Bigg Boss Kannada 10: ಸ್ವಲ್ಪ ತೂಕದ ವ್ಯಕ್ತಿಗಳನ್ನು ಕರೆಸಿ ಸ್ವಾಮಿ, ಬಟ್ಟೆ ಬಿಚ್ಚೋರು ಬೇಡ ಎಂದ ವೀಕ್ಷಕರು!

By ಶೃತಿ ಹರೀಶ್ ಗೌಡ

ಬಿಗ್ ಬಾಸ್ ಸೀಸನ್ 10 ಇನ್ನು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಅದಕ್ಕೆ ಪೂರಕವೆಂಬಂತೆ ಕಲರ್ಸ್ ಕನ್ನಡ ಪೇಜ್ ನಲ್ಲಿ ಬಿಗ್ ಬಾಸ್ ಪ್ರಮೋವನ್ನು ಬಿಡಲಾಗಿದೆ. ಪ್ರೋಮೋದಲ್ಲಿ ಸಾಕಷ್ಟು ಕುತೂಹಲವನ್ನು ಹುಟ್ಟಿ ಹಾಕಿದೆ. ಯಾಕೆಂದರೆ ಈ ಬಾರಿಯ ಬಿಗ್ ಬಾಸ್ ಸೀಸನ್ ಬಹಳ ಸ್ಪೆಷಲ್ ಆಗಿರುತ್ತದೆ ಎಂದು ಹೇಳಲಾಗಿದೆ. ಈಗಾಗಲೇ ಬಿಗ್ ಬಾಸ್‌ನಲ್ಲಿ ಸ್ಪರ್ಧೆ ಮಾಡಿರುವವರು ಸಾಕಷ್ಟು ಜನಪ್ರಿಯತೆ ಹಾಗೂ ಹೆಸರನ್ನ ಗಳಿಸಿದ್ದಾರೆ.

ಕೆಲವರು ತುಂಬಾನೆ ಫೇಮಸ್ ಆಗಿದ್ದು ಕನ್ನಡ ಚಿತ್ರರಂಗಕ್ಕೂ ಸಹ ಕಾಲಿಟ್ಟಿದ್ದಾರೆ. ನಂತರ ಬಿಗ್ ಬಾಸ್ ಒಒಟಿನಲ್ಲಿ ಬಂದ ಸೋನು ಗೌಡ ಅವರಂತೂ ಬಿಗ್ ಬಾಸ್‌ನಿಂದ ಹೊರಗೆ ಹೋದ ಮೇಲೆ ತುಂಬಾ ಫೇಮಸ್ ಆದರು. ಬಿಗ್ ಬಾಸ್‌ನಲ್ಲಿ ಭಾಗವಹಿಸಿ ತಮ್ಮ ತಮ್ಮ ಆಟಗಳ ಮೂಲಕವೂ ಸಹ ಕೆಲವು ಅಭಿಮಾನಿಗಳನ್ನು ಸೃಷ್ಟಿ ಮಾಡಿಕೊಂಡಿದ್ದಾರೆ. ಈ ಬಾರಿಯಾ ಬಿಗ್ ಬಾಸ್‌ಗೆ ಯಾರೆಲ್ಲಾ ಬರಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಸಹ ಮನೆ ಮಾಡಿದೆ.

Colors kannada bigboss season 10 Update

ಎಂದಿನಂತೆ ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಬಿಗ್ ಬಾಸ್ ಸೀಸನ್ 10 ಪ್ರಸಾರ ಕಾಣಲಿದೆ. ಈ ಬಾರಿ ಒಒಟಿ ಸೀಸನ್ ಇರೋದಿಲ್ಲ ನೇರವಾಗಿ ಟಿವಿ ಸೀಸನ್ ಪ್ರಸಾರ ಆಗಲಿದೆ. ಇನ್ನು ಬಿಗ್ ಬಾಸ್ ಪ್ರೋಮೋಗೆ ಬಂದಿರುವ ಕಾಮೆಂಟ್ಗಳನ್ನು ನೋಡುತ್ತಿದ್ದರೆ ಪ್ರೇಕ್ಷಕರು ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಪ್ರೇಕ್ಷಕರು ಹೇಳುತ್ತಿರುವುದು ಏನೆಂದರೆ ಈ ಬಾರಿ ಜನಸಾಮಾನ್ಯರಿಗೆ ಹೆಚ್ಚು ಅವಕಾಶವನ್ನು ನೀಡಿ ಎಂದು ಕೇಳಿಕೊಳ್ಳುತ್ತಿದ್ದಾರೆ.

ಟಿಕ್ ಟಾಕ್ ಸ್ಟಾರ್ ಬೇಡವಂತೆ..! ಬಟ್ಟೆ ಬಿಚ್ಚೋರನ್ನ ಕರೆಸಲೇಬೇಡಿ!

ಬಿಗ್ ಬಾಸ್ ಸೀಸನ್ ಪ್ರಾರಂಭವಾದಾಗಿನಿಂದಲೂ ಸಹ ಒಳ್ಳೆಯ ಅಭಿಪ್ರಾಯವನ್ನು ಹೊಂದಿತ್ತು. ಆದರೆ ಮಧ್ಯದಲ್ಲಿ ಕೆಲವೊಂದು ಘಟನೆಗಳು ನಡೆದ ಮೇಲೆ ಬಿಗ್ ಬಾಸ್ ಸಹ ಚೆನ್ನಾಗಿಲ್ಲ ಎಂದು ಪ್ರೇಕ್ಷಕರು ಮಾತನಾಡಿಕೊಳ್ಳುತ್ತಿದ್ದರು. ಇನ್ನೂ ಬಿಗ್ ಬಾಸ್‌ಗೆ ಬಂದವರು ಪ್ರೀತಿ, ಪ್ರೇಮ, ಪ್ರಣಯ ಎಂದೆಲ್ಲಾ ಆಟವಾಡುತ್ತಾ ಇರುತ್ತಾರೆ. ಇದೆಲ್ಲವಕ್ಕೂ ಸಹ ಕೊಂಚ ಬ್ರೇಕ್ ನೀಡಿ ಎಂದು ಪ್ರೇಕ್ಷಕರು ಕೇಳಿಕೊಳ್ಳುತ್ತಿದ್ದಾರೆ. ಒಳ್ಳೆಯ ಸ್ಪರ್ಧಿಗಳನ್ನು ಮೊದಲು ಬಿಗ್ ಬಾಸ್‌ಗೆ ಕರೆಸಿ ಯಾವುದೇ ರೀತಿ ಬಟ್ಟೆ ಬಿಚ್ಚುವವರನ್ನು ದಯವಿಟ್ಟು ಸ್ಪರ್ಧಿಗಳನ್ನಾಗಿ ಮಾಡಬೇಡಿ ಎಂದು ವಿನಂತಿಸಿಕೊಳ್ಳುತ್ತಿದ್ದಾರೆ.

ಟಿಕ್ ಟಾಕ್ ಮಾಡೋ ಸ್ಟಾರ್‌ಗಳಂತೂ ಬೇಡವೇ ಬೇಡ ಸೋನು ಗೌಡ ಕೂಡ ಟಿಕ್ ಟಾಕ್ ಮೂಲಕವೇ ಪ್ರಚಾರವನ್ನು ಹೊಂದಿದ್ದರು. ನಂತರ ಬಿಗ್ ಬಾಸ್‌ಗೆ ಬಂದು ಹೋದಮೇಲೆ ಆಕೆಯ ನಡವಳಿಕೆಯಲ್ಲೇ ಬದಲಾವಣೆ ಆಯಿತು. ದಯವಿಟ್ಟು ಓವರ್ ಆಕ್ಟಿಂಗ್ ಮಾಡುವ ಟಿಕ್ ಟಾಕ್ ಸ್ಟಾರ್‌ಗಳನ್ನು ಮೊದಲು ಬ್ಯಾನ್ ಮಾಡಿ ಎಂದು ಕೇಳಿಕೊಳ್ಳುತ್ತಾ ಇದ್ದಾರೆ. ಆದರೂ ಸಹ ಕೆಲವೊಬ್ಬರು ಭೂಮಿಕಾ ಬಸವರಾಜು, ಬಿಂದುಗೌಡ, ನೇತ್ರಾಗೌಡ, ಶಿಲ್ಪ ಗೌಡ ಈ ಮೂರಲ್ಲಿ ಯಾರಾದರೂ ಸಹ ಬಿಗ್ ಬಾಸ್‌ಗೆ ಬರಬಹುದು ಎಂದು ಹೇಳುತ್ತಿದ್ದಾರೆ.

Colors kannada bigboss season 10 Update

ಪದೇ ಪದೇ ಬಂದವರು ಬೇಡವೇ ಬೇಡ, ಜನಸಾಮಾನ್ಯರಿಗೂ ಅವಕಾಶ ಕೊಡಿ

ಪ್ರೇಕ್ಷಕರು ತಮ್ಮ ಮನದಾಳದ ಅಭಿಪ್ರಾಯವನ್ನು ಬಿಗ್ ಬಾಸ್ ಪ್ರೋಮೋಗೆ ವ್ಯಕ್ತಪಡಿಸಿದ್ದು ,ಪದೇಪದೇ ಬಂದವರನ್ನು ದಯವಿಟ್ಟು ಮತ್ತೊಮ್ಮೆ ಬಿಗ್ ಬಾದ್‌ಗೆ ಕರೆಸಬೇಡಿ ಎಂದು ಮನವಿ ಮಾಡಿದ್ದಾರೆ. ಹೆಚ್ಚಾಗಿ ಜನಸಾಮಾನ್ಯರಿಗೆ ಅವಕಾಶವನ್ನ ಕೊಡಿ. ಬರಿ ಸೆಲೆಬ್ರಿಟೆಸ್, ರಾಜಕಾರಣಿಗಳು ಹಾಗೂ ಗಾಯಕರಿಗೆ ಮಾತ್ರ ನೀವು ಮಹತ್ವವನ್ನ ನೀಡುತ್ತಿದ್ದೀರಿ. ಈ ಬಾರಿ ಬಿಗ್ ಬಾಸ್‌ನಲ್ಲಿ ಜನಸಾಮಾನ್ಯರಿಗೂ ಸಹ ಅವಕಾಶವನ್ನು ಕೊಟ್ಟು ನೋಡಿ ಎಂದು ಕೇಳಿಕೊಳ್ಳುತ್ತಾ ಇದ್ದಾರೆ.

ತುಂಬಾ ಸಾಧನೆ ಮಾಡಿದವರು ಈಗ ಇದ್ದಾರೆ ಆ ಕ್ಷೇತ್ರಗಳಲ್ಲಿರುವ ಸಭ್ಯರನ್ನ ಬಿಗ್ ಬಾಸ್‌ಗೆ ಆಯ್ಕೆ ಮಾಡಿ. ಅರೇಬರೇ ಬಟ್ಟೆ ಹಾಕಿಕೊಂಡು ಸುಮ್ಮನೆ ಕಾಲಹರಣ ಮಾಡುವ ಸ್ಪರ್ಧಿಗಳನ್ನು ಮಾತ್ರ ದಯವಿಟ್ಟು ಕಳುಹಿಸಬೇಡಿ. ಆಟ ಎಂದರೆ ಕುತೂಹಲವಿರಬೇಕು. ಸುಮ್ಮನೆ ಬೋರ್ ಮಾಡುವ ರೀತಿ ಇರಬಾರದು ಎಂದು ಪ್ರೇಕ್ಷಕರು ಬಿಗ್ ಬಾಸ್ ಗೆ ಮನವಿ ಮಾಡಿದ್ದಾರೆ.

ಈ ಬಾರಿಯ ಬಿಗ್ ಬಾಸ್‌ಗೆ ಯಾರೆಲ್ಲ ಎಂಟ್ರಿ ಕೊಡಲಿದ್ದಾರೆ ಎಂಬುದೇ ಕುತೂಹಲವನ್ನ ಹುಟ್ಟಿಹಾಕಿದೆ. ಯಾಕೆಂದರೆ ಎಲ್ಲಾ ರಂಗದಲ್ಲಿರುವವರು ಸಹ ಬಿಗ್ ಬಾಸ್‌ಗೆ ಬರಲಿದ್ದು ಯಾವ ನಟರು, ನಟಿಯರು, ರಾಜಕಾರಣಿಗಳು, ಸಂಘಟಕರು ಬರಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

English summary
Colors kannada bigboss season 10 Update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X