Bhagyalakshmi: ಶ್ರೇಷ್ಠಾ ಮದುವೆ ವೈಭವ; ನಡೆಯದ ಮದುವೆಗೆ ಇಷ್ಟೆಲ್ಲಾ ಖರ್ಚಾ ಎಂದ ವೀಕ್ಷಕರು!
ಶ್ರೇಷ್ಠಾ ಹಠದಲ್ಲಿ ಮಾರಿಯೇ ಸರಿ. ತಾಂಡವ್‌ನ ಮದುವೆ ಆಗಬೇಕು ಅಂದ್ರೆ ಆಗಬೇಕು ಅಷ್ಟೇ. ಯಾರೇ ಅಡ್ಡಿಯಾದರೂ ಅದನ್ನು ತಡೆಯುವುದಕ್ಕೆ ಯಾರಿಂದಾನೂ ಸಾಧ್ಯವಿಲ್ಲದ ಹಾಗೇ ನಡೆದುಕೊಳ್ಳುತ್ತಾಳೆ. ತಾಂಡವ್‌ಗೆ ಎರಡು ಮಕ್ಳಿದ್ದಾವೆ, ಹೆಂಡತಿಗೆ ಮೋಸ ಮಾಡ್ತಾ ಇದ್ದಾನೆ ಎಂದು ಗೊತ್ತಾದ ಮೇಲೆ ಆಕೆಯ ಅಪ್ಪ-ಅಮ್ಮನೇ ಈ ಮದುವೆಗೆ ವಿರೋಧ ವ್ಯಕ್ತಪಡಿಸಿದರು. ಆದರೆ ಶ್ರೇಷ್ಠಾ ಅಪ್ಪ-ಅಮ್ಮನ ಸಂಬಂಧವನ್ನೇ ತಿರಸ್ಕರಿಸಿದ್ದಳು.
ಭಾಗ್ಯಾ ಮೇಲೆ ಜಿದ್ದಿಗೆ ಬಿದ್ದಿದ್ದಾಳೆ. ಭಾಗ್ಯಾಳ ಹೆಂಡತಿ ಎಂಬ ಪಟ್ಟ, ಸೂರ್ಯವಂಶಿ ಕುಟುಂಬದ ಸೊಸೆ ಪಟ್ಟವನ್ನು ಕಿತ್ತುಕೊಳ್ಳಬೇಕೆಂಬ ಹುಚ್ಚು ಹಠಕ್ಕೆ ಬಿದ್ದಿದ್ದಾಳೆ. ರಾದ್ಧಾಂತ ಆದ ಮೇಲೆ ಸ್ವಲ್ಪ ತಡವಾಗಿ ಮದುವೆಯಾಗೋಣ ಎಂದು ಹೇಳಿದರು ಕೇಳದೆ ಮದುವೆಯ ಎಲ್ಲಾ ತಯಾರಿಯನ್ನು ಮಾಡಿದ್ದಾಳೆ.

ಶಾಸ್ತ್ರೋಕ್ತವಾಗಿ ಶ್ರೇಷ್ಠಾ ಮದುವೆ
ಎಲ್ಲರನ್ನು ಬಿಟ್ಟು ಮದುವೆ ಆಗ್ತಾ ಇದ್ದೀನಿ ಅಂತ ಶ್ರೇಷ್ಠಾ, ಯಾವುದೋ ದೇವಸ್ಥಾನದಲ್ಲಿ ತಾಳಿ ಕಟ್ಟಿಸಿಕೊಳ್ಳುತ್ತಿಲ್ಲ. ಎಲ್ಲಾ ರೀತಿಯ ಅರೆಂಜ್ಮೆಂಟ್ ಅನ್ನ ಶ್ರೇಷ್ಠಾಳೆ ಮುಂದೆ ನಿಂತು ಮಾಡುತ್ತಿದ್ದಾಳೆ. ಬಾಡಿಗೆ ಸಂಬಂಧಿಕರನ್ನು ಕರೆ ತಂದಿದ್ದಾಳೆ. ಈಗಾಗಲೇ ಬಳೆ ಶಾಸ್ತ್ರ, ಅರಿಶಿನ ಶಾಸ್ತ್ರ ಶುರುವಾಗಿದೆ. ಶ್ರೇಷ್ಠಾಳ ಮೊಗದಲ್ಲಿ ಮಧುಮಗಳ ಕಳೆ ಜೋರಾಗಿದೆ. ವರನಿಗಾಗಿ ಕಾಯುತ್ತಿದ್ದಾಳೆ. ತಾಂಡವ್‌ಗೆ ಯಾವ ಜವಾಬ್ದಾರಿಯನ್ನು ನೀಡದೆ ತಾನೇ ಎಲ್ಲಾ ಮಾಡಿದ್ದಾಳೆ.
ಮಕ್ಕಳು ಅಪ್ಪನನ್ನು ಬಿಡ್ತಾರಾ..?
ಶ್ರೇಷ್ಠಾ ಕೋಪದಿಂದ ಭಾಗ್ಯಾಳಿಗೆ ಉರಿಸಬೇಕು ಅಂತ ಫೋನ್ ಮಾಡಿ, ತಾನೂ ಇವತ್ತೇ ಮದುವೆ ಆಗ್ತಾ ಇದ್ದೀನಿ ಅಂತ ಹೇಳಿದ್ಲು. ಇತ್ತ ಕುಸುಮಾಗೆ ತಾಂಡವ್ ಬಗ್ಗೆ ಅನುಮಾನ ಮೂಡಿ, ಮಗನನ್ನ ಮನೆಯಲ್ಲಿಯೇ ಲಾಕ್ ಮಾಡಿದಳು. ಅಪ್ಪನನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಈಗ ಮಕ್ಕಳಿಗೆ ಕೊಟ್ಟಿದ್ದಾರೆ. ಗುಂಡಣ್ಣ ಭಲೇ ಬುದ್ದಿವಂತ. ಅಪ್ಪನತ್ರ ಏನೆಲ್ಲಾ ತಿಂಡಿ ಬೇಕೋ ಅದೆಲ್ಲವನ್ನು ತರಿಸಿಕೊಂಡು ತಿನ್ನುತ್ತಿದ್ದಾನೆ. ಆದರೆ ಬಾಗಿಲು ತೆಗೆಯುತ್ತಿಲ್ಲ. ಆದರೆ ತಾಂಡವ್ ಏನಾದರೊಂದು ನಾಟಕ ಮಾಡಿ, ಮಕ್ಕಳು ಬಾಗಿಲು ತೆಗೆಯುವಂತೆ ಮಾಡಿಕೊಳ್ಳುತ್ತಾನೆ. ಯಾಕಂದ್ರೆ ಮದುವೆ ಮನೆಗೆ ಅವನು ಹೋಗಲೇಬೇಕಲ್ಲ.

ಅತ್ತೆ - ಸೊಸೆಯಿಂದ ಶ್ರೇಷ್ಠಾಗೆ ಶಾಸ್ತ್ರ
ಅತ್ತ ಶ್ರೇಷ್ಠಾಳ ಅಪ್ಪನನ್ನು ಅಡ್ಮಿಟ್ ಮಾಡಲಾಗಿದೆ. ಶ್ರೇಷ್ಠಾ ಮಾಡಿದ ಘನಂಧಾರಿ ಕೆಲಸದಿಂದ ಪೋಷಕರು ನೊಂದಿದ್ದಾರೆ. ಅವರ ಅಪ್ಪ ಅಮ್ಮನ ಕಷ್ಟ ನೋಡಿದ ಅತ್ತೆ ಸೊಸೆ, ಶ್ರೇಷ್ಠಾಗೆ ಬುದ್ದಿ ಕಲಿಸಲು ತೀರ್ಮಾನಿಸಿದ್ದಾರೆ. ಅದಕ್ಕೆ ಮದುವೆ ಮನೆಗೆ ಕುಸುಮಾ ಹಾಗೂ ಭಾಗ್ಯಾ ಬಂದಿದ್ದಾರೆ. ಅರಿಶಿನ ಶಾಸ್ತ್ರಕ್ಕೆ ಸ್ಟೈಲ್ ಆಗಿ ರೆಡಿಯಾಗಿದ್ದ ಶ್ರೇಷ್ಠಾಳನ್ನ ಕೂರಿಸಿ, ಭಾಗ್ಯಾಳೆ ಅರಿಶಿನ ಹಚ್ಚಿದ್ದಾಳೆ. ಈ ಮದುವೆ ನಡೆಯುವುದಕ್ಕೆ ನಾನು ಬಿಡಲ್ಲ ಎಂದು ಸವಾಲು ಹಾಕಿದ್ದಾಳೆ.
ಮದುವೆ ಖರ್ಚಿನ ಬಗ್ಗೆ ಬೇಸರ
ಶ್ರೇಷ್ಠಾಳ ಮದುವೆಗಾಗಿ ಮಾಡಿರುವ ಅಲಂಕಾರವನ್ನು ನೋಡಿದ ವೀಕ್ಷಕರಿಗೆ ಬೇಸರ ತರಿಸಿದೆ. ದೊಡ್ಡಮಟ್ಟದ ಖರ್ಚು ವೆಚ್ಚವೇ ತಗುಲಿದೆ. ಮಂಟಪದ ರೀತಿಯ ಅಲಂಕಾರ, ಅರಿಶಿನ ಶಾಸ್ತ್ರಕ್ಕೆ ಬೇಕಾದ ಡೆಕೊರೇಷನ್, ಶ್ರೇಷ್ಠಾಗೆ ಮಧುಮಗಳಂತೆ ಸಿಂಗಾರ. ಇದೆಲ್ಲೆವನ್ನು ನೋಡಿದ ವೀಕ್ಷಕರು ಶ್ರೇಷ್ಠಾ ಹಾಗೂ ತಾಂಡವ್ ಮದುವೆ ನಡೆಯುವುದಕ್ಕೆ ಸಾಧ್ಯವೇ ಇಲ್ಲ. ಆದರೂ ಇಷ್ಟೊಂದೆಲ್ಲಾ ಆಡಂಬರದ ಅಲಂಕಾರದ ಅವಶ್ಯಕತೆ ಇತ್ತಾ ಎಂದೇ ಪ್ರಶ್ನೆ ಮಾಡಿದ್ದಾರೆ. ಧಾರಾವಾಹಿ ಎಂದ ಮೇಲೆ ಒಂದಷ್ಟು ಬೇಕು ಬೇಡಗಳನ್ನ ಪೂರೈಸಲೇಬೇಕು. ಆದರೆ ವೀಕ್ಷಕರಿಗೆ ಪ್ರೊಡಕ್ಷನ್ ಬಗ್ಗೆ ಅನುಕಂಪ ಮೂಡಿದೆ.


Click it and Unblock the Notifications











