Bhagyalakshmi: ತರಾತುರಿಯಲ್ಲಿ ಮದುವೆಗೆ ಹೊರಡುತ್ತಿದ್ದ ತಾಂಡವ್ ಲಾಕ್; ಹೀಗೇನ್ಮಾಡ್ತಾಳೆ ಶ್ರೇಷ್ಠಾ?

By ಎಸ್ ಸುಮಂತ್

ಶ್ರೇಷ್ಠಾ ಕಿಚ್ಚು ಹೆಚ್ಚಾಗಿದೆ. ತನ್ನ ಆಸೆಗಳಿಗೆ ಅಡ್ಡ ಬಂದ ಅಪ್ಪ ಅಮ್ಮನಿಗೂ ಬೆಲೆ ಕೊಡದೆ ಒಳ್ಳೆ ನಾಗವಲ್ಲಿಯಂತೆ ಆಡಿದವಳು, ಈಗ ತಣ್ಣಗಾಗಿದ್ದಾಳೆ. ತನ್ನ ವಿರುದ್ದ ನಿಂತವರಿಗೆ ಹೇಗೆ ಬುದ್ದಿ ಕಲಿಸಬೇಕು ಎಂಬುದನ್ನಷ್ಟೇ ಯೋಚನೆ ಮಾಡುತ್ತಿದ್ದಾಳೆ.

ಭಾಗ್ಯಾಳ ಮರ್ಯಾದೆ ಕಳೆಯಬೇಕು, ಅವಳ ಸ್ಥಾನ ನನಗೆ ಸಿಗಬೇಕು ಎಂದು ಹಠ ಮಾಡಿದ್ದಾಳೆ‌. ತಾಂಡವ್ ಬೇಡ ಬೇಡ ಎಂದರೂ ಇಂದೇ ಮದುವೆ ಫಿಕ್ಸ್ ಮಾಡಿದ್ದಾಳೆ.

Colors kannada Bhagyalakshmi Written Update on August 28th episode

ಸುಂದ್ರಿಯನ್ನ ತರುಣ್ ಅಮ್ಮ ಎಂದು ಮನೆಯವರಿಗೆಲ್ಲಾ ಪರಿಚಯ ಮಾಡಿಕೊಟ್ಟಿದ್ದಳು. ಈಗ ಅಪ್ಪ ಅಮ್ಮನನ್ನೇ ಬೇಡವೆಂದು ದೂರ ತಳ್ಳಿ ಆಗಿದೆ. ಹೀಗಿರುವಾಗ ಸುಂದ್ರಿ ಅವಶ್ಯಕತೆಯೇ ಇಲ್ಲವೆಂಬಂತೆ ಸುಂದ್ರಿಯನ್ನು ತಳ್ಳಿ ಪೂಜಾಳನ್ನು ಕರೆದುಕೊಂಡು ಮದುವೆ ಮಂಟಪಕ್ಕೆ ಹೋಗಿದ್ದಾಳೆ. ಹೋಗುವ ದಾರಿಯಲ್ಲಿ ಮದುವೆ ವಿಚಾರವನ್ನು ಭಾಗ್ಯಾಳಿಗೆ ಹೇಳಿ ತಪ್ಪು ಮಾಡಿದ್ದಾಳೆ.

ಭಾಗ್ಯಾ ವಿರುದ್ಧ ಜಿದ್ದಿಗೆ ಬಿದ್ದ ಶ್ರೇಷ್ಠಾ

ಇವತ್ತೆ ಮದುವೆಯಾಗುವುದಕ್ಕೆ ಶ್ರೇಷ್ಠಾ ಎಲ್ಲಾ ರೀತಿಯ ಪ್ಲ್ಯಾನ್ ಮಾಡಿಕೊಂಡಿದ್ದಾಳೆ. ತನ್ನದೇ ದುಡ್ಡು ಕೊಟ್ಟು ತಯಾರಿಯನ್ನು ಮಾಡಿಸಿದ್ದಾಳೆ. ಇದನ್ನ ಭಾಗ್ಯಾಳಿಗೆ ತಿಳಿಸುವುದಕ್ಕೆ ಕಾಲ್ ಮಾಡಿದ್ದಾಳೆ. ಇವತ್ತೇ ನನ್ನ ಮದುವೆ. ಅದೇ ಹೆಂಡತಿ, ಮಕ್ಕಳಿಗೆ ಮೋಸ ಮಾಡುತ್ತಿದ್ದಾನಲ್ಲ ಅವನ ಜೊತೆಗೆ ನನ್ನ ಮದುವೆ ಎಂದು ಹೇಳಿದ್ದಾಳೆ. ಕುಸುಮಾ ಹಾಗೂ ಭಾಗ್ಯಾಗೆ, ಶ್ರೇಷ್ಠಾ ಮೇಲೆ ಇನ್ನಿಲ್ಲದ ಕೋಪ ಬಂದಿದೆ. ತಂದೆ ಆಸ್ಪತ್ರೆಯಲ್ಲಿದ್ದರು ಮದುವೆ ಅಂತೆ ಅಂತ.

Colors kannada Bhagyalakshmi Written Update on August 28th episode

ತಾಂಡವ್‌ಗೆ ಮತ್ತೆ ಶ್ರೇಷ್ಠಾ ಧಮ್ಕಿ

ಇತ್ತ ತಾಂಡವ್‌ಗೂ ಕಾಲ್ ಮಾಡಿದ ಶ್ರೇಷ್ಠಾ ಮದುವೆ ಎಲ್ಲಿ, ಯಾವಾಗ ಎಂದು ಮಾಹಿತಿ ನೀಡಿದ್ದಾಳೆ. ನಿನ್ನೆ ಡಿಸೈಡ್ ಮಾಡಿ ಇವತ್ತೇ ಯಾರು ಮದುವೆ ಆಗ್ತಾರೆ ಶ್ರೇಷ್ಠಾ ಅಂದ್ರೆ, ನಾವೇ ಇದ್ದೀವಲ್ಲ. ನಾವೂ ಮದುವೆ ಆಗ್ತಾ ಇದ್ದೀವಲ್ಲ ಮದುವೆ ಗಂಡೇ ಎಂದು ಎಚ್ಚರಿಕೆಯನ್ನು ಕೊಡುವ ರೀತಿ ಹೇಳಿದ್ದಾಳೆ‌. ಶ್ರೇಷ್ಠಾಳ ಭಯಕ್ಕೆ ಬೇಗ ಬೇಗ ಬಟ್ಟೆ ಪ್ಯಾಕ್ ಮಾಡಿಕೊಳ್ಳುತ್ತಿದ್ದಾನೆ.

ತಾಂಡವ್‌ಗೆ ಬುದ್ದಿ ಕಲಿಸಲು ಕುಸುಮಾ ಸರಿ

ಕುಸುಮಾಗೆ ಮಗನ ಮೇಲೆ ಮೊದಲಿನಿಂದ ಅನುಮಾನ. ಈಗ ಅವನ ರೂಮಿಗೆ ಬಂದು ನೋಡಿದರೆ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದ. ಅದನ್ನ ನೋಡಿ ನೀನು ಶ್ರೇಷ್ಠಾ ಮದುವೆಗೆ ಹೋಗ ಕೂಡದು ಎಂದು ನಿರ್ಬಂಧ ಹೇರಿದ್ದಾಳೆ. ಪ್ಲ್ಯಾನ್ ಮಾಡಿ ಭಾಗ್ಯಾಳಿಂದ ಊಟ, ತಿಂಡಿಯನ್ನು ರೂಮಿಗೆ ತರಿಸಿ ಇಟ್ಟಿದ್ದಾಳೆ. ತಾಂಡವ್ ನನ್ನು ಯಾಮಾರಿಸಿ ಹೊರಗೆ ಓಡಿ ಹೋಗಿ ರೂಮ್ ಲಾಕ್ ಮಾಡಿದ್ದಾಳೆ. ಇವತ್ತು ಎಲ್ಲಿಯುಇ ಹೋಗಬಾರದು. ರೂಮಿನಲ್ಲಿಯೇ ಇರಲಿ ಎಂದು ಸೊಸೆಗೆ ಜವಾಬ್ದಾರಿ ವಹಿಸಿದ್ದಾಳೆ ಕುಸುಮಾ.

ಭಾಗ್ಯಾಳ ಮೇಲೆ ವೀಕ್ಷಕರಿಗೆ ಅನುಮಾನ

ಇಲ್ಲಿ ವೀಕ್ಷಕರಿಗೆ ಭಾಗ್ಯಾ ಮೇಲೆ ನಂಬಿಕೆ ಇಲ್ಲ. ಗಂಡ ನಾಟಕವಾಡಿದರೆ ಕರಗಿ ಹೋಗಿ ಬಿಡುತ್ತಾಳೆ. ಶ್ರೇಷ್ಠಾಳ ಮದುವೆಗೆ ತಾಂಡವ್ ಹೋಗದೆ ಇದ್ದರೆ ಮೊದಲೇ ನಾಗವಲ್ಲಿ ಅವತಾರ ತಾಳಿರುವ ಶ್ರೇಷ್ಠಾ, ಇನ್ಯಾವ ಅವತಾರ ತಾಳುತ್ತಾಳೋ ಗೊತ್ತಿಲ್ಲ. ಹತ್ತಿರುವ ಬೆಂಕಿಯನ್ನು ತಾಂಡವ್ ನೀರು ಸುರಿದು ಹಾರಿಸಲೇಬೇಕಿದೆ. ಅದಕ್ಕೆ ಭಾಗ್ಯಾಳನ್ನು ಬಳಸಿಕೊಳ್ಳುತ್ತಾನಾ? ಭಾಗ್ಯಾ ಯಾಮಾರಿ ಬಿಡುತ್ತಾಳಾ ಎಂಬುದೇ ಅನುಮಾನವಾಗಿದೆ. ತಾಂಡವ್ ಹೋಗದೆ ಹೋದಲ್ಲಿ ಶ್ರೇಷ್ಠಾ ಹೇಗೆ ಪರಿಸ್ಥಿತಿಯನ್ನ ನಿಭಾಯಿಸುತ್ತಾಳೆ ಎಂಬ ಕುತೂಹಲವೂ ಇದೆ.

More from Filmibeat

English summary
Colors kannada Bhagyalakshmi Written Update on August 28th episode. Here is the details about Kusuma locked Tandav;
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X