BBK 11: ಕಡೆ ಗಳಿಗೆಯಲ್ಲಿ ಐಶ್ವರ್ಯಾ ಸೇಫ್; ಶಿಶಿರ್ ಬಿಟ್ಟು ಆಟವಾಡಲು ಸೂಚನೆ

By ಎಸ್ ಸುಮಂತ್

ಸೂಪರ್ ಸಂಡೇ ವಿತ್ ಸುದೀಪ ಪಂಚಾಯ್ತಿಯಲ್ಲಿ ಎಲಿಮಿನೇಷನ್ ರೌಂಡ್ ಇರುತ್ತೆ. ವಾರಕ್ಕೆ ಒಮ್ಮೆ ಒಬ್ಬರು ಮನೆಯಿಂದ ಔಟ್ ಆಗುತ್ತಾರೆ. ಆದರೆ ಈ ವಾರ ಐಶ್ವರ್ಯಾ ಕಡೆ ಗಳಿಗೆಯಲ್ಲಿ ಸೇವ್ ಆಗಿದ್ದಾರೆ. ಐಶ್ವರ್ಯಾ ಅಂಡ್ ಶಿಶಿರ್ ಇಬ್ಬರು ಕೂಡ ಎಲಿಮಿನೇಷನ್‌ನ ಹಾರ್ಟ್ ಬೀಟ್ ಜೋರಾಗುವ ಸನ್ನಿವೇಶವನ್ನು ತಂದುಕೊಂಡಿದ್ದರು. ಇಬ್ಬರಲ್ಲಿ ಯಾರೇ ಹೋದರೂ ಹರ್ಟ್ ಆಗುವಂತ ಪರಿಸ್ಥಿತಿ ಅದು.

ಕಿಚ್ಚ ಸುದೀಪ್ ಸಂಬಂಧಗಳು ಎಂಬ ವಿಚಾರಕ್ಕೆ ಅದಾಗಲೇ ರೊಚ್ಚಿಗೆದ್ದಿದ್ದರು. ಮೋಕ್ಷಿತಾ, ಮಂಜು, ಗೌತಮಿ ವಿಚಾರಕ್ಕೆ ಬುದ್ದಿ ಮಾತನ್ನು ಹೇಳಿದ್ದರು. ಈಗ ಎಲಿಮಿನೇಷನ್ ನಲ್ಲಿ ನಿಂತ ಐಶ್ವರ್ಯಾ ಹಾಗೂ ಶಿಶಿರ್ ಗೂ ಅದೇ ಮಾತು ಹೇಳಿದ್ದಾರೆ. ಈಗ ಹೇಳಿ ಸಂಬಂಧ. ಫ್ರೆಂಡ್‌ಗಾಗಿ ನಾನು ಎಲಿಮಿನೇಷನ್ ಆಗ್ತೀನಿ ಅಂತ ಹೇಳಿ ಎಂದಿದ್ದಾರೆ.

Colors kannada bigboss season 11 Fans advice to Aishwarya sindhogi

ಮೊದಲಿನಂತೆ ಆಡಲು ಸೂಚನೆ

ಐಶೂ ಮೊದಲೆಲ್ಲಾ ಆಟದಲ್ಲಿ ತುಂಬಾ ಚೆನ್ನಾಗಿ ಆಡ್ತಾ ಇದ್ರು. ಟಾಸ್ಕ್ ಅಂತ ಬಂದಾಗ, ಅಡುಗೆ ಮನೆ ಎಂದು ಬಂದಾಗ, ಜವಾಬ್ ಕೊಡುವುದು ಬಂದಾಗ ಎಲ್ಲದಕ್ಕೂ ರೆಡಿ ಎಂದೇ ನಿಂತುಕೊಳ್ಳುತ್ತಿದ್ದರು. ಆದರೆ ಶಿಶಿರ್ ಫ್ರೆಂಡ್ ಆದ ಮೇಲೆ ಎಲ್ಲಾ‌ ಸಮಯವನ್ನು ಶಿಶಿರ್ ಗೆ ಮೀಸಲಿಟ್ಟಿದ್ದಾರೆ. ಇದನ್ನ ಕಿಚ್ಚ ಸುದೀಪ್ ಕೂಡ ಅರ್ಥವಾಗುವಂತೆ ಹೇಳಿದ್ದಾರೆ.

ಚೆನ್ನಾಗಿ ಆಡಿ ಎಂದು ಸಲಹೆ

ಐಶೂ ಔಟ್ ಆಗ್ತಾರಾ? ಶಿಶಿರ್ ಹೊರಗೆ ಹೋಗ್ತಾರಾ? ಎಂಬ ಟಾಸ್ಕ್‌ನಲ್ಲಿ ಇಬ್ಬರು ಉಳಿದುಕೊಂಡರು. ಆದರೆ ಐಶ್ವರ್ಯಾ ಅವರಿಗೆ ಅಭಿಮಾನಿಗಳು ಹೆಚ್ಚೆಚ್ಚು ಸಲಹೆ ನೀಡುತ್ತಿದ್ದಾರೆ. ಸುದೀಪ್ ಕೂಡ ಹೊರಡುವುದಕ್ಕೂ ಮುನ್ನ ಐಶುಗೆ ಸಲಹೆ ನೀಡಿಯೇ ಹೋದರು. ಈಗ ಫ್ಯಾನ್ಸ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಲಹೆ ನೀಡುತ್ತಿದ್ದಾರೆ. ನಿಮ್ಮ ಅಮ್ಮ-ಅಪ್ಪನ ಆಶೀರ್ವಾದದಿಂದ ಮತ್ತೆ ಉಳಿದುಕೊಂಡಿದ್ದೀರಿ. ಚೆನ್ನಾಗಿ ಆಟ ಆಡಿ ಎಂದು ಹಾರೈಸುತ್ತಿದ್ದಾರೆ.

ಒಳ್ಳೆ ಆಂಕರ್ ಎಂದ ಫ್ಯಾನ್ಸ್

ಇಂದು ಬಿಗ್ ಬಾಸ್ ಮನೆಯಲ್ಲಿ ಎರಡು ತಂಡವಾಗಿದೆ. ನ್ಯೂಸ್ ಚಾನೆಲ್ ಆಗಿ ಪರಿವರ್ತನೆಯಾಗಿದೆ. ಒಬ್ಬೊಬ್ಬರ ಬಗ್ಗೆಯೂ ಒಂದೊಂದು ರೀತಿಯ ಬ್ರೇಕಿಂಗ್ ಸುದ್ದಿ ಬಂದಿದೆ. ಐಶ್ವರ್ಯಾ ಬ್ರೇಕಿಂಗ್ ಸುದ್ದಿ ಓದಿದ್ದಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಎಂಥ ಸೀನಿಯರ್ ಆಂಕರ್ ಗೂ ಕಡಿಮೆ ಏನೂ ಇಲ್ಲ. ಸೂಪರ್ ಆಗಿ ಓದುತ್ತೀರಾ. ಮುಂದೊಂದು ದಿನ ಒಳ್ಳೆ ಆಂಕರ್ ಆಗ್ತೀರಾ ಅಂತೆಲ್ಲ ಹೊಗಳಿದ್ದಾರೆ. ಇಂದಿನ ಐಶೂ ನಡೆಗೆ ಫಿದಾ ಆಗಿದ್ದಾರೆ.

ಐಶೂ ಜೊತೆಗೆ ನಿಂತಿದ್ದ ಬಿಗ್ ಬಾಸ್

ಐಶೂಗೆ ಮನುಷ್ಯತ್ವವೂ ಕೊಂಚ ಜಾಸ್ತಿಯೇ ಇದೆ. ತನಗೆ ಅಪ್ಪ ಅಮ್ಮ ಯಾರಿಲ್ಲ ಎಂಬ ನೋವಿದ್ದರು, ಇನ್ನೊಬ್ಬರ ಮನೆಯವರಿಂದ ಬಂದ ಸಂದೇಶಗಳನ್ನು ನೋಡಿ ನೋವಾದರೂ ಅದನ್ನು ತೋರಿಸಿಕೊಳ್ಳುತ್ತಿರಲಿಲ್ಲ. ಆ ನೋವು ಬಿಗ್ ಬಾಸ್ ಗೆ ಅರ್ಥವಾಗಿತ್ತು. ಹೀಗಾಗಿ ಐಶ್ವರ್ಯಾ ಜೊತೆಗೆ ಬಿಗ್ ಬಾಸ್ ನಿಂತಿತ್ತು. ಈಗ ಫ್ಯಾನ್ಸ್ ಕೂಡ ಐಶ್ವರ್ಯಾ ಜೊತೆಗೆ ನಿಂತಿದ್ದಾರೆ. ನೀವೂ ಆಡಬೇಕು ಗೆಲ್ಲಬೇಕು ಎಂದೇ ಹೇಳುತ್ತಿದ್ದಾರೆ. ನೋಡೋಣ ಈ ವಾರ ಐಶೂ ಎಷ್ಟು ಬದಲಾಗುತ್ತಾರೆ, ಎಷ್ಟು ಆಟವಾಡುತ್ತಾರೆ ಎಂಬುದನ್ನು.

More from Filmibeat

English summary
Colors kannada bigboss Written Update on Bigboss season 11 December 2nd episode. Here is the details about Fans supporting Aishwarya;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X