Bhagyalakshmi: ಶ್ರೇಷ್ಠಾಗೆ ಕುಸುಮಾ ಅಲ್ಲ ವಿಲನ್ ತಾಂಡವ್; ಆಫೀಸ್ ಬಿಟ್ಟು ಸೇವಕಿ ಆದ್ಲೂ!
ಎಷ್ಟೇ ಬೇಡವೆಂದರೂ ತಾಂಡವ್ ಮಾತ್ರ ಶ್ರೇಷ್ಠಾಳನ್ನ ಬಿಡುವುದಕ್ಕೆ ರೆಡಿ ಇಲ್ಲ. ಎಲ್ಲಾ ರೀತಿಯ ಪ್ರಯತ್ನಗಳಾದ ಮೇಲೆ ಕುಸುಮಾ ಒಂದು ದೊಡ್ಡ ನಿರ್ಧಾರಕ್ಕೆ ಬಂದಳು. ಅದುವೆ ಶ್ರೇಷ್ಠಾಳನ್ನ ತನ್ನ ಮನೆಯಲ್ಲಿಯೇ ಇಟ್ಟುಕೊಳ್ಳುವುದು. ಸೊಸೆಯಂತೆ ಟ್ರೀಟ್ ಮಾಡುವುದು. ಅದಕ್ಕೆ ಮಗ ಹೋಗಿ ಶ್ರೇಷ್ಠಾಳನ್ನ ಕರೆದುಕೊಂಡು ಬಂದ ಮೇಲೆ ಆರತಿ ಮಾಡಿಯೇ, ಮನೆಯೊಳಗೆ ಕರೆದುಕೊಂಡಳು. ಅಲ್ಲಿಂದ ಮನೆಯ ಸೊಸೆ ಹೇಗಿರಬೇಕೋ ಶ್ರೇಷ್ಠಾ ಕೂಡ ಹಾಗೇ ಇರಬೇಕೆಂಬುದು ಶುರುವಾಯ್ತು.
ಭಾಗ್ಯಾಳ ಸ್ಥಾನ ಬೇಕು ಎಂದು ಹಾರಾಡುತ್ತಿರುವ ಶ್ರೇಷ್ಠಾಗೆ ಭಾಗ್ಯಾಳಂತೆ ಕೆಲಸ ಮಾಡುವುದು, ಜವಾಬ್ದಾರಿ ನಿಭಾಯಿಸುವುದು ಸುಲಭವಾಗಿಲ್ಲ. ಹಾಗಂತ ಕುಸುಮಾ ಸುಮ್ಮನೆ ಬಿಡುವುದು ಇಲ್ಲ.

ಸಂಸಾರ ಅಂದ್ರೆ ಹೇಗಿರುತ್ತೆ ಎಂದು ಶ್ರೇಷ್ಠಾಗೆ ಕುಸುಮಾ ತೋರಿಸುತ್ತಿದ್ದಾಳೆ. ಮನೆಯ ಒಂದೇ ಒಂದು ಕೆಲಸ ಮಾಡದ, ಅಡುಗೆ ಮನೆಯಲ್ಲಿ ಒಗ್ಗರಣೆ ಹಾಕದ ಶ್ರೇಷ್ಠಾ ಇದೀಗ ಕುಸುಮಾ ಮನೆಯಲ್ಲಿ ಎಲ್ಲಾ ಕೆಲಸವನ್ನು ಮಾಡ್ತಾ ಇದಾಳೆ.
ತಾಂಡವ್ ಮಾತಿಗೆ ಶ್ರೇಷ್ಠಾ ಸುಸ್ತು
ತಾಂಡವ್ ಮನೆಗೆ ಶ್ರೇಷ್ಠಾ ಬಂದಿದ್ದು, ಮನೆಯ ಸೊಸೆ ಎಂದು ಫಿಕ್ಸ್ ಆಗಿ ಬಿಟ್ಟಿದ್ದಾಳೆ. ಮೊದಲೇ ಮನೆಯವರು ಹೇಳುವ ಕೆಲಸಕ್ಕೆ ಶ್ರೇಷ್ಠಾ ಸುಸ್ತಾಗಿ ಹೋಗಿದ್ದಾಳೆ. ಮನೆಯಲ್ಲಿರುವವರೆಲ್ಲಾ ಶ್ರೇಷ್ಠಾಳನ್ನ ಉರಿದು ಮುಕ್ಕುತ್ತಿದ್ದಾರೆ. ಹೀಗಿರುವಾಗ ತಾಂಡವ್ ಕೂಡ ತಗಲಾಕಿದ್ದಾನೆ. ಈ ಮನೆಯ ಯಾವ ಕೆಲಸವನ್ನು ಭಾಗ್ಯಾ ಮಾಡೋದು ಬೇಡ, ಸೊಸೆಯಾಗಿರುವ ಶ್ರೇಷ್ಠಾನೆ ಮಾಡಲಿ ಎಂದಿದ್ದಾನೆ. ತಾಂಡವ್ ಮಾತು ಕೇಳಿ ಶ್ರೇಷ್ಠಾ ಕಕ್ಕಾಬಿಕ್ಕಿಯಾಗಿದ್ದಾಳೆ.
ನಿಂತು ಕೆಲಸ ಮಾಡಿಸಿದ ಕುಸುಮಾ
ಮನೆಯಲ್ಲಿ ದೇವರ ಪೂಜೆಯನ್ನು ಇಟ್ಟುಕೊಳ್ಳಲಾಗಿದೆ. ಈಗ ದೇವರಿಗೆ ನೈವೇದ್ಯವನ್ನು ಶ್ರೇಷ್ಠಾಳೆ ಮಾಡಲಿ ಎಂದು ತಾಂಡವ್ ಹೇಳಿ ಆಗಿದೆ. ಕುಸುಮಾಗೆ ಆತಂಕ. ದೇವರ ನೈವೇದ್ಯದಲ್ಲಿ ಏನು ಹೆಚ್ಚು ಕಡಿಮೆಯಾಗಬಾರದು. ಹೀಗಾಗಿ ತಾನೇ ಮುಂದೆ ನಿಂತು ಶ್ರೇಷ್ಠಾ ಕೈಲಿ ಕೆಲಸ ಮಾಡಿಸಿದ್ದಾಳೆ. ದೇವರ ಮೇಲಿನ ಭಕ್ತಿಗಿಂತ, ಆಕೆಯ ಮೇಲಿನ ಭಯಕ್ಕಷ್ಟೇ ಶ್ರೇಷ್ಠಾ ಕೆಲಸ ಮಾಡಿದ್ದಾಳೆ.
ಭಾಗ್ಯಾ ಎಂಥಾ ಸ್ಥಿತಿ?
ಶ್ರೇಷ್ಠಾ ಹಾಗೂ ತಾಂಡವ್ ಮದುವೆಯಾಗಬೇಕು ಅಂತ ಅಂದುಕೊಂಡು ಕ್ಯಾನ್ಸಲ್ ಆಗಿರೋದು ಇದು ಮೂರನೇ ಸಲ. ಒಂದೇ ಒಂದು ಸಲ ಕುತ್ತಿಗೆಗೆ ತಾಳಿ ಬೀಳಲಿ. ಆಮೇಲಿದೆ ಭಾಗ್ಯಾಳಿಗೆ ಮಾರಿ ಹಬ್ಬ. ಹೇಗೆ ಬುದ್ದಿ ಕಲಿಸ್ತೀನಿ ನೋಡಿ ಎಂದು ಮನಸ್ಸೊಳಗೆ ಸವಾಲು ಹಾಕಿಕೊಂಡಿದ್ದೆ ಬಂತು. ಆದರೆ ಈಗ ಮನೆಗೆ ಬಂದಿರುವ ಶ್ರೇಷ್ಠಾ, ಭಾಗ್ಯಾಳ ಕೆಲಸದಾಕೆಯಾಗಿದ್ದಾಳೆ. ಭಾಗ್ಯಾ ಬಿಂದಾಸ್ ಆಗಿ ಕೂತಿದ್ದಾಳೆ, ಆದರೆ ಶ್ರೇಷ್ಠಾ, ಭಾಗ್ಯಾಳಿಗೆ ಅಡುಗೆ ಮಾಡಿ ಬಡಿಸುತ್ತಿದ್ದಾಳೆ.
ತಾಂಡವ್ ಮೇಲೆ ಮನಸ್ಸಲ್ಲೆ ಕೋಪ
ಶ್ರೇಷ್ಠಾ ನಿನ್ನೆಯಷ್ಟೇ ತನ್ನ ನೋವನ್ನ ತಾಂಡವ್ ಬಳಿ ಹೇಳಿಕೊಂಡಿದ್ದಾಳೆ. ಮನೆ ಕೆಲಸ ಮಾಡೋದಕ್ಕೆ ಆಗ್ತಾ ಇಲ್ಲ, ನಿಮ್ಮ ಅಮ್ಮನ ಟಾರ್ಚರ್ ತಡೆಯೋದಕ್ಕೆ ಆಗ್ತಾ ಇಲ್ಲ ಅಂತ. ಈಗ ನೋಡಿದ್ರೆ ದೇವರ ಕೆಲಸವನ್ನು ಮಾಡುವುದಕ್ಕೆ ಭಾಗ್ಯಾ ಹೋದರೆ, ತಾಂಡವ್ ತಡೆದಿದ್ದಾನೆ. 'ಇವಳು ನಮ್ಮ ಮನೆಯ ಅತಿಥಿ. ಏನು ಕೆಲಸ ಮಾಡುವಂತೆ ಇಲ್ಲ. ಈ ಮನೆಯ ಸೊಸೆ ಶ್ರೇಷ್ಠಾ ಎಲ್ಲಾ ಕೆಲಸ ಮಾಡಲಿ' ಎಂದಿದ್ದಾನೆ. ಈ ಮಾತು ಕೇಳಿ ಶ್ರೇಷ್ಠಾ ನಿಂಗಿದು ಬೇಕಿತ್ತಾ? ಅಂತಿದ್ದಾರೆ ವೀಕ್ಷಕರು.


Click it and Unblock the Notifications











