Bhagyalakshmi: ಭಾಗ್ಯಾ ಮನೆ ಮುರುಕಿನಾ? ಹಣದ ಅಹಂಕಾರ ಜಾಸ್ತಿಯಾಗಿದೆ ಅನ್ನಿಸುತ್ತಾ?
ಭಾಗ್ಯಾಳನ್ನ ಇತ್ತಿಚೆಗೆ ಅವರ ಅತ್ತೆ ಹೊಗಳುತ್ತಿದ್ದರು. ಸೊಸೆ ಅಂದರೆ ಈ ಥರ ಇರಬೇಕು ಕಣೋ. ನೋಡು ಕೆಲಸಕ್ಕೆ ಸೇರಿದ್ದರು, ಒಳ್ಳೆಯ ಸಂಬಳ ತೆಗೆದುಕೊಳ್ಳುತ್ತಿದ್ದರು ಯಾವತ್ತಿಗೂ ತನ್ನ ಜವಬ್ದಾರಿಯನ್ನು ಮರೆತಿಲ್ಲ.
ಬೆಳಗ್ಗೆನೆ ಬೇಗ ಎದ್ದು ತನ್ನೆಲ್ಲಾ ಕೆಲಸವನ್ನು ಮುಗಿಸಿ, ಅತ್ತೆ, ಮಾವನಿಗೂ ಹೇಳಿ ಹೋಗುತ್ತಾಳೆ ಎಂದು. ಭಾಗ್ಯಾಳಿಗೆ ಸ್ವಾಭಿಮಾನಕ್ಕೆ ಹೊಡೆತ ಬಿದ್ದಾಗ ಮಾತ್ರ ಕೋಪ ಹೆಚ್ಚಾಗುವುದು, ಎದುರಿಗೆ ಇರುವವರಿಗೆ ನಾಲ್ಕು ಭಾರಿಸುವುದು.

ಭಾಗ್ಯಾಳಿಗೆ ಯಾರೇ ಗೌರವ ಕೊಟ್ಟರು ಅದರ ಡಬ್ಬಲ್ ಗೌರವ ಅವಳಿಂದ ಪಡೆಯಬಹುದು. ಈಗ ದುಡೀತಾ ಇದ್ದೀನಿ ಅಂತ ಜಂಭ ತೋರಿಸುವುದಾಗಲೀ, ಅಹಂಕಾರದಿಂದ ನಡೆದುಕೊಳ್ಳುವುದಾಗಲೀ ಮಾಡುವ ಗುಣ ಅವಳದ್ದಲ್ಲ. ಮೊದಲ ಸಂಬಳ ಬಂದಾಗ ಅವಳ ಕಣ್ಣಲ್ಲಿ ಇದ್ದ ಖುಷಿಯೇ ಅದಕ್ಕೆ ಸಾಕ್ಷಿ.
ಭಾಗ್ಯಾಳ ಮೇಲೆ ಶ್ರೇಷ್ಠಾ ಸೇಡು
ಭಾಗ್ಯಾ ಯಾವಾಗ ನೀನು ಮದುವೆಯಾಗುವ ಹುಡುಗನನ್ನು ನಾನು ನೋಡಬೇಕು ಎಂದು ಹಠ ಮಾಡಿದಳೋ ಅಂದಿನಿಂದ ಶ್ರೇಷ್ಠಾ ರೊಚ್ಚಿಗೆದ್ದಿದ್ದಾಳೆ. ಭಾಗ್ಯಾಳಿಗೆ ಅವಮಾನ ಮಾಡಬೇಕೆಂದು ತೀರ್ಮಾನಿಸಿದ್ದಾಳೆ. ಪೂಜಾಳ ಮೇಲೂ ಕೋಪ ಜಾಸ್ತಿಯಾಗಿದೆ. ಇದೀಗ ತನ್ನ ಅಲೋಚನೆಯನ್ನು ತೀರಾ ಕೆಟ್ಟದಾಗಿ ಯೋಚನೆ ಮಾಡಿರುವ ಶ್ರೇಷ್ಠಾ,ಭಾಗ್ಯಾಳ ವಿರುದ್ಧ ವಿಡಿಯೋ ಮಾಡಿಸಿದ್ದಾಳೆ.

ವಿಡಿಯೋ ಮಾಡಿಸಿಬಿಟ್ಟ ಶ್ರೇಷ್ಠಾ
ಭಾಗ್ಯಾ ಮೇಲ್ನೋಟಕ್ಕಷ್ಟೇ ಸದ್ಗುಣ ಸಂಪನ್ನೆ ಥರ ನಟನೆ ಮಾಡುತ್ತಾಳೆ. ದುಡ್ಡು ಕೈಗೆ ಬಂದಾಕ್ಷಣ ಗಂಡನಿಗೇನೆ ಡಿವೋರ್ಸ್ ಕೊಟ್ಟಿದ್ದಾಳೆ. ಅಹಂಕಾರ ಜಾಸ್ತಿ ಇರುವ ಹೆಣ್ಣು ಅಂತೆಲ್ಲಾ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಭಾಗ್ಯಾಳ ವಿರುದ್ಧ ಇಲ್ಲ ಸಲ್ಲದ ಮಾತುಗಳನ್ನೇ ಇಲ್ಲಿ ಆಡಿದ್ದಾಳೆ. ಇದೆಲ್ಲಾ ಶ್ರೇಷ್ಠಾನೆ ಹಣ ಕೊಟ್ಟು ಹೇಳಿ ಮಾಡಿಸಿರುವ ಕೆಲಸ. ಭಾಗ್ಯಾಳ ಮೇಲೆ ಸೇಡು ತೀರಿಸಿಕೊಳ್ಳುತ್ತೀನಿ ಅಂತ ಹೇಳಿ ಹೋದವಳು, ಅವಳ ನಡವಳಿಕೆಯ ಮೇಲೆನೇ ತಪ್ಪು ಅಭಿಪ್ರಾಯ ಬರುವಂತೆ ಮಾಡಿದ್ದಾಳೆ.
ಕಣ್ಣೀರು ಹಾಕಿದ ಭಾಗ್ಯಾ
ಹಿತ ಯಾವಾಗಲೂ ಭಾಗ್ಯಾಳ ಹಿತವನ್ನೇ ಬಯಸುತ್ತಾಳೆ. ತಾಂಡವ್ ವಿಚಾರ ಗೊತ್ತಾದ ತಕ್ಷಣ ಶ್ರೇಷ್ಠಾಗೆ ಬುದ್ದಿ ಕಲಿಸುವುದಕ್ಕೆ ಪೂಜಾ ಹಾಗೂ ಸುಂದ್ರಿಯ ಜೊತೆಗೆ ಹಿತ ಕೂಡ ಸೇರಿಕೊಂಡಳು. ಭಾಗ್ಯಾಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಬಾರದು ಎಂದೇ ಬಯಸುತ್ತಾಳೆ. ಈಗ ಭಾಗ್ಯಾಳ ಬಗ್ಗೆ ಕೆಟ್ಟದಾಗಿ ಯಾರೋ ಮಾತನಾಡಿರುವ ವಿಡಯೋ ಈಗ ಹಿತ ಮೊಬೈಲ್ ನಲ್ಲಿದೆ. ಅದನ್ನ ನೋಡಿನೂ ಹಿತಾಗೆ ಸುಮ್ಮನೆ ಇರುವುದಕ್ಕೆ ಸಾಧ್ಯವಾಗಲಿಲ್ಲ. ಇದು ಶ್ರೇಷ್ಠಾಳೇ ಮಾಡಿರುವ ಕಿತಾಪತಿ ಮಾಡಿದ್ದಾಳೆ ಎಂಬುದು ಅರ್ಥವಾಗಿದೆ. ಹೀಗಾಗಿ ಭಾಗ್ಯಾಳಿಗೆ ಆ ವಿಡಿಯೋವನ್ನು ತೋರಿಸಿದ್ದಾಳೆ. ಆ ವಿಡಿಯೋದಲ್ಲಿ ಭಾಗ್ಯಾ ಮನೆ ಮುರುಕಿ ಎಂದೆಲ್ಲಾ ಬೈದಿದ್ದಾಳೆ.
ಭಾಗ್ಯಾಗೆ ವೀಕ್ಷಕರ ಸಮಾಧಾನ
ಭಾಗ್ಯಾ ಯಾವತ್ತಿಗೂ ಆ ರೀತಿಯೆಲ್ಲಾ ದುರಹಂಕಾರ ತೋರಿದವಳಲ್ಲ. ಅತ್ತೆ ಮಾವನಿಗೆ ಗೌರವ ಕೊಟ್ಟುಕೊಂಡು, ಗಂಡ ಅಷ್ಟು ಅನ್ಯಾಯ ಮಾಡಿದರೂ ಅವನ ಜೊತೆಗೆ ಬಾಳುವುದಕ್ಕೆ ಪ್ರಯತ್ನ ಮಾಡುತ್ತಾಳೆ. ಮಕ್ಕಳಿಗಾಗಿ ಎಲ್ಲವನ್ನು ಸರಿದೂಗಿಸಿಕೊಂಡು ಹೋಗುವ ಪ್ರಯತ್ನ ಮಾಡಿದರೂ ಅದು ಆಗುತ್ತಿಲ್ಲ. ಇದೀಗ ಭಾಗ್ಯಾ ಬಗ್ಗೆ ಅಷ್ಟೊಂದು ಕೆಟ್ಟದಾಗಿ ಮಾತನಾಡಿರುವುದನ್ನು ವೀಕ್ಷಕರು ಕೂಡ ಸಹಿಸುತ್ತಿಲ್ಲ. ಭಾಗ್ಯಾಗೆ ಸಮಾಧಾನ ಮಾಡುತ್ತಿದ್ದಾರೆ. ನೀನು ಆ ವಿಡಿಯೋಗೆಲ್ಲಾ ತಲೆ ಕೆಡಿಸಿಕೊಳ್ಳಬೇಡ ಭಾಗ್ಯಾ. ಶ್ರೇಷ್ಠಾಗೆ ಗ್ರಹಚಾರ ಬಿಡಿಸು ಅಂತಿದ್ದಾರೆ. ಶ್ರೇಷ್ಠಾಗೂ ಎಚ್ಚರಿಕೆ ನೀಡಿದ್ದು, ಭಾಗ್ಯಾಗೆ ವಿಚಾರ ಗೊತ್ತಾದ್ರೆ ನಿನ್ ಗ್ರಹಚಾರ ಬಿಡಿಸ್ತಾಳೆ ಅಂತಿದ್ದಾರೆ.


Click it and Unblock the Notifications











