Bhagyalakshmi: ಅಕ್ಕ - ತಂಗಿ ಇಬ್ರು ಒಂದೇ ಥರನಾ? ವೀಕ್ಷಕರಿಗೆ ಕುಸುಮಾ ಮೇಲೆ ಅನುಮಾನ..!
ಕಾವೇರಿ ಹಾಗೂ ಕುಸುಮಾ ಅಕ್ಕ ತಂಗಿಯರು. ಹಾಗೇ ಅಕ್ಕ ತಂಗಿಯರ ಮನೆಗೆ ಸೊಸೆಯಾಗಿ ಹೋಗಿರುವ ಭಾಗ್ಯಾ ಹಾಗೂ ಲಕ್ಷ್ಮೀ ಕೂಡ ಅಕ್ಕ ತಂಗಿಯಂದಿರೆ. ಕಾವೇರಿ ಮಗನ ಮೇಲೆ ಅದೆಷ್ಟು ವ್ಯಾಮೋಹಿ ಅನ್ನೋದು ವೀಕ್ಷಕರಿಗೆ ಅರ್ಥವಾಗಿದೆ. ಮಗ ನನ್ನ ಕಂಟ್ರೋಲ್‌ನಲ್ಲಿ ಇರಬೇಕು. ನಾನು ಹೇಳಿದ್ದಷ್ಟೇ ಕೇಳಬೇಕು, ಅಮ್ಮ ಅಮ್ಮ ಅಮ್ಮ ಅಂತ ಸುತ್ತುತ್ತಾ ಇರಬೇಕು ಎಂಬ ಸ್ವಾರ್ಥ ಭಾವನೆ ಬೆಳೆಸಿಕೊಂಡ ಕಾವೇರಿ ಕೀರ್ತಿ ಹಾಗೂ ಲಕ್ಷ್ಮೀ ಜೀವ ತೆಗೆಯುವುದಕ್ಕೂ ಯೋಚಿಸಲಿಲ್ಲ.
ಅಷ್ಟು ಕೆಟ್ಟ ತಾಯಿ ಅಂತಾನೇ ಕಾವೇರಿ ಬಿಂಬಿತವಾಗಿದ್ದಾಳೆ. ಈಗ ಅದ್ಯಾಕೋ ಏನೋ ಕುಸುಮಾ ಮೇಲೂ ವೀಕ್ಷಕರಿಗೆ ಅದೇ ಅನುಮಾನ ಶುರುವಾಗಿದೆ. ಆದರೆ ಕಾವೇರಿಯಂಥ ಕ್ರಿಮಿನಲ್ ಅಲ್ಲ ಕುಸುಮಾ. ಯಾಕೆ ಈ ರೀತಿ ಅನುಮಾನ ಬಂದಿದ್ದು ಎಂಬುದನ್ನ ತಿಳಿಯಲು ಮುಂದೆ ಓದಿ.

ಹೊಗಳಿದ್ದಕ್ಕೆ ಕುಸುಮಾ ಖುಷ್
ತಾಂಡವ್ ಈ ಜನ್ಮದಲ್ಲಿ ಬದಲಾಗಲ್ಲ ಅಂತ ವೀಕ್ಷಕರಿಗೆ ಅರ್ಥವಾಗಿ ಹೋಯ್ತು. ಅತ್ತ ಶ್ರೇಷ್ಠಾ ಕೈಹಿಡಿದು ರಾಜಾರೋಷವಾಗಿ ನೀವ್ಯಾರು ಬೇಡ ಎಂದು ಹೋದವಾ, ಹೊಟ್ಟೆ ಚುರ್ ಎಂದ ಕೂಡಲೇ ಮತ್ತೆ ಮನೆಗೆ ಬಂದಿದ್ದಾನೆ. ಕುಸುಮಾಗೆ ಇದ್ಯಾವುದು ಅರ್ಥವಾಗದೆ ನನ್ನನ್ನ ಬಿಟ್ಟಿಲಾರದೆ ಮಗ ಬಂದ ನೋಡಿ ಅಂತ ಖುಷಿ ಪಟ್ಟಿದ್ದಾಳೆ.
ಸುನಂದಾಗೂ ಮಗಳ ಚಿಂತೆ ಇಲ್ಲ
ಸುನಂದಾಗೆ ಅಳಿಯ ಏನೇ ಅಂದರು ಅದನ್ನು ಸಹಿಸಿಕೊಂಡು, ಗಂಡ ಹೇಳಿದಂತೆ ಹೆಂಡತಿ ಸುಮ್ಮನೆ ಇರಬೇಕು ಎಂಬ ಅಭಿಪ್ರಾಯ. ಭಾಗ್ಯಾ ಕೆಲಸಕ್ಕೆ ಹೋದಾಗ ತಾಂಡವ್ ದ್ವೇಷಿಸಿದ್ರೆ ಅಮ್ಮ ಆಗಿ ತಾಂಡವ್‌ಗೆ ಸಪೋರ್ಟ್ ಮಾಡಿದರು ಸುನಂದಾ. ಈಗ ಮನೆ ಬಿಟ್ಟು ಹೋಗಿದ್ದ ಅಳಿಯ ಮನೆಗೆ ವಾಪಾಸ್ ಬಂದಿದ್ದೇ ತಡ ಫುಲ್ ಖುಷಿಯಾಗಿ ಬಿಟ್ಟಳು. ಆದರೆ ಹೆತ್ತ ತಾಯಿಗೆ ಭಾಗ್ಯಾಳ ದುಃಖ ಕಾಣಿಸದೆ ಹೋದದ್ದು ವೀಕ್ಷಕರ ಬೇಸರಕ್ಕೆ ಕಾರಣವಾಯ್ತು.
ಅಮ್ಮನನ್ನು ಬಿಡಲು ಒಪ್ಪದ ಮಕ್ಕಳು
ಇನ್ನು ತಾಂಡವ್ ಮನೆಗೆ ಬಂದದ್ದು ಅದೇ ಹಳೇ ಚಾಳಿಯಿಂದ. ಭಾಗ್ಯಾಳನ್ನ ಈ ಮನೆಯಿಂದ ಓಡಿಸಿ, ಶ್ರೇಷ್ಠಾಳನ್ನ ಕರೆ ತರುತ್ತೀನಿ ಅಂತ. ಅದಕ್ಕೆ ಈಗ ಎಲ್ಲಾ ರೀತಿಯ ವೇದಿಕೆ ಸಿದ್ಧ ಮಾಡುತ್ತಿದ್ದಾನೆ. ಮಕ್ಕಳಿಗೆ ಐಸ್ ಕ್ರೀಂ, ಶಾಪಿಂಗ್ ಆಸೆ ತೋರಿಸಿ ಪ್ರಮಾಣ ಮಾಡಿಸಿಕೊಂಡಿದ್ದಾನೆ. ಅಮ್ಮ ಬೇಡ ಪಪ್ಪ ಜೊತೆಗೆ ಇರ್ತೀವಿ ಅನ್ನೋ ಪ್ರಮಾಣ. ಆದರೆ ಮಕ್ಕಳಿಗೆ ಅಮ್ಮನ ಬೆಲೆ ಗೊತ್ತಾಗಿದೆ. ಪಪ್ಪನ ಕೈ ಬಿಡಿಸಿಕೊಂಡು ಭಾಗ್ಯಾಳ ಬಳಿ ಓಡಿದ್ದಾರೆ. ಅತ್ತ ಶ್ರೇಷ್ಠಾಗೆ ಪಾಪ ತಾಂಡವ್ ವಾಪಸ್ ಮನೆಗೆ ಹೋಗಿರೋದು ಗೊತ್ತಿಲ್ಲದೆ ಅಲಂಕಾರ ಮಾಡಿಕೊಂಡು ಕಾಯುತ್ತಿದ್ದಾಳೆ.
ಮಗನ ಮೇಲೆ ವ್ಯಾಮೋಹ
ಕಾವೇರಿ ಈಗಾಗಲೇ ಮಗನ ವ್ಯಾಮೋಹಿಯಾಗಿ ಜೈಲು ಸೇರಿದ್ದಾಳೆ. ಕುಸುಮಾ, ಕಾವೇರಿಯಷ್ಟು ವ್ಯಾಮೋಹಿ ಅಲ್ಲದೆ ಹೋದರೂ ಮಗನ ಮೇಲೆ ವ್ಯಾಮೋಹ ಎದ್ದು ಕಾಣಿಸುತ್ತಿದೆ. ಇತ್ತ ಸೊಸೆಯನ್ನು ಬಿಟ್ಟು ಕೊಡಲ್ಲ, ಮಗನನ್ನು ತೀರಾ ತಪ್ಪಿತಸ್ಥ ಅಂತಾನೂ ಹೇಳುತ್ತಿಲ್ಲ. ಮಗ ಏನೇ ತಪ್ಪು ಮಾಡಿದರು ಕ್ಷಮೆ ಜಾಸ್ತಿಯೇ ಆಗಿದೆ. ಹೀಗಾಗಿ ಕುಸುಮಾ ಕೂಡ ಮಗನ ವ್ಯಾಮೋಹಿ ಎಂದು ವೀಕ್ಷಕರು ಅಂದಾಜು ಮಾಡುತ್ತಿದ್ದಾರೆ. ಅದು ಹೌದು ಕೂಡ, ಮಗ ರಾಜನ ಮುಖ ನೋಡಿದರೆ ಕುಸುಮಾ ಮುಖ ನಗುವಿನಲ್ಲಿಯೇ ಅರಳುತ್ತದೆ.


Click it and Unblock the Notifications











