Bhagyalakshmi: ಶ್ರೇಷ್ಠಾ - ತಾಂಡವ್ ಮದುವೆ ಆಯ್ತು, ಭಾಗ್ಯಾ ತಾಳಿ ಬಿಸಾಕಿ ಆಯ್ತು: ಮುಂದೆ ಕಥೆ?
ಹೆಣ್ಣನ್ನ ಸಹಾನಾಮೂರ್ತಿ ಎನ್ನುತ್ತಾರೆ.. ತಾಳ್ಮೆ ಹೆಚ್ಚು ಎಂದು ಹೊಗಳುತ್ತಾರೆ...ಕ್ಷಮಾಯಾಧರಿತ್ರಿ ಎಂಬುದು ಗೊತ್ತಿದೆ. ಆದರೆ ಎಲ್ಲವೂ ಯಾವ ಹಂತಕ್ಕೆ. ಮಿತಿಮೀರಿದಾಗ ತಾಳ್ಮೆ ಕೆಟ್ಟು ಅದೇ ಹೆಣ್ಣು ಕಾಳಿಯೂ ಆಗುತ್ತಾಳೆ. ಇದೆಲ್ಲ ಹೇಳಿದ್ಯಾಕೆ ಅಂದ್ರೆ ನಮ್ಮ ಭಾಗ್ಯಾಳ ಸಂಸಾರದಲ್ಲಿ ನಡೆಯುತ್ತಿರೋ ಅವಾಂತರ ಕಂಡು. ತಾಂಡವ್ ನ ದೊಂಬರಾಟ ನೋಡಿ. ಈಗ ಭಾಗ್ಯಾಳ ಲೈಫ್ ಹೇಗಿದೆ ಗೊತ್ತಾ..?
ಭಾಗ್ಯಾ ಮೊದಲಿನಿಂದಲೂ ತಾಳ್ಮೆಯಿಂದಾನೇ ಸಂಸಾರ ಮಾಡಿಕಿಂಡು ಬಂದವಳು. ತಾಂಡವ್ ಕೆಟ್ಟದಾಗಿ ಬೈದಾಗಲೂ ಯಾರೊಂದಿಗೂ ಆ ನೋವನ್ನ ತೋಡಿಕೊಂಡವಳಲ್ಲ, ಇನ್ನೊಬ್ಬಳ ಸಹವಾಸ ತನ್ನ ಗಂಡನಿಗೆ ಇದೆ ಎಂದಾಗಲೂ ಮುಚ್ಚಿಟ್ಟಳು, ಗಂಡನೇ ನೀನು ಬೇಡ ಎಂದಾಗಲೂ ಅತ್ತೆ, ಮಾವ, ಮಕ್ಕಳಿಗಾಗಿ ಸಹಿಸಿಕೊಂಡಳು, ತನ್ನನ್ನು ಬಿಟ್ಟು ಅಧಿಕೃತವಾಗಿ ಶ್ರೇಷ್ಠಾಳ ಮನೆಯಲ್ಲಿಯೇ ಉಳಿದುಕೊಂಡರು ಮಕ್ಕಳ ಮುಖ ನೋಡಿಕೊಂಡು ಸುಮ್ಮನಾದಳು. ಆದರೆ ಈಗ ಶ್ರೇಷ್ಠಾಳಿಗೆ ತಾಳಿ ಕಟ್ಟಾಗಿದೆ. ಮುಂದೇನು ಮಾಡ್ತಾಳೆ ಭಾಗ್ಯಾ..?

ಭಾಗ್ಯಲಕ್ಷ್ಮೀ ಹೊಸ ಪ್ರೋಮೋ
'ಭಾಗ್ಯಲಕ್ಷ್ಮೀ' ಧಾರಾವಾಹಿಯ ಹೊಸ ಪ್ರೋಮೋವೊಂದು ರಿಲೀಸ್ ಆಗಿದೆ. ಅದರಲ್ಲಿ ತಾಂಡವ್‌ನ ವರ್ತನೆ ಮಿತಿಮೀರಿ ಹೋಗಿದೆ. ಶ್ರೇಷ್ಠಾಳಿಗೆ ಕೊನೆಗೂ ತಾಳಿ ಕಟ್ಟಿದ್ದಾನೆ. ತಾಂಡವ್ ಹಾಗೂ ಶ್ರೇಷ್ಠಾ ಮದುವೆ ಇದಕ್ಕೂ ಮುನ್ನ ಎರಡು ಬಾರಿ ಅರೆಂಜ್ ಆಗಿತ್ತು. ತಾಳಿ ಬೀಳುವಷ್ಟರಲ್ಲಿ ತಪ್ಪಿತ್ತು. ಆದರೆ ಈಗ ಮೂರನೇಯದು. ಮಿಸ್ಸೇ ಆಗಿಲ್ಲ. ಶ್ರೇಷ್ಠಾ ತಾನಂದುಕೊಂಡಿದ್ದನ್ನು ಮಾಡಿ ಸಾಧಿಸಿದ್ದಾಳೆ.
ಸ್ವಾಭಿಮಾನದ ಉತ್ತರ ಕೊಟ್ಟ ಭಾಗ್ಯಾ
ಹೊಸ ಪ್ರೋಮೋದಲ್ಲಿ ಭಾಗ್ಯಾಳ ದಿಟ್ಟ ನಿರ್ಧಾರ ಎದ್ದು ಕಾಣಿಸ್ತಾ ಇದೆ. ತಾಂಡವ್ ಮದುವೆಯಾದ ಮೇಲೆ ಭಾಗ್ಯಾ ತನ್ನ ಕೊರಳಲ್ಲಿದ್ದ ಮಾಂಗಲ್ಯವನ್ನ ಬಿಚ್ಚಿ ಕೊಟ್ಟಿದ್ದಾಳೆ. ಗಂಡನಿಗೆ ಯಾವತ್ತು ತನ್ನ ಮೇಲೆ ಮನಸ್ಸೇ ಆಗದೆ ಇದ್ದಾಗ, ತಾನಿರುವಾಗಲೇ ಇನ್ನೊಬ್ಬಳನ್ನು ಮದುವೆಯಾದಾಗ ಆ ತಾಳಿಗೆ ಬೆಲೆಯೇ ಇಲ್ಲ ಎಂಬುದನ್ನು ಸಾರಿ ಹೇಳಿದ್ದಾಳೆ. ಅತ್ತೆ, ಮಾವನ ಮುಂದೆಯೇ ತಾಳಿ ತೆಗೆದು ಬಿಸಾಡಿದ್ದಾಳೆ. ಅಂದು ತಾಂಡವ್ ಮುಜಕದ ಮೇಲೆ ಡಿವೋರ್ಸ್ ಪೇಪರ್ ಬಿಸಾಡಿ ಬಂದಿದ್ದಳು. ಆಮೇಲೆ ಮಕ್ಕಳು, ಅತ್ತೆ - ಮಾವನಿಗಾಗಿ ಅಡ್ಜೆಸ್ಟ್ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಳು ಭಾಗ್ಯ.
ಅತ್ತೆ ಮಾವನಿಂದ ಸಿಗುತ್ತಾ ಬೆಂಬಲ
ಅತ್ತೆ, ಮಾವನಿಗೆ ತನ್ನ ಸೊಸೆಯ ಬದುಕು ಸರಿಯಾಗಬೇಕು ಎಂಬುದೇ ದೊಡ್ಡ ಆಸೆ. ಹಾಗೇ ಸುನಂದಾಗೂ ಮಗಳ ಸಂಸಾರ ಸರಿಯಾದರೆ ಸಾಕು ಎಂಬ ಹಂಬಲ. ಎಷ್ಟೋ ಬಾರಿ ಸುನಂದಾ ತನ್ನ ಮಗಳು ಭಾಗ್ಯಾಗೆ ನೀನೆ ಸೋತು ಬಿಡು ಅಂತಾನು ಹೇಳಿದ್ದಾಳೆ. ಈಗ ಕಂಪ್ಲೀಟ್ ಆಗಿ ಗಂಡ ಬೇಡ ಎಂದು ಬಿಟ್ಟು ಬರ್ತಿರೋ ಮಗಳಿಗೆ ತಾಯಿಯ ಬೆಂಬಲ ಸಿಗೋದು, ಅತ್ತೆ, ಮಾವನ ಬೆಂಬಲ ಸಿಗೋದು ಬಹಳ ಮುಖ್ಯ. ಎಲ್ಲಾ ಒಟ್ಟುಗೂಡಿ ಏನು ಮಾಡ್ತಾರೆ ಎಂಬ ಕುತೂಹಲವಿದೆ.

ಭಾಗ್ಯಾಳಿಗೆ ವೀಕ್ಷಕರ ಬೆಂಬಲ
ಒಂದು ಹೆಣ್ಣಿಗೆ ಗಂಡನ ಮನೆ ಸರ್ವಸ್ವವೇ ಸರಿ. ಆದರೆ ಅಲ್ಲಿ ಯಾವುದೇ ಬೆಲೆ ಸಿಗದೇ ಹೋದಲ್ಲಿ, ಗಂಡನಿಂದಾನೇ ಪ್ರೀತಿ ಸಿಗದೇ ಹೋದಲ್ಲಿ ಸ್ವಾಭಿಮಾನ ಅಡಮಾನವಿಟ್ಟು ಬದುಕುವುದು ಒಂದು ಬದುಕಲ್ಲ ಎಂಬ ಅಭಿಪ್ರಾಯ ಹಲವರದ್ದು. ಈಗ ಭಾಗ್ಯಾ ಕೂಡ ತನ್ನ ಸ್ವಾಭಿಮಾನಕ್ಕೆ ಬೆಲೆ ಕೊಟ್ಟಿದ್ದಾಳೆ. ಪ್ರೀತಿ ಇಲ್ಲದ ಗಂಡಬ ಜೊತೆಗೆ ಬದುಕುವುದಕ್ಕಿಂತ ಸ್ವಾಭಿಮಾನದಲ್ಲಿ ಬದುಕುತ್ತೇನೆ ಎಂದು ಹೊರಗೆ ಬಂದಿದ್ದಾಳೆ. ಇದಕ್ಕೆ ವೀಕ್ಷಕರಿಂದ ಫುಲ್ ಸಪೋರ್ಟ್ ಇದೆ.


Click it and Unblock the Notifications











