Bhagyalakshmi: ಭಾಗ್ಯಾ ನೆನಪಿಲ್ವಾ ಶ್ರೇಷ್ಠಾ ತಂದೆ-ತಾಯಿಗೆ? ಡೈರೆಕ್ಟರ್ ಎಲ್ಲಾ ಮರೆತೇ ಬಿಡ್ತಾರೆ!
ಭಾಗ್ಯಾಳ ಡಿವೋರ್ಸ್ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ಸೋಷಿಯಲ್ ಮೀಡಿಯಾ ಮೂಲಕ ಊರ ಸುದ್ದಿಯಾಗಿದೆ. ಇದರಿಂದ ಭಾಗ್ಯಾಳ ಮನಸ್ಸಿಗೂ ನೋವಾಗಿದೆ, ಅತ್ತೆ-ಮಾವನ ನೊಂದುಕೊಂಡಿದ್ದಾರೆ. ತಾಂಡವ್ ಮಾತ್ರ ಮೊದಲಿನಂತೆಯೇ ಭಾಗ್ಯಾಳ ಮೇಲೆ ಗೂಬೆ ಕೂರಿಸಿದ್ದಾನೆ. ಇದೆಲ್ಲವನ್ನು ಮಾಡಿದ್ದು ಶ್ರೇಷ್ಠಾ ಎಂಬುದು ತಾಂಡವ್ ಗೂ ಗೊತ್ತಿಲ್ಲ.
ಶ್ರೇಷ್ಠಾ ಈಗ ಭಾಗ್ಯಾಳನ್ನ ಟಾರ್ಗೆಟ್ ಮಾಡಿದ್ದಾಳೆ. ಬರೀ ಹಣ ಕದ್ದಿದ್ದಕ್ಕೆ ಭಾಗ್ಯಾ ಆ ರೀತಿ ಬಡಿದಿದ್ದಾಳೆ. ಇನ್ನು ತನ್ನ ಮರ್ಯಾದೆ, ಮನೆಯವರ ಮರ್ಯಾದೆ ಎಲ್ಲರ ಸೋಷಿಯಲ್ ಮೀಡಿಯಾದಲ್ಲೂ ಬರುವಂತೆ ಮಾಡೊದ ಶ್ರೇಷ್ಠಾಳನ್ನ ಸುಮ್ಮನೆ ಬಿಡುವುದು ಉಂಟಾ?

ತಾಂಡವ್‌ಗೆ ತನ್ನ ಘನತೆ, ಗೌರವ ಅಂದ್ರೆ ಹೆಚ್ಚು ಮುಖ್ಯ. ಅಂಥದ್ರಲ್ಲಿ ಬಾಸ್ ಅಂತಿದ್ದವರೇ ಏನ್ ತಾಂಡವ್ ಡಿವೋರ್ಸ್ ಕೊಡ್ತಾ ಇದಾರಂತೆ ನಿಮ್ ಹೆಂಡ್ತಿ ಅಂದ್ರೆ ಸುಮ್ನೆ ಇರ್ತಾನಾ. ಈ ಕೆಟ್ಟ ಸುದ್ದಿಯನ್ನು ಮಾಡಿದ್ದು ಶ್ರೇಷ್ಠಾ ಅಂತ ಗೊತ್ತಾದ್ರೆ ಅವ್ನೇನು ಮಾಡ್ತಾನೋ..?
ಶ್ರೇಷ್ಠಾಳಿಗೆ ದೋಷ ಶಾಸ್ತ್ರ ಮಾಡಿದ ಭಾಗ್ಯಾ
ಈ ರೀತಿಯ ವಿಡಿಯೋ ಮಾಡಿದ್ದು ಶ್ರೇಷ್ಠಾ ಎಂದು ಯಾವಾಗ ಗೊತ್ತಾಯ್ತೊ, ಅವಳನ್ನು ಹುಡುಕಿಕೊಂಡು ದೇವಸ್ಥಾನಕ್ಕೆ ಬಂದ ಭಾಗ್ಯಾ ಅಂಡ್ ಗ್ಯಾಂಗ್ ನಡೆಯುತ್ತಿದ್ದ ಶಾಸ್ತ್ರದಲ್ಲಿಯೂ ಭಾಗ್ಯಾನೇ ಮುಂದೆ ನಿಂತಳು. ಶ್ರೇಷ್ಠಾಳಿಗೆ ಮದುವೆಯಲ್ಲಿ ಅದೇನೋ ದೋಷವಿದ್ದ ಕಾರಣ, ಮೊದಲು ಬಾಳೆಕಂಬದ ಜೊತೆಗೆ ಮದುವೆ ಮಾಡಿಸುವ ಶಾಸ್ತ್ರ ಮಾಡುತ್ತಿದ್ದರು. ಕೋಪದಲ್ಲಿ ಬಂದ ಭಾಗ್ಯಾ, ಕನ್ಯೆಗೆ ಹಾಕಬೇಕಾದ ನೀರನ್ನು ಅವಳೇ ಹಾಕಿದ್ದಾಳೆ.
ಶ್ರೇಷ್ಠಾಳ ಕುತಂತ್ರ ತಿಳಿದು ಕೆಂಡಾಮಂಡಲ
ಅತ್ತ ತಾಂಡವ್ ಇದೆಲ್ಲವೂ ಭಾಗ್ಯಾಳಿಂದಾನೇ ಆಗಿದ್ದು ಎಂಬಂತೆ ಮತ್ತೆ ಎಗರಾಡುತ್ತಿದ್ದ. ಕುಸುಮಾಗೆ ಇದೆಲ್ಲಾ ಮಾಡಿದ್ದು ಶ್ರೇಷ್ಠಾ ಎಂಬುದು ಗೊತ್ತಾಗಿ ಕೋಪ ಮೊದಲೇ ಬಂದಿತ್ತು. ಹೀಗಿರುವಾಗ ಮಗರಾಯ ಸೊಸೆಯನ್ನು ಬೈಯ್ಯುತ್ತಿದ್ದರೆ ಸಹಿಸಿಕೊಳ್ಳುವುದಕ್ಕೆ ಹೇಗೆ ಸಾಧ್ಯ. ಮಗನ ಬಾಯಿಗೆ ಬೀಗ ಹಾಕಿ ಸತ್ಯದರ್ಶನಕ್ಕೆ ಕರೆದುಹೊರಟಿದ್ದಾಳೆ.

ಬುದ್ದಿ ಹೇಳಿದ ಭಾಗ್ಯಾ
ಭಾಗ್ಯಾ ಆರಂಭದಲ್ಲಿಯೇ ಕೆನ್ನೆಗೆ ಬಾರಿಸದೆ ಶ್ರೇಷ್ಠಾಗೆ ನಡೆಯುತ್ತಿದ್ದ ಎಲ್ಲಾ ಶಾಸ್ತ್ರಗಳನ್ನು ಮಾಡುತ್ತಿದ್ದಾಳೆ. ಅವಳ ಮನಸ್ಸಲ್ಲಿ ಇರುವ ಒಂದೊಂದು ಕಲ್ಮಶವನ್ನು ಮಾತಿನ ಮೂಲಕವೇ ತೊಳೆದು ಹಾಕುವ ಪ್ರಯತ್ನ ಮಾಡುತ್ತಿದ್ದಾಳೆ. ಶ್ರೇಷ್ಠಾಗೆ ಇದ್ಯಾವುದು ರುಚಿಸುವುದಿಲ್ಲ. ಅವಳು ಏನು ಮಾಡಬೇಕು ಅಂದುಕೊಳ್ಳುತ್ತಾಳೋ ಅದನ್ನೇ ಮಾಡುವುದು. ಆದರೆ ಈಗ ಅಪ್ಪ ಅಮ್ಮನ ಮುಂದೆ ಹೇಳುತ್ತಿರುವ ಕಾರಣ ಏನಾದರೂ ಎಫೆಕ್ಟ್ ಆಗಬಹುದು. ಅಪ್ಪ ಅಮ್ಮನಿಗೆ ಮತ್ತೊಂದು ಸುಳ್ಳು ಹೇಳುವುದಕ್ಕೆ ಕಷ್ಟವೇನು ಅಲ್ಲ.
ಅಯ್ಯೋ ಡೈರೆಕ್ಟರ್ ಮರೆತುಬಿಟ್ರಾ?
ಶ್ರೇಷ್ಠಾಳ ಅಪ್ಪ ಅಮ್ಮ ಭಾಗ್ಯಾ ಬಂದಾಗಲೂ ಅಪರಿಚಿತರಂತೆ ನೋಡಿದ್ದಾರೆ. ಇದು ನೋಡುಗರಿಗೆ ಕೆಲವರಿಗೆ ಗೊಂದಲ ಮೂಡಿಸಿದೆ. ಯಾಕೆ ಭಾಗ್ಯಾಳ ಪರಿಚಯವೇ ಇಲ್ಲದಂತೆ ನಿಂತಿದ್ದಾರಲ್ಲ ಅನ್ನಿಸಿದೆ. ಈ ಶ್ರೇಷ್ಠಾಳ ಅಪ್ಪ ಅಮ್ಮ ಭಾಗ್ಯಾಳನ್ನ ಯಾಕೆ ಮಾತಾಡಿಸುತ್ತಿಲ್ಲ ಎಂದು ಒಬ್ಬರು ಕೇಳಿದರೆ, ಇನ್ನೊಬ್ಬರಿಗೆ ಅದು ಅನುಮಾನ ಮೂಡಿಸಿದೆ.
ಭಾಗ್ಯಾಳ ಗುರುತು ಸಿಗಲಿಲ್ವಾ?
ಭಾಗ್ಯಾಳನ್ನ ನೋಡೆ ಇಲ್ಲ ಅನ್ಸುತ್ತೆ ಎಂದಾಗ, ಭಾಗ್ಯಾ ಹಾಗೂ ಶ್ರೇಷ್ಠಾಳ ಅಪ್ಪ ಅಮ್ಮ ಭೇಟಿಯಾಗಿದ್ದರ ಬಗ್ಗೆ ತಿಳಿಸಿದ್ದಾರೆ. ಈ ಹಿಂದೆ ಮನೆ ಬಿಟ್ಟು ಬಂದಾಗ ಭಾಗ್ಯಾಳನ್ನ ಕಾಪಾಡಿದ್ದು ಇದೇ ಶ್ರೇಷ್ಠಾಳ ಅಪ್ಪ ಅಮ್ಮ. ಭಾಗ್ಯಾಳ ಗಂಡ ಸರಿ ಇಲ್ಲ ಅಂತ ಗೊತ್ತು. ಆದರೆ ಅವನೆ ತರುಣ್ ಅನ್ನೋದ ಗೊತ್ತಿಲ್ಲ ಎಂದು ಉತ್ತರಿಸಿದ್ದಾರೆ.


Click it and Unblock the Notifications











