Bhagyalakshmi: ಮಕ್ಕಳು ಅಂತ ಜೀವ ಬಿಡೋರಿಗೆ ಇದು ಉದಾಹರಣೆ; ಭಾಗ್ಯಲಕ್ಷ್ಮೀ ಕಂಡು ಹೇಳಿದ್ದೇನು..?

By ಎಸ್ ಸುಮಂತ್

ಸಮಸ್ಯೆ ಮೇಲೆ ಸಮಸ್ಯೆ ಬಂದರು ತಾಂಡವ್ ಮಾತ್ರ ಶ್ರೇಷ್ಠಾಳನ್ನು ಮದುವೆಯಾಗದೆ ಇರಲಾರ. ಯಾಕಂದ್ರೆ ಅಲ್ಲಿ ಶ್ರೇಷ್ಠಾ ಒಂದು ಕಡೆ ತಾಳಿ ಇಟ್ಟುಕೊಂಡಿದ್ದರೆ, ಇನ್ನೊಂದು ಕಡೆ ವಿಷದ ಬಾಟೆಲ್ ಇಟ್ಟುಕೊಂಡಿದ್ದಾಳೆ. ತಾಂಡವ್‌ಗೆ ಇದನ್ನ ಮೀರಿ ಬೇರೆ ಏನನ್ನು ಮಾಡುವುದಕ್ಕೆ ಸಾಧ್ಯವೇ ಇಲ್ಲ ಬಿಡಿ. ಹೀಗಾಗಿ ಮನೆಯಲ್ಲಿ ಕೂಡಿ ಹಾಕಿದ್ದರು, ಕಿಟಿಕಿಯನ್ನು ಮುರಿದು ಓಡಿ ಹೋಗಿದ್ದಾನೆ. ಯಾವಾಗಲೂ ಕಾರನ್ನೇ ಬಳಸುತ್ತಿದ್ದ ತಾಂಡವ್, ಶ್ರೇಷ್ಠಾಳ ಮದುವೆಗೆ ಮದುಮಗನಾಗಿ ಆಟೋದಲ್ಲಿ ಬರುವಂತೆ ಆಗಿದೆ.

ಕುಸುಮಾ ಕೈಗೆ ತಗಲಾಕಿಕೊಂಡಿದ್ದ. ಆದರೆ ಹೇಗೋ ತಪ್ಪಿಸಿಕೊಂಡು ಬಿಟ್ಟ. ಅತ್ತ ಕುಸುಮಾ, ಭಾಗ್ಯಾ ಇಲ್ಲೆ ಇದ್ದರೆ ಈ ಮದುವೆ ಆಗುವುದು ಕಷ್ಟ ಎಂಬುದನ್ನು ಅರ್ಥ ಮಾಡಿಕೊಂಡ ಶ್ರೇಷ್ಠಾ, ಅಪ್ಪ ಅಮ್ಮನ ಬಳಿ ನಾಟಕವಾಡಿ, ಕುಸುಮಾ, ಭಾಗ್ಯಾಳನ್ನ ಕಳುಹಿಸೇ ಬಿಟ್ಟಳು. ಈಗ ಕುಸುಮಾ ಕೈಗೆ ಪತ್ರಿಕೆ ಸಿಕ್ಕಿದೆ. ಬಿಡ್ತಾಳಾ ಕುಸುಮಾ.

Colors kannada Bhagyalakshmi serial Written Update on September 9th episode

ಶ್ರೇಷ್ಠಾಳನ್ನು ಬೈಕೊಂಡ ಕುಸುಮಾ

ಶ್ರೇಷ್ಠಾ ಮದುವೆ ವಿಚಾರಕ್ಕಾಗಿ ತುಂಬಾ ಕೆಳಮಟ್ಟಕ್ಕೆ ಇಳಿದು ನಡೆದುಕೊಳ್ಳುತ್ತಿದ್ದಾಳೆ. ಸೆಕ್ಯೂರಿಟಿಗೆ ಹೇಳಿ ಹೊರಗೆ ದಬ್ಬಿಸುವಷ್ಟು ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದಾಳೆ. ಶ್ರೇಷ್ಠಾಳ ನಡೆಗೆ ಬೇಸರ ಮಾಡಿಕೊಂಡ ಕುಸುಮಾ, ಭಾಗ್ಯಾ ಅಲ್ಲಿಂದ ಸೀದಾ ಬಂದುಬಿಟ್ಟರು. ಮನೆಯಲ್ಲಿ ತಾಂಡವ್ ಇಲ್ಲದೇ ಇರುವುದನ್ನು ಕಂಡು ಭಾಗ್ಯಾ ಬೇಸರ ಮಾಡಿಕೊಂಡಿದ್ದಳು. ಅವಳ ಮದುವೆಗೇನೆ ಹೋಗಿರುವುದು ಅಂತ.

ಕುಸುಮಾ ಕೈಗೆ ಸಿಕ್ತು ಪತ್ರಿಕೆ

ಕುಸುಮಾಗೆ ಈ ಟೆನ್ಷನ್‌ನಿಂದ ಹೊರ ಬರಬೇಕಿತ್ತು. ರೂಮಿನಲ್ಲಿ ಕೂತು ಯೋಚನೆ ಮಾಡುವಾಗ ಕಬೋಡ್ ಕಣ್ಣಿಗೆ ಬಿತ್ತು. ಗಲೀಜಾಗಿದ್ದ ಕಬೋಡ್ ಕ್ಲೀನ್ ಮಾಡಲು ಹೋದಾಗ ಶ್ರೇಷ್ಠಾ ಹಾಗೂ ತಾಂಡವ್ ಲಗ್ನ ಪತ್ರಿಕೆ ಕೈಗೆ ಸಿಕ್ಕಿದೆ. ಯಶೋಧಾ ಕೂಡ ಕೊಟ್ಟಿಲ್ಲ. ಇದೇಗೆ ಇಲ್ಲಿಗೆ ಬಂತು ಎಂದು ಯೋಚಿಸುವಾಗಲೇ ಮೊದಲು ಯಾರ ಹೆಸರಿದೆ ನೋಡೊಣ ಎಂದು ಲಗ್ನ ಪತ್ರಿಕೆಯನ್ನು ತೆರೆಯುತ್ತಾಳೆ. ಅಪ್ಪ ಅಮ್ಮನ ಹೆಸರನ್ನೇನೋ ಹಾಕಿಸಿದ್ದಳು. ಅದಕ್ಕೆ ಕೊಂಚ ನೆಮ್ಮದಿ ಎನಿಸಿದೆ ಕುಸುಮಾಗೆ.

ಮಗನ ಸತ್ಯ ದರ್ಶನಕ್ಕೆ ಸುಸ್ತು

ಮುಂದೆ ಹಾಗೇ ಓದುವಾಗ ಫೋಟೋ ಕಣ್ಣಿಗೆ ಬಿದ್ದಿದೆ. ಆ ಫೋಟೋ ನೋಡಿ ಜಗತ್ತೆ ಮುಳುಗಿದಂತ ಫೀಲ್ ಕುಸುಮಾಗೆ. ಇದು ನನ್ನ ಮಗನಲ್ಲ ಎಂದು ಸೆರಗಲ್ಲಿ ಸಾಕಷ್ಟು ಸಲ ಒರೆಸಿದ್ದಾಳೆ. ಆದರೂ ಆ ಫೋಟೋ ಬದಲಾಗಲಿಲ್ಲ. ಅದೇ ಸತ್ಯ ಎಂಬುದನ್ನು ನಂಬಲೇಬೇಕಾಗಿದೆ. ಆದರೆ ಸೊಸೆಗೆ ಅನ್ಯಾಯವಾಗುವುದಕ್ಕೆ ಯಾವುದೇ‌ ಕಾರಣಕ್ಕೂ ಕುಸುಮಾ ಬಿಡುವುದಕ್ಕೆ ತಯಾರಿಲ್ಲ. ಮದುವೆ ನಿಲ್ಲಿಸಲು ಸಜ್ಜಾಗಿದ್ದಾಳೆ.

Colors kannada Bhagyalakshmi serial Written Update on September 9th episode

ಇಂತಹ ಮಕ್ಕಳು ಬೇಕಾ ಎಂದ ವೀಕ್ಷಕರು

ಸಾಕಷ್ಟು ಜನ ಪೋಷಕರು ಮಕ್ಕಳಿಗಾಗಿ ಹಂಬಲಿಸುತ್ತಾರೆ. ಅದರಲ್ಲೂ ಗಂಡು ಮಕ್ಕಳ ಸಂತಾನವೇ ಬೇಕೆಂದು ಕಂಡ‌ಕಂಡ ದೇವರಿಗೆ ಹರಕೆ ಹೊರುತ್ತಾರೆ. ಕೆಲವೊಬ್ಬರ ಮಕ್ಕಳು ಪೋಷಕರಿಗೆ ಬೆಲೆ ಕೊಡುವುದು ಅಷ್ಟಕ್ಕೆ ಅಷ್ಟೇ. ಎಷ್ಟೋ ಜನರ ಜೀವನದಲ್ಲಿ ಇಂಥಹ ಮಕ್ಕಳಿದ್ದಾರೆ. ಅವರಿಗಾಗಿಯೇ ಇಂಥ ಧಾರಾವಾಹಿ ಎಂದು ವೀಕ್ಷಕರು ಕಮೆಂಟ್ ಹಾಕುತ್ತಿದ್ದಾರೆ. ಬಯಸಿ ಬಯಸಿ ಮಕ್ಕಳು ಬೇಕೆನ್ನುವವರು ನೋಡಿ ಇದನ್ನೊಮ್ಮೆ ಎನ್ನುತ್ತಿದ್ದಾರೆ. ಎಲ್ಲಾ ಮಕ್ಕಳು ಈ ರೀತಿ ಇಲ್ಲದೆ ಹೋದರು ಕೆಒವೊಬ್ಬರು ತಮ್ಮ ಸ್ವಾರ್ಥಕ್ಕೆ ಬದುಕುವವರು ಇದ್ದಾರೆ.

More from Filmibeat

English summary
Colors kannada Bhagyalakshmi serial Written Update on September 9th episode Here is the details about Kusuma is shocked to know about her Tandav marriage;
Read more about: filmibeat news serial sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X