Bhagyalakshmi: ಅಪ್ಪ ಅಮ್ಮ ದೂರ ದೂರ, ಮಕ್ಕಳ ಮನಸ್ಸಿನ ಮೇಲೆ ಪರಿಣಾಮ

By ಎಸ್ ಸುಮಂತ್

ಈಗಿನ ಕಾಲದಲ್ಲಿ ಡಿವೋರ್ಸ್ ಅನ್ನೋದು ಕಾಮನ್ ಆಗಿ ಹೋಗಿದೆ. ಅತ್ತೆ, ಮಾವ, ಅಜ್ಜಿ, ತಾತ, ಮಕ್ಕಳೆಲ್ಲ ಒಂದೇ ಕುಟುಂಬದಲ್ಲಿ ಬಾಳುವುದಕ್ಕೆ ಇಷ್ಟಪಡುವುದೇ ಇಲ್ಲ. ಗಂಡ-ಹೆಂಡತಿ-ಮಕ್ಕಳು ಎಂಬ ಪುಟ್ಟ ಕುಟುಂಬದ ಕಾನ್ಸೆಪ್ಟ್‌ನಲ್ಲಿ ಬದುಕು ನಡೆಸುವುದಕ್ಕೆ ಇಷ್ಟ ಪಡುತ್ತಾರೆ. ಇದರ ಜೊತೆಗೆ ಇತ್ತೀಚೆಗೆ ಡಿವೋರ್ಸ್ ಅನ್ನೋದು ತುಂಬಾನೇ ಸಹಜವಾಗಿದೆ.

ಸಂಸಾರ, ಬದುಕು ನಾವಂದುಕೊಂಡಂಗೆ ಇಲ್ಲ ಎಂದಾದಾಗ ಸುಲಭವಾಗಿ ಡಿವೋರ್ಸ್ ಪಡೆದು ಪುರುಷರಾಗಲಿ, ಮಹಿಳೆಯರಾಗಲಿ ಹೊರಗೆ ಬರುತ್ತಾರೆ. ಆದರೆ ಡಿವೋರ್ಸ್ ಅನ್ನೋದು ಗಂಡ-ಹೆಂಡತಿಗೆ ಖುಷಿ ಕೊಟ್ಟರೂ, ಅದು ಮಕ್ಕಳ ಮೇಲೆ ಬಹಳಷ್ಟು ಕೆಟ್ಟ ಪರಿಣಾಮ ಬೀರುತ್ತದೆ ಎಂಬುದು ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಅದ್ಭುತವಾಗಿ ತೋರಿಸಿದ್ದಾರೆ.

Colors kannada Bhagyalakshmi Written Update on December 6th episode

ಅಪ್ಪ-ಅಮ್ಮ ಜೊತೆಗಿಲ್ಲ

ಕುಸುಮಾ ಸಾಕಷ್ಟು ಪ್ರಯತ್ನ ಪಟ್ಟಳು. ಮಗ ಸೊಸೆಯನ್ನು ಒಂದು ಮಾಡಬೇಕೆಂದುಕೊಂಡಳು. ಅದಕ್ಕಾಗಿಯೇ ಕಠಿಣ ವ್ರತ ಮಾಡಿದಳು, ಸತ್ಯ ಮುಚ್ಚಿಡುವುದಕ್ಕೆ ಸಾಕಷ್ಟು ಪ್ರಯತ್ನ ಮಾಡಿದಳು. ಆದರೆ ಭಾಗ್ಯಾಳಿಗೆ ಸತ್ಯ ಗೊತ್ತಾದ ಮೇಲೆ ದೂರಾದಳು. ಈಗ ತಾಂಡವ್ ದೊಡ್ಡ ಮನೆಯಲ್ಲಿ ಒಬ್ಬನೆ ಇದ್ರೆ ಭಾಗ್ಯಾ ತನ್ನಿಡಿ ಪರಿವಾರ ಕರೆದುಕೊಂಡು ಅಮ್ಮನ ಮನೆಗೆ ಹೋಗಿದ್ದಾಳೆ. ಸದಾ ಅಪ್ಪ ಅಮ್ಮನ ಜೊತೆಗೆ ಇರಬೇಕೆಂಸು ಬಯಸಿದ್ದ ಮಕ್ಕಳಿಗೆ ಇಂದು ಅಪ್ಪ ಕೆಟ್ಟವನಂತೆ ಕಾಣುತ್ತಿದ್ದಾನೆ.

ತನ್ವಿ ಮಾಡಿದ್ದಾಳೆ ಅವಾಂತರ

ಮೊದಲೆಲ್ಲಾ ಅಮ್ಮ ಎಂದರೆ ತನ್ವಿಗೆ ಇಷ್ಟವೇ ಆಗ್ತಾ ಇರಲಿಲ್ಲ. ಪಪ್ಪ ಎಂದರೆ ಪ್ರೀತಿ ಜಾಸ್ತಿ. ಅಮ್ಮನಿಗೆ ಬೈತಾನೆ ಇರ್ತಾ ಇದ್ಲು. ಆದರೆ ಒಂದು ಸಮಯಕ್ಕೆ ಅಮ್ಮ ಎಂದರೆ ಅವಳಿಗೆ ಅರ್ಥ ಆದ ಮೇಲೆ ಅಮ್ಮನಿಗೆ ತುಂಬಾನೇ ಗೌರವ ಕೊಡುತ್ತಾಳೆ. ಈಗ ಕಾಲೇಜಿಗೆ ಹೋದ ತನ್ವಿಗೆ ಅಪ್ಪ ಅಮ್ಮ ದೂರ ದೂರ ಆಗಿದ್ದಾರೆಂಬ ವ್ಯಂಗ್ಯದ ಮಾತುಗಳು ಕೇಳಿ ಬಂದಿವೆ. ಅಮ್ಮ ಪಟ್ಟ ಕಷ್ಟ ನೋಡಿದ್ದ ತನ್ವಿಗೆ ಆ ಮಾಗುಗಳನ್ನು ಅರಗಿಸಿಕೊಳ್ಳುವುದಕ್ಕೆ ಆಗಲಿಲ್ಕ. ಬ್ಯಾಟ್ ತೆಗೆದು ನನ್ನ ಅಮ್ಮನ ಬಗ್ಗೆ ಮಾತಾಡುವಾಗ ಎಚ್ಚರವಿರಲಿ ಎಂದು ಬೀಸಿದ್ದಾಳೆ.

ಶ್ರೇಷ್ಠಾಗಿಲ್ಲ ಕವಡೆ ಕಾಸಿನ ಕಿಮ್ಮತ್ತು

ಅತ್ತ ಇಡೀ ಸಂಸಾರವನ್ನ ಅಲ್ಲೋಲ ಕಲ್ಲೋಲ ಮಾಡಿದಂತ ಶ್ರೇಷ್ಠಾಗೇನು ತಾಂಡವ್ ಮನೆಯ ಅಧಿಕಾರ ಸಿಗಲಿಲ್ಲ. ಅಕ್ಕ ಪಕ್ಕದ ಮನೆಯವರೆಲ್ಲ ಬಂದು ಇಂಥ ಕೆಟ್ಟ ಕೆಲಸ ಮಾಡುವುದಕ್ಕೆ ನಾವೂ ಬಿಡಲ್ಲ. ಎಲ್ಲರನ್ನು ಸೇರಿಸಿ ನಿನ್ನ ಮರ್ಯಾದೆ ಕಳೆಯಬೇಕಾಗುತ್ತೆ ಎಂದರೋ, ತಾಂಡವ್, ಶ್ರೇಷ್ಠಾಳನ್ನು ಮನೆಗೆ ಹೋಗುವಂತೆ ತಿಳಿಸಿದ. ಶ್ರೇಷ್ಠಾ ಏನು ಮಾಡಲಾಗದ ಪರಿಸ್ಥಿತಿಯಲ್ಲಿ ಮನೆ ಬಿಟ್ಟು ನಡೆದಳು. ಅವಳಿಗೆ ತಾಂಡವ್ ಯಾವತ್ತು ಕಷ್ಟದ ಕಾಲದಲ್ಲಿ ಕೈ ಹಿಡಿಯಲ್ಲ ಅನ್ನೋದು ಈಗಾಗಲೇ ಅರ್ಥವಾಗಬೇಕಿತ್ತು.

ತನ್ವಿ ಒತ್ತಡ ಎದುರಿಸುತ್ತಿದ್ದಾಳಾ?

ಮಕ್ಕಳಿಗೆ ಪೋಷಕರಿಂದ ದೂರಾದಾಗ ಅವರ ಯೋಚನೆಗಳೇ ಬೇರೆ ಆಗಿ ಬಿಡುತ್ತವೆ. ಜೊತೆಗೆ ಸಿಗುವವರು ತಮಾಷೆಯಾಗಿ ಕೇಳುತ್ತಾರೋ ಅಥವಾ ಆ ವಯಸ್ಸಿನಲ್ಲಿ ಅರ್ಥವಾಗದೆ ಕೇಳುತ್ತಾರೋ, ಹೇಗೆ ಕೇಳಿದರೂನು ಮಕ್ಕಳ ಮನಸ್ಸಲ್ಲಿ ಪ್ರಶ್ನೆಗಳನ್ನ ಹುಟ್ಟು ಹಾಕುತ್ತೆ. ಹೌದು ನಮ್ಮ ಅಪ್ಪ ಅಮ್ಮ ಯಾಕೆ ದೂರಾದರು ಎಂಬ ಪ್ರಶ್ನೆಗೆ ಉತ್ತರ ಸಿಗಲ್ಲ. ಆಗ ಯಾರಾದರೂ ಅಪ್ಪ ಅಮ್ಮನ ಬಗ್ಗೆ ಕೆಟ್ಟದಾಗಿ ಮಾತಾಡಿದರೆ ಕೋಪ ಹೆಚ್ಚಾಗಿ ಅನಾಹುತಕ್ಕೆ ಕಾರಣವಾಗುತ್ತದೆ. ಇಲ್ಲವಾದರೆ ಯಾರ ಸಹವಾಸವನ್ನು ಮಾಡದೆ ಒಂಟಿತನಕ್ಕೆ ಒಳಗಾಗುತ್ತಾರೆ.

More from Filmibeat

English summary
Colors kannada Bhagyalakshmi Written Update on December 6th episode. Here is the details about Tanvi got into a fight in college.
Read more about: sumanth tv serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X