BBK 11: ಶೋಭಾ ಮಾತಿಗೆ ಧನರಾಜ್‌ಗೆ ನಡುಕ, ಹನುಮಂತನಿಗೆ ಪುಕಪುಕ!

By ಎಸ್ ಸುಮಂತ್

ಬಿಗ್ ಬಾಸ್ ಮನೆಗೆ ಬಂದ ಶೋಭಾ ಶೆಟ್ಟಿ ಒಂದೇ ದಿನದಲ್ಲಿ ಜಗಳ ಶುರು ಮಾಡಿಕೊಂಡಿದ್ದಾರೆ. ತೆಲುಗಿನಲ್ಲಿ ಮುಗಿಸಿರುವ ಜರ್ನಿ ಇಲ್ಲಿ ಕಂಟಿನ್ಯೂ ಆಗ್ತಿದೆ ಎಂದು ಭಾವಿಸಿದ್ದಾರೆ ಎನಿಸುತ್ತದೆ. ಅದಕ್ಕೆ ಶೋಭಾ ಶೆಟ್ಟಿ ಅಲ್ಲಿ ವಾಯ್ಸ್ ಜೋರು ಮಾಡಿದಂತೆ, ಗರಂ ಆದಂತೆಯೇ ಇಲ್ಲಿಯೂ ಆಗುತ್ತಿದ್ದಾರೆ.

ಕನ್ನಡದಲ್ಲಾದರೂ ಕಪ್ ಗೆಲ್ಲಬೇಕು ಎಂದೇ ಶೋಭಾ ಶೆಟ್ಟಿ ಬಂದಿದ್ದಾರೆ. ಆದರೆ ಅರ್ಧಕ್ಕೆ ಮನೆಯೊಳಗೆ ಬಂದ ಶೋಭಾ ಶೆಟ್ಟಿ ಪೂರ್ತಿಯಾಗಿ ಇರುತ್ತಾರಾ ಅಥವಾ ಅರ್ಧಕ್ಕೆ ಹೋಗುತ್ತಾರಾ ಎಂಬುದನ್ನು ನೋಡಬೇಕಿದೆ. ಆದರೆ ಮನೆಯೊಳಗೆ ಶೋಭಾ ಶೆಟ್ಟಿ ಧ್ವನಿ ಏರಿಸಿದ್ದು ನೋಡಿ ನಿಜಕ್ಕೂ ಗಾಬರಿಯಾಗಿರುವುದು ಹನುಮಂತು.

Colors kannada bigboss kannada 11 Shobha shetty angry Dhanraj and Hanumantha shocked

ಅರ್ಹ, ಅನರ್ಹತೆಯ ಪ್ರಶ್ನೆ

ಬಿಗ್ ಬಾಸ್ ಮನೆಗೆ ಇಬ್ಬರು ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಕೇವಲ ಒಂದು ದಿನವಾಗಿದೆ ಅಷ್ಟೇ. ಅಷ್ಟರಲ್ಲಿಯೇ ಉಲ್ಟಾ ಬೆಳವಣಿಗೆಯಾಗಿದೆ. ಅದು ಸರಿ ಐವತ್ತು ದಿನ ಕಷ್ಟಪಟ್ಟವರು ಸುಲಭವಾಗಿ ಹೊಸಬರನ್ನು ಸಪೋರ್ಟ್ ಮಾಡಿ ಬಿಡುತ್ತಾರಾ. ಬಿಗ್ ಬಾಸ್ ಮನೆಯಲ್ಲೂ ಈಗ ಆಗ್ತಾ ಇರೋದು ಅದೆ. ಇಂದು ಬಿಗ್ ಬಾಸ್ ಒಂದು ಟಾಸ್ಕ್ ನೀಡಿದೆ. ನಾಯಕತ್ವ ವಹಿಸಿಕೊಳ್ಳಲು ಯಾರು ಅರ್ಹರಲ್ಲ, ಯಾರು ಅರ್ಹರು ಎಂಬುದನ್ನು ಸೂಚಿಸಲು ತಿಳಿಸಿದೆ. ಎಲ್ಲರೂ ಅವರವರ ಅಭಿಪ್ರಾಯ ತಿಳಿಸಿದ್ದಾರೆ.

ಅನರ್ಹತೆಗೆ ಕಾರಣ ಕೊಟ್ಟ ಮಂಜು

ಮಂಜು ಸರದಿ ಬಂದಾಗ ಅನರ್ಹತೆಗೆ ಶೋಭಾ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ. ಸೂಕ್ತ ಕಾರಣಗಳೊಂದಿಗೆ ಅವರು ಯಾಕೆ ಅರ್ಹರಲ್ಲ ಎಂಬುದನ್ನು ಹೇಳಬೇಕಿದೆ. ಈಗ ಮಂಜು ಅದನ್ನೇ ಹೇಳಿದ್ದಾರೆ. ಟಾಸ್ಕ್ ಗಳ ವಿಚಾರದಲ್ಲಿ ರೂಲ್ಸ್ ಗಳನ್ನ ಅಲ್ಲಾಡಿಸಿದ್ದಾರೆ ಎಂದು ಕಾರಣ ನೀಡಿ ಅನರ್ಹತೆಯ ಬೋರ್ಡ್ ಗೆ ಶೋಭಾ ಅವರ ಫೋಟೋ ಅಂಟಿಸಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಶೋಭಾ ಭಾಗವಹಿಸಬೇಕೋ ಬೇಡವೋ ಎಂಬುದನ್ನು ಈ ಅಭಿಪ್ರಾಯಗಳು ನಿರ್ಧಾರ ಮಾಡುತ್ತವೆ.

ಮಂಜುಗೆ ಎಚ್ಚರಿಕೆ ಕೊಟ್ಟ ಶೋಭಾ

ಮಂಜು ಕೊಟ್ಟ ಕಾರಣ ಶೋಭಾ ಅವರಿಗೆ ಹಿಡಿಸಿಲ್ಲ. ಹೀಗಾಗಿ ವಾಯ್ಸ್ ಜೋರು ಮಾಡಿದ್ದಾರೆ. 'ಅಲ್ಲಾಡಿಸೋದಕ್ಕೆ, ಗಿಲ್ಲಾಡಿಸೋದಕ್ಕೆ ವಾಟ್.. ಆ ಯಪ್ಪನಿಗೆ ಕ್ಲಾರಿಟಿಯೇ ಇಲ್ಲ. ನಾನ್ ಸೆನ್ಸ್ ರೀಸನ್ ಕೊಡ್ತಾ ಇದ್ದೀರಾ' ಎಂದಿದ್ದಾರೆ. ಆಗ ಮಂಜು ಸುಮ್ನೆ ಇರ್ರಿರೀ ಇಲ್ಲೇ ಇದ್ದೀನಿ ಅಂತ ಜೋರಾಗಿ ಹೇಳಿದಾಗ, ಶೋಭಾ ತಡೆದಿದ್ದಾರೆ. ಕೇಳಿಸ್ಕೊಳಿ, ರೆಸ್ಪೆಕ್ಟ್ ಕಳೆದುಕೊಳ್ಳಬೇಡಿ' ಎಂದು ಎಚ್ಚರಿಕೆ ನೀಡಿದ್ದಾರೆ. ಶೋಭಾ ಧ್ವನಿ ಏರಿಸಿದಾಗ ಮಂಜು ತಣ್ಣಗಾಗಿದ್ದಾರೆ. ಆದರೆ ಮನೆಯವರೆಲ್ಲ ಕೂಡ ಒಂದು ಕ್ಷಣ ಶಾಕ್ ಆಗಿದ್ದಾರೆ. ಸದ್ಯಕ್ಕೆ ಮನೆಯಲ್ಲಿ ಶೋಭಾ ಅವರಷ್ಟು ಧ್ವನಿ ಏರಿಸುವವರು ಯಾರಿಲ್ಲ.

ಧನರಾಜ್-ಹನುಮಂತು ಶಾಕ್

ಇದೆಲ್ಲವನ್ನು ನೋಡುತ್ತಿದ್ದ ಹನುಮಂತು, ಧನರಾಜ್ ಬಳಿ ಆಕ್ಷನ್ ಮಾಡಿನೇ ತೋರಿಸುತ್ತಿದ್ದರು. ಕಡೆಯಲ್ಲಿ 'ಹೆಂಗ್ ಮಾತಾಡ್ತಳೋ ಲೇ ಯಪ್ಪ.. ನಾನು ನೀನು ಹೋದ್ರೆ ಉಚ್ಚೇನೆ ಹೊಯ್ಕೊಳೋದು' ಎಂದು ಗಾಬರಿಯಾಗಿದ್ದಾರೆ. ಅತ್ತ ಧನರಾಜ್ ಕೂಡ ಸಹಜವಾಗಿಯೇ ಭಯಗೊಂಡಿದ್ದಾರೆ. ನಗುತ್ತಲೇ ಅಕ್ಕ ಎಂದು ತನ್ನ ಕಾಲು ತೋರಿಸಿದ್ದಾರೆ. ಅಂದ್ರೆ ನಂಗು ಕಾಲು ನಡುಗ್ತಾ ಇದೆ ಎಂದೇ ಹೇಳಿದ್ದಾರೆ. ಒಟ್ನಲ್ಲಿ ಶೊಇಭಾ ಶೆಟ್ಟಿ ಆಟ ಆಡಿಕೊಂಡಿದ್ದ ಹುಡುಗ್ರಿಗೆಲ್ಲ ಹೆದರಿಸಿಟ್ಟಿದ್ದಾರೆ.

More from Filmibeat

English summary
BBK 11: Here is the details about Hanumantu and Dhanraj are afraid of Shobha Shetty's words;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X