BBK 11: ನಂಗೆ ಕಿಸ್ ಕೊಡೋದೆಲ್ಲ ಆಗಲ್ಲ: ಭವ್ಯಾ ಬಳಿ ಧನರಾಜ್ ಹೇಳಿದ್ದು

By ಎಸ್ ಸುಮಂತ್

ಬಿಗ್ ಬಾಸ್ ಮನೆಯಲ್ಲಿ ದೀಪಾವಳಿಯ ಹಬ್ಬ ಜೋರಾಗಿದೆ. ಮನೆ ತುಂಬಾ ಹೂಗಳಿಂದ ಬಿಗ್ ಬಾಸ್ ಅಲಂಕಾರ ಮಾಡಿದೆ. ಹಬ್ಬದೂಟವನ್ನು ಮನೆಮಂದಿಗೆ ಕಳುಹಿಸಿಕೊಟ್ಟಿದೆ. ಎಲ್ಲರೂ ಸ್ಪೆಷಲ್ ಊಟ‌ ಮುಗಿಸಿ, ಆನಂದದಿಂದ ನಲಿದರು. ಯಾಕಂದ್ರೆ ಈಗ ಬಿಗ್ ಬಾಸ್ ಮನೆಯಲ್ಲಿ ಅವರವರೇ ಅಡುಗೆ ಮಾಡಿಕೊಂಡು ತಿನ್ನುತ್ತಿದ್ದರು. ಈಗ ಬಿಗ್ ಬಾಸ್ ಕಳುಹಿಸಿದ ಅಡುಗೆಯಿಂದ ಎಲ್ಲರೂ ಖುಷಿಯಾಗಿದ್ದಾರೆ.

ದೀಪಾವಳಿಯ ಹಬ್ಬದಂದು ಸ್ಪರ್ಧಿಗಳಿಗೆ ಮನೆಯವರಿಂದಾನೂ ಸಂದೇಶಗಳು ತಲುಪಿವೆ. ಬಿಗ್ ಬಾಸ್ ಸ್ಪರ್ಧಿಗಳಿಗೆ ಏನನ್ನೇ ಕೊಡುವಾಗಲೂ ಬಿಗ್ ಬಾಸ್ ಸುಮ್ಮನೆ ಕೊಡುವುದಿಲ್ಲ. ಒಂದು ಟಾಸ್ಕ್ ಕೊಟ್ಟು, ಗೆದ್ದವರಿಗೆ ನೀಡುತ್ತಾರೆ. ಮನೆಯವರಿಂದ ಬರುವ ಲೆಟರ್, ವಿಡಿಯೋ ಕೊಡಲು ಒಂದು ಸೀರಿಯಸ್ ಟಾಸ್ಕ್ ಒಂದನ್ನು ನೀಡಲಾಗಿದೆ. ಯಾರೇ ಬಂದರು ಡಿಸ್ಟರ್ಬ್ ಆಗದೆ ಇರಬೇಕು. ಆಗ ಮಾತ್ರ ಲೆಟರ್ ಸಿಗಲಿದೆ.

Colors kannada bigboss Written Update on Bigboss season 11 November 1st episode

ಮಂಜಣ್ಣನಿಗೆ ಮುತ್ತಿನ ಸುರಿಮಳೆ

ಲೆಟರ್‌ಗಳು ಸಿಗಬೇಕು ಎಂದರೆ ಯಾರೇ ತೊಂದರೆ ಕೊಟ್ಟರು ಆ ಕಡೆ ಗಮನ ಕೊಡಬಾರದು. ತಮ್ಮ ಕೆಲಸದ ಕಡೆ ಮಾತ್ರ ಗಮನಹರಿಸಬೇಕು. ಇದು ಬಿಗ್ ಬಾಸ್ ನೀಡಿದ ಟಾಸ್ಕ್. ಮನೆಯವರನ್ನ ಡಿಸ್ಟರ್ಬ್ ಮಾಡಲು ಒಂದೊಂದು ಬಾರಿ ಒಬ್ಬೊಬ್ಬರನ್ನು ಕಳುಬಿಸುತ್ತಿದ್ದರು. ಈ ಬಾರಿ ಬಂದಂತ ಜೋಕರ್ ಗಳು ಮಂಜಣ್ಣನ ಮುಖಕ್ಕೆಲ್ಲ ಮುತ್ತಿಟ್ಟರು. ಆದರೂ ಮಂಜಣ್ಣ ಡಿಸ್ಟರ್ಬ್ ಆಗಲೇ ಇಲ್ಲ.

ಓದಿ ಕಣ್ಣೀರು ಹಾಕಿದ ಭವ್ಯಾ

ಜೋಕರ್‌ಗಳು ಹೋದ ಮೇಲೆ ಭವ್ಯಾಗೆ ಲೆಟರ್ ಬಂತು. ಆ ಲೆಟರ್ ಓದಿ ಭವ್ಯಾ ಕಣ್ಣೀರು ಹಾಕಿದ್ದಾರೆ. ಮನೆಯವರು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಆ ಲೆಟರ್‌ನಲ್ಲಿತ್ತು. ಅದನ್ನು ಓದಿ, ಮಕ್ಕಳನ್ನು ನೆನೆಸಿಕೊಂಡು ಭವ್ಯಾ ತುಂಬಾನೆ ಕಣ್ಣೀರು ಹಾಕಿದ್ದಾರೆ. ಬಳಿಕ ಎಲ್ಲರು ಸಮಾಧಾನ ಮಾಡಿದ್ದಾರೆ.

ನಂಗೆ ಕಿಸ್ ಅಂದ್ರೆ ಆಗಲ್ಲ

ಇದೆಲ್ಲಾ ಮುಗಿದ ಮೇಲೆ ಧನರಾಜ್, ಭವ್ಯಾ ಬಳಿ ಹೋಗಿ ಕೂತಿದ್ದರು. ಆಗ ಜೋಕರ್,‌ ಮಂಜಣ್ಣನಿಗೆ ಕಿಸ್ ಕೊಟ್ಟಿದ್ದನ್ನು ನೆನಪಿಸಿಕೊಂಡು ಮಾತಾಡಿದ್ದಾರೆ. ನಂಗಂತೂ ಯಾರಾದ್ರೂ ಕಿಸ್ ಕೊಟ್ರೆ ಆಗಲ್ಲ. ಯಾರೂ ಕಿಸ್ ಕೊಡಬಾರದು ಎಂದಿದ್ದಾರೆ. ಆ ಜೋಕರ್ ಅವರಿಗೆಲ್ಲಾ ಹೇಗೆಲ್ಲಾ ಕಿಸ್ ಕೊಟ್ರು. ಆಗ ನಾನು ಅಲ್ಲಿಯೇ ಇದ್ದೆ ಎಂದಿದ್ದಾರೆ. ಆ ಸಮಯದಲ್ಲಿ ಭವ್ಯಾ ಕೂಡ ಒಂದಷ್ಟು ರೇಗಿಸುತ್ತಾ ಇದ್ದರು. ಕಿಸ್ ಮ್ಯಾಟರ್ ಅನ್ನೇ ಮಾತಾಡುತ್ತಾ ಇಬ್ಬರು ಒಂದಷ್ಟು ಹರಟೆ ಹೊಡೆದಿದ್ದಾರೆ.

ನಾಚಿ ನೀರಾದ ಧನರಾಜ್

ಧನರಾಜ್ ಹೇಳಿದ ಕಿಸ್ ಮ್ಯಾಟರ್‌ಗೆ ಭವ್ಯಾ, ನಿಂಗೆ ಯಾರಾದ್ರೂ ಕಿಸ್ ಕೊಟ್ರಾ ಎಂದು ಕೇಳಿದಾರೆ ನಂಗಲ್ಲ, ಅವ್ರಿಗೆ ಎಂದು ಹೇಳಿದಾಗ, ಭವ್ಯಾ, ನೀನು ಕಿಸ್ ತಗೊ. ನಿನ್ನ ಹೆಂಡತಿಗೇನು ಗೊತ್ತಾಗಲ್ಲ ಎಂದಿದ್ದಾರೆ. ಆಗ ಧನರಾಜ್ ನಾಚಿ ನೀರಾಗಿದ್ದಾರೆ. ಆಗಾಗ ವೇದಿಕೆ ಮೇಲೆ ಡಬ್ಬಲ್ ಮೀನಿಂಗ್ ಮಾತಾಡಿದರೆ ಸುಮ್ನೆ ಇರಿ ಸರ್ ನನ್ನ ಹೆಂಡತಿ ಬಿಗ್ ಬಾಸ್ ನೋಡುತ್ತಾಳೆ ಎನ್ನುತ್ತಿದ್ದರು. ಈಗ ಕಿಸ್ ಮ್ಯಾಟರ್‌ನ ಸಿಕ್ಕಾಪಟ್ಟೆ ನಾಚಿಕೆಪಟ್ಟುಕೊಂಡು ಚರ್ಚೆ ಮಾಡಿದ್ದಾರೆ. ಇದಕ್ಕೆ ಹೆಂಡತಿ ಏನು ಹೇಳ್ತಾರೆ ಅನ್ನೋದು ಲೆಟರ್ ಅಥವಾ ಮತ್ತೊಂದು ಸಂದೇಶ ಬಂದ್ಮೇಲೆ ಗೊತ್ತಾಗಲಿದೆ.

More from Filmibeat

English summary
Colors kannada bigboss Written Update on Bigboss season 11 November 1st episode. Here is the details about Dhanraj says I don't like it if someone else kisses me;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X