Bhagyalakshmi: ಡಿವೋರ್ಸ್ ಕೊಟ್ಟೆ ಬಿಟ್ಲು ಭಾಗ್ಯ.. ಈಗ ತಾಂಡವ್ ಏನ್ ಮಾಡ್ತಾನೆ..?
ಆರಂಭದಿಂದ ನಾವೂ ನೋಡಿದ ಭಾಗ್ಯಾ ಯಾವ ರೀತಿ ಇದ್ದಳು. ಜೋರಾಗಿ ಕಾಲಿಟ್ಟರೆ ಇರುವೆಗೂ ನೋವಾಗುತ್ತೆ ಎಂಬಂತೆ. ಮನೆಯಲ್ಲಿ ಅಷ್ಟಾಗಿ ಅನುಕೂಲವಿಲ್ಲದೆ ಇದ್ದ ಕಾರಣ ಓದಿದ್ದು ಅಷ್ಟಕಷ್ಟೆ. ಮನೆಯ ಕಷ್ಟಗಳಿಗೆ ಕರಗಿ ಓದದೆ ಉಳಿದ ಇಂಥ ಭಾಗ್ಯಂದಿರು ಹೊರಗಿನ ಪ್ರಪಂಚದಲ್ಲಿ ಬಹಳಷ್ಟು ಮಂದಿ ಸಿಕ್ತಾರೆ. ಓದದೇ ಇದ್ದರು ಭಾಗ್ಯಾಳಲ್ಲಿ ಆಚಾರ-ವಿಚಾರ-ಸಂಸ್ಕಾರದಲ್ಲಿ ಕೊರತೆ ಇರಲಿಲ್ಲ. ಈಗ ದಂಡಪಿಂಡ ಗಂಡನಿಗೆ ಸರಿಯಾದ ಶಾಸ್ತಿ ಮಾಡಿದ್ದಾಳೆ.
ತಾಂಡವ್ ಅಮ್ಮನ ನೋಡಿದ ಭಾಗ್ಯಾಳನ್ನ ಮದುವೆಯೂ ಆದ, ಎರಡು ಮಕ್ಕಳು ಆಯ್ತು. ಆದರೆ ಹೆಂಡತಿ ಜೊತೆಗೆ ಮಾತಾಡುವಾಗ ಎಮ್ಮೆ, ದಡ್ಡಿ ಇಂಥ ಮಾತುಗಳನ್ನು ಬಿಟ್ಟರೆ ಅದ್ಭುತವಾದ ಮಾತುಗಳೇನು ಬರುತ್ತಿರಲಿಲ್ಲ. ಅದರಲ್ಲೂ ಶ್ರೇಷ್ಠಾಳನ್ನ ಪಡೆಯುವ ಹುಚ್ಚು ಹಠಕ್ಕೆ ಇಂದು ಅಪ್ಪ-ಅಮ್ಮ-ಮಕ್ಕಳನ್ನು ಕಳೆದುಕೊಂಡಿದ್ದಾನೆ. ಆದರೂ ಆತನಿಗೆ ಬುದ್ದಿಯಂತು ಬಂದಿಲ್ಲ. ತಾಂಡವ್‌ಗೆ ಬುದ್ದಿ ಬರುತ್ತೋ ಇಲ್ವೋ, ಆದರೆ ಭಾಗ್ಯಾಗೆ ಬುದ್ದಿ ಬಂದಿರುವುದಕ್ಕೆ ಜನ ಖುಷಿ ಪಟ್ಟಿದ್ದಾರೆ.

ಮಗಳಿಗಾಗಿ ಜೈಲು ಸೇರಿದ ಸುನಂದಾ
ಸುನಂದಾಗೆ ಎಲ್ಲರಿಗಿಂತ ಮೊದಲೇ ಸತ್ಯ ಗೊತ್ತಿತ್ತು. ಹೀಗಾಗಿ ಮಗಳ ಸಂಸಾರ ಉಳಿಸಲು ಕಷ್ಟಪಟ್ಟಳು. ಆದರೂ ಅದು ಸಾಧ್ಯವಾಗಲಿಲ್ಲ. ಈಗ ಅತ್ತೆ, ಮಾವ, ಮಕ್ಕಳ ಸಮೇತ ಭಾಗ್ಯಾ ತವರು ಮನೆ ಸೇರಿದ್ದಾಳೆ. ಕಷ್ಟಪಟ್ಟು ದುಡಿಯಬೇಕಾದ ಸ್ಥಿತಿ ಅವಳದ್ದು. ಹೀಗಾಗಿ ಸುನಂದಾ ಕೋಪದ ಕೈಗೆ ಬುದ್ದಿ ಕೊಟ್ಟಿದ್ದಾಳೆ. ಶ್ರೇಷ್ಠಾಳಿಗೆ ಚಾಕು ಹಾಕಲು ಹೋಗಿ, ಜೈಲು ಸೇರಿದ್ದಾಳೆ.
ತಾಂಡವ್ ಷರತ್ತಿಗೆ ಭಾಗ್ಯ ಟಕ್ಕರ್
ಕೂದಲೆಳೆ ಅಂತರದಲ್ಲಿ ತಾಂಡವ್ ಹಾಗೂ ಶ್ರೇಷ್ಠಾ ಸಿಕ್ಕಿ ಬೀಳ್ತಾ ಇದ್ರು. ಆದರೆ ಸುನಂದಾ ಎಲ್ಲಾ ಸತ್ಯ ಹೇಳಲು ಹೋಗಿ ಹಾಳು ಮಾಡಿಕೊಂಡ್ಲು. ಈಗ ತಾಂಡವ್ ಹಾಗೂ ಶ್ರೇಷ್ಠಾ ಕೇಸ್ ವಾಪಸ್ ತೆಗೆದುಕೊಂಡ್ರೆ ಮಾತ್ರ ಸುನಂದಾ ರಿಲೀಸ್ ಆಗುವುದಕ್ಕೆ ಸಾಧ್ಯ. ಆದರೆ ಇದು ಭಾಗ್ಯಾ ವಿರುದ್ಧ ಕತ್ತಿ ಮಸೆಯುವುದಕ್ಕೆ ಇದೊಂದು ಚಾನ್ಸ್ ಸಿಕ್ಕಂತೆ ಆಗಿದೆ. ಈಗ ಭಾಗ್ಯಾಳಿಗೆ ಒಂದಿ ಷರತ್ತು ವಿಧಿಸುವುದಕ್ಕೆ ಪ್ಲ್ಯಾನ್ ರೂಪಿಸಿದ್ದ. ಆದರೆ ಭಾಗ್ಯಾ, ತಾಂಡವ್ ಗೆ ಠಕ್ಕರ್ ನೀಡಿದ್ದಾಳೆ. ನಿಮ್ಮ ಷರತ್ತಿಗೆ ಒಪ್ಪದೆಯೇ ನನ್ನಮ್ಮನನ್ನ ಬಿಡುತ್ತೀನಿ ಅಂತ ಹೇಳಿ ಠಕ್ಕರ್ ಕೊಟ್ಟಿದ್ದಾಳೆ.
ಡಿವೋರ್ಸ್ ಕೇಳಿದ್ದಕ್ಕೆ ಡಿವೋರ್ಸ್
ಇಷ್ಟು ದಿನ ತಾಂಡವ್ ಡಿವೋರ್ಸ್‌ಗಾಗಿ ಪರದಾಡಿದ್ದೇ ಆಯ್ತು. ಭಾಗ್ಯಾಳನ್ನು ನಾಟಕದಿಂದ ಹೊಗಳಿದ, ಮೋಸ ಮಾಡಲು ಟ್ರೈ ಮಾಡಿದ, ಆದರೆ ಭಾಗ್ಯಾ ನಾನು ಡಿವೋರ್ಸ್ ಕೊಡಲ್ಲ ಅಂತಾನೇ ಹೇಳಿದಳು. ಆದರೆ ತಾಂಡವ್ ಬದಲಾಗುವಂತೆ ಕಾಣಿಸುತ್ತಿಲ್ಲ. ಹೀಗಾಗಿ ಭಾಗ್ಯಾನೆ ಒಂದು ನಿರ್ಧಾರಕ್ಕೆ ಬಂದಳು. ತಾಮನಡವ್ ಕೇಳದೆಯೂ ಡಿವೋರ್ಸ್ ಪೇಪರ್‌ಗೆ ಸಹಿ ಹಾಕಿ ಮುಖಕ್ಕೆ ಬಿಸಾಡಿದಳು. ಇದು ತಾಂಡವ್‌ಗೆ ನಿಜಕ್ಕೂ ನಂಬಲು ಅಸಾಧ್ಯವಾದ ಘಟನೆಯಾಗಿತ್ತು.
ಡಿವೋರ್ಸ್ ಭಾಗ್ಯಾ ಪರ ವೀಕ್ಷಕರು
ಇಷ್ಟು ವರ್ಷಗಳ ಕಾಲ ಭಾಗ್ಯಾಳನ್ನು ನೋಡಿಕೊಂಡು ಬಂದಂತ ವೀಕ್ಷಕರಿಗೆ ಇಂದು ತುಂಬಾನೇ ಇಷ್ಟವಾದ ದಿನವಾಗಿದೆ. ತಾಂಡವ್ ಮರ್ಯಾದೆ ತೆಗೆದಾಗೆಲ್ಲ ಇಂಥ ಗಂಡ ಬೇಕಿದ್ದಾನ ಭಾಗ್ಯಾ ಎಂದೇ ಪ್ರಶ್ನೆ ಮಾಡಿದ್ದರು. ಆದರೆ ಇಂದು ಭಾಗ್ಯಾಳೆ ಡಿವೋರ್ಸ್ ಕೊಟ್ಟಿದ್ದು ನಿಜಕ್ಕೂ ಎಲ್ಲರಿಗೂ ಖುಷಿ ಕೊಟ್ಟಿದೆ. ಸೋಷಿಯಲ್ ಮೀಡಿಯಾದಲ್ಲಿ ಭಾಗ್ಯಾಳ ಬೆಂಬಲಕ್ಕೆ ನಿಂತಿದ್ದಾರೆ.


Click it and Unblock the Notifications











