆರವಿನೊಂದಿಗೆ ಮನೆಗೆ ಯಾರೂ ಬಂದಿದ್ದರು ಎಂಬುವುದು ತಿಳಿದಿದೆ. ಆದಷ್ಟು ಬೇಗ ಕಳ್ಳನನ್ನು ಹುಡುಕುವ ಪ್ರಯತ್ನ ಮಾಡಿಸಬೇಕು ಎಂದು ಸುನಂದಾ ಹೇಳಿದ್ದಾಳೆ.

ಮಗನ ಮೇಲೆ ಕಿಡಿ ಕಾರಿದ ಕುಸುಮಾ, ಗಂಡನನ್ನೇ ಪ್ರಶ್ನೆ ಮಾಡಿದ ಭಾಗ್ಯ

ಕುಸುಮಾ ಮಗನನ್ನ ಪೊಲೀಸ್ ಸ್ಟೇಷನ್ ಗೆ ಹೋಗಿ ಕಂಪ್ಲೇಂಟ್ ಕೊಟ್ಟು ಬಾ ಎಂದು ಹೇಳಿದ್ದಾರೆ. ಇದಕ್ಕೆ ತಾಂಡವ್ ಒಪ್ಪಿಗೆ ನೀಡುತ್ತಿಲ್ಲ. ಇನ್ನು ಕುಸುಮಾ ನಾನೇ ಹೋಗಿ ಕಂಪ್ಲೇಂಟ್ ಕೊಟ್ಟು ಬರುತ್ತೇನೆ. ಕಾಲು ಮುರಿದಿದ್ದರೂ ಸರಿಯೇ ಎಂದು ಹೇಳಿದ್ದಾರೆ. ಇದಕ್ಕೆ ಭಾಗ್ಯ ಅತ್ತೆ ನೀವೇನು ಕಂಪ್ಲೇಂಟ್ ಕೊಡೋದು ಬೇಡ ನಾನೇ ಹೋಗಿ ಕಂಪ್ಲೇಂಟ್ ಕೊಟ್ಟು ಬರುತ್ತೇನೆ ಎಂದು ಹೇಳಿದ್ದಾಳೆ. ಎಲ್ಲರೂ ಮಾತನಾಡುವಾಗ ತಾಂಡವ್ ಮನೆಗೆ ಬಂದಿದ್ದವರು ಕಳ್ಳತನ ಮಾಡಿಲ್ಲ ಎಂದು ವಾದ ಮಾಡಿದ್ದಾನೆ. ಇದಕ್ಕೆ ಭಾಗ್ಯ ಇದ್ದ ಮೂರಲ್ಲಿ ಕದ್ದವರು ಯಾರು ಎಂಬಂತೆ ನಿಮ್ಮ ಕಡೆಯವರು ಬಂದು ಕಳ್ಳತನ ಮಾಡಿದ್ರಾ? ಎಂದು ಗಂಡನಿಗೆ ಪ್ರಶ್ನೆ ಮಾಡಿದ್ದಾಳೆ.

Colors kannada Bhagyalakshmi serial Written Update on september 28th episode

ಭಾಗ್ಯ ಕೇಳಿದ ಪ್ರಶ್ನೆಗೆ ತಾಂಡವ್ ನೀನು ಸಿಐಡಿ ತರ ಪ್ರಶ್ನೆ ಮಾಡಬೇಡ ಸುಮ್ಮನೆ ಇರು ಎಂದಿದ್ದಾನೆ. ಇದೇ ವೇಳೆ ಕುಸುಮಾ ಅವಳು ಕೇಳಿದ್ದರಲ್ಲಿ ತಪ್ಪು ಏನಿತ್ತು ಎಂದು ಹೇಳಿದ್ದಾರೆ. ಈಗ ನೀನು ಕಂಪ್ಲೇಂಟ್ ಕೊಡಲು ಹೋಗುತ್ತೀಯೋ ಇಲ್ವೋ ಎಂದು ಜೋರು ಮಾಡಿದ್ದಾರೆ. ಈ ವೇಳೆ ತಾಂಡವ್ ನಾನು ಕಂಪ್ಲೇಂಟ್ ಕೊಡಲು ಹೋಗುತ್ತೇನೆ ಎಂದು ಹೇಳಿದ್ದಾನೆ.

Colors kannada Bhagyalakshmi serial Written Update on september 28th episode

ಭಾಗ್ಯ ಮೇಲೆ ರೇಗಿದ ತಾಂಡವ್

ಅಮ್ಮನ ಮೇಲಿದ್ದ ಕೋಪವನ್ನು ಹೆಂಡತಿಯ ಮೇಲೆ ತಾಂಡವ್ ತೀರಿಸಿಕೊಂಡಿದ್ದಾನೆ. ಬೆಳ್ಳಿ ಸಾಮಾಗ್ರಿ ಹೋಗಿದ್ದಕ್ಕೆ ಈ ರೀತಿ ಟಾರ್ಚರ್ ಕೊಡುತ್ತಿದ್ದಾರೆ ಇವರಿಗೆ ಬುದ್ದಿ ಬೇಡ್ವಾ ಎಂದಿದ್ದಾನೆ. ಇದಕ್ಕೆ ಭಾಗ್ಯ ತವರು ಮನೆಯ ಉಡುಗೊರೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನೀವು 10 ತರಹದ ಸಾಮಾಗ್ರಿ ತಂದು ಕೊಟ್ಟರು ತವರಿನ ಉಡುಗೊರೆಗೆ ಅದು ಸಮ ಆಗಲಾರದು ಸುಮ್ಮನೆ ಬನ್ನಿ ಕಂಪ್ಲೇಂಟ್ ಕೊಡೋಣ ಎಂದು ಪೊಲೀಸ್ ಸ್ಟೇಷನ್ ಬಳಿಗೆ ಕರೆದುಕೊಂಡು ಹೋಗುತ್ತಿದ್ದಾಳೆ. ತಾಂಡವ್‌ಗೆ ಪೊಲೀಸ್ ಸ್ಟೇಷನ್ ಬಳಿ ಹೋಗಲು ಸ್ವಲ್ಪವೂ ಸಹ ಇಷ್ಟವಿಲ್ಲ

More from Filmibeat

English summary
Colors kannada Bhagyalakshmi serial Written Update on september 28th episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X