BBK 11: ಬಿಗ್ ಬಾಸ್ ಮನೆಯಿಂದ ಈ ವಾರ ಯಾರೂ ಔಟ್ ಆಗಲ್ಲ; ಯಾಕೆ ಗೊತ್ತಾ?
ಬಿಗ್ ಬಾಸ್ ಸೀಸನ್ 11 ಶುರುವಾಗಿದ್ದು ಹದಿನಾರು ಮಂದಿ ಮನೆಯೊಳಗಿದ್ದಾರೆ. ಕಳೆದ ವಾರವಷ್ಟೇ ಬಿಗ್ ಬಾಸ್‌ನಿಂದ ಯಮುನಾ ಶ್ರೀನಿಧಿ ಔಟ್ ಆಗಿದ್ದರು. ಆದರೆ ಈ ವಾರ ಮನೆಯಿಂದ ಹೊರಗೆ ಬರುವವರು ಯಾರೆಂಬ ಚಿಂತೆ ನೋಡುಗರಲ್ಲಿ ಇತ್ತು.
ಈ ಬಾರಿಮನೆಯಿಂದ ಹೊರಗೆ ಬರುವ ಸ್ಪರ್ಧಿಯನ್ನು ಗುರುತಿಸುವುದೇ ಈಗ ಕಷ್ಟವಾಗಿದೆ. ಎಲ್ಲರೂ ಒಂದೇ ರೀತಿಯಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ವಾರ ಹೊರಗೆ ಹೋಗುವವರು ಯಾರೆಂಬ ಪ್ರಶ್ನೆ ಎಲ್ಲರನ್ನು ಕಾಡಿತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದೆ.

ಈ ವಾರ ಕೂಡ ಬಿಗ್ ಬಾಸ್ ಮನೆ ಮಂದಿ ನಾಮಿನೇಷನ್ ಆಗಿದ್ದಾರೆ. ನಾಮಿನೇಷನ್‌ನಿಂದ ಪಾರಾಗುವುದಕ್ಕೆ ಬಿಗ್ ಬಾಸ್ ನೀಡಿದ ಟಾಸ್ಕ್‌ಗಳನ್ನು ಆಡಿ ನಾಮಿನೇಷನ್‌ನಿಂದ ಪಾರಾಗುತ್ತಿದ್ದಾರೆ. ಅದರಲ್ಲೂ ನಾಮಿನೇಟ್ ಆದವರ ಪರವಾಗಿ ಬೇರೊಬ್ಬರು ಟಾಸ್ಕ್ ಆಡಿ ಗೆದ್ದು ಅವರನ್ನು ಬಚಾವ್ ಮಾಡುತ್ತಿದ್ದಾರೆ. ಆದರೆ ಈ ವಾರ ಆ ರಿಸ್ಕ್ ಇರುವುದಿಲ್ಲ ಎನಿಸುತ್ತಿದೆ.
ನರಕ-ಸ್ವರ್ಗವಿಲ್ಲ
ಬಿಗ್ ಬಾಸ್ ಮನೆಯಲ್ಲಿ ಇಷ್ಟು ದಿನ ಒಂದು ರೀತಿಯ ಆಟವಿತ್ತು. ಈಗ ಬೇರೆಯದ್ದೇ ರೀತಿಯ ಆಟ ಶುರುವಾಗಿದೆ. ನರಕ ಮತ್ತು ಸ್ವರ್ಗ ಎಂಬ ಕಾನ್ಸೆಪ್ಟ್‌ನಲ್ಲಿ ಬಿಗ್ ಬಾಸ್ ಮನೆ ಕಾಣಿಸಿಕೊಂಡಿತ್ತು. ಆದರೆ ಇಂದು ನರಕವನ್ನು ಧ್ವಂಸ ಮಾಡಲಾಗಿದೆ. ಎಲ್ಲರೂ ಒಟ್ಟಾಗಿದ್ದಾರೆ.
ಸ್ಪರ್ಧಿಗಳ ದಸರಾ ಆಚರಣೆ
ಬಿಗ್ ಬಾಸ್ ಮನೆಯಲ್ಲಿ ಹೊರಗಿನ ಪ್ರಪಂಚದ ಅರಿವು ಇರುವುದಿಲ್ಲ, ಸಂಪರ್ಕವೂ ಇರುವುದಿಲ್ಲ. ಫೋನ್, ಮೊಬೈಲ್ ಏನು ಇರಲ್ಲ. ಇದೆಲ್ಲ ಬಿಟ್ಟು ಹೇಗಿರ್ತಾರೆ ಎನ್ನುವುದೇ ದೊಡ್ಡ ಟಾಸ್ಕ್ ಆದ್ರೆ ಬರೀ ಜಗಳ ಆಡಿಕೊಂಡು ಗುದ್ದಾಡಿಕೊಂಡೆ ಕಾಲ ಕಳೆಯುತ್ತಿದ್ದಾರೆ. ಆದರೆ ಬಿಗ್ ಬಾಸ್ ತನ್ನ ಸ್ಪರ್ಧಿಗಳಿಗೆ ಎಲ್ಲಾ ಹಬ್ಬಗಳನ್ನು ಆಚರಿಸುವುದಕ್ಕೂ ಅವಕಾಶ ಮಾಡಿಕೊಡುತ್ತದೆ. ಈಗ ದಸರಾ ಶುರುವಾಗಿದೆ. ಸ್ವರ್ಗ ನರಕವಿಲ್ಲ. ಹೇಗೆ ಹಬ್ಬ ಆಚರಿಸುತ್ತಾರೆ ಎಂಬುದನ್ನು ನೋಡಬೇಕಿದೆ.

ಈ ವಾರ ನೋ ಎಲಿಮಿನೇಷನ್?
ಶನಿವಾರ ಹಾಗೂ ಭಾನುವಾರ ಕಿಚ್ಚನ ಪಂಚಾಯ್ತಿ ನಡೆದು, ಭಾನುವಾರದಂದು ಒಬ್ಬ ಸದಸ್ಯ ಎಲಿಮಿನೇಟ್ ಆಗುತ್ತಿದ್ದರು. ಆದರೆ ಈ ವಾರ ಯಾರೂ ಕೂಡ ಮನೆಯಿಂದ ಹೊರಗೆ ಬರುವುದಿಲ್ಲ ಎಂದೇ ಎನಿಸುತ್ತಿದೆ. ಅದಕ್ಕೆ ಕಾರಣವೂ ಬಿಗ್ ಬಾಸ್ ಆಗಿದೆ. ವಾರ ಆರಂಭದಲ್ಲಿಯೇ ನಾಮಿನೇಷನ್ ಪ್ರಕ್ರಿಯೆ ಶುರುವಾಗುತ್ತದೆ. ಬಳಿಕ ಪ್ರತಿದಿನ ರಾತ್ರಿ ವೋಟಿಂಗ್ ಲೈನ್‌ಆನ್ ಆಗುತ್ತದೆ. ಆಗ ಜನ ವೋಟ್ ಮಾಡಿ ತಮಗೆ ಬೇಕಾದವರನ್ನು ಸೇವ್ ಮಾಡಬಹುದು. ಆದರೆ ಈ ವಾರ ವೋಟಿಂಗ್ ಲೈನ್ ತೆರೆದಿರುವುದಿಲ್ಲ ಎಂದು ಕಲರ್ಸ್ ಕನ್ನಡವೇ ಹಾಕುತ್ತಿದೆ. ಹೀಗಾಗಿ ಈ ವಾರ ಯಾರೂ ಕೂಡ ಎಲಿಮಿನೇಟ್ ಆಗಲ್ಲ ಎನ್ನಲಾಗುತ್ತಿದೆ.
ನವರಾತ್ರಿ ಉಪವಾಸವಿರುವ ಸುದೀಪ್
ಇನ್ನು ವಾರ ಪೂರ್ತಿ ಆದಂತ ಘಟನೆಗಳು ಸುದೀಪ್ ಗಮನಕ್ಕೂ ಬರುತ್ತದೆ. ಸುದೀಪ್ ಅವರು ಪಂಚಾಯ್ತಿಯಲ್ಲಿ ಹೊಗಳಬೇಕಾ..? ತೆಗಳಬೇಕಾ..? ಕ್ಲಾಸ್ ತೆಗೆದುಕೊಳ್ಳಬೇಕಾ ಎಲ್ಲವನ್ನು ಯೋಚಿಸಿ ಅದ್ಭುತವಾಗಿ ನಡೆಸಿಕೊಡುತ್ತಾರೆ. ಆದರೆ ಈ ವಾರ ಸುದೀಪ್ ಅವರು ವೀಕೆಂಡ್ ಶೋಗೆ ಬರುವುದು ಅನುಮಾನ ಎನ್ನಲಾಗಿದೆ. ಯಾಕಂದ್ರೆ ಸುದೀಪ್ ಅವರು ನವರಾತ್ರಿ ಆಚರಣೆ ಮಾಡುತ್ತಿದ್ದಾರೆ. ಉಪವಾಸ ಕೈಬಿಡುವ ಸಮಯ. ಹೀಗಾಗಿ ದಸರಾ ಹಬ್ಬ ಬೇರೆ ತಾಯಿಯ ಆರಾಧನೆಯಲ್ಲಿ ಇರಬಹುದು. ಹೀಗಾಗಿ ಈ ವಾರ ಮನೆಯ ಸದಸ್ಯರಿಗೆ ಖುಷಿ ವಿಚಾರ ಆದ್ರೆ ನೋಡುಗರಿಗೆ ಬೇಸರದ ಸಂಗತಿ.


Click it and Unblock the Notifications











