BBK10: ಕಾರ್ತಿಕ್ ಮನ ನೊಂದಿದೆಯಾ..? ನೊಂದವರ ಗುಂಪಿನ ಬಗ್ಗೆ ಮಾತನಾಡಿದ್ದೇಕೆ..?
ಬಿಗ್ ಬಾಸ್ ಮನೆಯಲ್ಲಿ ಸದಸ್ಯರ ಜರ್ನಿ ಶುರಿವಾಗಿ 44 ದಿನಗಳಾಗಿವೆ. ನೂರು ದಿನಗಳ ಆಟದಲ್ಲಿ ಹತ್ತಿರತ್ತಿರ ಅರ್ಧದಷ್ಟು ಜರ್ನಿಯನ್ನು ಮುಗಿಸಿದ್ದಾರೆ. ಇನ್ನು ಅರ್ಧದಷ್ಟು ಜರ್ನಿಯಲ್ಲಿ ಯಾರು ಫೈನಲ್‌ಗೆ ಬರುತ್ತಾರೆ ಎಂಬುದೇ ಕುತೂಹಲ. ಯಾಕಂದ್ರೆ ಇಷ್ಟು ದಿನ ಒಂದು ರೀತಿಯಾಗಿ ಕಂಡವರು, ಈಗ ಬೇರೆಯದ್ದೇ ರೀತಿಯಲ್ಲಿ ಕಾಣುತ್ತಿದ್ದಾರೆ.
ದೊಡ್ಮನೆ ಇಷ್ಟು ದಿನ ಆಟದಲ್ಲಿ ಒಂದೇ ಕಡೇ, ಮನೆಯವರ ಸಂಪರ್ಕವೇ ಇಲ್ಲದ ರೀತಿ, ಫೋನ್ ಬಳಸದ ರೀತಿ ಇರುವವರ ಮನಸ್ಸಲ್ಲಿ ನೋವು ಇದ್ದೆ ಇರುತ್ತದೆ. ಯಾರಿಗೆಲ್ಲಾ ನೋವು ಇದೆಯೋ ಅವರೆಲ್ಲಾ ಒಂದೇ ಟೀಂ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲೂ ನೊಂದವರ ಗೊಂಪೊಂದು ಇರುವುದು ಈಗ ಗೊತ್ತಾಗಿದೆ.

ಸಂಗೀತಾ ಜೊತೆಗೆ ಕಾರ್ತಿಕ್ ಮನಸ್ತಾಪ
ಬಿಗ್ ಬಾಸ್ ಶುರುವಾದಾಗಿನಿಂದ ಒಳ್ಳೆಯ ಬಾಂಧವ್ಯ ಹೊಂದಿರುವುದು ಸಂಗೀತಾ ಮತ್ತು ಕಾರ್ತೀಕ್. ಇಬ್ಬರಿಗೂ ಪ್ರೀತಿ, ಪ್ರೇಮವಿದೆ ಎಂಬ ಗಾಸಿಪ್ ಜಾಸ್ತಿಯೂ ಆಗಿತ್ತು. ಆದರೆ ಅದು ಯಾವುದಕ್ಕೂ ಈ ಇಬ್ಬರು ತಲೆಕೆಡಿಸಿಕೊಳ್ಳದೇ ಮುಂದೆ ಸಾಗಿದರು. ಆದರೆ ಈಗಂತೂ ಅದ್ಯಾಕೋ ಇಬ್ಬರು ಸಣ್ಣ ಸಣ್ಣ ವಿಚಾರಕ್ಕೂ ಜಗಳ ಮಾಡಿಕೊಳ್ಳುತ್ತಲೇ ಇದ್ದಾರೆ. ಇಬ್ಬರ ನಡುವಿನ ಬಾಂಧವ್ಯಕ್ಕೊಂದು ಫುಲ್ ಸ್ಟಾಪ್ ಇಟ್ಟಂತೆಯೇ ಕಾಣುತ್ತಿದೆ.
ಕಾರ್ತಿಕ್ ಸತ್ಯ ಹೇಳ್ತಾರಾ ಸಂಗೀತಾಗೆ?
ಕಾರ್ತಿಕ್ ಮತ್ತು ಸಂಗೀತಾ ಎಷ್ಟೇ ಕಿತ್ತಾಡಿದರೂ ಮತ್ತೆ ಮತ್ತೆ ಒಂದಾಗುತ್ತಿದ್ದರು. ಆದರೆ ಈಗ ಆ ರೀತಿ ಅಲ್ಲ. ಎಲ್ಲವೂ ಉಲ್ಟಾ ಆಗಿದೆ. ಆದರೆ ಕಾರ್ತಿಕ್ ಮನಸ್ಸು ಸಂಗೀತಾಗಾಗಿ ಚಡಪಡಿಸುತ್ತಿದೆ ಎಂಬುದಾಗಿಯೇ ಪ್ರೇಕ್ಷಕರ ಕಣ್ಣಿಗೆ ಕಾಣುತ್ತಿದೆ. ಹೀಗಾಗಿಯೇ ಟ್ರೋಲರ್ಸ್ ಕಾರ್ತಿಕ್ ಬೆನ್ನಿಗೆ ನಿಂತಿದ್ದಾರೆ. ನಿಮಗೆ ಪ್ರೀತಿ ಇದ್ದರೆ ಏನು ಆಗುತ್ತೋ ಆಗಲಿ. ಪ್ರಪೋಸ್ ಮಾಡಿಯೇ ಬಿಡಿ ಎಂದು ಧೈರ್ಯ ತುಂಬಿದ್ದಾರೆ. ಈ ಬೆಂಬಲ ಬಿಗ್‌ಬಾಸ್ ಮನೆಯೊಳಗೆ ಇರುವ ಕಾರ್ತಿಕ್ ತನಕ ರೀಚ್ ಆದರೆ, ಪ್ರಪೋಸ್ ಮಾಡುವ ಧೈರ್ಯ ಮಾಡಬಹುದೇನೋ.
ನೊಂದವರ ಗುಂಪಿಗೆ ಕಾರ್ತಿಕ್?
ಕಾರ್ತಿಕ್ ಇತ್ತೀಚೆಗೆ ಸ್ವಲ್ಪ ಒಬ್ಬಂಟಿಯಾದವರಂತೆ ಮಾತನಾಡುತ್ತಿದ್ದಾರೆ. ಸಂಗೀತಾ ಜೊತೆಗಿನ ಬಾಂಧವ್ಯ ಕಡಿಮೆಯಾದಾಗಿನಿಂದ ಕಾರ್ತಿಕ್ ಮನಸ್ಸಲ್ಲೂ ನೋವಿದೆ. ಅದಕ್ಕೆ ಇಂದು ಸಂಗೀತಾ ಅಳುತ್ತಾ ಕುಳಿತಾಗಲೇ ಹೋಗಿ ಸಮಾಧಾನ ಮಾಡುವ ಪ್ರಯತ್ನ ಕೂಡ ನಡೆದಿದೆ. ಕಾರ್ತಿಕ್ ಪರಿಸ್ಥಿತಿ ಕಂಡು ಮನೆಯಲ್ಲಿ ನೊಂದವರ ಗುಂಪಿಗೆ ಸೇರಿಸಿದ್ದಾರೆ. 'ನನ್ನನ್ನ ನೊಂದವರ ಗುಂಪಿಗೆ ಬಂದು ಬಿಡು ಅಂತ ಕರೆಯುತ್ತಿದ್ದಾರೆ' ಅಂತ ತನಿಷಾ ಜೊತೆಗೆ ಕಾರ್ತಿಕ್ ಹೇಳಿದ್ದಾರೆ. ಅದನ್ನು ತಮಾಷೆಯಾಗಿ ಮಾತನಾಡಿದರು ಸಹ, ಕಾರ್ತಿಕ್ ಮನಸ್ಸು ನೊಂದಿದೆ ಅನ್ನೋದು ಮುಖ ಭಾವದಲ್ಲಿಯೇ ಗೊತ್ತಾಗುತ್ತಿದೆ.

ತುಕಾಲಿ, ವರ್ತೂರು ಸಂಘದ ಹೆಸರೇನು..?
ಬಿಗ್ ಬಾಸ್ ಮನೆಯಲ್ಲಿ ಟೀಂ ಆಗುವುದು ಸಾಮಾನ್ಯ. ಬೆಸ್ಟ್ ಫ್ರೆಂಡ್ಸ್, ಲವರ್ಸ್, ಗಾಸಿಪ್ ಹೀಗೆ ಟೀಂಗಳಾಗುತ್ತವೆ. ಈ ಬಾರಿಯ ಸೀಸನ್‌ನಲ್ಲಿ ನೊಂದವರ ಟೀಂ ಕೂಡ ಸೇರ್ಪಡೆಯಾಗಿದೆ. ಆ ಟೀಂನಲ್ಲಿ ಸದ್ಯಕ್ಕೆ ಹೆಚ್ಚು ಜನ ಇಲ್ಲ. ತುಕಾಲಿ ಸಂತು ಹಾಗೂ ವರ್ತೂರು ಸಂತೋಷ್ ಸೇರಿಕೊಂಡು ನೊಂದವರ ಬಳಗ ಕಟ್ಟಿದ್ದಾರೆ. ಇವತ್ತು ಕಾರ್ತಿಕ್‌ನನ್ನು ಸೇರಿಸಿಕೊಂಡಿದ್ದಾರೆ. ಮುಂದೆ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಇನ್ನು ಕಠಿಣವಾಗುತ್ತದೆ ಹೋಗುತ್ತದೆ. ಹೀಗಾಗಿ ಟೀಂನಲ್ಲಿ ಜನ ಜಾಸ್ತಿಯಾಗುವ ಸಾಧ್ಯತೆ ಇದೆ.


Click it and Unblock the Notifications











