Bhagyalakshmi: ಮತ್ತೆ ಮುನ್ನಲೆಗೆ ಶ್ರೇಷ್ಠಾ ಮದುವೆ ವಿಚಾರ: ಅತ್ತೆ -ಸೊಸೆ ಸೇರಿ ಮಾಡಿದ ಪ್ಲ್ಯಾನ್ ಏನು..!?

By ಶೃತಿ ಹರೀಶ್ ಗೌಡ

ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್ ಅಮ್ಮನ ಮಾತಿನಿಂದ ತಪ್ಪಿಸಿಕೊಳ್ಳಲು ನೂರಾರು ಸುಳ್ಳುಗಳನ್ನ ಹೇಳುತ್ತಿದ್ದಾನೆ. ಅದನ್ನೇ ನಿಜ ಎಂದು ಭಾಗ್ಯ , ಕುಸುಮಾ ನಂಬಿದ್ದಾರೆ. ನಂತರ ಶ್ರೇಷ್ಠಾ ತಂದೆಗೆ ಫೋನ್ ಮಾಡಿ ಅವನು ನನ್ನ ಮಗ ಮಾಡುವ ಕಂಪನಿಯಲ್ಲಿ ಕೆಲಸ ಮಾಡುತ್ತಿಲ್ಲವಂತೆ ಎಂದು ಹೇಳಿದ್ದಾರೆ.

ಇದಕ್ಕೆ ಅವರು ಕಂಪನಿಯಲ್ಲಿ ಕೆಲಸ ಬಿಟ್ಟಿದ್ದಾರೆ ಎಂದು ಶ್ರೇಷ್ಠಾ ಮತ್ತೊಂದು ಸುಳ್ಳನ್ನ ಹೇಳಿದ್ದಾಳೆ. ಶ್ರೇಷ್ಠಾ ಹೇಳಿದ ಮಾತನಾ ಕೇಳಿದ ಶ್ರೀವರ ಅವರಿಗೆ ತುಂಬಾನೇ ಬೇಸರವಾಗಿದೆ. ಯಾಕೆಂದರೆ ನನ್ನ ಮಗಳು ಸುಳ್ಳನ್ನ ಹೇಳಿದ್ದಾಳೆ. ಅವನಿಗೆ ಕೆಲಸ ಇಲ್ಲ ಕಾರ್ಯ ಇಲ್ಲ ಯಾವ ರೀತಿ ನಾನು ಅವರ ಮೇಲೆ ನನ್ನ ಮಗಳನ್ನು ಕೊಟ್ಟು ಮದುವೆ ಮಾಡಲಿ ಎಂದು ಯೋಚಿಸಿದ್ದಾರೆ.

colors-kannada-bhagyalakshmi-serial

ತಾಂಡವ್‌ಗೆ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದಕ್ಕೆ ಸಮಾಧಾನವಂತು ಆಗಿದೆ. ಆದರೆ ಇದೆಲ್ಲವೂ ಸಹ ಇಷ್ಟಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಕುಸುಮ ಡೈನಿಂಗ್ ಟೇಬಲ್ ಮೇಲೆ ಕುಳಿತು ಶ್ರೇಷ್ಠಾ ಲವ್ ಮಾಡಿರುವ ಹುಡುಗನ ಅಪ್ಪ ಅಮ್ಮನ ಬಗ್ಗೆ ಮಾತನಾಡಿದ್ದಾರೆ. ಇದು ತಾಂಡವಗೆ ಇರಿಸು-ಮುರಿಸು ತಂದಿದೆ. ನೋಡೋಕೆ ಒಳ್ಳೆ ಪಿಕ್ ಪಾಕೆಟ್ ಮಾಡುವ ಕಳ್ಳರ ರೀತಿ ಇದ್ದಾರೆ ಅವರ ಮಗನನ್ನ ಹೋಗಿ ಇವಳು ಏನಂತ ಲವ್ ಮಾಡಿದಳು.; ಇವಳಿಗೆ ಸ್ವಲ್ಪವೂ ಸಹ ಬುದ್ಧಿಯೇ ಇಲ್ಲ ಎಂದು ಕುಸುಮ ಹೇಳಿದ್ದಾರೆ.

ಅಮ್ಮ ಆ ರೀತಿ ಹೇಳಿದ್ದೆ ತಡ ತಾಂಡವ್ ಶ್ರೇಷ್ಠಾಳನ್ನು ಸಮರ್ಥನೆ ಮಾಡಿಕೊಂಡಿದ್ದಾನೆ. ಅದಕ್ಕೆ ಭಾಗ್ಯ ಸರಿಯಾದ ರೀತಿಯಲ್ಲಿ ಟಕ್ಕರ್ ಕೊಟ್ಟಿದ್ದಾಳೆ. ಕೆಲವರಿಗೆ ಮೋಸ ಹೋಗುವುದು ಪರಿಪಾಠವಾಗಿರುತ್ತದೆ. ಪ್ರೀತಿ ಕುರುಡಾಗಿದ್ದಾಗ ಮೋಸ ಮಾಡುತ್ತಿದ್ದರು ಸಹ ಅದು ಗೊತ್ತಾಗುವುದಿಲ್ಲ ಎಂದು ಹೇಳಿದ್ದಾಳೆ. ಭಾಗ್ಯ ಹೇಳಿದ ಮಾತನ್ನು ಕೇಳಿದ ತಾಂಡವ್‌ಗೆ ಒಂದು ರೀತಿಯಲ್ಲಿ ಕುಂಬಳಕಾಯಿ ಕಳ್ಳನಂತೆ ಹೆಗಲು ಮುಟ್ಟಿ ನೋಡಿಕೊಂಡಿದ್ದಾನೆ. ಆದರೂ ಕುಸುಮಾಗೆ ಶ್ರೇಷ್ಠಾ ಮಾಡಿರುವ ಕೆಲಸ ಸ್ವಲ್ಪವೂ ಸಹ ಇಷ್ಟವಾಗಿಲ್ಲ.

colors-kannada-bhagyalakshmi-serial

ಮುಗಿದು ಹೋದ ಅಧ್ಯಾಯ ಮತ್ತೆ ಕೆದಕಿದ ಭಾಗ್ಯ!

ಕುಸುಮ ಭಾಗ್ಯ ಬಳಿ ನಾನು ಯಾವುದೇ ಕಾರಣಕ್ಕೂ ಶ್ರೇಷ್ಠಾ ಮದುವೆ ಆಗುವವರೆಗೂ ಅವಳ ಬೆನ್ನ ಹಿಂದೆ ಬಿದ್ದಿರುತ್ತೇನೆ ಎಂದು ಹೇಳಿದ್ದಾರೆ. ನಮ್ಮ ಮನೆಯ ಅನ್ನವನ್ನು ತಿಂದ ಮೇಲೆ ಅವಳು ಸಹ ನಮ್ಮ ಮನೆಯವಳ ರೀತಿಯೇ. ಯಾವುದೇ ಕಾರಣಕ್ಕೂ ಅವಳಿಗೆ ಮೋಸವಾಗಲು ನಾನು ಬಿಡುವುದಿಲ್ಲ ಎಂದು ಭಾಗ್ಯ ಬಳಿ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಭಾಗ್ಯ ಅತ್ತೆ ನೀವು ನನ್ನನ್ನ ಅಧಿಕ ಪ್ರಸಂಗಿ ಎಂದುಕೊಂಡರು ಸರಿಯೇ, ನಾನು ಶ್ರೇಷ್ಠಾ ಮದುವೆಯ ಬಗ್ಗೆ ಸ್ವಲ್ಪ ಮಾತನಾಡಬೇಕು ಎಂದು ಕೇಳಿಕೊಂಡಿದ್ದಾಳೆ. ಇದೆ ವೇಳೆ ಕುಸುಮ ಮಾತಾಡು ಎಂದು ಹೇಳಿದ್ದಾಳೆ.

ಅತ್ತೆ ಶ್ರೇಷ್ಠಾ ತನ್ನ ಅತ್ತೆ ಮಾವನ ಬಗ್ಗೆ ಸ್ವಲ್ಪವೂ ಸಹ ಮಾತನಾಡುತ್ತಿಲ್ಲ. ಅವಳು ಲವ್ ಮಾಡಿದ ಹುಡುಗನ ಬಗ್ಗೆ ಅಷ್ಟೇ ಮಾತನಾಡುತ್ತಿದ್ದಾಳೆ. ಅವನು ಇವಳಿಗೆ ಏನಾದರೂ ಮೋಡಿ ಮಾಡಿದ್ದಾನಾ ಅಥವಾ ಅಷ್ಟೇ ಚೆನ್ನಾಗಿ ಪ್ರೀತಿ ಮಾಡುತ್ತಿದ್ದಾನಾ ಇದನ್ನು ನಾವು ಮೊದಲು ತಿಳಿದುಕೊಳ್ಳಬೇಕು. ನಂತರ ಅವರ ಮದುವೆಯ ಬಗ್ಗೆ ಮಾತುಕತೆ ಮುಂದುವರಿಸಬೇಕು ಎಂದು ಭಾಗ್ಯ ಹೇಳಿದ್ದಾಳೆ. ಸೊಸೆ ಮಾತನಾಡುತ್ತಿರುವುದು ಸರಿಯಾಗಿ ಇದೆ ಎಂದು ತನ್ನ ಸೊಸೆಯ ಬಗ್ಗೆ ಮೆಚ್ಚುಗೆಯನ್ನ ಕುಸುಮ ವ್ಯಕ್ತಪಡಿಸಿದ್ದಾಳೆ.

ಅತ್ತೆ ಸೊಸೆಯ ಗುಪ್ತ ಮಾತುಕತೆ, ಭಾಗ್ಯ ಮಾಡಿದ ಪ್ಲ್ಯಾನ್ ಏನು?

ಭಾಗ್ಯ ಹೇಳಿದ ಮಾತು ಕೇಳಿದ ಕುಸುಮ ಇರು ನಾನು ಆ ಶ್ರೇಷ್ಠಾಗೆ ಹೇಳಿ ಬರುತ್ತೇನೆ ಎಂದು ಹೋಗುತ್ತಿದ್ದಾಗ ಭಾಗ್ಯ ತಡೆದಿದ್ದಾಳೆ. ಅತ್ತೆ ನಾನು ನಿನ್ನ ಮದುವೆ ವಿಷಯದಲ್ಲಿ ತಲೆ ಹಾಕುವುದಿಲ್ಲ ಎಂದು ಹೇಳಿ ಎಂದಾಗ ಕುಸುಮ ನಾನು ಅವಳ ಮದುವೆ ಮುಗಿಯುವವರೆಗೂ ಅವಳ ಬೆನ್ನು ಬೀಳೋಳೆ ಎಂದು ಹೇಳಿದ್ದಾರೆ. ಇದಕ್ಕೆ ಭಾಗ್ಯ ಅತ್ತೆ ಸ್ವಲ್ಪ ಬನ್ನಿ ಎಂದು ಕಿವಿಯಲ್ಲಿ ಏನನ್ನೋ ಹೇಳಿದ್ದಾಳೆ. ನಾವು ಆ ಹುಡುಗ ಎಂತವನು ಎಂದು ತಿಳಿದುಕೊಳ್ಳುವ. ಅದಕ್ಕೂ ಮೊದಲೇ ಶ್ರೇಷ್ಠಾ ಬಳಿ ಏನನ್ನು ಹೇಳೋದು ಬೇಡ ನಾವು ಎಲ್ಲವನ್ನು ತಿಳಿದುಕೊಂಡ ನಂತರ ಅವಳ ಮದುವೆ ಮಾಡೋಣ ಎಂದು ಭಾಗ್ಯ ಅತ್ತೆಯ ಕಿವಿಯಲ್ಲಿ ಮಾಡಿರುವ ಪ್ಲ್ಯಾನ್ ಬಗ್ಗೆ ತಿಳಿಸಿದ್ದಾಳೆ.

More from Filmibeat

English summary
colors kannada Bhagyalakshmi serial september 5th episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X