Bhagyalakshmi: ಶ್ರೇಷ್ಠಾ ಕಪಾಳಕ್ಕೆ ಹೊಡೆದ ತಾಂಡವ್; ಆಮೇಲೆ ಗಢಗಢ..!
ಭಾಗ್ಯಾಳ ಸಂಸಾರದ ವಿಚಾರದಲ್ಲಿ ಶ್ರೇಷ್ಠಾ ತಪ್ಪು ನಿರ್ಧಾರ ತೆಗೆದುಕೊಂಡಿದ್ದಾಳೆ. ಭಾಗ್ಯಾಳ ಡಿವೋರ್ಸ್ ವಿಚಾರವನ್ನು ದುಡ್ಡು ಕೊಟ್ಟು, ವಿಡಿಯೋ ಮಾಡಿಸಿ, ಹರಿಬಿಟ್ಟಿದ್ದಳು. ಆದರೆ ಭಾಗ್ಯಾ ಅದನ್ನ ಬಿಡಬೇಕಲ್ಲ. ಅದರ ಮೂಲವನ್ನು ಪತ್ತೆ ಮಾಡಿದ್ದಳು. ವಿಡಿಯೋ ಮಾಡಿದವಳ ಜೊತೆಗೆ, ಮಾಡಿಸಲು ಹೇಳಿದವಳ ಮೂಲವನ್ನು ಕಂಡು ಹಿಡಿದಿದ್ದಳು. ದೇವಸ್ಥಾನಕ್ಕೆ ಬಂದು, ಶ್ರೇಷ್ಠಾಳ ಅಪ್ಪ-ಅಮ್ಮನ ಮುಂದೆಯೇ ಬುದ್ದಿ ಹೇಳಿದ್ದಳು. ಎಚ್ಚರಿಕೆಯನ್ನು ಕೊಟ್ಟು ಬಂದಿದ್ದಳು.
ಅಷ್ಟೇ ಆಗಿದ್ದರೆ, ಶ್ರೇಷ್ಠಾ ತಪ್ಪನ್ನ ಅರ್ಥ ಮಾಡಿಕೊಂಡು ಸುಮ್ಮನೆ ಇದ್ದಿದ್ದರೆ ಏನು ಸಮಸ್ಯೆ ಆಗ್ತಾ ಇರಲಿಲ್ಲ. ಆದರೆ ಭಾಗ್ಯಾಗೆ ಬುದ್ದಿ ಕಲಿಸುತ್ತೀನಿ ಅಂತ ಬಂದು ಚಟೀರ್ ಚಟೀರ್ ಅಂತ ಕಪಾಳಕ್ಕೆ ಒದೆ ತಿಂದಿದ್ದಾಳೆ. ಅದರಲ್ಲೂ ಶ್ರೇಷ್ಠಾ ಮಾಡಿದ ಕೆಲಸಕ್ಕೆ ತಾಂಡವ್ ಕೂಡ ಕಪಾಳಕ್ಕೆ ಕೊಟ್ಟಿದ್ದಾನೆ.

ಶ್ರೇಷ್ಠಾಳನ್ನೇ ನಂಬಿದ ತಾಂಡವ್
ಕುಸುಮಾ ಇವತ್ತು ಸತ್ಯ ಗೊತ್ತು ಮಾಡಿಸುತ್ತೀನಿ ಎಂದು ತಾಂಡವ್‌ನ ದೇವಸ್ಥಾನಕ್ಕೆ ಕರೆತಂದಿದ್ದಳು. ಅಲ್ಲಿ ಮೇಘಾಳ ಕೆನ್ನೆಗೊಂದು ಕೊಟ್ಟು, ಬಾಯಿ ಬಿಡಿಸಿದ್ದಳು. ಇದೆಲ್ಲ ಮಾಡಿದ್ದು ಶ್ರೇಷ್ಠಾ ಅಂತ ಅಷ್ಟೆಲ್ಲಾ ಹೇಳಿದರು ತಾಂಡವ್ ನಂಬಲು ರೆಡಿ ಇಲ್ಲ. ಭಾಗ್ಯಾಳ ಮಾತು ಕೇಳಿ ಬಂದಿದ್ದೀಯಲ್ಲ. ಶ್ರೇಷ್ಠಾ ಈ ರೀತಿ ಮಾಡೋಕೆ ಸಾಧ್ಯವೇ ಇಲ್ಲ ಎಂದಿದ್ದಾನೆ.
ನಾನೇ ಮಾಡಿಸಿದ್ದು ಎಂದ ಶ್ರೇಷ್ಠಾ
ಕುಸುಮಾಗೆ ಮೊದಲು ಬಾಯಿ ಮಾತಾಡುತ್ತೆ. ಮಾತುಗಳೇ ಗುಂಡೇಟು ಹೊಡೆದಂಗೆ ಇರುತ್ತೆ. ಇನ್ನು ಕೈ ಮಾತಾಡಿದ್ರೆ ಕೇಳ್ಬೇಕಾ. ಶ್ರೇಷ್ಠಾಳಿಗೆ ನಮ್ಮಮನೆಯಲ್ಲಿಯೇ ತಿಂದು ನಮ್ಮ ಮನೆಗೆ ದ್ರೋಹ ಮಾಡ್ತೀಯಾ. ನನ್ನ ಸೊಸೆ ಬಗ್ಗೆಯೇ ಅಪಪ್ರಚಾರ ಮಾಡ್ತೀಯಾ ಅಂತ ಒಂದು ಕೊಟ್ಲು ನೋಡಿ, ಶ್ರೇಷ್ಠಾ ನಾನೇ ಮಾಡಿದ್ದು ಎಂಬ ಸತ್ಯ ಒಪ್ಪಿಕೊಂಡಿದ್ದಾಳೆ. ಇದಕ್ಕಿಂತ ಡ್ಯಾಮೇಜ್ ಆಗೋದನ್ನ ಬೇಕಾದ್ರು ಮಾಡ್ತೀನಿ ಎಂದು ಜೋರಾಗಿ ಕೂಗಾಡಿದ್ದಾಳೆ. ನಿಮ್ಮಿಂದ ಏನು ಮಾಡಿಕೊಳ್ಳುವುದಕ್ಕೆ ಸಾಧ್ಯ ಅಂತ ಸವಾಲು ಹಾಕಿದ್ದಾಳೆ.

ಶ್ರೇಷ್ಠಾಳ ಕಪಾಳಕ್ಕೆ ಬಿಟ್ಟ ತಾಂಡವ್
ತಾಂಡವ್ ಹೆಚ್ಚು ಘನತೆ, ಗೌರವಕ್ಕೆ ಬೆಲೆ ಕೊಡುತ್ತಾನೆ. ಅದರಲ್ಲೂ ಯಾರ್ಯಾರೊ ಫೋನ್ ಮಾಡಿ ಕೇಳುತ್ತಿದ್ದರೆ ಅದನ್ನೆಲ್ಲ ಸಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಶ್ರೇಷ್ಠಾ ಇಂತ ಕೆಲಸ ಮಾಡಿಬಿಟ್ಟಳಾ ಎಂದು ಫಸ್ಟ್ ಶ್ರೇಷ್ಠಾ ಕಪಾಳಕ್ಕೆ ಹೊಡೆದಿದ್ದಾನೆ. ನಮ್ಮ ಮನೆ ಮಾರ್ಯಾದೆಯನ್ನು ಬೀದಿಗೆ ತರ್ತೀಯಾ ಅಂತ ಜೋರು ಮಾಡಿದರೆ ಅಲ್ಲಿಯೂ ಹೆದರದೆ, ಹೌದು ನಾನೇ ಮಾಡಿದ್ದು, ಏನಿವಾಗ. ನಂಗೆ ಭಾಗ್ಯಾ ಮರ್ಯಾದೆ ತೆಗೆಯಬೇಕಿತ್ತು. ಎಲ್ಲರ ಮುಂದೆ ಬಹಳ ಭಾಷಣ ಮಾಡುವ ಭಾಗ್ಯಾ, ತನ್ನ ಗಂಡನನ್ನೇ ಸರಿಗೆ ನೋಡಿಕೊಳ್ಳಲ್ಲ. ಅವಳ ಬಾಳು ನೆಟ್ಟುಗೆ ಇಲ್ಲ ಅನ್ನೋದನ್ನ ತೋರಿಸಬೇಕಿತ್ತು. ಅದ್ಕೆ ದುಡ್ಡು ಕೊಟ್ಟು ವಿಡಿಯೋ ಮಾಡಿಸಿದೆ ಎಂದಿದ್ದಾಳೆ.
ಶ್ರೇಷ್ಠಾ ಸತ್ಯ ಹೇಳಿದರೆ ಎಂಬ ಭಯ
ಶ್ರೇಷ್ಠಾ ಇಂಥ ಕೆಲಸ ಮಾಡಿಬಿಟ್ಟಳಲ್ಲ ಅಂತ ಕಪಾಳಕ್ಕೇನೋ ಹೊಡೆದು ಬಿಟ್ಟ ತಾಂಡವ್. ಆದರೆ ಈಗ ಶ್ರೇಷ್ಠಾ ಏನು ಮಾಡ್ತಾಳೋ ಎಂಬ ಭಯ ಅವನನ್ನು ಕಾಡುತ್ತಿದೆ. ತಾಂಡವ್ ಸರ್ ನಂಗೆ ಹೊಡೀತೀರಾ ಅಲ್ವಾ? ನಿಮ್ಮ ಮನೆ ಮರ್ಯಾದೆಯನ್ನೇ ಕಳಿತೀನಿ ಎಂದಾಗ ತಾಂಡವ್‌ಗೆ ಭಯ ಆಗಿದೆ. ಇನ್ನೆಲ್ಲಿ ಎಲ್ಲಾ ಸತ್ಯವನ್ನು ಹೇಳಿ ಬಿಡುತ್ತಾಳೋ ಅಂತ, ಭಾಗ್ಯಾ ಮತ್ತೆ ಅಮ್ಮನನ್ನು ಅಲ್ಲಿಂದ ಕರೆದುಕೊಂಡುವ ಹೋಗುವ ಪ್ರಯತ್ನ ಮಾಡಿದ್ದಾನೆ.


Click it and Unblock the Notifications











