BBK 11: ಕಿಚ್ಚನ ಮಾತು ನಿಜವಾಯ್ತಾ? ಫಿನಾಲೆಗಾಗಿ ಅಹಂಕಾರ ಜಾಸ್ತಿ ಆಯ್ತು.. ಮನುಷ್ಯತ್ವ ಮರೆತೋಯ್ತು!

By ಎಸ್ ಸುಮಂತ್

ಬಿಗ್ ಬಾಸ್ ಮನೆ ಮಂದಿಗೆಲ್ಲಾ ಕಿಚ್ಚ ಸುದೀಪ್ ಈ ವಾರ ಹೊಸದೊಂದು ವಿಚಾರ ತಿಳಿಸಿದ್ದಾರೆ. ಆ ವಿಚಾರ ಕೇಳಿದಾಗಿನಿಂದ ಸ್ಪರ್ಧಿಗಳ ನಡವಳಿಕೆಯೇ ಬೇರೆಯಾಗಿ ಬಿಟ್ಟಿದೆ. ಇರುವುದು ಇನ್ನು ಸ್ವಲ್ಪೇ ಸ್ವಲ್ಪ ದಿನ ಎಂಬ ಬೇಸರ ಯಾರಲ್ಲಿಯೂ ಕಾಣಿಸುತ್ತಿಲ್ಲ. ಬದಲಿಗೆ ಫಿನಾಲೆ ಟಿಕೆಟ್ ನಾನೇ ಪಡೆಯಬೇಕು ಎಂಬ ಹಠ ಎಲ್ಲರಲ್ಲಿಯೂ ಕಾಣಿಸುತ್ತಿದೆ. ನಾನಾ..? ನೀ‌ನಾ? ಎಂಬ ಯುದ್ಧ ಶುರು ಮಾಡಿದ್ದಾರೆ.

ಬಿಗ್ ಬಾಸ್ ಮನೆಗೆ ಬಂದಾಗಿನಿಂದ ಮನೆ ಮಂದಿಯಲ್ಲಿ ಫೈಟ್ ಜೋರಾಗಿ ಶುರುವಾಗಿದೆ. ಟಾಸ್ಕ್ ಅನ್ನೋ ವಿಚಾರ ಬಂದಾಗ ಎಲ್ಲರೂ ಹುಲಿಗಳಂತೆ ಆಡುತ್ತಾ ಇದ್ರು. ಮನಿಷ್ಯತ್ವ ಅಂತು ಅಂದಿನಿಂದಾಲೂ ಕಾಣಿಸುವುದೇ ಇಲ್ಲ ಬಿಡಿ. ಆದರೆ ಅದೇ ಜಿದ್ದು ಈಗಲೂ ಮುಂದುವರೆದಿದೆ. ಅದರಲ್ಲೂ ಟಿಕೆಟ್ ಟು ಫಿನಾಲೆ ಶುರುವಾದಾಗಿನಿಂದ ಅಗ್ರೆಸ್ಸಿವ್ ಇನ್ನಷ್ಟು ಜಾಸ್ತಿಯಾಗಿದೆ.

Colors kannada bigboss Written Update on Bigboss season 11 January 7th episode

ಟಿಕೆಟ್ ಟು ಫಿನಾಲೆ ಈ ವಾರದಿಂದ ಶುರುವಾಗಿದೆ. ಈ ವಾರದ ಕೊನೆಯಲ್ಲಿ ಟಿಕೆಟ್ ಯಾರಿಗೆ ಸಿಗಲಿದೆ ಎಂಬುದು ಘೋಷಣೆಯಾಗಲಿದೆ. ಅದಕ್ಕಾಗಿ ಸ್ಪರ್ಧಿಗಳಿಗೆ ಹಲವು ಟಾಸ್ಕ್ ಗಳನ್ನ ಬಿಗ್ ಬಾಸ್ ನೀಡುತ್ತಿದೆ. ಈ ಟಾಸ್ಕ್ ಆಡುವಾಗ ಯಾರಲ್ಲಿಯೂ ಮನುಷ್ಯತ್ವವೇ ಕಾಣಿಸುತ್ತಿಲ್ಲ. ಹೆಣ್ಣಾಗಲೀ ಗಂಡಾಗಲಿ. ಬಿಗ್ ಬಾಸ್ ಮುಗಿದ ಮೇಲಂತೂ ಒಬ್ಬರ ಮುಖ ಕಂಡರೆ ಒಬ್ಬರಿಗೆ ಆಗಲ್ಲ. ದ್ವೇಷದಿಂದಾನೇ ಮುಖ ತಿರುಗಿಸಿಕೊಂಡು ಬರುತ್ತಾರೆ.

ಸ್ಪರ್ಧಿಗಳ ಆಟ ಹೇಗಿತ್ತು..?

ಇವತ್ತು ಬಿಗ್ ಬಾಸ್ ಕೊಟ್ಟ ಟಾಸ್ಕ್ ನಲ್ಲಿ ಸ್ಪರ್ಧಿಗಳ ಆಟ ನೋಡಿದರೆ ಮನುಷ್ಯತ್ವವೇ ಕಂಡಂತೆ ಕಾಣಿಸಲಿಲ್ಲ. ಇನ್ನೊಬ್ಬರ ಬಳಿ ಇದ್ದ ನೀರನ್ನ ಚೆಲ್ಲಬೇಕು. ಅದನ್ನ ಮಾಡುವಾಗ ಒಬ್ಬರು ಇನ್ನೊಬ್ಬರಿಗೆ ಹೊಡೆದದ್ದೆ ಹೆಚ್ಚು. ಭವ್ಯಾ ಹಾಗೂ ಗೌತಮಿ, ಧನರಾಜ್ ಹಾಗೂ ಹನುಮಂತು ಆಟಕ್ಕೆ‌ ನಿಂತಿದ್ದರು. ಈ ವೇಳೆ ಗೌತಮಿ, ಭವ್ಯಾ ಮೇಲೆ ಮುಗಿಬಿದ್ದಿದ್ದನ್ನು ಕಾಣಬಹುದು. ಹನುಮಂತು ಹಾಗೂ ಧನರಾಜ್ ಸ್ವಲ್ಪ ನೋಡಿಕೊಂಡೆ ಆಟ ಆಡುತ್ತಿದ್ದರು.

ಮಂಜು-ವಿಕ್ರಂ ಕಿತ್ತಾಟ

ಟಿಕೆಟ್ ಟು ಫಿನಾಲೆ ಎಂದು ಕಿಚ್ಚ ಸುದೀಪ್ ಹೇಳಿದ್ದೇ ತಡ ನೇರಾ ನೇರ ಜಿದ್ದಿಗೆ ಬಿದ್ದದ್ದು ತ್ರಿವಿಕ್ರಂ ಹಾಗೂ ಮಂಜು. ನಾನಾ..ನೀನಾ.. ಹೋಗಲೋ ಎಂಬ ಲೆವೆಲ್ ನಲ್ಲಿ ಕಿತ್ತಾಟ ಶುರು ಮಾಡಿದ್ದಾರೆ. ಆಟವನ್ನು ಅಷ್ಟೇ ಯರ್ರಾಬಿರ್ರಿ ರಫ್ ಆಗಿ ಆಡಿದ್ದಾರೆ. ಯಾರಿಗೆ ಪೆಟ್ಟಾಯ್ತಾ ಇಲ್ವಾ ಅದನ್ನೆಲ್ಲ ತಲೆಗೂ ಹಾಕಿಕೊಳ್ತಿಲ್ಲ. ಹಾಗೇ ಹೊಡೆದಾಡೋದಲ್ಲದೆ, ತ್ರಿವಿಕ್ರಂ ಹೋಗಲೋ ಎಂದೇ ಮಾತನಾಡಿದ್ದಾರೆ. ಇದು ಮಂಜುಗೂ ಶಾಕ್ ಆಗಿದೆ. ಆಯ್ತು ಹೋಗಪ್ಪ ಅಂತೇಳಿ ಮಂಜು ಸುಮ್ಮನೆ ಆಗಿದ್ದಾರೆ. ರಜತ್ ಗಿಂತ ಈಗ ತ್ರಿವಿಕ್ರಂ, ಮಂಜು ಹಾರಾಟವೇ ಜೋರಾಗಿದೆ.

ಸುದೀಪ್ ಅಂದೇ ಹೇಳಿದ್ರು!

ಸುದೀಪ್ ಇತ್ತೀಚೆಗೆ ಆಂಕರ್ ಅನುಶ್ರೀ ಚಾನೆಲ್‌ನಲ್ಲಿ ಸಂದರ್ಶನ ನೀಡಿದ್ದರು. ಆ ಸಂದರ್ಶನದ ವೇಳೆ ಬಿಗ್ ಬಾಸ್ ಬಗ್ಗೆಯೂ ಮಾತನಾಡಿದ್ದರು. ಈಗ ಬಂದಿರುವ ಬಿಗ್ ಬಾಸ್ ಸ್ಪರ್ಧಿಗಳನ್ನು ನೋಡಿದರೆ ಅಯ್ಯೋ ಎನಿಸುತ್ತದೆ. ಮೊದಲೆಲ್ಲಾ ಬಂದಂತ ಸ್ಪರ್ಧಿಗಳು ಬಂದ್ರು ಆಟ ಆಡಿದ್ರು, ಹೋದ್ರು. ಆದರೆ ಈಗಿನವರು ಗೆದ್ದಂತ ವ್ಯಕ್ತಿಗಳನ್ನ ಅನುಸರಿಸುತ್ತಿದ್ದಾರೆ. ಒಂದೊಂದು ಸೀಸನ್ ನಲ್ಲಿ ಒಂದೊಂದು ವ್ಯಕ್ತಿತ್ವ ಗೆದ್ದಿರೋದು. ಆದರೆ ಇವರು ಕಿರುಚಾಡಿದ್ರೆ ಗೆಲ್ಲಬಹುದು ಎಂಬಂತೆ ಫೀಲ್ ಮಾಡುತ್ತಾರೆ ಎಂದಿದ್ದರು. ಈಗ ನೋಡಿದ್ರೆ ಅದೇ ಸತ್ಯದಂತೆ ಕಾಣಿಸುತ್ತಿದೆ.

More from Filmibeat

English summary
BBK 11; Here is the details about Contestants who forgot their humanity to reach Finale;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X