Bhagyalakshmi: ಭಾಗ್ಯಾ ಡಿವೋರ್ಸ್‌ಗೆ ಸಹಿ ಹಾಕಿದ್ದಾಳೆ, ಬೇರೆ ಮದುವೆಗೆ ಪರ್ಮಿಷನ್ ಕೊಟ್ಟಿರೋದಲ್ಲ!

By ಎಸ್ ಸುಮಂತ್

ಭಾಗ್ಯಾಳನ್ನ ತಪ್ಪಾಗಿ ತಿಳಿದುಕೊಳ್ಳುವುದರಲ್ಲಿ ತಾಂಡವ್ ಪಂಟ. ಆದರೆ ತಾಂಡವ್ ತಿಳಿದುಕೊಳ್ಳುವುದಕ್ಕೆ ತದ್ವಿರುದ್ಧವಾಗಿ ಇರುವುದು ಭಾಗ್ಯಾ. ದಡ್ಡಿ, ಏನು ಆಗಲ್ಲ, ನಾನು ಹೆದರಿಸಿದರೆ ಹೆದರುತ್ತಾಳೆ ಅಂತಾನೇ ತಾಂಡವ್ ಊಹೆ. ಆದರೆ ಭಾಗ್ಯ ಆ ಊಹೆಗೂ ಮೀರಿದ ಬುದ್ದಿವಂತೆ.

ಏಳನೇ ಕ್ಲಾಸ್ ಫೇಲ್ ಅಂದ ತಾಂಡವ್‌ಗೆ ಎಸ್ಎಸ್ಎಲ್ಸಿ ಟಾಪರ್ ಆದ್ಲೂ. ಕೆಲಸಕ್ಕೆ ಬಾರದವಳು ಎಂದ ಫೈವ್ ಸ್ಟಾರ್ ಹೊಟೇಲ್‌ನಲ್ಲಿ ಮೈನ್ ಚೆಫ್ ಆಗಿನೇ ಸೇರಿಕೊಂಡಳು. ಭಾಗ್ಯಾಳಾ ಸಾಧನೆ ಕಂಡು ಜನ ಕೊಂಡಾಡುವುದಕ್ಕೆ ಶುರು ಮಾಡಿದಾಗ ತಾಂಡವ್ ಇನ್ನಷ್ಟು ಕೋಪಿಷ್ಠನಾವಿದ್ದಾನೆ.

Colors kannada Bhagyalakshmi Written Update on December 17th episode

ಭಾಗ್ಯಾಳಿಂದ ಡಿವೋರ್ಸ್ ತೆಗೆದುಕೊಳ್ಳುವುದಕ್ಕೆ ಅದೆಷ್ಟು ಹರಸಾಹಸ‌ ಪಟ್ಟಿದ್ದ. ಆದರೆ ಭಾಗ್ಯಾಳೆ ಕೊಟ್ಟಾಗ ಸ್ವಾಭಿಮಾನಕ್ಕೆ ಅಡ್ಡಿಯಾಗಿತ್ತು. ಕುಂತಲ್ಲೂ ನಿಂತಲ್ಲೂ ಈಗ ಅದೇ ದೃಶ್ಯ ಕಣ್ಣ ಮುಂದೆ ಬರ್ತಿದೆ. ಡಿವೋರ್ಸ್ ಚೀಟಿ ಕೊಟ್ಟ ಭಾಗ್ಯಾ ನಿನ್ನನ್ನ ಸುಮ್ಮನೆ ಬಿಡಲ್ಲ ಎನ್ನುತ್ತಿದ್ದಾನೆ. ದ್ವೇಷ ತೀರಿಸಿಕೊಳ್ಳಲು ಮದುವೆಯಾಗಲು ಹೋಗಿದ್ದಾನೆ. ಆದರೆ ಭಾಗ್ಯಾ ಅಷ್ಟು ವೀಕ್ ಅಲ್ಲ ಅಲ್ವಾ..?

ಮಕ್ಕಳ ಸ್ಥಿತಿಗೆ ಭಾಗ್ಯಾ ಬೇಸರ

ಭಾಗ್ಯಾ ತಾನೇ ಎಷ್ಟು ಅಂತ ಸಹಿಸುತ್ತಾಳೆ. ತಾಂಡವ್ ಸ್ವಾರ್ಥಕ್ಕೆ ಹಾಳಾಗುತ್ತಿದ್ದ ಮನೆಯ ನೆಮ್ಮದಿಯನ್ನು ಕಾಪಾಡುವುದಕ್ಕಾಗಿ ಡಿವೋರ್ಸ್ ಪೇಪರ್‌ಗೆ ಸಹಿ ಹಾಕಿ ತಾಂಡವ್ ಮುಖದ ಮೇಲೆ ಬಿಸಾಡಿ ಬಂದಳು. ಆದರೆ ಇದು ಮಕ್ಕಳ ಮೇಲೆ ಅತೀವ ಪರಿಣಾಮ ಬೀರಿದೆ. ಅಪ್ಪ ಅಮ್ಮ ದೂರಾಗುವುದಕ್ಕೆ ಗುಂಡಣ್ಣನ ಒಪ್ಪಿಗೆ ಇಲ್ಲ. ವಿಷಯ ತಿಳಿದು ಹಾಸಿಗೆ ಹಿಡಿದಿದ್ದಾನೆ. ಇದು ಭಾಗ್ಯಾಳಾ ನೆಮ್ಮದಿ ಕೆಡಿಸಿದೆ.

ಲಗೇಜು ಸಮೇತ ಬಂದ ಶ್ರೇಷ್ಠಾ

ಮಕ್ಕಳ ಬಗ್ಗೆ ಚಿಂತೆ ಇಲ್ಕ.. ಅಪ್ಪ ಅಮ್ಮ ಮೊದಲೇ ಬೇಕಾಗಿಲ್ಲ. ತಾಂಡವ್ ಈಗ ಮದುವೆ ತಯಾರಿ ಮಾಡಿಕೊಂಡಿದ್ದಾನೆ. ತಾಂಡವ್ ಹೇಳಿದ ಕೂಡಲೇ ಲಗೇಜು ಸಮೇತ ಶ್ರೇಷ್ಠಾ ಕೂಡ ತಾಂಡವ್ ಮನೆಗೆ ಬಂದಿದ್ದಾಳೆ. ಇಬ್ಬರ ಮದುವೆ ತಯಾರಿಗೆ ಪುರೋಹಿತರು ಬಂದಾಗಿದೆ. ಅಕ್ಕಪಕ್ಕದ ಮನೆಯವರು ಈ ವಿಷಯವನ್ನು ಮೊದಲು ಭಾಗ್ಯಾಳ ಕಿವಿಗೆ ಮುಟ್ಟಿಸಿದ್ದಾರೆ.

ತಾಂಡವ್ ಮನೆಗೆ ಪೊಲೀಸ್

ತಾಂಡವ್ ಹಾಗೂ ಶ್ರೇಷ್ಠಾ ಮದುವೆಗೆ ನೂರೆಂಟು ವಿಘ್ನಗಳಲ್ಲ ಸಾವಿರಾರು ವಿಘ್ನಗಳೇ ಇದಾವೆ. ಅದಕ್ಕೆ ಯಾವಾಗಲೇ ಮದುವೆಯಾಗುವುದಕ್ಕೆಂದು ಹೊರಟರು ಅಲ್ಲಿ ದೊಡ್ಡಮಟ್ಟದಲ್ಲಿಯೇ ತಗಲಾಕಿಕೊಳ್ಳುತ್ತಾರೆ. ರೆಸಾರ್ಟ್ ನಲ್ಲೂ ಎಲ್ಲರ ಎದುರು ಸಿಕ್ಕಿಬಿದ್ದಿದ್ದರು. ಈಗ ಗುಟ್ಟಾಗಿ ಮನೆಯಲ್ಲಿ ಮದುವೆಯಾಗುವುದಕ್ಕೆ ಹೋಗಿ ಪೊಲೀಸರ ಕೈಗೆ ತಗಲಾಕಿಕೊಂಡಿದ್ದಾನೆ. ಮೋಸದಿಂದ ಮದುವೆಯಾಗುತ್ತಿದ್ದರು ತಾಂಡವ್ ಅಹಂಕಾರವೇನು ಇಳಿದಿಲ್ಲ. ಪೊಲೀಸರಿಗೇನೆ ರಾಂಗ್ ಅಡ್ರೆಸ್ ಗೆ ಬಂದಿರಬಹುದು ಅಂತ ಇಬ್ಬರು ಜೋರು ಮಾಡಿದ್ದರು. ಪೊಲೀಸರಿಗೆ ಬಾಯಿ ಮುಚ್ಚಿಸೋದು ಗೊತ್ತಿಲ್ವಾ ಹೇಳಿ.

ಬಂದೇ ಬಿಟ್ಲು ಭಾಗ್ಯಾ

ಮೊದಲ ಹೆಂಡತಿ ಬದುಕಿರುವಾಗಲೇ ಅವಳಿಗೆ ಮೋಸ ಮಾಡಿ ಮತ್ತೊಂದು ಮದುವೆಯಾಗುತ್ತಿರುವುದಕ್ಕೆ ನಿಮ್ಮನ್ನ ಅರೆಸ್ಟ್ ಮಾಡ್ತಾ ಇದ್ದೀವಿ ಅಂತ ಪೊಲೀಸರು ಹೇಳಿದಾಗ ಇಲ್ಲ ಮೇಡಂ. ಆ ರೀತಿ ನಿಮಗೆ ಕಂಪ್ಲೈಂಟ್ ಕೊಟ್ಟವರು ಯಾರು ಎಂದು ಏರು ಧ್ವನಿಯಲ್ಲಿ ಕೇಳುತ್ತಿದ್ದಂತೆ ಭಾಗ್ಯಾ ಮನೆಯೊಳಗೆ ಪ್ರವೇಶ ಮಾಡಿದಳು. ನಾನೇ ಕೊಟ್ಟಿದ್ದು ಎಂದು. ಭಾಗ್ಯಾ ಕೂಡ ಸಾಕಷ್ಟು‌ಸಲ ಕ್ಷಮಿಸಿದಳು, ಸಮಯ ಕೊಟ್ಟಳು. ಆದರೂ ಬದಲಾಗುವಂತೆ ಕಾಣಿಸುತ್ತಿಲ್ಲ ತಾಂಡವ್. ಈಗ ಜೈಲಿಗೆ ಹಾಕಿಸದರೇನೆ ಬುದ್ದಿ ಬರೋದು.

More from Filmibeat

English summary
Colors kannada Bhagyalakshmi Written Update on December 17th episode. Here is the details about Bhagya stopped the Tandav marriage.
Read more about: sumanth tv serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X