BBK 11: ಮಂಜುಗೆ ಗೌತಮಿ ಬೇಡ, ಭವ್ಯಾಗೆ ತ್ರಿವಿಕ್ರಂ ಬೇಡ: ಏನಿದೆಲ್ಲಾ?

By ಎಸ್ ಸುಮಂತ್

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಜರ್ನಿ ಇನ್ನು ಸ್ವಲ್ಪೇ ಸ್ವಲ್ಪ ದಿನಗಳಷ್ಟೇ. ಆದರೂ ಬಿಗ್ ಬಾಸ್ ಮನೆಯನ್ನ ಅರ್ಥವೇ ಮಾಡ್ಕೊಂಡಿಲ್ಲ. ಆಟ, ಮನಸ್ತಾಪ, ಗಿಚ್ಚು ಇದೆಲ್ಲ ಆರಂಭದಿಂದ ಕೊನೆಯ ಭಾಗದವರೆಗೂ ಇರಬೇಕಿತ್ತು. ಆದರೆ ಈ ಸೀಸನ್ ಸ್ಪರ್ಧಿಗಳಲ್ಲಿ ಅದೆಲ್ಲವೂ ಉಲ್ಟಾ ಆಗೋಯ್ತು. ಅವರ ಮೇಲೆ ಇವರದ್ದು ಜಿದ್ದು, ಇವರ ಮೇಲೆ ಅವರದ್ದು ಜಿದ್ದು. ಇನ್ನೇನು ಮುಗಿಯುವ ಸಮಯಕ್ಕೆ ಯಾರಲ್ಲೂ ಭಾವನೆಗಳಿಲ್ಲ. ಈ ಮನೆಯನ್ನ ಬಿಟ್ಟು ಹೋಗಬೇಕೆಂಬ ಬೇಸರವೇ ಕಾಣಿಸುತ್ತಿಲ್ಲ.

ಸುಮಾರು 100 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ತನ್ನವರನ್ನು ಬಿಟ್ಟು, ಒಂದೇ ಕಡೆ ಬದುಕಿದ್ದೀವಿ, ಕೂತಿದ್ದೀವಿ, ಆಡಿದ್ದೀವಿ, ನಕ್ಕಿದ್ದೀವಿ, ಅತ್ತಿದ್ದೀವಿ ಈ ಯಾವುದೂ ಸ್ಪರ್ಧಿಗಳಲ್ಲಿ ಕಾಣಿಸ್ತಾ ಇಲ್ಲ. ಕೊನೆಯ ಮೂಮೆಂಟ್‌ನಲ್ಲೂ ನಾನು ಉಳಿಯಬೇಕು, ಆಡಬೇಕು. ಅದಕ್ಕಾಗಿ ಜೊತೆಗೆ ಬಂದ ಗೆಳೆಯನೇ ಬೇಡ. ಹಾಗಾದ್ರೆ ಹೊರಗೆ ಬಂದ ಮೇಲೆ ಇಬ್ಬರ ನಡುವೆ ಬಾಂಧವ್ಯ ಉಳಿಯೋದು ನಿಜವಾ..? ಸಾಧ್ಯವೇ ಇಲ್ಲ. ಈ ಸೀಸನ್ ನೋಡಿದಾಗ ಅನ್ನಿಸಿದ್ದು, ಸ್ಪರ್ಧೆ ಮುಗಿಸಿ ಹೊರ ಹೋಗುತ್ತಿರುವವರು ಬಿಗ್ ಬಾಸ್‌ನಿಂದ ಗಳಿಸಿದ್ದೇನು ಎಂಬ ಪ್ರಶ್ನೆ.

Colors kannada bigboss Written Update on Bigboss season 11 January 4th episode

ಕಿಚ್ಚನ ಟಾಸ್ಕ್ ಹೇಗಿತ್ತು..?

ಬಿಗ್ ಬಾಸ್ ವಾರದಲ್ಲಿ ಮಾತ್ರವಲ್ಲ ಕಿಚ್ಚನ ವೇದಿಕೆಯಲ್ಲೂ ಟಾಸ್ಕ್‌ಗಳನ್ನು ನೀಡಲಾಗುತ್ತದೆ. ಆ ವಾರ ಮನೆ ಮಂದಿ ಏನೆಲ್ಲಾ ಮಿಸ್ಟೇಕ್ ಮಾಡಿದ್ದಾರೆ. ಅದನ್ನ ಸರಿ ಪಡಿಸಿಕೊಳ್ಳಬೇಕು ಅಂದ್ರೆ ಯಾವ ರೀತಿಯಾದ ಟಾಸ್ಕ್‌ಗಳನ್ನ ಕೊಡಬೇಕು ಎಂದು ಯೋಚಿಸಿಯೇ ಆ ಟಾಸ್ಕ್ ಗಳನ್ನ ನೀಡುತ್ತಾರೆ. ಈ ವಾರ, 'ನನ್ನ ಗೇಮ್ ಇನ್ನು ಫಾಸ್ಟ್ ಆಗಬೇಕು ಅಂದ್ರೆ ಯಾರನ್ನ ಡಿಲೀಟ್ ಮಾಡಬೇಕು' ಎಂಬ ಆಪ್ಶನ್ ಕೊಟ್ಟಿದ್ದಾರೆ ಕಿಚ್ಚ ಸುದೀಪ್. ಸ್ಪರ್ಧಿಗಳಿಗೆ ಅದುವೆ ಒಂದು ಟಾಸ್ಕ್.

ತ್ರಿವಿಕ್ರಂ-ಭವ್ಯ ನಡುವೆ ಆಗಿದ್ದೇನು..?

ಈ ಟಾಸ್ಕ್‌ನಲ್ಲಿ ಭವ್ಯಾ - ತ್ರಿವಿಕ್ರಂ ದೂರ ದೂರ ಆಗಿದ್ದು ಆಶ್ಚರ್ಯಕ್ಕೆ ಕಾರಣವಾಗಿದೆ. ತ್ರಿವಿಕ್ರಂ ಫೋಟೋ ಡಿಲೀಟ್ ಮಾಡಿದ ಭವ್ಯ, ಎಲ್ಲಾ ರೀತಿಯಿಂದಾನೂ ತ್ರಿವಿಕ್ರಂ ನಂಗೆ ಪ್ರಾಬ್ಲಮ್ಸ್ ಆಗಬಹುದು ಎಂದಿದ್ದಾರೆ. ಭವ್ಯ ಅವರನ್ನು ಡಿಲೀಟ್ ಮಾಡಿದ ತ್ರಿವಿಕ್ರಂ, ಯಾರೋ ನನ್ನಿಂದ ಸ್ವಾರ್ಥತೆ ಪಡೆದುಕೊಳ್ಳುವುದು ಇಷ್ಟ ಆಗಲ್ಲ ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

Colors kannada bigboss Written Update on Bigboss season 11 January 4th episode

ಆರೋಪ-ಪ್ರತ್ಯಾರೋಪ ಶುರು

ಇನ್ನು ಬಹಳ ಮುಖ್ಯವಾದ ಗೆಳೆಯ-ಗೆಳತಿ ನಡುವೆಯೂ ಬಿರುಕು ಮೂಡಿದೆ. ಮಂಜು ಫೋಟೋ ಕಟ್ ಮಾಡಿ ಬಿಸಾಡಿದ ಗೌತಮಿ, ಗೊತ್ತಿದ್ದೋ ಗೊತ್ತಿಲ್ಲದೆಯೋ ನನ್ನ ಆಟಕ್ಕೂ ಎಫೆಕ್ಟ್ ಆಗಿದೆ ಈ ಫ್ರೆಂಡ್ಶಿಪ್. ಹೋಗ್ತಾ ಹೋಗ್ತಾ ಅದು ವೀಕ್ನೆಸ್ ಆಗ್ತಾ ಹೋಯ್ತು ಎಂದು ಗೌತಮಿ ಹೇಳಿದ್ರೆ, ಕೇರಿಂಗ್ ಬೇಡ, ಆ ಕಂಫರ್ಟ್ ಝೋನ್ ಬೇಡ. ಇವರ ಫ್ರೆಂಡ್ಶಿಪ್ಪು ಬೇಡ, ಇವರ ಗೆಳೆತನ ಬೇಡ ಏನು ಬೇಡ ಅನ್ನಿಸ್ತಾ ಇದೆ ಎಂದು ಮಂಜಣ್ಣ ಹೇಳಿದ್ದಾರೆ.

ಫ್ಯಾಮಿಲಿ ರೌಂಡ್ ಎಫೆಕ್ಟಾ?

ಕಳೆದ ಕೆಲವು ದಿನಗಳ ಹಿಂದಷ್ಟೇ ಎಲ್ಲಾ ಸ್ಪರ್ಧಿಗಳ ಕುಟುಂಬಸ್ಥರು ಮನೆಗೆ ಬಂದಿದ್ದರು. ಇದು ಮನೆಯೊಳಗಿದ್ದ ಸ್ಪರ್ಧಿಗಳಿಗೆ ಸ್ಪೆಷಲ್ ಎನರ್ಜಿ ಕೊಟ್ಟಂತೆ ಆಯ್ತು. ಆದ್ರೆ ಮನೆಯವರ ಒಂದೊಂದು ಕಿವಿ ಮಾತು ಈಗ ಎಲ್ಲಾ ಸ್ಪರ್ಧಿಗಳ ಮೇಲೆ ಪರಿಣಾಮ ಬೀರಿರುವುದು ಕಿಚ್ಚನ ಎದುರು ಪ್ರದರ್ಶನ ಆಗುತ್ತಿದೆ. ಇದಕ್ಕೆ ಸುದೀಪ್ ನಕ್ಕಿದ್ದಾರೆ. ಇದರಿಂದ ಇಷ್ಟೇ ಬಿಗ್ ಬಾಸ್ ಮನೆಯೊಳಗಿನ ಗೆಳೆತನ, ಪ್ರೀತಿ ಪ್ರೇಮ ಎಂಬುದು ವೀಕ್ಷಕರಿಗೆ ಅರ್ಥವಾದಂತೆ ತೋರಿಸಿದೆ.

More from Filmibeat

English summary
BBK 11; Here is the details about Manju and Gautami, Bhavya and Trivikram friendship breakup;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X