Bhagyalakshmi: ತಾಂಡವ್ ಜಸ್ಟ್ ಮಿಸ್; ಇಲ್ಲಂದ್ರೆ ಭಾಗ್ಯಾಳಿಂದ ಬೀಳ್ತಾ ಇದ್ವು ಕಜ್ಜಾಯ!

By ಎಸ್ ಸುಮಂತ್

ಶ್ರೇಷ್ಠಾಳ ಮನೆ ಹಾಳು ಕೆಲಸಕ್ಕೆ ಅತ್ತೆ- ಸೊಸೆ ಸರಿಯಾದ ಉತ್ತರವನ್ನೇ ಕೊಟ್ಟಿದ್ದಾರೆ. ಭಾಗ್ಯಾ ಹೇಗೆ ಅಂತ ಗೊತ್ತಿದ್ದರೂ ಶ್ರೇಷ್ಠಾ ಪದೇ ಪದೇ ಅವಳ ವಿಷಯಕ್ಕೆ ಹೋಗುತ್ತಾಳೆ. ಕೆಣಕುತ್ತಾಳೆ, ಬಾರಿಸಿಕೊಂಡು ಬರುತ್ತಾಳೆ.

ತಾಂಡವ್ ಜೊತೆಗೆ ಓಡಾಡುವುದಕ್ಕೇನೆ ಭಾಗ್ಯಾ ಬಿಡಲ್ಲ. ಇನ್ನು ತನ್ನ ಸಂಸಾರ ಹಾಳು ಮಾಡುವುದಕ್ಕೆ ಬಂದ್ರೆ ಬಿಡುತ್ತಾಳಾ..? ಭಾಗ್ಯಾಗೆ ಅಹಂಕಾರ ಬಂದಿದೆ. ಡಿವೋರ್ಸ್ ಕೇಳಿದ್ದಾಳೆ ಎಂದು ವಿಡಿಯೋ ಮಾಡಿಸಿದ್ದ ಶ್ರೇಷ್ಠಾಗೆ ಸರಿಯಾಗಿಯೇ ಬಿದ್ದಿದೆ.

Colors kannada Bhagyalakshmi Written Update on August 21st episode

ಭಾಗ್ಯಾ, ಕುಸುಮಾಳ ಸೊಸೆ. ತನ್ನ ಸೊಸೆ ಏನೆಂಬುದು ಗೊತ್ತಿರುವ ಕಾರಣದಿಂದಾನೇ ಕುಸುಮಾ ಮಗನನ್ನೇ ಎದುರಾಕಿಕೊಂಡಿದ್ದಾಳೆ. ಈಗ ಶ್ರೇಷ್ಠಾ ಯಾವ ಲೆಕ್ಕ. ಹಾಗ್ ಮಾಡಿ ಬಿಡ್ತೀನಿ ಹೀಗ್ ಮಾಡಿಬಿಡ್ತೀನಿ ಎಂದು ಹಾರಾಡುತ್ತಿದ್ದ ಶ್ರೇಷ್ಠಾಗೆ ಕುಸುಮಾ ಕೊಟ್ಟ ಒದೆ ಬಾಯಿ ಮುಚ್ಚಿಕೊಂಡಿರುವಂತೆ ಮಾಡಿದೆ. ಕ್ಷಮೆ ಕೇಳುವಂತೆ ಮಾಡಿದೆ. ಇದರ ನಡುವೆ ತಾಂಡವ್ ಅರೆ ಕ್ಷಣದಲ್ಲಿ ಬಚಾವ್ ಆಗಿದ್ದಾನೆ.

ಶ್ರೇಷ್ಠಾಳಿಂದಾನೇ ಕ್ಷಮೆ ಕೇಳಿಸಿದ ಕುಸುಮಾ

ಶ್ರೇಷ್ಠಾ ಬೇಜಾನ್ ಹಾರಾಡುತ್ತಿದ್ದಳು. ನಾನೇ ಮಾಡಿದ್ದು, ಇನ್ನು ಮರ್ಯಾದೆ ತೆಗೆಯುತ್ತೀನಿ ಅಂತೆಲ್ಲ ಹೇಳುತ್ತಿದ್ದಳು. ಆದರೆ ಕುಸುಮಾ ಕೊಟ್ಟ ಒಂದೇ ಒಂದು ಏಟಿಗೆ ಮೇಘಾಳ ಅಕೌಂಟ್‌ನಲ್ಲಿಯೇ ಲೈವ್ ಬಂದು ಸತ್ಯ ಒಪ್ಪಿಕೊಂಡಿದ್ದಾಳೆ. ನಾನೇ ಭಾಗ್ಯಾಳ ಮೇಲೆ ಸುಳ್ಳು ಹೇಳಿಸಿದ್ದು. ಕ್ಷಮಿಸು ಭಾಗ್ಯಾ ಎಂದು ಕ್ಷಮೆ ಕೇಳಿದ್ದಾಳೆ.

ಮಗಳಿಂದ ತಲೆ ತಗ್ಗಿಸಿದ ಯಶೋಧಾ

ಭಾಗ್ಯಾ ಅಷ್ಟೆಲ್ಲಾ ರಾದ್ಧಾಂತ ಮಾಡಿದ್ದಳು. ಮಗಳು ಬೇರೆ ಬುದ್ದಿ ಕಲಿಸುತ್ತೀನಿ ಅಂತ ಬಂದಿದ್ದಳು. ಇದೆಲ್ಲವನ್ನು ನೋಡಿ ಎಲ್ಲಾ ಎಲ್ಲಿ ಹೋದರು ಅಂತ ಶ್ರೇಷ್ಠಾಳ ಅಪ್ಪ ಅಮ್ಮ ಹುಡುಕಿಕೊಂಡು ಬಂದಿದ್ದರು. ಕುಸುಮಾಳನ್ನು ಕಂಡ ಯಶೋಧಾ, ಮಗಳು ಮಾಡಿದ ತಪ್ಪಿಗೆ ಕ್ಷಮೆ ಕೇಳಿದಳು. ಆದರೆ ಕುಸುಮಾ, ನಾನು ಮೊದಲೇ ಹೇಳಿದ್ದೆ ನಿಮ್ಮ ಮಗಳ ಸುದ್ದಿಗೆ ಬರೋದಿಲ್ಲ ಅಂತ. ಆದ್ರೆ ನನ್ನ ಮಗ ಅಂತ ಹೇಳಿ ತಾಂಡವ್ ನ ತೋರಿಸಿದರೆ, ಆ ಜಾಗದಲ್ಲಿ ಇಲ್ವೆ ಇಲ್ಲ.

Colors kannada Bhagyalakshmi Written Update on August 21st episode

ಜಸ್ಟ್ ಎಸ್ಕೇಪ್ ಆದ ತಾಂಡವ್

ಕುಸುಮಾ, ಭಾಗ್ಯಾ ಎಲ್ಲರೂ ಅವರದ್ದೇ ಲೋಕದಲ್ಲಿ ಇದ್ದರು. ಅದೇ ಸಮಯಕ್ಕೆ ಶ್ರೇಷ್ಠಾಳ ಅಪ್ಪ ಅಮ್ಮ ಬಂದರು. ಅದನ್ನು ಗಮನಿಸಿದ ತಾಂಡವ್ ಇಂದು ಮುಂದು ನೋಡದೆ ಎಸ್ಕೇಪ್ ಆಗಿದೆ. ಇಲ್ಲ ಅಂದಿದ್ರೆ ಯಶೋದಾ, ಅಳಿಯಂದ್ರೆ ಅಂತ ಕರೆದು ಎಲ್ಲರಿಗೂ ಸತ್ಯ ಗೊತ್ತಾಗುವಂತೆ ಮಾಡ್ತಾ ಇದ್ರು. ಭಾಗ್ಯಾಗೆ ಸತ್ಯ ಗೊತ್ತಾಗಿದ್ರೆ ತಾಂಡವ್‌ಗೆ ಕಪಾಳ ಮೋಕ್ಷಾ ಅಲ್ಲ ಕೊಲೆಯನ್ನೇ ಮಾಡಿ ಬಿಡ್ತಾ ಇದ್ಲು. ಜಸ್ಟ್ ಬಚಾವ್ ಆದ್ಲು.

ಸತ್ಯ ತಿಳಿಯುತ್ತಾಳಾ ಕುಸುಮಾ?

ಕುಸುಮಾಗೆ ಈಗಾಗಲೇ ಮಗನ ಬಗ್ಗೆ ಅನುಮಾನ ಬಂದಿದೆ. ಮಗ ಹಾದಿ ತಪ್ಪಿರಬೇಕು, ಬೇರೆ ಯಾರೋ ಹುಡುಗಿ ಇಷ್ಟ ಆಗಿರಬೇಕು. ಅದಕ್ಕೆ ಭಾಗ್ಯಾಳಿಂದ ಡಿವೋರ್ಸ್ ಕೇಳುತ್ತಿದ್ದಾನೆ ಎನಿಸಿದೆ. ಅದನ್ನ ಬಾಯಿ ಬಿಡಿಸಿಕೊಳ್ಳುವ ಪ್ರಯತ್ನ ಒಮ್ಮೆ ವಿಫಲವಾಗಿದೆ. ಈಗ ಶ್ರೇಷ್ಠಾಳ ಅಪ್ಪ ಅಮ್ಮ ಬಂದೊಡನೆ ಓಡಿ ಹೋಗಿದ್ದಾನೆ. ಇದೆಲ್ಲವನ್ನು ಸೂಕ್ಷ್ಮವಾಗಿ ಕುಸುಮಾ ಯೋಚಿಸುತ್ತಾಳಾ ನೋಡಬೇಕಿದೆ.

ಸದ್ಯಕ್ಕೆ ಸತ್ಯ ಗೊತ್ತಾಗಲ್ಲ

ಕುಸುಮಾ ಯೋಚಿಸಿದರೆ ಯಶೋಧಾಳ ಬಳಿ ಅಳಿಯನ ಮುಖ ತೋರಿಸು ಅಂತ ಕೇಳುತ್ತಾಳೆ. ಇಲ್ಲ ಅವತ್ತು ಕಳಿಸಿದ ಫೋಟೋ ಡೌನ್ ಲೋಡ್ ಆಗುತ್ತೆ. ಆದರೆ ಮದುವೆ ದಿನದ ತನಕ ಅಂತು ಯಾವ ಸತ್ಯವೂ ಅಷ್ಟು ಸುಲಭವಾಗಿ ಗೊತ್ತಾಗೋದಿಲ್ಲ.

More from Filmibeat

English summary
Bhagyalakshmi kannada serial today episode. Here is the details about Just Escape Tandav;
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X