Bhagyalakshmi: ಹಸಿವು ತಾಳಲಾರದೆ ಮನೆಗೆ ಬಂದೇ ಬಿಟ್ನಾ ತಾಂಡವ್?
ತಾಂಡವ್‌ನ ಶ್ರೇಷ್ಠಾ ಇಲ್ಲಿಯ ತನಕ ಅರ್ಥವೇ ಮಾಡಿಕೊಂಡಿಲ್ಲ. ಶ್ರೇಷ್ಠಾ ಕಂಡರೆ ತಾಂಡವ್‌ಗೆ ಇಷ್ಟ ಹೌದು. ಹಾಗಂತ ರಿಸ್ಕ್ ತೆಗೆದುಕೊಳ್ಳಲ್ಲ. ಶ್ರೇಷ್ಠಾಳಿಂದ ರಿಸ್ಕ್ ಕೂಡ ಆಗಬಾರದು. ತನಗೆ ತೊಂದರೆಯಾಗುತ್ತೆ ಎಂದಾಗ ಶ್ರೇಷ್ಠಾಳನ್ನ ನಡುವಲ್ಲೇ ತಾಂಡವ್ ಬಿಟ್ಟು ಬಂದಿರೋ ಉದಾಹರಣೆಗಳು ಇದಾವೆ, ಧರಧರನೆ ಎಳೆದುಕೊಂಡು ಹೋಗಿ ಮನೆಯಿಂದ ಹೊರಗೆ ಹಾಕಿರೋ ಉದಾಹರಣೆಗಳು ಇದಾವೆ. ಆದರೂ ತಾಂಡವ್ ಕಟ್ಟಿಕೊಳ್ತೀನಿ ಅಂತ ಶ್ರೇಷ್ಠಾ ಹಠ ಮಾತ್ರ ಕಡಿಮೆಯಾಗ್ತಿಲ್ಲ.
ಈಗ ತಾಂಡವ್ ಮನೆ ಬಿಟ್ಟು ಹೋಗಿದ್ದಾನೆ. ಇತ್ತೀಚೆಗಷ್ಟೇ ಭಾಗ್ಯಾಳ ಜೊತೆಗೆ ಅಪ್ಪ ಅಮ್ಮ ಎಲ್ಲರೂ ಮನೆ ಬಿಟ್ಟು ಹೋಗಿದ್ದರು. ಈಗ ತಾಂಡವ್ ಸರದಿ. ಶ್ರೇಷ್ಠಾಳನ್ನ ನಂಬಿ ಮನೆ ಬಿಟ್ಟು ಹೋಗಿದ್ದಾನೆ. ಆದರೆ ಒಂದೆರಡು ದಿನ ಕೂಡ ಶ್ರೇಷ್ಠಾಳ ಜೊತೆಗೆ ಇರೋದಕ್ಕೆ ಆಗದೆ ಓಡಿ ಬಂದಿದ್ದಾನೆ.

ಮನೆಗೆ ಮರಳಿದ ತಾಂಡವ್
ಈ ಮನೆಯಲ್ಲಿ ನಾನಿರಬೇಕಾ ಅಥವಾ ಭಾಗ್ಯಾ ಇರಬೇಕಾ ನೀನೆ ನಿರ್ಧಾರ ಮಾಡು ಅಂತ ಹೇಳಿದ ತಾಂಡವ್, ಉತ್ತರ ಸಿಗದೆ ಇದ್ದಾಗ ಲಗೇಜು ಸಮೇತ, ಶ್ರೇಷ್ಠಾಳ ಕೈ ಹಿಡಿದು ಹೊರಟೆ ಬಿಟ್ಟ. ಎಷ್ಟು ದಿನ ಎರಡೇ ದಿನಕ್ಕೆ ಸಾಕಾಗಿ ಹೋಯ್ತು. ಅದೇ ಲಗೇಜು ಸಮೇತ ಶ್ರೇಷ್ಠಾಳನ್ನು ಬಿಟ್ಟ ತಾಂಡವ್ ಸೀದಾ, ಅಪ್ಪ ಅಮ್ಮನ ಮನೆಗೆ ಬಂದಿದ್ದಾನೆ. ಬಂದ ಕೂಡಲೇ ಅಪ್ಪನನ್ನು ತಬ್ಬಿಕೊಂಡಿದ್ದಾನೆ. ಇದು ನಾಟಕ ಎಂಬುದು ಅತ್ಯಂತ ಸ್ಪಷ್ಟವಾಗಿ ಮನೆಯವರಿಗೆಲ್ಲಾ ಕಾಣಿಸ್ತಾ ಇತ್ತು.
ಸುನಂದ ಮುಖದಲ್ಲಿ ಖುಷಿ
ತಾಂಡವ್ ಬಂದದ್ದು, ಮಾವನನ್ನು ತಬ್ಬಿ ಮಾತಾಡಿದ್ದು, ಈ ಯಾವುದನ್ನು ಭಾಗ್ಯಾ ನಂಬುವುದಕ್ಕೆ ಹೋಗ್ತಾ ಇಲ್ಲ. ಈ ನಾಟಕವನ್ನ ನಾವೂ ನಂಬಲ್ಲ ಎಂದೇ ಹೇಳಿದ್ದಾಳೆ. ಅದಕ್ಕೆ ತಾಂಡವ್ ಮತ್ತೊಂದು ಮಸ್ಕಾ ಹೊಡೆದಿದ್ದು, ನಂಗೆ ಆದಂತ ಜವಾಬ್ದಾರಿಗಳಿದಾವೆ. ಅವುಗಳನ್ನು ನಾನು ನಿಭಾಯಿಸಲೇಬೇಕು ಎಂದಿದ್ದಾನೆ. ಮಗ ಹೇಗೆ ಹೋದನೋ ಹಾಗೇ ವಾಪಾಸ್ ಬರ್ತಾನೆ ಅಂತ ಮಾತು ಕೊಟ್ಟಿದ್ದಳು ಕುಸುಮಾ. ಈಗ ಮನೆಗೆ ಬಂದಿರೋ ಮಗನನ್ನ ನೋಡಿ ಕುಸುಮಾ ಕೂಡ ಖುಷಿ ಪಟ್ಟಿದ್ರೆ, ಸುನಂದಾ ಕೂಡ ಸಂತೋಷಗೊಂಡಿದ್ದಾಳೆ.
ಊಟ ತರಿಸಲು ಹೇಳಿದ ಶ್ರೇಷ್ಠಾ
ಶ್ರೇಷ್ಠಾಗೆ ಮನೆ ಕೆಲಸ, ಅಡುಗೆ, ತಿಂಡಿ ಇವೆಲ್ಲಾ ಮಾಡು ಅಂದ್ರೆ ಆಗಲ್ಲ. ಆರಾಮಾಗಿ ಓಡಾಡಿಕೊಂಡು, ಎಂಜಾಯ್ ಮಾಡಿಕೊಂಡು ಇರಬೇಕು. ಊಟ ತಿಂಡಿಗೆಲ್ಲಾ ಹೊಟೇಲ್ ಇದ್ಯಲ್ಲ ಅನ್ನೋ ಭಾವನೆ. ತಾಂಡವ್ ಅಡುಗೆ ಮಾಡಿಲ್ಲ ಎಂದಾಗಲೂ ಇದೇ ಮಾತನ್ನೇ ಹೇಳಿದ್ದಾಳೆ. ವೀಕೆಂಡ್ ನಲ್ಲಿ ರೊಮ್ಯಾಂಟಿಕ್ ಆಗಿ ಇಬ್ಬರು ಸೇರಿ ಅಡುಗೆ ಮಾಡೋಣಾ. ಈಗ ಆರ್ಡರ್ ಮಾಡ್ಕೊಂಡು ತಿನ್ನು ಅಂತ ಹೇಳಿ ಕಾಲ್ ಕಟ್ ಮಾಡಿದಳು.
ಸಮಯ ಸಾಧಕ ತಾಂಡವ್
ಮನೆಯಲ್ಲಿ ರುಚಿ ರುಚಿಯಾದ ಊಟ - ತಿಂಡಿ ಮಾಡಿದ ತಾಂಡವ್‌ಗೆ ಹೊಟೇಲ್ ರುಚಿ ಎಷ್ಟು ದಿನ ಅಂತ ರುಚಿಸುತ್ತೆ. ಈಗ ಲಗೇಜು ಸಮೇತ ಮನೆಗೆ ಬಂದಿದ್ದಾನೆ. ವೀಕ್ಷಕರು ಕೂಡ ಅದನ್ನೇ ಹೇಳ್ತಾ ಇದಾರೆ. ನಾಲಿಗೆಯ ರುಚಿ ಸೆಳೆದಿರಬೇಕು. ಅದಕ್ಕೆ ಓಡೋಡಿ ಬಂದಿದ್ದಾನೆ ಅಂತ. ಇನ್ನು ಹಲವರು ಬೇಸರ ಕೂಡ ಮಾಡಿಕೊಂಡಿದ್ದಾರೆ. ಒಂದೇ ರೀತಿ ಎಳೆಯುತ್ತಾ ಇದ್ದಾರೆ. ಗಟ್ಟಿತನ ಇಲ್ಲ ಅಂತ. ನಾನು ಭಾಗ್ಯಾ ಅಭಿಯಾನ ಶುರುವಾದಾಗ ನಿರೀಕ್ಷೆಗಳು ಜಾಸ್ತಿ ಆಗಿದ್ದವು. ಆದರೆ ಈಗ ವೀಕ್ಷಕರಿಗೆಲ್ಲ ಬೇಸರ ತರಿಸಿದೆ.


Click it and Unblock the Notifications











