Bhagyalakshmi: ನೋಡ..ನೋಡ.. ಶ್ರೇಷ್ಠಾ ಮೇಲೆ ನಾಗವಲ್ಲಿ ಪ್ರವೇಶ..ತಾಂಡವ್ ಹುಷಾರು ಕಣಪ್ಪ!

By ಎಸ್ ಸುಮಂತ್

ಶ್ರೇಷ್ಠಾಳಿಗೆ ಒಳ್ಳೆಯದಾಗಲಿ ಅಪ್ಪ ಅಮ್ಮ ಪೂಜೆ ಬೇರೆ ಮಾಡ್ತಾ ಇದಾರೆ. ಆದರೆ ಶ್ರೇಷ್ಠಾಗೆ ತನ್ನ ಸುಖ, ಸಂತೋಷದ ಮುಂದೆ ಅಪ್ಪ‌ಅಮ್ಮನು ಲೆಕ್ಕಕ್ಕೆ ಇಲ್ಲದಂತೆ ಆಗಿದೆ. ಶ್ರೇಷ್ಠಾಳ ತಾಯಿ ಯಶೋಧಾ ತನ್ನ ತಮ್ಮನನ್ನೇ ಮದುವೆಯಾಗುವಂತೆ ಕೇಳಿಕೊಂಡಿದ್ದಳು. ಆದರೆ ಶ್ರೇಷ್ಠಾಗೆ ಅದು ಇಷ್ಟ ಇರಲಿಲ್ಲ. ಮೊದಲೇ ಹಠಮಾರಿ. ಮನೆಯವರ ಯಾವ ಮಾತಿಗೂ ಸೊಪ್ಪು ಹಾಕದೆ ತಾಂಡವ್ ಜೊತೆಗೆ ಮದುವೆಯಾಗುವುದಕ್ಕೆ ಒಪ್ಪಿಗೆ ಪಡೆದುಕೊಂಡಳು.

ಮಗಳ ಜೀವನ ಮುಖ್ಯ ಎಂದುಕೊಂಡ ಯಶೋಧಾ ಈ ಮದುವೆಗೆ ಒಪ್ಪಿದರು. ಸಿಂಪಲ್ ಆಗಿ ಮಾತುಕತೆ ಕೂಡ ಆಗಿದೆ. ಮದುವೆ ತಯಾರಿಯೂ ನಡೆಯುತ್ತಿದೆ. ಹೀಗಿರುವಾಗಲೇ ದೊಡ್ಡ ರಾದ್ಧಾಂತಗಳು ನಡೆಯುತ್ತಿವೆ. ತಾಂಡವ್‌ಗೆ ಚೆನ್ನಾಗಿಯೇ ಗೊತ್ತು ಶ್ರೇಷ್ಠಾಳಿಂದ ಆಗಾಗ ಅಪಾಯ ತಪ್ಪಿದ್ದಲ್ಲ ಅಂತ. ಆದರೂ ಮೊಂಡು ಧೈರ್ಯ ಮಾಡಿ ಮದುವೆಗೆ ರೆಡಿಯಾಗಿದ್ದಾನೆ. ತಾಂಡವ್‌ನ ಬಾಸ್ ಕೂಡ ಅದಾಗಲೇ ಎಚ್ಚರಿಕೆ ನೀಡಿದ್ದಾರೆ.

Colors kannada Bhagyalakshmi Written Update on August 23rd episode

ಮದುವೆಗೆ ಒಪ್ಪಲ್ಲ ಎಂದ ಯಶೋಧಾ

ಭಾಗ್ಯಾ ಹೇಳಿದ ಮಾತುಗಳನ್ನು ಕೇಳಿಸಿಕೊಂಡ ಯಶೋಧಾ ಒಂದು ತೀರ್ಮಾನಕ್ಕೆ ಬಂದಿದ್ದಾಳೆ. ತರುಣ್‌ಗೆ ಈಗಾಗಲೇ ಮದುವೆಯಾಗಿ ಮಕ್ಕಳಿದ್ದಾವೆ ಎಂದು ತಿಳಿದು ಈ ಮದುವೆಯೇ ಬೇಡ ಎಂದಿದ್ದಾಳೆ. ಅದು ಬೇರೆ ಶ್ರೇಷ್ಠಾ ಆಡಿದ ಅವತಾರಕ್ಕೂ ತರುಣ್ ಬೇಡವೇ ಬೇಡ. ಈ ಮದುವೆ ನಡೆಯುವುದಿಲ್ಲ. ನಾವೂ ಮದುವೆ ನಡೆಯುವುದಕ್ಕೆ ಬಿಡಲ್ಲ ಎಂದಿದ್ದಾರೆ.

ನಿಮ್ಮ ಒಪ್ಪಿಗೆಯೇ ಬೇಡವೆಂದ ಶ್ರೇಷ್ಠಾ

ಭಾಗ್ಯಾ ಅಷ್ಟೆಲ್ಲಾ ಎಚ್ಚರಿಕೆಯನ್ನು ಕೊಟ್ಟಾಗಲೇ ಶ್ರೇಷ್ಠಾ ಮದುವೆಯಿಂದ ಹಿಂದೆ ಸರಿದಿಲ್ಲ. ಪೂಜಾ ಬಂದು ಮನೆಯಲ್ಲಿ ಕೂತಾಗಲೂ ನಿರ್ಧಾರದಿಂದ ಹಿಂದೆ ಸರಿದಿಲ್ಲ. ಇನ್ನು ಅಪ್ಪ ಅಮ್ಮ ಹೇಳಿದರೆ ಹಿಂದೆ ಸರಿಯುತ್ತಾಳಾ. ಅಮ್ಮ ಆ ರೀತಿ ಹೇಳಿದ್ದೇ ತಡ, ರೌದ್ರವತಾರ ತಾಳಿದ ಶ್ರೇಷ್ಠಾ. ನೀನ್ಯಾರೆ ಹೇಳೋದಕ್ಕೆ. ಮಗಳ ಸಂತೋಷವೇ‌ ನಿಮಗೆ ಬೇಡ ಅಂದ್ರೆ ನಿಮ್ಮ‌ ಒಪ್ಪಿಗೆಯೂ ನನಗೆ ಬೇಡ. ನಾನು ಅವನನ್ನೇ ಮದುವೆ ಆಗೋದು. ನನ್ನ ಪ್ರೀತಿಯನ್ನ ಪಡೆದುಕೊಂಡೆ ಪಡೆದುಕೊಳ್ತೀನಿ ಅಂತ ಅಮ್ಮನಿಗೆ ಏಕವಚನದಲ್ಲಿಯೇ ಎಚ್ಚರಿಕೆ ಕೊಟ್ಟಿದ್ದಾಳೆ.

Colors kannada Bhagyalakshmi Written Update on August 23rd episode

ಮಿತಿಮೀರಿದೆ ಶ್ರೇಷ್ಠಾ ನಡವಳಿಕೆ

ಭಾಗ್ಯಾ ಬಂದಾಗಿನಿಂದ ಶ್ರೇಷ್ಠಾಳ ಅವತಾರವನ್ನು ನೋಡಿ ಯಶೋಧಾಗೆ ಸಾಕಾಗಿದೆ. ಯಾರಿಗೂ ಮರ್ಯಾದೆ ಕೊಡಲಿಲ್ಲ. ಅದರಲ್ಲೂ ಕುಸುಮಾಗೂ ಬಾಯಿಗೆ ಬಂದಂತೆ ಮಾತಾಡಿದ್ದಾಳೆ. ಎಷ್ಟೇ ಬುದ್ದಿ ಮಾತು ಹೇಳಿದರೂ ಶ್ರೇಷ್ಠಾ ಬದಲಾಗುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಅದರಲ್ಲೂ ಅಮ್ಮನ ಮಾತಿಗೆ ಬೆಲೆ ಕೊಡದೆ ಇದ್ದಾಗ ಬೇಸರ ತರಿಸಿದೆ, ನೋವಾಗಿದೆ. ಅದಕ್ಕೆ ಮಗಳ ಸಂಬಂಧವನ್ನೇ ಕಡಿದು ಕೊಂಡಿದ್ದಾರೆ. ತಲೆ ಮೇಲೆ ಬಿಂದಿಗೆ ನೀರು ಹೊಯ್ದುಕೊಂಡು, ನನಗೂ ನಿನಗೂ ಇನ್ಮುಂದೆ ಸಂಬಂಧ ಮುಗೀತು ಎಂದೇ ಹೇಳಿದ್ದಾರೆ.

ನಾಗವಲ್ಲಿಯಾಗಿ ಬದಲಾದ ಶ್ರೇಷ್ಠಾ

ಶ್ರೇಷ್ಠಾಳ‌ ಮಾತು, ನಡವಳಿಕೆ ಕುಸುಮಾಗೆ ಶಾಕ್ ಆಗಿದೆ. ಅಪ್ಪ ಅಮ್ಮನಿಗೆ ಬೆಲೆ ಕೊಡದವಳು ನಮಗಿನ್ನೇನು ಕೊಡ್ತಾಳೆ ಅಂತಾ ಅನಿಸಿದೆ. ಆದರೆ ಶ್ರೇಷ್ಠಾಳ ವರ್ತನೆ ನೋಡಿ ಜನ ಕೂಡ ಶಾಕ್ ಆಗಿದ್ದಾರೆ. ಥೇಟ್ ಆಪ್ತಮಿತ್ರ ಸಿನಿಮಾದಲ್ಲಿ ನಾಗವಲ್ಲಿ ಬದಲಾದಂತೆಯೇ ಆಗಿದ್ದಾಳೆ. ಒಂದು ಕ್ಷಣ ಅವಳಾಡುವುದನ್ನು ನೋಡಿದಾಗ ಭಯವಾಗುತ್ತದೆ. ಎಲ್ಲರ ಮಾತುಗಳು ಶ್ರೇಷ್ಠಾ ಮನಸ್ಸಿನ ಮೇಲೆ ಒತ್ತಡ ತಂದು, ಇನ್ನಷ್ಟು ಟ್ರಿಗರ್ ಆಗುವಂತೆ ಮಾಡಿದೆ. ಆದರೂ ಶ್ರೇಷ್ಠಾಳನ್ನು ನೋಡಿದ ವೀಕ್ಷಕರು ನೋಡ ನೋಡ ಹೆಂಗೆ ನಾಗವಲ್ಲಿಯಂತೆ ಬದಲಾಗುತ್ತಿದ್ದಾಳೆ. ತಾಂಡವ್ ನಿಮ್ಮ ಹುಡುಗಿ ನೋಡು ನಾಗವಲ್ಲಿಯಾಗುತ್ತಾಳೆ. ಸ್ವಲ್ಪ ಹುಷಾರು ನೀನು ಎಂದಿದ್ದಾರೆ.

More from Filmibeat

English summary
Bhagyalakshmi kannada serial today episode. Here is the details about Shrestha has changed like Nagavalli from the movie Aptamitra;
Read more about: filmbeat original serial sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X