Bhagyalakshmi: ಭಾಗ್ಯ ರೀತಿ ಸೊಸೆ ಆಯ್ತು, ಕುಸುಮಾ ಥರ ಅತ್ತೆ ಆಯ್ತು; ಈಗ ಗುಂಡಣ್ಣನಿಗೆ ಜೈಕಾರ!

By ಎಸ್ ಸುಮಂತ್

'ಭಾಗ್ಯಲಕ್ಷ್ಮೀ' ಧಾರಾವಾಹಿ ಅದೆಷ್ಟೋ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾಗಿದೆ. ಅತ್ತೆ - ಸೊಸೆಯನ್ನ ಅದೆಷ್ಟು ಜನ ಹೊಗಳಿದರೋ ಏನೋ. ಯಾಕಂದ್ರೆ ಈ ಧಾರಾವಾಹಿಯ ಪಾತ್ರಗಳು ಜನರಿಗೆ ಹತ್ತಿರವಾಗೋದಕ್ಕೆ ಸಾಕಷ್ಟು ಕಾರಣಗಳಿವೆ. ಈಗಲೂ ಅದೆಷ್ಟೋ ಹೆಣ್ಣು ಮಕ್ಕಳು ಗಂಡನಿಗೆ ತಮ್ಮ ಮೇಲೆ ಪ್ರೀತಿ ಇಲ್ಲದೆ ಹೋದರು ಮಕ್ಕಳಿಗಾಗಿ ಬದುಕುತ್ತಿದ್ದಾರೆ. ಅಂತವರಿಗೆಲ್ಲ ಈ ಧಾರಾವಾಹಿಯಿಂದ ಒಂದಷ್ಟು ಧೈರ್ಯ ಸಿಕ್ಕಂತಾಗಿದೆ.

ಮದುವೆಯಾದವರು ಒಂದು ಮಾತು ಹೇಳ್ತಾರೆ. ಗಂಡನ ಮನೆಯಲ್ಲಿ ಯಾರೇ ಕೆಟ್ಟವರಾಗಿದ್ದರು, ಗಂಡ ಒಬ್ಬ ಹೆಂಡತಿಯ ಜೊತೆಗೆ ನಿಲ್ಲಬೇಕು ಅಂತ. ಅಥವಾ ಗಂಡ ಕೆಟ್ಟವನಾದರೂ ಅತ್ತೆ ಮಾವ ಸೊಸೆ ಪರವಾಗಿ ಇದ್ದರೆ ಆ ಹೆಣ್ಣಿನ ಬದುಕು ಕೊಂಚ ನಿರಾಳವಾಗುತ್ತದೆ. ಇಲ್ಲಿಯೂ ಅದೇ ಆಗಿದ್ದು. ಸಾಕಷ್ಟು ಜನ ಹೆಣ್ಣು ಮಕ್ಕಳು ಭಾಗ್ಯಾಳಲ್ಲಿ ನಿಜವಾದ ಭಾಗ್ಯಾಳನ್ನ ಕಾಣುತ್ತಿದ್ದಾರೆ. ಒಂದು ವೇಳೆ ಅತ್ತೆ ಮಾವನ ಸಪೋರ್ಟ್ ಕೂಡ ಇಲ್ಲದೆ ಹೋಗಿದ್ದರೆ ಭಾಗ್ಯ ಪರಿಸ್ಥಿತಿ ಏನಾಗ್ತಾ ಇತ್ತು ಎಂಬ ಚಿಂತೆಯಲ್ಲಿದ್ದಾರೆ.

Colors kannada Bhagyalakshmi Written Update on January 2nd episode

ಶ್ರೇಷ್ಠಾಳಿಗೆ ಕುಸುಮಾ ಬುದ್ಧಿ

ತಾಂಡವ್‌ಗೆ ಒಳ್ಳೆಯ ರೀತಿಯಲ್ಲಿ ಬುದ್ದಿ ಹೇಳಿದ್ದಾಯ್ತು. ಭಾಗ್ಯಾಳನ್ನ ಬದಲಾಯಿಸಿದ್ದಾಯ್ತು. ಆದರೂ ತಾಂಡವ್ ಬುದ್ದಿ ಕಲಿಯುವಂತೆ ಕಾಣಿಸುತ್ತಿಲ್ಲ. ಭಾಗ್ಯಾ ಬೇಡ.. ಶ್ರೇಷ್ಠಾಳನ್ನ ಬಿಡಲ್ಲ ಎಂಬುದೇ ಅವನ ಹಠ. ತಾಂಡವ್ ಅವತಾರಕ್ಕೆ ಮನೆಯವರೆಲ್ಲ ಸುಸ್ತಾಗಿ ಹೋಗಿದ್ದಾರೆ. ಅದಕ್ಕೆ ಕುಸುಮಾ ಹೊಸದೊಂದು ಪ್ಲ್ಯಾನ್ ಮಾಡಿದ್ದಾಳೆ. ಶ್ರೇಷ್ಠಾಳನ್ನ ಸ್ವಾಗತಿಸಿದ್ದಾಳೆ.

ಶ್ರೇಷ್ಠಾ ಸೊಸೆ.. ಭಾಗ್ಯಾ ಗೆಸ್ಟ್!

ಈಗ ಸೂರ್ಯವಂಶಿ ಮನೆಯಲ್ಲಿ ಎಲ್ಲವೂ ಉಲ್ಟಾ ಆಗಿದೆ. ಮುದ್ದಿನ ಸೊಸೆ ಅತಿಥಿ ಪಾತ್ರಕ್ಕೆ ಶಿಫ್ಟ್ ಆಗಿದ್ರೆ, ತಾಂಡವ್ ಪ್ರೀತಿಯ ಹನಿ, ಶ್ರೇಷ್ಠಾ ಈಗ ಕುಸುಮಾ ಸೊಸೆಯಾಗಿದ್ದಾಳೆ. ಇದು ತಾಂಡವ್ ಆಯ್ಕೆಯಾದರೂ ಕುಸುಮಾ ಒಪ್ಪಿದ ಸೊಸೆಯಾಗಿದ್ದಾಳೆ‌. ಇದರ ಹಿಂದಿನ ಮರ್ಮವೇ ಬೇರೆ ಇದೆ. ಮನೆಯವರೆಲ್ಲ ಟೆನ್ಶನ್ ಆಗಿದ್ದರು. ಈಗ ಕುಸುಮಾ ಏನೋ ಮಾಡ್ತಾ ಇದಾಳೆ ಎಂಬುದಂತು ಅರ್ಥವಾಗಿದೆ.

ಅತ್ತೆ-ಸೊಸೆ ಪ್ರೀತಿ ಕಂಡಿರಾ?

ಕುಸುಮಾ ಅಷ್ಟು ಸುಲಭವಾಗಿ ಭಾಗ್ಯಾಳನ್ನ ಬಿಟ್ಟು ಕೊಡುವುದಕ್ಕೆ ಸಾಧ್ಯವೇ ಇಲ್ಲ. ಅದೆಷ್ಟೋ ಸಲ ಸಾಬೀತಾಗಿದೆ. ಭಾಗ್ಯಾಗೂ ಅದು ಗೊತ್ತು. ಅದಕ್ಕೆ ಅತ್ತೆ ಹೇಳಿದ ಮಾತನ್ನ ಚಾಚು ತಪ್ಪದೆ ಪಾಲಿಸುತ್ತಿದ್ದಾಳೆ. ಆದರೆ ಶ್ರೇಷ್ಠಾ ಇಲ್ಲಿ ಮಂಗನಾಗ್ತಾ ಇದಾಳೆ. ಭಾಗ್ಯಾಳ ಎಲ್ಲಾ ಜವಾಬ್ದಾರಿಯನ್ನ ಶ್ರೇಷ್ಠಾಳ ಮೇಲೆ ಹಾಕಿದ್ದಾಳೆ. ಅಡುಗೆ ಮಾಡಬೇಕು, ಪಾತ್ರೆ ತೊಳೆಯಬೇಕು. ಶ್ರೇಷ್ಠಾ ಅಂತು ಅತ್ತೆ ತೋರಿಸೋ ಪ್ರೀತಿಗೆ ಕಳೆದೋಗಿದ್ದಾಳೆ. ಅತ್ತೆಯ ಪ್ಲ್ಯಾನ್ ಮಾತ್ರ ತಿಳಿತಿಲ್ಲ. ಶ್ರೇಷ್ಠಾಳೆ ಮನೆಯಿಂದ ಓಡಿ ಹೋಗುವಂತೆ ಮಾಡದೆ ಕುಸುಮಾ ಬಿಡೋಳೆ ಅಲ್ಲ.

ಗುಂಡಣ್ಣನ ಬಗ್ಗೆ ಹೊಗಳಿಕೆ

ಈ ಧಾರಾವಾಹಿಯಲ್ಲಿ ಮೊದಲೆಲ್ಲಾ ಕುಸುಮಾಳನ್ನ ಹೊಗಳಿದ್ದರು. ಇಂಥ ಅತ್ತೆ ಸಿಕ್ಕರೆ ಅದೆಷ್ಟೋ ಸೊಸೆಯಂದಿರು ನೆಮ್ಮದಿಯಾಗಿ ಬದುಕುತ್ತಾರೆ ಎನ್ನುತ್ತಿದ್ದರು. ಆಮೇಲೆ ಭಾಗ್ಯಾಳ ನಡೆಯನ್ನು ಕಂಡು ಇಂಥ ಸೊಸೆ ಬೇಕು ಎಂದು ಅತ್ತೆಯಂದಿರು ಅಂದುಕೊಂಡರೆ, ಇಂಥ ಗಟ್ಟಿ ಹೆಣ್ಣು ನಾನಾಗಬೇಕು ಎಂದು ಹಲವರು ಹೇಳಿದರು. ಈಗ ಗುಂಡಣ್ಣನನ್ನ ಹೊಗಳುವುದಕ್ಕೆ ಶುರು ಮಾಡಿದ್ದಾರೆ. ಯಾಕಂದ್ರೆ ಶ್ರೇಷ್ಠಾಗೆ ಬುದ್ದಿ ಕಲಿಸುವುದಕ್ಕಾಗಿ ಕುಸುಮಾ ಪಣ ತೊಟ್ಟಿದ್ದಾಳೆ. ಇನ್ನು ಮನೆಯಲ್ಲಿ ತಿಂಡಿ ಆಗಿಲ್ಲ. ಗುಂಡಣ್ಣ ಹಸಿವಿನಿಂದ ಸಂಕಟ ಪಡುತ್ತಿದ್ದಾನೆ. ಭಾಗ್ಯಾಳಿಗೆ ಗೊತ್ತಾದರೆ ಅಮ್ಮ ಸೋಲುತ್ತಾರೆ ಅಂತ ಹಸಿವನ್ನು ಮರೆಮಾಚಿದ್ದಾನೆ. ಇದೇನು ಹೊಸದಲ್ಲ. ಹಲವಾರು ವಿಚಾರದಲ್ಲಿ ಗುಂಡಣ್ಣ ಸ್ಫೂರ್ತಿಯಾಗಿದ್ದಾನೆ.

More from Filmibeat

English summary
Bhagyalakshmi today episode. Here is the details about Viewers praised Gundanna;
Read more about: sumanth serial kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X